POLICE BHAVAN KALABURAGI

POLICE BHAVAN KALABURAGI

25 February 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 24-02-2014 ರಂದು 0915 ಗಂಟೆಗೆ ಹಿತ್ತಲಶಿರೂರ ಗ್ರಾಮದ ಶ್ರೀ ಕಲ್ಮೇಶ್ವರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ., ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶ್ರೀ ಕಲ್ಮೇಶ್ವರ ದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಶಿವಯೋಗಿ ತಂದೆ ಶಿವಲಿಂಗಪ್ಪ ಹುಗ್ಗಿ  ಸಾ|| ಹಿತ್ತಲಶಿರೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01. ನಗದು ಹಣ 1390/- 02.ಒಂದು ಮಟಕಾ ಅಂಕಿ ಸಂಖ್ಯೆ ಹಾಳೆ03. ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 22-02-2014 ರಂದು 4;30 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಮತ್ತು ಸಿಬ್ಬಂದಿ ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪ್ರಕಾಶ ತಂದೆ ರೇವಪ್ಪ ಕಂಬಾರ ಸಾ|| ಅಫಜಲಪೂರ ಎಂದು ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2100/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :            
ವಾಡಿ ಠಾಣೆ : ಶ್ರೀ ಪ್ರಕಾಶ ತಂದೆ ಅನಂತರಾವ ಕುಲಕರ್ಣೀ ಸರಕಾರಿ ಹಿರಿಯ ಪ್ರೌಢ ಶಾಲೆ ಕೊಲ್ಲುರ ಇವರು ದಿನಾಂಕ 19-02-2014 ರಂದು ಸಂಜೆ 5-30 ಗಂಟೆಗೆ ಎಲ್ಲಾ ಶಾಲೆಯ ಕೊಣೆಗಳ ಬಿಗವನ್ನು ಹಾಕಿಕೊಂಡು ಹೊಗಿದ್ದು ರಾತ್ರಿ ವೆಳೆಯಲ್ಲಿ ನಮ್ಮ ಶಾಲೆಯಲ್ಲಿನ ಅಡುಗೆ ಕೊಣೆಯ ಬಾಗಿಲಿಗೆ ಹಾಕಿದ ಬಿಗವನ್ನುಯಾರೊ ದುಷ್ಕರ್ಮಿಗಳು ಮುದಿರು 5 ಸಿಲೆಂಡರಗಳಲ್ಲಿ ಒಂದು ಇಂಡೆನ ಕಂಪನಿಯ ಸಿಲೆಂಡರನ್ನು ಕಳವುಮಾಡಿಕೊಂಡು ಹೊಗಿತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾಹಾಗಾಂವ ಠಾಣೆ : ಶ್ರೀ ಸತೀಶ ಕುಮಾರ ತಂದೆ ಶ್ರೀಕರ ಪಾರಾ ಸಾ : ಮಾಹಾಗಾಂವ ರವರು ದಿನಾಂಕ 24-02-14 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಮುಖ್ಯ ಬಾಗಿಲು ಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ, ಮನೆಯಲ್ಲಿದ್ದ ಕಬ್ಬಿಣದ ಅಲಮಾರಿ ಮುರಿದು ಒಳಗಿದ್ದ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿ ಮಾಡಿ ಅಲಮಾರಿಯಲ್ಲಿದ್ದ ನಗದು ಹಣ ಬಂಗಾರದ ಮತ್ತು ಬೆಳ್ಳಿ ಆಭರಣಗಳು ಹೀಗೆ ಒಟ್ಟು 2,06,500/- ರೂ ವಸ್ತಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: