POLICE BHAVAN KALABURAGI

POLICE BHAVAN KALABURAGI

25 February 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಮಾದನ ಹಿಪ್ಪರಗಾ ಠಾಣೆ : ದಿನಾಂಕ: 25-02-2014 ರಂದು ಸರಸಂಬಾ ಗ್ರಾಮದಲ್ಲಿ ಮಟಕಾ ಜೂಜಾಟದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾದನಹಿಪ್ಪರಗಾ ಮತ್ತು ಸಿಬ್ಬಂದಿ ಹಾಗು ಪಂಚರೋಂದಿಗೆ ಸದರ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ಮಟಕಾ ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ಮಟಕಾ ಬರೆದುಕೊಳ್ಳುತ್ತಿದ ರಾಮು ತಂದೆ ಭವಾನೇಪ್ಪ ಜಮಾದಾರ ಸಾ: ಸರಸಂಬಾ ಇವನಿಗೆ ಹಿಡಿದು ಅವನ ಹತ್ತಿರ ನಗದು ಹಣ 461=00 ರೂಪಾಯಿಒಂದು ಬಾಲ ಪೇನ್ನು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಜಪ್ತ ಮಾಡಿಕೊಂಡ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಮೊಹ್ಮದ್ ಬಶೀರುಲ್ಲಾ ಸಿದ್ದಿಕಿ ತಂದೆ ಬರಕತುಲ್ಲಾ ಸಿದ್ದಿಕಿ ಅಸ್ಲಂ, ಸಾ:ಮನೆ ನಂ-8-1-363/136 ಆದಿತ್ಯಾ ನಗರ ಕಾಲೋನಿ, ಟೋಲಿ ಚೌಕಿ, ಹೈದ್ರಾಬಾದ ರವರ ಮಾವನವರಾದ  ಮಹ್ಮದ  ಹನೀಫ ಮಸೂದ ರವರು ಪ್ರಯಾಣಿಸುತ್ತಿದ್ದ ಕಾರ ದಿನಾಂಕ 25-02-2014 ರಂದು ಅಪಘಾತವಾಗಿದ್ದು ಅದರಲ್ಲಿ ನನ್ನ ಮಾವ ಮಹ್ಮದ  ಹನೀಫ ಮಸೂದ ರವರಿಗೆ  ಭಾರಿ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು  ಅವರ ಗೇಳೆಯ ಕುತುಬುದ್ದಿನ ರವರಿಗೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ  ಅಂತಾ ಗೊತ್ತಾಗಿ ಗುಲಬರ್ಗಾ ನಗರದ ಕಾಮರಡ್ಡಿ ಆಸ್ಪತ್ರೆಗೆ ಬೇಟ್ಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕುತುಬುದ್ದಿನರವರಿಗೆ ಬೆಟ್ಟಿಯಾಗಿ ವಿಚಾರಿಸಿದಾಗ ಅವರು ತಿಳಿಸಿದ್ದೆನೆಂದರೆ, ನಿನ್ನೆ ದಿನಾಂಕ 24.02.2014 ರಂದು ಬೆಳಿಗ್ಗೆ 11 .ಎಂ.ಕ್ಕೆ ಕೊರ್ಟ ಕೆಲಸಕ್ಕೆ ಅಂತಾ ತನ್ನ ಗೆಳೆಯ ಮಹ್ಮದ ಹಫೀಜ ಮಸೂದ ಇವರನ್ನು ಹೈದ್ರಾಬಾದದಿಂದ ಕೂಡಿಕೊಂಡು Hundai ಕಾರ ನಂ AP-12/H-8341 ನೇದ್ದನ್ನು ತಗೆದುಕೊಂಡು ಗುಲಬರ್ಗಾಕ್ಕೆ ಹೋಗಿ ಗುಲಬರ್ಗಾದಲ್ಲಿ ಕೋರ್ಟ ಕೆಲಸ ಮುಗಿಸಿಕೊಂಡು ಮರಳಿ  ಹೈದ್ರಾಬಾದಕ್ಕೆ ಬರುವ ಕುರಿತು ಗುಲಬರ್ಗಾದಿಂದ ದಿನಾಂಕ 25.02.2014 ರಂದು ರಾತ್ರಿ 00.30 ಎಎಂಕ್ಕೆ ನಮ್ಮ ಕಾರ ನಂ AP-12/H-8341 ನೇದ್ದು ತಗೆದುಕೊಂಡು ಮೇಲ್ಕಂಡ ಚಾಲಕನೊಂದಿಗೆ ಸೇಡಂ ಮಾರ್ಗವಾಗಿ ಹೈದ್ರಾಬಾದಕ್ಕೆ ಹೋಗುತ್ತಿರುವಾಗ ಸೇಡಂ ಸಮೀಪ ಬರುವಾಗ ನಮ್ಮ ಮುಂದೆ ಹೋಗುತ್ತಿದ್ದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ತಗೆದುಕೊಂಡು