POLICE BHAVAN KALABURAGI

POLICE BHAVAN KALABURAGI

07 December 2016

Kalaburagi District Reported Crimes

ಇಸ್ಪೀಟ ಜೂಜಾಟಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 06/12/2016 ರಂದು ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶಿವಶಂಕರ ಸಾಹು ಪಿ.ಎಸ್.ಐ ನರೋಣಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಅಂದರ ಬಾಹರ ಎಂಬ ಜುಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ  1] ಚಿತಂಬರಾಯ ತಂದೆ ಕಲ್ಯಾಣವಾರ ಡೋಲೆ 2) ಸಿದ್ದಾರೋಡ ತಂದೆ ಶಾಂತಪ್ಪ ತಿಮ್ಮಾಜಿ 3) ಅರುಣಕುಮಾರ ತಂದೆ ಶಾಂತಯ್ಯ ಹಿರೇಮಠ 4) ಅಂಬರೀಶ ತಂದೆ ನಾಗೇಂಧ್ರಪ್ಪ 5) ಪ್ರಕಾಶ ತಂದೆ ಶ್ರೀಮಂತರಾಯ ದಾಮದೆ 6) ಬರಗಾಲೆ ತಂದೆ ಮಾಳೇಶ ಪೂಜಾರಿ ಸಾ : ಎಲ್ಲರು ಬೆಳಮಗಿ ಅಂಥಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 950 ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು  ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ಪ್ರಭುದೇವ ತಂದೆ ಗುರಣ್ಣ ಬೀದರಕುಂದಿ ಸಾ|| ಶಾಂತಿ ನಗರ ಕಲಬುರಗಿ ಕಾರ ನಂಬರ ಕೆಎ-32 ಎನ್-8421 ನೇದ್ದರ ಚಾಲಕನು  ತನ್ನ ಕಾರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಗಂಗಾರಾವಲಪಲ್ಲಿ ಗೇಟ ಹತ್ತಿರ ರಸ್ತೆಯ ಬದಿಯಲ್ಲಿ ಗಿಡಕ್ಕೆ ಡಿಕ್ಕಿ ಪಡಿಸಿದ್ದು ಆರೋಪಿತನು ಸ್ಥಳದಲ್ಲಿಯೆ ಮೃತಪಟ್ಟಿದ್ದು ಇನ್ನೀಬ್ಬರಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಲಲೀತಾ ಗಂಡ ಪ್ರಭುದೇವ ಬೀದರಕುಂದಿ ಸಾ|| ಶಾಂತಿನಗರ ಕಲಬುರಗಿ.ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ರೇವೂರ ಠಾಣೆ : ಈರಣ್ಣಾ ತಂದೆ ಗಬಗಪ್ಪಾ ರಾಂಪೂರೆ ಇವರು ಲೀವರ ತೊಂದರೆಯಿಂದ ಬಳಲುತ್ತಿದ್ದು ಹಾಗು ಸುಮಾರು ಎರಡುವರೆ ತಿಂಗಳ ಹಿಂದೆ ಹೆಂಡತಿ ಮೃತಪಟ್ಟಿದ್ದು ಜೀವನದಲ್ಲಿ ಜಿಗುಪ್ಸೆಯಾಗಿ ಖಿನ್ನತೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಶ್ರೀ ಪ್ರವೀಣಕುಮಾರ ತಂದೆ ಈರಣ್ಣಾ ರಾಂಪೂರೆ ಸಾ : ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಪದ್ಮಾವತಿ ಗಂಡ  ದಿ: ವೆಂಕಟೇಶ ಕುಲಕರ್ಣಿ  ಸಾ: ಇಟಗಾ (ಕೆ) ತಾ: ಜಿ: ಕಲಬುರಗಿ ಇವರು ಮಗನಾದ  ರಾಮಚಂದ್ರ ವ: 26 ವರ್ಷ ಈತನು. ದಿನಾಂಕ: 05/12/16 ರಂದು ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಜೋಳದ ಬೆಳೆಗೆ ಹೊಡೆಯುವ ಕ್ರೀಮಿನಾಶಕ ಜೌಷದ ತರುತ್ತೇನೆಂದು ಕಲಬುರಗಿಗೆ ತನ್ನ ಮೋಟಾರ ಸೈಕಲ ನಂಬರ ಸಿಡಿ 100 ಸಿಟಿಪಿ 1194 ರ ಮೇಲೆ ಹೋಗಿ ವೀರಭದ್ರೇಶ್ವರ ಅಗ್ರೋದಲ್ಲಿ ಕ್ರೀಮಿನಾಶಕ ಜೌಷದ ಖರಿದಿ ಮಾಡಿಕೊಂಡಿದ್ದು. ಮರಳಿ ಬಾರದಿದ್ದರಿಂದ ಆತನ ಮೋಬೈಲ ನಂಬರ 8105555435 & 8139939677 ನೇದ್ದಕ್ಕೆ ಸಂಪರ್ಕಿಸಲಾಗಿ ನಾಟ್‌ ರಿಚೇಬಲ್‌ ಆಗಿದ್ದು ಆತನಿಗಾಗಿ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಹಾಗೂ ವೀರಭದ್ರೇಶ್ವರ ಅಂಗಡಿಗೆ ಹೋಗಿ ವಿಚಾರಿಸಿದ್ದು ಕ್ರೀಮಿನಾಶಕ ಜೌಷದ ತೆಗೆದುಕೊಂಡು ಹೋದ ಬಗ್ಗೆ ತಿಳಿಸಿರುತ್ತಾರೆ ಆತನ ಗೆಳೆಯರಿಗೆ ಹಾಗು ನಮ್ಮ ಸಂಬಂಧಿಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸಲು ಸದರಿಯವನು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಮಾಡಿಕೊಳ್ಳುತ್ತೆನೆ ಅಂತಾ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಕುಮಾರಿ ಇವರು ಸುನೀಲ ತಂದೆ ಲಕ್ಷ್ಮಣ ಇವರ ಮನೆ ಕೂಡಾ ಇರುತ್ತದೆ. ಈಗ 2 ತಿಂಗಳಿಂದ ಸುನೀಲ ಇತನು ನಮ್ಮ ಮನೆಗೆ ಬಂದು ಹೋಗುವದು ಮಾಡುವದರಿಂದ ಅವನ ಪರಿಚಯವಾಗಿರುತ್ತದೆ. ಅವನು ನನ್ನ ಸಂಗಡ ಸಲುಗೆಯಿಂದ ಮಾತನಾಡುವದರಿಂದ ಇಬ್ಬರ ಪರಿಚಯವಾಗಿರುತ್ತದೆ. ಅವನು ನನಗೆ ಪ್ರೀತಿ ಮಾಡುತ್ತೇನೆ ಅಂತ ಹೇಳುವದು ಮಾಡುತ್ತಾ ಬಂದಿರುತ್ತಾನೆ. ನಾನು ಅದಕ್ಕೆ ನಮ್ಮ ಮನೆಯಲ್ಲಿ ಒಪ್ಪುವದಿಲ್ಲಾ ಅಂತ ಹೇಳಿದರು ಅವನು ನಮ್ಮ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ನಮ್ಮ ಮನೆಯೊಳಗೆ ಬಂದು ನನಗೆ ಅಂಜಿಸಿ ಒತ್ತಿಯಾಗಿ ಹಿಡಿದುಕೊಳ್ಳುವದು ಮಾಡುತ್ತಿದ್ದನು. ಅಲ್ಲದೇ ನಾನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳುವದರಿಂದ ನಾನು ಸುಮ್ಮನಿದ್ದೇನು. ನೀನು ಯಾರಿಗಾದರು ಹೇಳಿದರೆ ನಿನಗೆ ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇದರಿಸುತ್ತಿದನು.  