POLICE BHAVAN KALABURAGI

POLICE BHAVAN KALABURAGI

23 May 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ಪರ್ವತರೆಡ್ಡಿ ತಂದೆ ಬಸವರೆಡ್ಡಿ ಸಾ:ನಾವದಗಿ ಇವರು ದಿನಾಂಕ 22/05/2018 ರಂದು ರಾತ್ರಿ 2-30 ಎ.ಎಂ ಕ್ಕೆ ಕಾರ ನಂ ಕೆಎ 51 ಎಂ.ಎಫ್ 2533 ನೇದ್ದರ ಚಾಲಕನಾದ  ಮಡಿವಾಳಪ್ಪನು ಜೇವರ್ಗಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ಜೇವರ್ಗಿಯಿಂದ ಶಹಾಬಾದಕ್ಕೆ ಹೊಗುವಾಗ ತೊನಸಹಳ್ಳಿ ದಾಟಿ ದಾದೀಪೀರ ದರ್ಗಾದ ಹತ್ತಿರ ರಸ್ತೆಯ ಎಡಗಡೆ ಚಾಲಕನು  ಕಾರ ಪಲ್ಟಿಮಾಡಿದ್ದು,  ಅದರಲ್ಲಿದ್ದ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಶಹಾಬಾದ ಆಸ್ಪತ್ರೆಗೆ ತೋರಿಸಿಕೊಂಡಿರುತ್ತೇನೆ ನಮ್ಮ ಡಸ್ಟರ ಕಾರ ಅಪಘಾತದಲ್ಲಿ ಪೂರ್ತಿ ಜಕ್ಕಂ ಆಗಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ಬಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ವಿರಣ್ಣ ತಂದೆ ಚಂದ್ರಾಮಪ್ಪ ಪಾಟೀಲ ಸಾ: ಕೂಡಲ ಹಂಗರಗಾ ತಾ: ಆಳಂದ ರವರದು ಟಾಟಾ ಸುಮೊ ವಾಹನ ಇದ್ದು ಅದರ ನಂಬರ ಕೆಎ-32 ಬಿ-7548 ಇದ್ದು, ಸದರಿ ಟಾಟಾ ಸುಮೊ ವಾಹನವನ್ನು 2017 ರ ಡಿಸೆಂಬರ ತಿಂಗಳಲ್ಲಿ ಅಫಜಲಪೂರ ಬಿ.ಎಸ್.ಎನ್.ಎಲ್ ಕಛೇರಿಯವರಿಗೆ ಲೀಜ್ ಮೇಲೆ ಕೊಟ್ಟಿರುತ್ತೇನೆ. ಸದರಿ ಟಾಟಾ ಸುಮೋದ ಮೇಲೆ ಬಸವರಾಜ ತಂದೆ ಸಾತಲಿಂಗಪ್ಪ ಬಗಲಿ ಸಾ : ಮಾತೋಳಿ ತಾ : ಅಫಜಲಪೂರ ಈತನು ಡ್ರೈವರ ಇರುತ್ತಾನೆ. ನಮ್ಮ ವಾಹನ ಚಾಲಕ ಬಸವರಾಜನು ಬಿ.ಎಸ್.ಎನ್.ಎಲ್ ಕಛೇರಿಯವರು ತಿಳಿಸಿದ ಪ್ರಕಾರ ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಟಾಟಾ ಸುಮೊವನ್ನು ಚಾಲನೆ ಮಾಡಿ ಸಂಜೆ ಟಾಟಾ ಸುಮೋವನ್ನು ತನ್ನ ಊರಾದ ಮಾತೋಳಿಗೆ ತಗೆದುಕೊಂಡು ಹೋಗಿ ತನ್ನ ಮನೆಯ ಮುಂದೆ ನಿಲ್ಲಿಸುವುದು ದಿನಂಪ್ರತಿಯ ವಾಡಿಕೆಯಾಗಿರುತ್ತದೆ.  