POLICE BHAVAN KALABURAGI

POLICE BHAVAN KALABURAGI

19 October 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಮಹ್ಮದ ಹಾಸೀಮ ತಂದೆ ಅಲ್ಲಾಭಕ್ಷ ಮಣಿಯಾರ ಸಾ: ಜಿನಗಾರ ಗಲ್ಲಿ ವಿಜಯಪೂರ ರವರು ದಿನಾಂಕ:12/10/2019 ರಂದು ಅಫಜಲಪೂರ ಪಟ್ಟಣದಲ್ಲಿ ನಮ್ಮ ಸಂಭಂದಿಕರ ಮದುವೆ ಇದ್ದ ಕಾರಣ ನಾನು ಮತ್ತು ನಮ್ಮ ಸಂಭಂದಿಕನಾದ ಮಹಿಬೂಬ ತಂದೆ ಇಂದರಸಾಬ ಮುಲ್ಲಾ ಇಬ್ಬರೂ ನನ್ನ ಯಾಕ್ಟಿವಾ ಮೋಟಾರ ಸೈಕಲ ಮೇಲೆ ಮತ್ತು ನನ್ನ ತಮ್ಮನಾದ ಐಜಾಜ ಅಹ್ಮದ ಈತನು ಒಬ್ಬನೆ  ಮೋಟಾರ ಸೈಕಲ ನಂಬರ ಕೆ,-28 ಈಡಿ-0984 ನೇದ್ದನ್ನು ತಗೆದುಕೊಂಡು 12-15 ಪಿ,ಎಮ್,ಸುಮಾರಿಗೆ ವಿಜಯಪೂರ ಬಿಟ್ಟು ಅಫಜಲಪೂರಕ್ಕೆ ಬರಬೇಕೆಂದು ಸಿಂದಗಿ-ಮೋರಟಗಿ-ಘತ್ತರ್ಗಿ ಮಾರ್ಗವಾಗಿ ಬರುತ್ತಿರುವಾಗ ಮಾರ್ಗ ಮದ್ಯದಲ್ಲಿ 3-30 ಪಿ,ಎಮ್,ಸುಮಾರಿಗೆ ಇಂಚಗೇರಾ ಗ್ರಾಮದ  ಹತ್ತೀರ ನಾನು ಮತ್ತು ನನ್ನ ಮಾವ ನನ್ನ ಮೋಟಾರ ಸೈಕಲ ಮೇಲೆ ಹಾಗೂ ನನ್ನ ತಮ್ಮ ಮೋಟಾರ ಸೈಕಲ ನಂಬರ ಕೆ,-28 ಈಡಿ-0984 ನೇದ್ದರ ಮೇಲೆ ಅಫಜಲಪೂರ ಕಡೆ ಬರುತ್ತಿದ್ದಾಗ ಎದುರುಗಡೆಯಿಂದ ಹಿಂಚಗೇರಾ ಗ್ರಾಮದ ಕಡೆಯಿಂದ ಕ್ರೂಜರ ನಂಬರ ಕೆ,-32 ಡಿ-4438 ನೇದ್ದರ ಚಾಲಕನು ತನ್ನ ಕ್ರೂಜರನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ತಮ್ಮನ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತಡಿಸಿದನು ಆಗ ನನ್ನ ತಮ್ಮನು ಮೋಟಾರ ಸೈಕಲ ಮೇಲಿಂದ ಕೇಳಗಡೆ ಬಿದ್ದನು ಆಗ ನಾನು ಮತ್ತು ನನ್ನ ಮೋಟಾರ ಸೈಕಲ ಹಿಂದೆ ಕುಳಿತಿದ್ದ ನನ್ನ ಮಾವ ಮಹೀಬೂಬ ನಮ್ಮ ಮೋಟಾರ ಸೈಕಲ ನಿಲ್ಲಿಸಿ ಹತ್ತೀರ ಹೋಗಿ ನನ್ನ ತಮ್ಮನಿಗೆ ನೋಡಲಾಗಿ ಮುಖದ ತುಂಬ ಚಚ್ಚಿದಂತೆ ಗಾಯವಾಗಿರುತ್ತದೆ ಮತ್ತು ತಲೆಯ ಹಿಂಭಾಗಕ್ಕೆ ಭಾರಿ ಒಳಪೆಟ್ಟಾಗಿ ರಕ್ತ ಜಮಾ ಗಟ್ಟಿದಂತೆ ಆಗಿರುತ್ತದೆ ಮತ್ತು  ಅಲ್ಲಲ್ಲಿ ಗಾಯಗಳಾಗಿರುವದು ಕಂಡು ಬಂತು ಸದರಿ ಅಪಘಾತವಾಗಿರುವದನ್ನು ಕ್ರೂಜರ ಚಾಲಕನು ಕ್ರೂಜರ ನಿಲ್ಲಿಸಿ ನೋಡಿ ತನ್ನ ಕ್ರೂಜರ ತಗೆದುಕೊಂಡು ಸ್ಥಳದಿಂದ ಹೋಗಿರುತ್ತಾನೆ ನಂತರ ಯಾರೊ ಒಬ್ಬ ವ್ಯಕ್ತಿ ಬಂದು ನನ್ನ ತಮ್ಮನಿಗೆ ಆಗಿರುವ ಗಾಯವನ್ನು ನೋಡಿ  108 ವಾಹನಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದನು ಆಗ 108 ವಾಹನ ಬಂದ ನಂತರ ನಾನು ಮತ್ತು ಮಹಿಬೂಬ ಮುಲ್ಲಾ ಇಬ್ಬರು ಕೂಡಿ ಕೊಂಡು ನನ್ನ ತಮ್ಮನಿಗೆ ಕಲಬುರಗಿಯ ಸನ್ ರೈಸ ಆಸ್ಪತ್ರೇಗೆ ಕರದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ ಅಪಘಾತವಾದಾಗಿನಿಂದ ಇಲ್ಲಿಯವರೆಗೆ ನನ್ನ ತಮ್ಮನು ಮಾತನಾಡುವ ಸ್ಥೀತಿಯಲ್ಲಿ ಇರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:16/10/2019 ರಂದು ಮೊಟಾರ್ ಸೈಕಲ್ ನಂಬರ್ ಕೆಎ35-ಎಲ್1056 ನೇದ್ದರ ಸವಾರನು ಆಳಂದ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದು, ಮೊಟಾರ್ ಸೈಕಲ್ ನಂಬರ್ ಕೆಎ32ಇಕೆ3026 ನೇದ್ದರ ಸವಾರನು ಕಲಬುರಗಿ ಕಡೆಯಿಂದ ತನ್ನ ಮೊಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಪೆಟ್ರೋಲ್ ಪಂಪ ಕಡೆಗೆ ರಸ್ತೆ ಕ್ರಾಸ್ ಮಾಡುವಾಗ ಮೊಟಾರ್ ಸೈಕಲ್ ನಂಬರ್ ಕೆಎ35-ಎಲ್1056 ನೇದ್ದರ ಸವಾರನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿರುತ್ತದೆ. ಅಂತಾ ತಿಳಿಸಿರುತ್ತಾರೆ. ಎರಡು ಮೊಟಾರ್ ಸೈಕಲಗಳ ಮೆಲಿದ್ದ ವ್ಯಕ್ತಿಗಳ ಮತ್ತು ಸವಾರರ ಹೆಸರು ವಿಳಾಸ ತಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನನ್ನ ಮಗ ಅಂಬರೀಶ ಹಾಗೂ ಆತನ ಸಂಗಡ ಇದ್ದ ಜಯಾನಂದ ಇಬ್ಬರು ಅಪಘಾತದಲ್ಲಿ ಗಂಬೀರಗಾಯ ಹೊಂದಿ ಉಪಚಾರ ಪಡೆಯುತ್ತಿದ್ದು ಇಬ್ಬರು ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ   ಕಾರಣ ಮೊಟಾರ್ ಸೈಕಲ್ ನಂಬರ್ ಕೆಎ35-ಎಲ್1056 ನೇದ್ದರ ಸವಾರನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಸದರಿಯವನ ತಪ್ಪಿನಿಂದಲೆ ಅಪಘಾತವಾಗಿರುತ್ತದೆ ಅಂತಾ ಶ್ರೀ ಶಿವಕುಮಾರ ತಂದೆ ಅಮರಪ್ಪಾ ಶೇರಿ, ಸಾ:ನೆಲ್ಲೂರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಕೊಳ್ಳದಲ್ಲಿ ಬಿದ್ದು ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ನಾಗಯ್ಯ ವಡ್ಡರ್ ಸಾ; ಜೇವರ್ಗಿ (ಕೆ)  ರವರು ದಿನಾಂಕ 17.10.2019 ರಂದು ಜೇವರಗಿ (ಕೆ) ಹತ್ತಿರ ಹಳ್ಳದಲ್ಲಿ ನನ್ನ ಮಗಳು ಕುಮಾರಿ ಹಣಮಂತಿ ವಯಸ್ಸು 12  ವರ್ಷ, ರವರು ಬಟ್ಟೆ ತೊಳೆಯಲು ಹಳ್ಳಕ್ಕೆ ಹೋಗಿದ್ದು ಹಳ್ಳದಲ್ಲಿ ಬ್ರೀಜ್ ಕಾಮಗಾರಿ ಅರ್ಪೂಣಗೊಂಡದ್ದರಿಂದ ಇನ್ನೂ ಎರಡು ಕಾಲಂ ತೊಡಿ ಹಾಗೆ ಬಿಟ್ಟಿರುವುದರಿಂದ  ಸುಮಾರು 8 ಅಡಿ ಆಳ ನೀರು ತುಂಬಿರುತ್ತದೆ. ನನ್ನ ಮಗಳು ಕಾಲು ಜಾರಿ ನೀರಿನಲ್ಲಿ ಬಿದ್ದಿರುತ್ತಾಳೆ. ಕಾಮಗಾರಿಯನ್ನು ಶ್ರವಣಕುಮಾರ ಪಿ.ವಿ.ಆರ್ ಕಂಪನಿಯ ಎಮ್.ಡಿ. ರವರು ಗುತ್ತಿಗೆ ಹಿಡಿದಿದ್ದು, ಸುಮಾರು 2-3 ವರ್ಷಗಳಿಂದ ನಿಂತು ಹೋಗಿರುತ್ತದೆ. ಕಾಮಕಾರಿ ಪೂರೈಸುವಲ್ಲಿ ಗುತ್ತಿಗೆದಾರರು ನಿರ್ಲಕ್ಷ ವಹಿಸಿದರಿಂದ ಬ್ರೀಡ್ಜ ಕಾಮಗಾರಿಯ ತೆಗ್ಗು ತೊಡಿ ಹಾಗೆ ಬಿಟ್ಟಿದ್ದರಿಂದ ನೀರು ತುಂಬಿಕೊಂಡಿರುತ್ತದೆ. ಆದ್ದರಿಂದ ಬಟ್ಟೆ ತೊಳೆಯಲು ಹೋದ ನನ್ನ ಮಗಳು ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಕೊಳದಲ್ಲಿ ಬಿದ್ದು ಮುಳಗಿ  ಮೃತಪಟ್ಟಿರುತ್ತಾಳೆ. ಘಟನೆಯನ್ನು ಯಲ್ಲಪ್ಪ ತಂದೆ ತಿಮ್ಮಯ್ಯ ಚೌದರಿ, ಭೀಮಯ್ಯ ತಂದೆ ಯಂಕಯ್ಯ ವಡ್ಡರ್ ಇವರು ನೋಡಿ ನೀರಿನಲ್ಲಿ ಬಿದ್ದು ಸತ್ತಿರುವ ನನ್ನ ಮಗಳ ಹೆಣವನ್ನು ನೀರಿನಿಂದ ಹೊರೆಗೆ ತೆಗೆದಿರುತ್ತಾರೆ. ಕಾಮಗಾರಿ ಪೂರ್ಣಗೊಂಡರೆ ಘಟನೆ ಆಗುತ್ತಿರಲಿಲ್ಲ ಶ್ರವಣಕುಮಾರ ಗುತ್ತೆದಾರ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶಿವಪುತ್ರ ತಂದೆನಿಂಗಪ್ಪ ಆಡಿನ್ ಸಾ/ ಕೊಳಕೂರ ರವರ ಮಗಳಿಗೆ ಬಂಡೆಪ್ಪ ತಂದೆ ಬಸಣ್ಣ ಆಡಿನ್ ಸಾ/ ಕೋಳಕೂರ ಮಗಳು ಹೊಡೆದ ವಿಷಯದ ಬಗ್ಗೆ ಫಿರ್ಯಾದಿಯು ಆರೋಪಿತನು ಮನೆಗೆ ಹೋಗಿ ಕೇಳಿದ್ದಕ್ಕೆ ಆರೋಪಿತನು ಫಿರ್ಯಾದಿಯೊಂದಿಗೆ ಜಗಳ ತೆಗೆದು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಕಲ್ಲಿನ ಮೇಲೆ ನೂಕಿಸಿಕೊಟ್ಟು ಒಳಪೆಟ್ಟು ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ವಾಡಿ ಠಾಣೆ : ಶ್ರೀ ರಾಯಪ್ಪ ತಂದೆ ಹಯ್ಯಾಳಪ್ಪ ಸೈದಾಪುರ ಸಾ:ಬೇನಾಳ ತಾ:ಶಹಾಪುರ ಜಿ:ಯಾದಗೀರ ರವರು ಸುಮಾರು 170 ಸ್ವಂತ ಕುರಿಗಳಿದ್ದು