ನಾನು ಅದಕ್ಕೆ ಅಂಜಿ ಯಾರಿಗೂ ಹೇಳಿರುವದಿಲ್ಲಾ. ನಂತರ ಅವನು ನನಗೆ 2-3 ಸಲ ರೇವನೂರ ಸೀಮೆಯಲ್ಲಿ ಒಂದು ಹೊಲದ ಕಡೆಗೆ ಕರೆದುಕೊಂಡು ಹೋಗಿ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಸಂಬೋಗ ಮಾಡಿರುತ್ತಾನೆ. ಅಲ್ಲದೆ ಈಗ ಸುಮಾರು ಒಂದು ತಿಂಗಳದ ಹಿಂದೆ ಅಂದರೆ ದಿ: 20.09.16 ರಂದು ಮದ್ಯಾಹ್ನ ಸಮಯದಲ್ಲಿ ನನಗೆ ಒಂದು  ಆಟೋದಲ್ಲಿ ಕೂಡಿಸಿಕೊಂಡು ರೇವನೂರ ಸಿಮಾಂತರದ ಒಂದು ಹೊಲಕ್ಕೆ ಕರೆದುಕೊಂಡು ಹೋಗಿ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ನಾನು ಬೇಡ ಅಂತ ಹೇಳಿದರು ಮದ್ಯಾಹ್ನ 1.00 ಗಂಟೆ ಸುಮಾರಿಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ. ನಂತರ ನಾನು ಅವನಿಗೆ ಮದುವೆ ಮಾಡಿಕೊಳ್ಳು ಅಂತ ಹೇಳಿದರೆ ಅವನು ನನಗೆ ಈಗಾಗಲೇ ಮದುವೆ ಆಗಿರುತ್ತದೆ ನಾನು ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇಳುತ್ತಾ ಬಂದಿರುತ್ತಾನೆ. ಅದಕ್ಕೆ ನಾನು ನಮ್ಮ ಮನೆಯಲ್ಲಿ ನಮ್ಮ ಅಜ್ಜಿಗೆ ಮತ್ತು ನಮ್ಮ ಸಂಭಂದಿಕರಾದ ಚಂದ್ರಕಾಂತ ಗಂವ್ಹಾರ್ ನಮ್ಮ ಸಮಾಜದ ಮುಖಂಡರಾದ ರವಿ ದೊಡ್ಡಮನಿ, ಮರೆಪ್ಪ ಗಂವ್ಹಾರ, ದೇವಿಂದ್ರ ಗಂವ್ಹಾರ್ ಇವರಿಗೆ ವಿಷಯ ತಿಳಿಸಿದಾಗ ಅವರು ನನಗೆ ಸುಮ್ಮನಿರು ಅವನಿಗೆ ಕರೆಯಿಸಿ ಮಾತಾಡಿದರಾಯಿತು ಅಂತ ಹೇಳಿ ಅವನಿಗೆ ಕೇಳಿದಾಗ ಅವರ ಮುಂದೆಯೂ ಕೂಡಾ ನನಗೆ ಮದುವೆ ಮಾಡಿಕೊಳುವುದಿಲ್ಲಾ ಅಂತಾ ಹೇಳಿರುತ್ತಾನೆ, ನಮ್ಮ ಮನೆಯಲ್ಲಿ ನನಗೆ ಬೇರೆ ಕಡೆ ಮದುವೆ ಮಾಡಲು ಓಡಾಡುತ್ತಿದ್ದಾಗ ಅವನು ಅವರ ಮನೆಯವರಿಗೆ ಫೋನ ಮಾಡಿ ಅವಳಿಗೆ ಮದುವೆ ಮಾಡಿಕೊಳ್ಳದಂತೆ ಧಮಕಿ ಹಾಕುತ್ತಾ ಬಂದಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 01-12-2016 ರಂದು ಕವಲಗಾ (ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಮ್‌‌ಸಿ ಚುನಾವಣೆ ನಡೆದಿದ್ದು. ತಮ್ಮೂರಿನ ಖಲೀಲ ತಂದೆ ದಸ್ತಗಿರಿಸಾಬ ಇನಾಮದಾರ ಈತನು ದಿನಾಂಕ 02-12-2016 ರಂದು ಬೆಳ್ಳೀಗ್ಗೆ ಶಿವಪ್ಪಾ ಪೂಜಾರಿ ಇವರ ಹೊಟೇಲ ಹತ್ತಿರ ನನಗೆ ಮಾದಿಗ ಸೂಳೇ ಮಗನೇ ನೀನು ನಿನ್ನೆ ನಡೆದ ಎಸ್‌ಡಿಎಮ್‌ಸಿ ಚುನಾವಣೆಯಲ್ಲಿ ನನಗೆ ಓಟು ಹಾಕಿರುವುದಿಲ್ಲಾ ಅಂತಾ ಅವ್ಯಾಚ್ಛ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ  ಅಂತಾ ಶ್ರೀ ಹಣಮಂತ ತಂದೆ ಶಿವಪ್ಪಾ ಬಬಲಾದ ಸಾ: ಕವಲಗಾ (ಕೆ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.