POLICE BHAVAN KALABURAGI

POLICE BHAVAN KALABURAGI

23 May 2014

Gulbarga District Reported Crimes

ಅಮೃತ ತಂಬಾಕೆ ಕೊಲೆಗಾರರ ಬಂಧನ, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಮತ್ತು ಮೊಟಾರ ಸೈಕಲಗಳ ಜಪ್ತಿ
ವಿಶ್ವವಿದ್ಯಾಲಯ ಠಾಣೆ : ದಿನಾಂಕ  7,8-12-2013 ರಂದು ರಾತ್ರಿ ವೇಳೆಯಲ್ಲಿ ಅಮೃತ ತಂಬಾಕೆ ಈತನನ್ನು ಸೇಡಂ ರೋಡಿನ ಧನಂಜಯ ಡೆವಲಫರ್ಸರವರ ಜಮೀನಿನಲ್ಲಿ ಗುರುಕುಲ ಶಾಲೆಯ ಸಮೀಪ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ಮತ್ತು ಶ್ರೀ ಸಂತೋಷ ಬಾಬು.ಐ.ಪಿ.ಎಸ್. ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ, ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರಾದ ಶಂಕರ ಹೆಚ್.ಸಿ, ಅರ್ಜುನ ಎ.ಹೆಚ್.ಸಿ, ಮೊಯಿಜೂದ್ದಿನ ಸಿ.ಪಿ.ಸಿ, ಮಲ್ಲಿಕಾರ್ಜುನ ಸಿ.ಪಿ.ಸಿ, ಸಿದ್ರಾಮಯ್ಯ ಸಿ.ಪಿ.ಸಿ, ಅಶೋಕ ಮುಧೋಳ ಸಿ.ಪಿ.ಸಿ, ಅಶೋಕ ಹಳಿಗೋದಿ ಸಿ.ಪಿ.ಸಿ, ಚನ್ನಬಸಯ್ಯ ಸ್ವಾಮಿ ಸಿ.ಪಿ.ಸಿ, ಬಲರಾಮ ಸಿಪಿಸಿ, ಸುಧಾ ಮಪಿಸಿ ರವರೆಲ್ಲರೂ ಕೂಡಿಕೊಂಡು ಕಾರ್ಯಚರಣೆ ನಡೆಸಿದ್ದು, ರಹಸ್ಯವಾಗಿದ್ದ ಈ ಕೊಲೆ ಪ್ರಕರಣವನ್ನು ಭೇದಿಸಿ, ದಿನಾಂಕ 22-05-2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1. ಮಲ್ಲು @ ಮಲ್ಲಿಕಾರ್ಜುನ ತಂದೆ ಬಸವರಾಜ ಮಾಳಬೋ ಸಾ: ನೂರಂದಪ್ಪ ಕಾಂಪ್ಲೇಕ್ಸ ಗೌಳಿ ಹೊಟಲ್ ಎದರುಗುಡೆ ಜಗತ್ ಗುಲಬರ್ಗಾ 2. ಆನಂದ ತಂದೆ ದತ್ತಾತ್ರಯ ಆಲಮೇಲಕರ  ಸಾ: ಪ್ಲಾಟ ನಂ 100, 3ನೇ ಹಂತರ ಜಿಡಿಎ ಕಾಲೋನಿ ಸೇಡಂ ರೋಡ್ ಗುಲಬರ್ಗಾ 3. ಶಿವಕುಮಾರ @ ಶಿವು ತಂದೆ ವಿಜಯಕುಮಾರ ಕಂಟಿಗೋಳ ಸಾ:  ಹನುಮಾನ ಗುಡಿ ಹತ್ತಿರ ಜಯ ನಗರ ಗುಲಬರ್ಗಾ  ಇವರನ್ನು ದಸ್ತಗೀರ ಮಾಡಿರುತ್ತಾರೆ.
ಈ ಕೊಲೆಗೆ ಕಾರಣ ಕೊಲೆಯಾದ ಅಮೃತ ತಂಬಾಕೆ ಈತನ ಹತ್ತಿರ ಮೇಲ್ಕಂಡವರು ಹಾಗೂ ಇತರರು ಕೂಡಿಕೊಂಡು ಇಸ್ಪೀಟ ಆಡಲು 50,000/- ರೂ ಸಾಲ ಪಡೆದುಕೊಂಡಿದ್ದು, ಮರಳಿ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ನಿನಗೆ ಹಣ ಕೊಡುತ್ತೇವೆ ನಮ್ಮ ಸಂಗಡ ಬಾ ಅಂತಾ ತಮ್ಮ ಮೊಟಾರ ಸೈಕಲಗಳ ಮೇಲೆ ಸೇಡಂ ರೋಡಿನ ಧನಂಜಯ ಡೆವಲಫರ್ಸರವರ ಜಮೀನಿನಲ್ಲಿ ಗುರುಕುಲ ಶಾಲೆಯ ಸಮೀಪ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಆರೋಪಿತರಿಂದ ಎರಡು ಮೊಟಾರ ಸೈಕಲಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೊಪಿತರನ್ನು ಮೇಲ್ಕಂಡ ತನಿಖಾ ತಂಡವು ಬೇದಿಸುವಲ್ಲಿ ಮತ್ತು ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.  ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ಇನ್ನೂ ಫರಾರಿ ಇರುವ ಆರೋಪಿತರ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಿವಕುಮಾರ ತಂದೆ ಬುಗಪ್ಪ ಗತ್ತಪ್ಪ ಸಾ: ನಾಡೇಪಲ್ಲಿ ತಾ : ಸೇಡಂ ಇವರು ಸೇಡಂಗೆ ಬರವ ಕುರಿತು ನಾಡೇಪಲ್ಲಿಯಿಂದ ಕಂಡ್ರೆಪ್ಪಲ್ಲಿ ಕ್ರಾಸಗೆ ಸಾಯಂಕಾಲ 5-00 ಗಂಟೆಯ ಸುಮಾರಿಗೆ ಸೇಡಂಗೆ ಬಸ್ಸ ಅಥವಾ ಲಾರಿಗೆ ಹೋಗುವ ಸಲುವಾಗಿ  ಕಾಯುತ್ತಾ ನಿಂತಿದ್ದಾಗ ತಾಂಡೂರ ಕಡೆಯಿಂದ ಒಂದು ಲಾರಿ ಬರುತ್ತಿದ್ದನು ನೋಡಿ ನಾನು ಅದಕ್ಕೆ ನಿಲ್ಲಿಸಿ ಅದರಲ್ಲಿ ಹತ್ತಿದೇನು. ಸದರಿ ಲಾರಿ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ಬಾಬು ತಂದೆ ದ್ಯಾವಪ್ಪ ಹೊಸ್ಮನಿ ಸಾ : ವಜ್ರಗಾಂವ ತಾ : ಚಿಂಚೋಳಿ ಸದರಿ ಲಾರಿ ನಂ ಕೆ.ಎ 32 ಬಿ 1870 ಅಂತಾ ಇದ್ದು ಅದರಲ್ಲಿ ಸಿಮೇಂಟ ಕ್ಲಿಂಕರನ್ನು ತಾಂಡೂರದಲ್ಲಿ ಲೋಡ ಮಾಡಿಕೊಂಡು ಸಾಂಗ್ಲಿಗೆ ಹೊರಟಿರುತ್ತೇನೆ. ಅಂತಾ ತಿಳಿಸಿ ನಮ್ಮ ಲಾರಿ ಮೇಲೆ ಕ್ಲೀನರ್ ಆಗಿ ಬಾ ಅಂತಾ ಅಂದನು ಆಗ ನಾನು ಸೇಡಂದಲ್ಲಿ ನಮ್ಮ ಮನೆಗೆ ಹೋಗಿ ಕೇಳಿ ಬರುತ್ತೇನೆ ಅಂತಾ ಅಂದೇನು. ನಾವಿಬ್ಬರೂ ಲಾರಿಯಲ್ಲಿ ಸೇಡಂಗೆ ಬಂದು ನನ್ನ ಹೆಂಡತಿಗೆ ವಿಚಾರಿಸಿ ಸದರಿ ಲಾರಿಯ ಮೇಲೆ ಕ್ಲೀನರ ಆಗಿ ಸಾಂಗ್ಲಿಗೆ ಹೋಗುತ್ತೇನೆ ಅಂತಾ ಹೇಳಿ ಬಂದಿರುತ್ತೇನೆ. ದಿನಾಂಕ 20-5-2014 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಸದರಿ ಸಿಮೆಂಟ ಕ್ಲೀಂಕರ ಲೋಡ ಮಾಡಿದ ಲಾರಿ ನಂ ಕೆ.ಎ 32 ಬಿ 1870 ನೇದ್ದರ ಮೇಲೆ ಸೇಡಂದಿಂದ ಹೊರಟೇವು. ಸದರಿ ಲಾರಿಯನ್ನು ಬಾಬು ಇತನು ಚಲಾಯಿಸುತ್ತಿದ್ದನು. ಮುಂದೆ ರಾತ್ರಿ 10-00 ಗಂಟೆಯ ಸುಮಾರಿಗೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಗಿತಾಂಜಲಿ ಪ್ಯಾಕ್ಟರಿ ಹತ್ತಿರ ಜೇವರಗಿ ಕಡೆಗೆ ಹೋಗುತ್ತಿರುವಾಗ ನಮ್ಮ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಲಾರಿಗೆ ಡಿಕ್ಕಿ ಪಡಿಸಿದನು. ಇದರಿಂದ ನಮ್ಮ ಲಾರಿ ರೋಡಿನ ಎಡಗಡೆ ಬಿದಿದ್ದು ಸದರಿ ಡಿಕ್ಕಿ ಪಡೆಯಿಸಿದ ಲಾರಿಯು ರೋಡಿನ ಬಲಗಡೆ ಬೋರಲಾಗಿ ಪಲ್ಟಿಯಾಗಿರುತ್ತದೆ. ಸದರಿ ಘಟನೆಯಿಂದ ನಮ್ಮ ಲಾರಿ ಚಾಲಕ ಬಾಬು ಈತನಿಗೆ ಎರಡು ಕಾಲುಗಳು ಮುರಿದಿದ್ದು, ಎದೆಗೆ ಮತ್ತು ಸೊಂಟಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ. ನನಗೆ ಎಡಗೈ ಮೊಳಕೈ ಹತ್ತಿರ ಗುಪ್ತಗಾಯ ಹಾಗೂ ತರಚಿದ ಗಾಯವಾಗಿದ್ದು ಸದರಿ ನಮಗೆ ಡಿಕ್ಕಿ ಪಡೆಯಿಸಿದ ಲಾರಿ ನಂಬರ ನೋಡಲಾಗಿ ಜಿ.ಜೆ 10/ಎಕ್ಸ 6240 ಇತ್ತು. ಮತ್ತು ಅದರಲ್ಲಿ ಇದ್ದವರಿಂದ ಏನಾಗಿದೆ ಅಂತಾ ನನಗೆ ಸದ್ಯ ಗೊತ್ತಾಗಿರುವದಿಲ್ಲ. ನಂತರ ಅಲ್ಲಿದ್ದ ಜನರು 108 ಅಂಬುಲೇನ್ಸ ವಾಹನಕ್ಕೆ ಪೊನ್ ಮಾಡಿ ಕರೆಯಿಸಿ ನಮಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಗಂಭೀರವಾಗಿ ಗಾಯಹೊಂದಿದ ಚಾಲಕ ಬಾಬು ಈತನು ಇಂದು ದಿನಾಂಕ 21-5-2014 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಉಪಚಾರ ಹೊಂದುತಾ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಮಗು ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಮಷಾದ ಆಲಂ ತಂದೆ ಅಕ್ಬರ ಹುಸೇನ ಸಿದ್ದಿಕಿ ಸಾ:ಫಿರೋಜಾಬಾದ ತಾ:ಜಿ:ಗುಲಬರ್ಗಾ ಇವರು  ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ತರನೂ ಆರಾ ಮತ್ತು ನನ್ನ ಮಕ್ಕಳಾದ ಶಹದಬ ಆಲಂ ವ:8 ವರ್ಷ, ಶಹದನ ಆಲಂ ವ:5 ವರ್ಷ ಮತ್ತು ಮಗಳಾದ ಸಾದಿಯಾ ಆಯಾತ   ವ:1 ವರ್ಷ 6 ತಿಂಗಳು ಎಲ್ಲರೂ ಮನೆಯಲ್ಲಿ ವಾಸವಾಗಿರುತ್ತೆವೆ. ದಿನಾಂಕ:21/05/2014 ರಂದು ಸಾಯಂಕಾಲ 5 ಗಂಟೆಯ  ನಾನು ಮಸೂತಿಯಲ್ಲಿದ್ದಾಗ ನನ್ನ ಹೆಂಡತಿಯಾದ ತರುನೂ ಆರಾಇವಳು ಫೊನ್‌ ಮಾಡಿ ತಿಳಿಸಿದ್ದೆನಂದರೆ, ಈಗ 4:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನಮ್ಮ ಮಗಳು ಸಾದಿಯಾ ಆಯಾತ ಇವಳು ನಮ್ಮ ಮನೆಯ ಮುಂದಿನ ಗಲ್ಲಿಯ ರಸ್ತೆಯ ಮೇಲೆ ಆಟವಾಡುತ್ತಿದ್ದಳು. ನಂತರ 4:40 ಗಂಟೆಯ ಸುಮಾರಿಗೆ ನಾನು ಮನೆಯಿಂದ ಹೊರಗೆ ಬಂದು ನೋಡಲಾಗಿ ಆಟವಾಡುತ್ತಿದ್ದ ಮಗಳು ಸಾದಿಯಾ ಆಯಾತ ಇವಳು ಕಾಣದೆ ಇದ್ದರಿಂದ ನಾನು ಆಜುಬಾಜು ಹುಡಕಾಡಿದರು ಕಾಣುತ್ತಿಲ್ಲ ನೀವು ಬೇಗನೆ ಬಾ ಅಂತಾ ತಿಳಿಸಿದ್ದರಿಂದ ನಾನು  ಕೂಡಲೆ ಮನೆಗೆ ಹೋಗಿ ಮನೆಯಲ್ಲಿದ್ದ ನನ್ನ ಹೆಂಡತಿಗೆ ವಿಚಾರಣೆ ಮಾಡಿ ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ನಮ್ಮೂರಿನ ಸುತ್ತ-ಮುತ್ತಲು ರಾತ್ರಿವರೆಗೂ ಹುಡಕಿ ನಂತರ ಮನೆಯ ಅಕ್ಕ-ಪಕ್ಕದವರಿಗೂ ವಿಚಾರಿಸಿದರೂ ನಮ್ಮ ಮಗಳು ಇರುವಿಕೆ ಬಗ್ಗೆ ಯಾವುದೆ ಸುಳಿವು ಸಿಕ್ಕಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.