ದಿನಾಂಕ 03-03-2018 ರಂದು 7:15 ಪಿ ಎಮ್ ಕ್ಕೆ ನಾನು ನಮ್ಮೂರಿನಲ್ಲಿದ್ದಾಗ, ಮಾತೋಳಿ ಗ್ರಾಮದ ನನಗೆ ಪರಿಚಯದವರಾದ ಮಹಾಂತಪ್ಪ ತಂದೆ ಅಲಬಣ್ಣ ಬಬಲೇಶ್ವರ ಇವರು ನನಗೆ ಪೋನ ಮಾಡಿ ನಿಮ್ಮ ಟಾಟಾ ಸುಮೊದ ಚಾಲಕನಾದ ಬಸವರಾಜ ಬಗಲಿ ಈತನು ಈಗ 7:00 ಗಂಟೆ ಸುಮಾರಿಗೆ ಟಾಟಾ ಸುಮೊವನ್ನು ತನ್ನ ಮನೆಯ ಮುಂದೆ ನಿಲ್ಲಿಸಲು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಅಫಜಲಪೂರಕಲಬುರಗಿ ರೋಡಿಗೆ ಇರುವ ಅಫಜಲಪೂರ ಪಟ್ಟಣದ ಬುಜುರಿ ಕಾಲೇಜ ಕ್ರಾಸ ಹತ್ತಿರ ಟಾಟಾ ಸುಮೊ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಹಿಸಿಕೊಂಡು ಹೋಗಿ, ಒಂದು ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿ ನಂತರ ಟಾಟಾ ಸುಮೊವನ್ನು ಗಿಡಕ್ಕೆ ಹೋಗಿ ಗುದ್ದಿಸಿರುತ್ತಾನೆ. ಸದರಿ ಡಿಕ್ಕಿಯಿಂದ ಅಫಜಲಪೂರ ಪಟ್ಟಣದ ಧಾನಮ್ಮ ಗಂಡ ಪ್ರಕಾಶ ಮನ್ಮಿ ಎಂಬುವವರಿಗೆ ರಕ್ತಗಾಯಗಳು ಮತ್ತು ಗುಪ್ತಗಾಯಗಳು ಆಗಿರುತ್ತವೆ. ನಿಮ್ಮ ಚಾಲಕನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ ನೀವು ಬೇಗ ಬನ್ನಿ ಎಂದು ತಿಳಿಸಿದನು. ಆಗ ನಾನು ಮತ್ತು ನನ್ನ ಮಗನಾದ ಚಂದ್ರಕಾಂತ, ಹಾಗೂ ನಮ್ಮೂರಿನ ಕಲ್ಯಾಣಿ ತಂದೆ ಮಲಕಣ್ಣ ನಗದೆ, ಬಸವರಾಜ ತಂದೆ ಈರಣ್ಣ ಬಸ್ತೆ, ಎಲ್ಲರೂ ಕೂಡಿ ಮೋಟರ ಸೈಕಲಗಳ ಮೇಲೆ ಅಫಜಲಪೂರಕ್ಕೆ ಬಂದಿರುತ್ತೇವೆ. ಆಗ ನಮ್ಮನ್ನು ಎಕ್ಸಿಡೆಂಟನ್ನು ಪ್ರತ್ಯಕ್ಷವಾಗಿ ನೋಡಿ ನನಗೆ ಪೋನ ಮಾಡಿದ ಮಹೇಶ ನಿಂಬಾಳ ಸಾ|| ಅಫಜಲಪೂರ ಈತನು ನಮ್ಮನ್ನು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿರುತ್ತವೆ. ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಟಾಟಾ ಸುಮೊ ವಾಹನ ರೋಡಿನ ಪಕ್ಕದಲ್ಲಿ ಒಂದು ಗಿಡಕ್ಕೆ ಡಿಕ್ಕಿ ಹೊಡೆದು ಬಾಡಿ ಜಕಂ ಆಗಿ ನಿಂತಿತ್ತು, ನಂತರ ನಾವು ಎಕ್ಸಿಡೆಂಟನಲ್ಲಿ ಗಾಯಹೊಂದಿದ ಧಾನಮ್ಮ ಮನ್ಮಿ ರವರ ಬಗ್ಗೆ ವಿಚಾರಿಸಲು, ಸದರಿ ಧಾನಮ್ಮ ಇವರನ್ನು ಅವರ ಸಂಭಂದಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.