POLICE BHAVAN KALABURAGI

POLICE BHAVAN KALABURAGI

15 July 2014

Gulbarga District Reported Crimes

ವರದಕ್ಷಣಿ ಕಿರುಕಳ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಜಯಶ್ರೀ ಗಂಡ ಅವಿನಾಶ ರಾಗಿ ಸಾಃ ಓಕಳಿ ಕ್ಯಾಂಪ್ ಗುಲಬರ್ಗಾ ಇವರ ಮದುವೆಯು ದಿನಾಂಕಃ 26/12/2013 ರಂದು ಅವಿನಾಶ ರಾಗಿ ಸಹಾಯಕ ತೋಟಗಾರಿಕೆ ಆಫೀಸರ್ ಸೇಡಂ ಇವರೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ 11 ತೊಲೆ ಬಂಗಾರ ಹಾಂಡೆ ಭಾಂಡೆ, ಕೂಲರ್, ಗಾದಿ, ಪಲಂಗ್, ಅಲೆಮಾರಿ ಹೀಗೆ ಒಟ್ಟು 15 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ನಂತರ ನನ್ನ ಗಂಡ ಮನೆಯವರು 5-6 ದಿವಸ ಚೆನ್ನಾಗಿದ್ದು ನಂತರದ ದಿನಗಳಲ್ಲಿ ನನಗೆ ಹಿಂಸೆ ಕೊಡಲು ಪ್ರಾರಂಭಿಸಿದರು. ನೀನು ನಮ್ಮ ಮನೆಯಲ್ಲಿ ಯಾರೋ ಆಳುಗಳು ಇಲ್ಲದ ಕಾರಣ ನಿನಗೆ ಮದುವೆ ಆಗಿದ್ದೇನೆ ಅಂತಾ ಗಂಡ ಹೇಳಿದ್ದು, ಅತ್ತೆಯಾದ ಅಯಿಲಾಬಾಯಿ, ನಾದನಿ ಸ್ವಾತಿ, ಮಾವ ಚಂದ್ರಶೇಖರ ಎಲ್ಲರೂ ಸೇರಿ ನನ್ನ ಕೈಕಾಲಿಗೆ ಕಬ್ಬಿಣದ ಕಡಚೆಯಿಂದ ಸುಟ್ಟು ಗಾಯ ಮಾಡಿದ್ದು ಅಲ್ಲದೇ ನನಗೆ ಚಪ್ಪಲಿ ಇಡುವ ಜಾಗದಲ್ಲಿ ಮಲಗಲು ಹೇಳುತ್ತಿದ್ದು ನಾನು ಮಲಗಿದ್ದಾಗ ಚಪ್ಪಲಿ ಹಾಕಿಕೊಳ್ಳುವ ನೆಪದಲ್ಲಿ ನನಗೆ ಕಾಲಿನಿಂದ ಹೊಡೆಯುವುದು, ತುಳಿಯುವುದು ಮಾಡುತ್ತಿದ್ದರು. ಮತ್ತು ನಾನು ಯಾಕೆ ಹಿಂಸೆ ಕೊಡುತ್ತಿದ್ದೀರಿ ಅಂತಾ ಕೇಳಿದ್ದಕ್ಕೆ ಏ ರಂಡಿ ಮಗಳೇ, ಸೂಳ್ಯಾ ಮಗಳೆ ನೀನು ನಮ್ಮ ಮನೆಗೆ ಕೆಲಸಕ್ಕೆ ತಂದಿರುವೆ. ನಿನಗೆ ಮಹರಾಣಿಯಾಗಿ ಇರಲು ತಂದಿಲ್ಲ. ಜೀತಕ್ಕೆ ತಂದಿದ್ದೇವೆ. ಯಾವುದೇ ಸಾಮಾನುಗಳು ಮುಟ್ಟಬಾರದು ನಾವು ಹೇಳಿದ ಹಾಗೆ ಕೇಳಬೇಕು ಇಲ್ಲದಿದ್ದರೇ ನಿನಗೆ ಸಾಯಿಸಿ ಮನೆಯಲ್ಲಿ ಫರ್ಸಿ ತೆಗೆದು ಹೂಳಿ ಹಾಕುತ್ತೇವೆ. ನಿಮ್ಮ ತವರು ಮನೆಯವರಿಗೆ ಏನಾದರೂ ಹೇಳಿದರೇ ಕೊಲೆ ಮಾಡಿಸುತ್ತೇವೆ. ಮತ್ತು ನಾನು ನನ್ನ ತಂದೆ ತಾಯಿಗೆ ಮಾತಾಡಿಸಲು ಅವರು ಕೇಳಿದೆ ಅವರು ನಿನ್ನ ತಂದೆ ತಾಯಿಗೆ ಅವರು ಬರುವಾಗ 05 ತೊಲೆ ಬಂಗಾರ, 02 ಲಕ್ಷ ರೂಪಾಯಿ ತರಲು ಹೇಳು ಅಂತಾ ಹೇಳಿದಾಗ ರಾತ್ರಿ 12 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹಾಕಿದರು. ನಂತರ ನಾನು ನನ್ನ ತವರು ಮನೆಗೆ ಹೋದೆನು. ಹೀಗಿದ್ದು ದಿನಾಂಕಃ 14/05/2014 ರಂದು ನನ್ನ ಅತ್ತೆ ಮಾವ ನಮ್ಮ ಹಿರಿಯರ ಸಂಗಡ ತವರು ಮನೆಯಿಂದ ಬಂದು ಇರಲು ತಿಳಿಸಿದಕ್ಕೆ ನಾವು ಬಂದಿದ್ದು ಅವರು ಎಲ್ಲರೂ ಕೂಡಿ ನಮ್ಮ ಹಿರಿಯವರಿಗೆ ಬೈದು ಚಪ್ಪಲಿ ಎಸೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಕಾಳಗಿ ಠಾಣೆ : ಶ್ರೀ ಕಾಶಿನಾಥ ತಂದೆ ತೀಪ್ಪಣ್ಣಾ ವಡ್ಡರ ಸಾ:ಬಣಮಗಿ ಇವರು ದಿನಾಂಕ 14-07-2014 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಮುನ್ನಪ್ಪ ತಂದೆ ನಾಗಪ್ಪಾ ತಳವಾರ ಇವನು ಟ್ರಾಕ್ಟರ ತೆಗೆದುಕೊಂಡು ಹೊಗುವಾಗ ನನ್ನ ಮನೆಯ ಮುಂದಿನ ಕಂಪೌಂಡ ಗೋಡೆಗೆ ಹಾಯಿಸಿ ಗೋಡೆ ಕೆಡವಿ ಹೋಗಿದ್ದನ್ನು ನೋಡಿದ ನನ್ನ ಹೆಂಡತಿ ಶ್ರೀದೇವಿ ಇವಳು ಸಾಯಾಂಕಾಲ ನಾನು ಮನೆಗೆ ಬಂದಾಗ ನನಗೆ ತಿಳಿಸಿದಳು, ನಾನು ಮುನ್ನಪ್ಪನಿಗೆ ಕೇಳಬೇಕೆಂದು ಮನೆಯ ಮುಂದಿನ ಸಿಸಿ ರಸ್ತೆಯ ಮೇಲೆ ಹೋಗುವಾಗ ಮುನ್ನಪ್ಪನು ಅದೇ ರೋಡಿನ ಮೇಲೆ ಹೊರಟಿದ್ದು ನಾನು ಮುನ್ನಪ್ಪನಿಗೆ ಏ ಮುನ್ನಪ್ಪ ಟ್ರಾಕ್ಟರ ಹಾಯಿಸಿ ಗೋಡೆ ಕೆಡವಿದ್ದಿ ಕೆಡವಿದ ಗೋಡೆ ಕಟ್ಟಿಕೊಡು ಅಂತ ಕೆಳಿದನು ಅದಕ್ಕೆ ಮುನ್ನಪ್ಪನು ಒಪ್ಪಿಕೊಂಡು ಗೋಡೆ ಕಟ್ಟಿದವನಂತೆ ಮಾಡಿ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿ ಅವಾಚ್ಯ ಶಬ್ದ್ಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 12-06-2014 ರಂದು 10-00 ಎ.ಎಮ್ ಕ್ಕೆ ಲಾರಿ ನಂ. ಕೆ.ಎ 32 ಬಿ 5853 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನೇಹರು ಗಂಜ ದಲ್ಲಿರುವ ಹತ್ತಿ ಮಾರ್ಕೆಟದಲ್ಲಿ ಉಕ್ಕಡ ಪೊಲೀಸ್ ಠಾಣೆ ಎದರುಗಡೆ ಇರುವ ವಿದ್ಯುತ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ವಿದ್ಯುತ ಕಂಬಕ್ಕೆ ಹಾನಿ ಆಗಿ ಅಂದಾಜು 15-20 ಸಾವಿರ ರೂಪಾಯಿಗಳಷ್ಟು ಹಾಳಾಗಿರುತ್ತದೆ ಅಂತಾ ಶ್ರೀ ಶಿವಶಂಕರ ನನ್ನಾ ಕಾರ್ಯಧರ್ಶಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಗುಲಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 11/07/14 ರಂದು ಬೆಳಗ್ಗೆ 11.00 ಗಂಟೆಗೆ ಶ್ರೀ ರಮೇಶ ತಂದೆ ಸೋಮಶೇಖರ ನಂದ್ಯಾಲ ಸಾ : ಬೇಳಕೋಟ ಹಾಗು ತನ್ನ ತಂದೆ ಸೋಮಶೇಖರ ತಮ್ಮ ಉಮೇಶ ಅಣ್ಣ ಜಗನಾಥ ಇವರೆಲ್ಲರು ಮನೆಯಲ್ಲಿದ್ದಾಗ ತಮ್ಮೂರಿನ ಸಿದ್ರಾಮಪ್ಪ ಕಡಗಂಚಿ ಇವರು ಕೂಡಾ ಅವರ ಹತ್ತಿರ ಬಂದಿದ್ದು ಆಗ ನನಗೆ ಜೀವನ ನಡೆಸಲು ಕಷ್ಟ ಆಗುತ್ತಿದೆ ಅಂತಾ ಕೆಳಿಕೊಂಡಾಗ ಆಗ ಉಮೇಶ ಇತನು  ಜಗಳ ತೆಗೆದು  ಭೋಸಡಿ ಮಗನೆ ಹೋಲದಲ್ಲಿ ಪಾಲು ಕೆಳುತ್ತಿಯಾ ನಿನಗೆ ಬಹಳ ಸೊಕ್ಕು ಬಂದಿದೆ ಅಂತಾ ಅಂದು ಬಾರಕೋಲ ತೆಗೆದುಕೊಂಡು ನನ್ನ ಬೆನ್ನಮೇಲೆ ಸಿಕ್ಕಾಪಟ್ಟೆ ಹೊಡೆದಿರುತ್ತಾನೆ ಹಾಗೂ ಅಣ್ಣ ಜಗನ್ನಾಥ ಇತನು ಕೈಯಿಂದ ಸೊಂಟದ ಮೇಲೆ ಹೊಡೆದಿದ್ದಲ್ಲದೆ ನಮ್ಮೂರಿನ ಸಿದ್ರಾಮಪ್ಪ ತಂ ಚೆನ್ನಬಸಪ್ಪ ಕಡಗಂಚಿ ಇತನು ಕೂಡಾ ಸೂಳಿ ಮಗನೆ ಸಾಲ ಕೋಡು ಪಾಲು ತೊಗೊ ಅಂತಾ ಕಾಲಿನಿಂದ ಬೆನ್ನಿನ ಮೇಲೆ ಒದ್ದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀಮತಿ ಸಾಹೇಬ ಬೀ ಗಂಢ ಶಾಬೋದ್ದೀನ್ ಬೋರಾಳ  ಸಾ; ಓಕಳಿ  ತಾ;ಜಿ: ಗುಲಬರ್ಗಾ  ಇವಳು  ಶ್ರೀಮತಿ. ವೈಜಂತಾ  ಗಂಡ ಪಾಂಡುರಂಗ  ನವಲೆ  ಸಾ; ಕಮಲಾಫೂರ  ಇವರಿಂದ ಕಮಲಾಫೂರ ಸೀಮಾಂತರದ ಹೊಲ ಸರ್ವೆನಂ:372/1 ನೇದ್ದರಲ್ಲಿ 2 ಎಕರೆಭೂಮಿಯನ್ನು  ಖರೀದಿಸಿದ್ದು,ಆದರೆ ಇಲ್ಲಿಯವರೆಗೆ  ರಜಿಸ್ಟ್ರೇಷನ ಮಾಡಿಸಿಕೊಂಡಿರುವುದಿಲ್ಲ. ಹೀಗಿದ್ದು, ದಿನಾಂಕ: 10-06-2014 ರಂದು ಬೆಳಗಿನ ಸಮಯದಲ್ಲಿ ಫಿರ್ಯಾದಿಯು  ತಾನು  ಖರೀದಿಸಿರುವ ಹೊಲ ಸರ್ವೆ ನಂ: 372/1 ರಲ್ಲಿ ಹೋಗಿ ಕೃಷಿ ಕೆಲಸ  ಮಾಡುತ್ತಿದ್ದಾಗ ಆರೋಪಿತರಾದ  1. ವೈಜಂತಾ ಗಂಡ ಪಾಂಡುರಂಗ  ನವಲೆ 2. ಪಾಂಡುರಂಗ ತಂದೆ ರಾಮಚಂದ್ರ ನವಲೆ 3. ದಿಲೀಪ್  ತಂದೆ ಪಾಂಡುರಂಗ ನವಲೆ 4. ದಾಮೋದರ ತಂದೆ ಪಾಂಡುರಂಗ ನವಲೆ  ಮತ್ತು 5. ಸುರೇಶ ಘಾಟಗೆ  ಸಾ: ಎಲ್ಲರೂ ಕಮಲಾಪೂರ  ಇವರುಗಳು  ಹೊಲಕ್ಕೆ ಬಂದು  ಫೀರ್ಯಾದಿಗೆ ಅವಾಚ್ಯ ಶಬ್ದಗಳಿಂದ   ಬೈಯುತ್ತಾ ಈ ಹೊಲ ನೀನು  ಖರೀದಿಸಿಲ್ಲ, ಇನ್ನೊಮ್ಮೆ  ಈ ಹೊಲದ  ಕಡೆಗೆ  ಬಂದರೆ  ನಿನಗೆ  ಜೀವ  ಸಹಿತ  ಬಿಡುವುದಿಲ್ಲ ಅಂತಾ  ಜೀವದ  ಬೆದರಿಕೆ ಹಾಕುತ್ತಾ  ಕೈಗಳಿಂದ  ಹೊಡೆ ಬಡೆ ಮಾಡಿ ದುಃಖಾಪತ ಗೊಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.