ಹೋಗುತ್ತಿದ್ದು ಆಗ ನಮ್ಮ ಕಾರ ಚಲಾಯಿಸುತ್ತಿದ್ದ ಮಹ್ಮದ ಹನೀಫ್ ಮಸೂದರವರು ತಮ್ಮ ಕಾರನ್ನುಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಮುಂದೆ ಹೋಗುತ್ತಿದ್ದ ಲಾರಿಯ ಹಿಂದೆ ಒಳಗಡೆ ಹೋಗಿ ಸಿಕ್ಕಿ ಬಿದ್ದಾಗ ಲಾರಿ ಚಾಲಕನು ಅದನ್ನುಗಮನಿಸದೆ ಹಾಗೆ ಓಡಿಸಿಕೊಂಡು ಸೇಡಂ ಪಟ್ಟಣದ ಚಿಂಚೋಳಿ ಕ್ರಾಸಿನವರೆಗೆ ಎಳೆದುಕೊಂಡು ಬಂದು ಚಿಂಚೋಳಿ ಕ್ರಾಸ ಹತ್ತಿರ ವಿರುವ ಪೆಟ್ರೊಲ ಬಂಕನ ಮುಂದೆ ಜಂಪನಲ್ಲಿ ಓಡಿಸಿದಾಗ ಲಾರಿ ಜಂಪಾಗಿ ಸಿಕ್ಕಿಬಿದ್ದ ನಮ್ಮ ಕಾರ ಲಾರಿಯಿಂದ ಉಚ್ಚಿಬಿದ್ದಿರುತ್ತದೆ. ಆಗ ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ. ಲಾರಿ ಚಾಲಕನ ಹೆಸರು ಮತ್ತು ಲಾರಿ ನಂಬರ್ ಗೊತ್ತಿರುವದಿಲ್ಲ. ಅಂತಾ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ: 25/02/2014 ರಮದು ಬೇಳಗ್ಗೆ 9:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಮಾವನಾದ ಅಣ್ಣರಾಯ ಇತನು ನನಗೆ ಫೊನ್‌‌ ಮಾಡಿ ತಿಳಿಸಿದ್ದೆನಂದರೆ. ನಿನ್ನ ಮಗಳಾದ ಅನನ್ಯ ಇವಳಿಗೆ ಇಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಆಟವಾಡುತ್ತಿದ್ದಾಗ ನಮ್ಮೂರಿನೊಳಿಗಿನ ಅಗಸಿ ಬಾಗಿಲದಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಚಲಾಯಿಸಿಕೊಂಡು ಬಂದು ಅನನ್ಯ ಇವಳಿಗೆ ಡಿಕ್ಕಿ ಪಡಿಸಿದ್ದರಿಂದ ಅನನ್ಯ ಇವಳು ರೋಡಿನ ಮೇಲೆ ಬಿದ್ದಾಗ ಟ್ಯ್ರಾಕ್ಟರನ ಮುಂದಿನ ಗಾಲಿ ತಲೆಯ ಮೇಲೆ ಹಾಯ್ದು  ತಲೆಗೆ ಬಾರಿ ರಕ್ತಗಾಯವಾಗಿದ್ದಲ್ಲದೆ ಬಲ ಭುಜಕ್ಕೆ ಎಡಗೈಗೆ ತರಚಿದ ಗಾಯವಾಗಿರುತ್ತದೆ ಆದ್ದರಿಂದ ಅವಳನ್ನು ಆಸ್ಪತ್ರೆಗೆ ತೆಗೆದುಕೊಂದು ಹೊಗಲು ಬಂದು ನಿಮ್ಮೂರಿನ ಬಸ್‌ ನಿಲ್ದಾಣದ ಹತ್ತಿರ ನಿಂತಿರುತ್ತೆವೆ ನೀನು ಬಾಗನೆ ಬಾ ಅಂತಾ ತಿಳಿಸಿದ್ದರಿಂದ ನಾನು ಕೂಡಲೆ ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗಳಾದ ಅನನ್ಯ ಇವಳಿಗೆ ತಲೆಗೆ ಬಾರಿ ರಕ್ತಗಾಯಗಳಾಗಿದ್ದು  ನಂತರ ಸದರಿ ನನ್ನ ಮಗಳನ್ನು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದಾಗ ಅವಳನ್ನು ಪರಿಕ್ಷಿಸಿದ ವೈದ್ಯರು ಸದರಿಯವಳು ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ನಂತರ ಸದರಿ ಅಪಘಾತ ಪಡಿಸಿದ ಟ್ರ್ಯಾಕ್ಟರ್‌ ನಂಬರ ಮತ್ತು ಚಾಲಕನ ಹೆಸರು ವಿಚಾರಿಸಲಾಗಿ ನಮ್ಮೂರಿನ ರವಿ ಮಡಿವಾಳ ಇತನು ಚಲಾಯಿಸುತ್ತಿದ್ದು ಅದರ ಇಂಜೀನ್‌ ಹೊಸದು ಇದ್ದು ನಂಬರ ಇರುವುದಿಲ್ಲ ಮತ್ತು ಟ್ರೈಲಿ ನಂ. ಕೆಎ 32 ಟಿಎ-2534 ನೇದ್ದು ಇರುತ್ತದೆ ಮತ್ತು ರವಿ ಮಡಿವಾಳ ಇತನು ಅಪಘಾತ ಪಡಿಸಿ ಟ್ರಾಕ್ಟರವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದರು.. ಅಂತಾ ಶ್ರೀ ಶ್ರೀಶೈಲ್‌ ತಂದೆ ಶಿವಶರಣಪ್ಪ ಹೂನಳ್ಳಿ  ಸಾ:ಶರಣಶಿರಸಗಿ ತಾ:ಜಿ:ಗುಲಬರ್ಗಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 24-02-2014 ರಂದು 0915 ಗಂಟೆಗೆ ಹಿತ್ತಲಶಿರೂರ ಗ್ರಾಮದ ಶ್ರೀ ಕಲ್ಮೇಶ್ವರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ., ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶ್ರೀ ಕಲ್ಮೇಶ್ವರ ದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಶಿವಯೋಗಿ ತಂದೆ ಶಿವಲಿಂಗಪ್ಪ ಹುಗ್ಗಿ  ಸಾ|| ಹಿತ್ತಲಶಿರೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01. ನಗದು ಹಣ 1390/- 02.ಒಂದು ಮಟಕಾ ಅಂಕಿ ಸಂಖ್ಯೆ ಹಾಳೆ03. ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 22-02-2014 ರಂದು 4;30 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಮತ್ತು ಸಿಬ್ಬಂದಿ ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪ್ರಕಾಶ ತಂದೆ ರೇವಪ್ಪ ಕಂಬಾರ ಸಾ|| ಅಫಜಲಪೂರ ಎಂದು ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2100/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :            
ವಾಡಿ ಠಾಣೆ : ಶ್ರೀ ಪ್ರಕಾಶ ತಂದೆ ಅನಂತರಾವ ಕುಲಕರ್ಣೀ ಸರಕಾರಿ ಹಿರಿಯ ಪ್ರೌಢ ಶಾಲೆ ಕೊಲ್ಲುರ ಇವರು ದಿನಾಂಕ 19-02-2014 ರಂದು ಸಂಜೆ 5-30 ಗಂಟೆಗೆ ಎಲ್ಲಾ ಶಾಲೆಯ ಕೊಣೆಗಳ ಬಿಗವನ್ನು ಹಾಕಿಕೊಂಡು ಹೊಗಿದ್ದು ರಾತ್ರಿ ವೆಳೆಯಲ್ಲಿ ನಮ್ಮ ಶಾಲೆಯಲ್ಲಿನ ಅಡುಗೆ ಕೊಣೆಯ ಬಾಗಿಲಿಗೆ ಹಾಕಿದ ಬಿಗವನ್ನುಯಾರೊ ದುಷ್ಕರ್ಮಿಗಳು ಮುದಿರು 5 ಸಿಲೆಂಡರಗಳಲ್ಲಿ ಒಂದು ಇಂಡೆನ ಕಂಪನಿಯ ಸಿಲೆಂಡರನ್ನು ಕಳವುಮಾಡಿಕೊಂಡು ಹೊಗಿತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾಹಾಗಾಂವ ಠಾಣೆ : ಶ್ರೀ ಸತೀಶ ಕುಮಾರ ತಂದೆ ಶ್ರೀಕರ ಪಾರಾ ಸಾ : ಮಾಹಾಗಾಂವ ರವರು ದಿನಾಂಕ 24-02-14 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಮುಖ್ಯ ಬಾಗಿಲು ಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ, ಮನೆಯಲ್ಲಿದ್ದ ಕಬ್ಬಿಣದ ಅಲಮಾರಿ ಮುರಿದು ಒಳಗಿದ್ದ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿ ಮಾಡಿ ಅಲಮಾರಿಯಲ್ಲಿದ್ದ ನಗದು ಹಣ ಬಂಗಾರದ ಮತ್ತು ಬೆಳ್ಳಿ ಆಭರಣಗಳು ಹೀಗೆ ಒಟ್ಟು 2,06,500/- ರೂ ವಸ್ತಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.