ಅವುಗಳನ್ನು ಊರು ಊರು ಅಲೆದಾಡಿ ಮೇಯಿಸಿಕೊಂಡು ಬರುವ ಕೆಲಸ ಮಾಡಿಕೊಂಡಿದ್ದು ನನ್ನಂತೆ ನಮ್ಮ ಊರಿನ ಚಂದ್ರಪ್ಪ ತಂದೆ ಸಿದ್ದಪ್ಪ ಒಣಕುಣಿ ಇತನ 130 ಕುರಿಗಳು ಹಾಗೂ ಶರಣಬಸಪ್ಪ ತಂದೆ ಬಸಪ್ಪ ಹೆಳವರ ಇತನ 70 ಕುರಿಗಳಿದ್ದು ನಾವು 03 ಜನರು ಕೂಡಿಕೊಂಡು ಎಲ್ಲಾ ಕುರಿಗಳನ್ನು ಮೇಯಿಸುತ್ತ ಊರು ಊರು ಹೋಗುತ್ತೆವೆ. ಈಗ ಸುಮಾರು 01 ತಿಂಗಳಿನಿಂದ ಸೂಗುರ (ಎನ) ಗ್ರಾಮದ ಸುತ್ತ ಮುತ್ತಲಿನ ಹೊಲಗಳಲ್ಲಿ ನಮ್ಮ ಕುರಿಗಳನ್ನು ಮೇಯಿಸುತ್ತ ಇದ್ದು ರಾತ್ರಿ ವೇಳೆಯಲ್ಲಿ ಸೂಗುರ (ಎನ್) ಗ್ರಾಮದ ಹೀರಗಪ್ಪ ತಾತನವರ ತೋಟದ ಹತ್ತಿರ ಖುಲ್ಲಾ ಜಾಗೆಯಲ್ಲಿ ಸುತ್ತಲು ಕಟ್ಟಿಗೆ ಕಟ್ಟಿ ಬೇಲಿಯನ್ನು ಹಾಕಿ ಕುರಿಗಳನ್ನು ಕೂಡಿಹಾಕಿ ನಾವು ಅಲ್ಲೆ ಮಲಗುತ್ತೆವೆ.ಬೆಳಗ್ಗೆ ಮತ್ತೆ ಕುರಿಗಳನ್ನು ಹೊಲಗಳಲ್ಲಿ ಮೇಯಿಸುತ್ತ ಹೋಗುತ್ತೆವೆ ಅದೇ ಪ್ರಕಾರ ದಿನಾಂಕ 14/10/2019 ರಂದು ಸಾಯಂಕಾಲ 06-00 ಗಂಟೆಯವರೆಗೆ ಕುರಿಗಳನ್ನು ಮೇಯಿಸಿ ಮತ್ತೆ ನಾವು ಕುರಿಗಳನ್ನು ದಿನಾಲೂ ರಾತ್ರಿ ಕೂಡಿ ಹಾಕುತ್ತಿದ್ದ ಜಾಗದಲ್ಲಿ ತಂದು ಬಲಿ ಹಾಕಿ ಬಿಟ್ಟೆವು ರಾತ್ರಿ 09-00 ಗಂಟೆಗೆ ನಾವು ಅಲ್ಲೇ ಮಲಗಿಕೊಂಡೆವು. ನಂತರ ದಿನಾಂಕ 15/10/2019 ರಂದು ಬೆಳಗ್ಗೆ 07-00 ಗಂಟೆಗೆ ಎದ್ದು ನಮ್ಮ ನಮ್ಮ ಕುರಿಗಳನ್ನು ಎಣಿಸಿಕೊಂಡಾಗ ನನ್ನ ಕುರಿಗಳಲ್ಲಿ 09 ಕುರಿಗಳು ಇರಲಿಲ್ಲ. ಮತ್ತೆ ಮತ್ತೆ ಎಣಿಸಿ ನೋಡಲಾಗಿ 09 ಕುರಿಗಳು ಕಡಿಮೆ ಇದ್ದಿದ್ದು ಕಂಡು ಬಂದಿರುತ್ತದೆ. ಸದರಿ ಕುರಿಗಳು ದಿನಾಂಕ 14/10/2019 ರಂದು  ರಾತ್ರಿ 10-00 ಗಂಟೆಯಿಂದ ದಿನಾಂಕ 15/10/2019 ರಂದು ಬೆಳಗ್ಗಿನ 06-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು 09 ಕುರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಸದರಿ ಕುರಿಗಳು ಅಂದಾಜು 02 ರಿಂದ 03 ವರ್ಷದವುಗಳು ಇದ್ದು ಒಂದಕ್ಕೆ ಅಂದಾಜು 05 ಸಾವಿರ ರೂಪಾಯಿ ಕಿಮ್ಮತ್ತು ಆಗುತ್ತಿದ್ದು ಒಟ್ಟು 45 ಸಾವಿರ ರೂಪಾಯಿ ಬೆಲೆ ಬಾಳುವ ಕುರಿಗಳು ಇರುತ್ತವೆ.ಕುರಿಗಳು ಕಳುವಾದ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.