POLICE BHAVAN KALABURAGI

POLICE BHAVAN KALABURAGI

25 March 2016

Kalaburagi District Reported Crimes

ಕೊಲೆ ಪ್ರಕರಣ:
ಅಫಜಲಪೂರ ಠಾಣೆ : ಶ್ರೀಮತಿ ದುಂಡಮ್ಮ ಗಂಡ ಕಲ್ಲಪ್ಪ @ ಕಲ್ಯಾಣಿ ಮ್ಯಾಕೇರಿ ಇವರ ಗಂಡ ಮತ್ತು ಎರಡು ಜನ ಗಂಡು ಮಕ್ಕಳೊಂದಿಗೆ ಜಿವನ ಸಾಗಿಸುತ್ತಿರುತ್ತೇನೆ. ನನ್ನ ಗಂಡನಾದ ಕಲ್ಲಪ್ಪ @ ಕಲ್ಯಾಣಿ ತಂದೆ ಚಂದಪ್ಪ ಮ್ಯಾಕೇರಿ ಇವರು ಈಗ ಕಳೆದ ವರ್ಷ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮ್ಮೂರಿನ ನಮ್ಮ ಸಮಾಜದ ರಮೇಶ ತಂದೆ ಭೀಮಶಾ ದೊಡ್ಡಮನಿ ಇವರ ವಿರುದ್ದವಾಗಿ ನಮ್ಮ ಗ್ರಾಮದಲ್ಲಿ ಚುನಾವಣೆಗೆ ನಿಂತು ಗೆದ್ದಿರುತ್ತಾರೆ, ಅಂದಿನಿಂದ ನನ್ನ ಗಂಡನ ವಿರುದ್ದ ಚುನಾವಣೆಯಲ್ಲಿ ಸೋತ ರಮೇಶ ದೊಡ್ಡಮನಿ ಹಾಗೂ ಅವನ ಅಣ್ಣ ತಮ್ಮರು ಹಾಗೂ ಅವನ ಅಣ್ಣ ತಮ್ಮರ ಮಕ್ಕಳು ನನ್ನ ಗಂಡ ಹಾಗೂ ನಮ್ಮ ಮಕ್ಕಳ ಮೇಲೆ ದ್ವೇಷ ಮಾಡಿಕೊಂಡು ಜಗಳ ತಗೆಯುವುದು ಮಕ್ಕಳೆ ನಿಮಗೆ ಜಿವ ಸಹಿತ ಬಿಡುವುದಿಲ್ಲ, ನೀವು ಹೇಗೆ ಬಾಳೆ ಮಾಡುತ್ತಿರಿ ನಾವು ನೋಡುತ್ತೇವೆ ಅಂತಾ ಜಗಳ ತಗೆಯುತ್ತಾ ಬಂದಿರುತ್ತಾರೆ, ಹಾಗೂ ಈಗ ನಮ್ಮೂರಿನಲ್ಲಿ ಅಂಬೆಡ್ಕರ ಚೌಕ ನಿರ್ಮಿಸುವ ಸಲುವಾಗಿ ಹಣ ಮಂಜೂರಾಗಿದ್ದರಿಂದ, ಸದರಿ ಅಂಬೇಡ್ಕರ ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ನನ್ನ ಮಕ್ಕಳು ಹಾಗೂ ನನ್ನ ಗಂಡನ ಅಣ್ಣ ತಮ್ಮರ ಮಕ್ಕಳು ಹೋಗಿ ಅಲ್ಲಿನ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು, ಆಗ ರಮೇಶ ಮತ್ತು ಅವನ ಅಣ್ಣ ತಮ್ಮರು ನನ್ನ ಮಗ ಶಿವಾಜಿ ಈತನಿಗೆ ಏನೊ ಬೋಸಡಿ ಮಗನೆ ಅಂಬೇಡ್ಕರ ಕಟ್ಟೆ ನಿರ್ಮಿಸಲು ಎಷ್ಟು ಹಣ ಬಂದಿದೆ ನೀವು ಯಾರಿಗೆ ಕೇಳಿ ಕೆಲಸ ಮಾಡುತ್ತಿದ್ದಿರಿ, ನಿಂದು ಮತ್ತು ನಿಮ್ಮ ಅಪ್ಪಂದು ತಿಂಡಿ ಜಾಸ್ತಿ ಆಗಿದೆ ನಿಮಗೆ ನೋಡಿಕೊಳ್ಳುತ್ತೇವೆ ಅಂತಾ ತಕರಾರು ಮಾಡಿ ಜಗಳ ಮಾಡುತ್ತಿರುತ್ತಾರೆ ಎಂದು ನನ್ನ ಗಂಡ ಮತ್ತು ನನ್ನ ಮಗ ನನಗೆ ತಿಳಿಸಿರುತ್ತಾರೆ. ನಿನ್ನೆ ದಿನಾಂಕ 24-03-2016 ರಂದು ಸಂಜೆ ಸುಮಾರು 9:15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ರಾಜು ಇಬ್ಬರು ಮನೆಯಲ್ಲಿದ್ದಾಗ ನನ್ನ ಮೈದುನಾರದ ಖಾಜಪ್ಪ ಇವರು ಓಡಿಕೊಂಡು ಮನೆಗೆ ಬಂದು ನಮ್ಮ ಸಂಸಾರ ಹಾಳಾಯ್ತು ನಮ್ಮ ಅಣ್ಣ ಕಲ್ಲಪ್ಪ @ ಕಲ್ಯಾಣಿಗೆ ಹಾಗೂ ಮಗ ಶಿವಾಜಿಗೆ ಕನಕದಾಸ ಸರ್ಕಲ ಹತ್ತಿರ ಖಾಜಪ್ಪ ದೊಡ್ಡಮನಿ, ಹಣಮಂತ @ ಹಣಮಂತ್ರಾವ ದೊಡ್ಡಮನಿ, ರಮೇಶ ದೊಡ್ಡಮನಿ, ಬಾಬು ದೊಡ್ಡಮನಿ, ಅಕ್ಷಯಕುಮಾರ ದೊಡ್ಡಮನಿ, ಶಾಂತಕುಮಾರ ದೊಡ್ಡಮನಿ, ಪುಟ್ಟು ದೊಡ್ಡಮನಿ, ಕಮಲಾಕರ ದೊಡ್ಡಮನಿ ಇವರೆಲ್ಲರೂ ಕೂಡಿಕೊಂಡು ಬಡಿಗೆಯಿಂದ ಹೊಡೆಯುತ್ತಿದ್ದಾರೆ, ನಮಗು ಹೊಡೆಯಲು ಬರುತ್ತಿದ್ದರು, ನಾವು ಓಡಿ ಬಂದಿರುತ್ತೇವೆ ಅಂತಾ ತಿಳಿಸಿದರು, ಆಗ ನಾನು ಮತ್ತು ನನ್ನ ಮೈದುನ ಖಾಜಪ್ಪ ಇಬ್ಬರು ಕೂಡಿ  ಸ್ಥಳಕ್ಕೆ ಹೋಗಿ ನೋಡಲು ನನ್ನ ಗಂಡ ಮತ್ತು ನನ್ನ ಮಗ ಶಿವಾಜಿ ಇಬ್ಬರು ಬಿದ್ದಿದ್ದರು, ಆಗ ಅಲ್ಲೆ ಇದ್ದ ಪ್ರತ್ಯಕ್ಷದರ್ಶಿಗಳಾದ ಸುಬಾಷ ಸಿಂಗೆ, ಯಶವಂತ ಕಟ್ಟಿಮನಿ, ಸಿದ್ದು ಮ್ಯಾಕೇರಿ, ಮಡೇಪ್ಪ ಕಟ್ಟಿಮನಿ ಹಾಗೂ ನನ್ನ ಗಂಡನ ಅಣ್ಣ ತಮ್ಮರಾದ ಮಲಕಪ್ಪ ಮ್ಯಾಕೇರಿ, ಖಾಜಪ್ಪ ಮ್ಯಾಕೇರಿ, ಶಾಂತಪ್ಪ ಮ್ಯಾಕೇರಿ ನನ್ನ ಮಗ ರಾಜು ಮ್ಯಾಕೇರಿ ಇವರೆಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡ ಮತ್ತು ಮಗ ಶಿವಾಜಿ ಇಬ್ಬರಿಗೂ ಹಾಕಿಕೊಂಡು ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ, ಆಸ್ಪತ್ರೆಯಲ್ಲಿ ವೈದ್ಯಾದಿಕಾರಿಗಳು ನನ್ನ ಗಂಡನನ್ನು ತಪಾಸಣೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು, ನನ್ನ ಮಗ ಶಿವಾಜಿಗೆ ಎದೆಗೆ ಬಾರಿ ಒಳಪೆಟ್ಟಾಗಿದ್ದರಿಂದ ಅವನು ಜೀವ ಮರಣದಲ್ಲಿ ಹೋರಾಡುತ್ತಿದ್ದನು, ವೈದ್ಯಾದಿಕಾರಿಗಳು ನನ್ನ ಮಗ ಶಿವಾಜಿಯನ್ನು 108 ಅಂಬ್ಯೂಲೆನ್ಸದಲ್ಲಿ ಹಾಕಿ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಬಿಸಿ ಅಪಹರಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 13.03.2016 ರಂದು ಮುಂಜಾನೆ 04:30 ಗಂಟೆಯ ಸುಮಾರಿಗೆ ನನ್ನ ಮಗಳಾದ ಕಲ್ಯಾಣಿ ವಯಾ|| 17 ವರ್ಷ ಸಾ : ಬಿರಾಳ ಕೆ ಇವಳು ಬಹಿರ್ದೇಸೆ ಕುರಿತು ಹೋಗಿ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ದಾರಿಯ ಮಧ್ಯದಲ್ಲಿ 1) ಶಮಸೋದ್ದಿನ್ ತಂದೆ ಮದರಸ 2) ಖಾಸೀಂ ತಂದೆ ಮದರಸ 3) ಬಾಬು ತಂದೆ ಮದರಸ  4) ಸರ್ವರ್‌ಸಾಬ್ ತಂದೆ ಮದರಸ 5) ವಜೀರ್‌ ತಂದೆ ಮದರಸ 6) ಮಶಾಕ್ ತಂದೆ ಮಹೇಬೂಬ ಸಾ : ಬಿರಾಳ ಕೆ. ಎಲ್ಲರು ಕೂಡಿಕೊಂಡು  ತಮ್ಮ ಕ್ರೂಜರ್‌ ಜೀಪ ನಂ ಕೆ.ಎ23 ಎನ್‌ 1509 ನೇದ್ದರಲ್ಲಿ ನನ್ನ ಮಗಳಿಗೆ ಯಾವುದೋ ಒಂದು ಬಲವಾದ ಕಾರಣಕ್ಕಾಗಿ ಬಲವಂತವಾಗಿ ಎಳೆದುಕೊಂಡು ಜೀಪ್‌ನಲ್ಲಿ ಹಾಕಿ ಅಪಹರಣ ಮಾಡಿಕೊಂಡು ಹೋಸ ಬಗ್ಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 24.03.16 ರಂದು ಸಾಯಂಕಾಲ 6 ಗಂಟೆಗೆ ಕು : ಕಲ್ಯಾಣಿ ಸಾ : ಬಿರಾಳ ಕೆ ಇವಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಕೊಟ್ಟಿದ್ದೇನೆಂದರ  ದಿನಾಂಕ 12.03.2016 ರಂದು ರಾತ್ರಿ      11:30 ಗಂಟೆಗೆ ಶಮಶೋದ್ದಿನ್ ತಂದೆ ಮದರಸಾಬ್ ಕೊಂಚೂರು ಈತನು ನನಗೆ ನಂಬಿಸಿ ಪುಸಲಾಯಿಸಿ ಇತರರೊಂದಿಗೆ ಕೂಡಿಕೊಂಡು ನಮ್ಮೂರಿನಿಂದ ಶಹಾಪೂರದ ವರೆಗೆ ಕರೆದುಕೊಂಡು ಹೊಗಿ ಅಲ್ಲಿಂದ ಶಮಶೋದ್ದಿನ್ ಈತನು ಒಬ್ಬನೆ ನನಗೆ ಬಸ್ಸಿನಲ್ಲಿ ಬೆಂಗಳೂರಕ್ಕೆ ಕರೆದುಕೊಂಡುಹೋಗಿ ಅಲ್ಲಿ ಶಮಶೋದ್ದಿನ್ ಈತನು ನನಗೆ ನಂಬಿಸಿ ಸಂಭೋಗ ಮಾಡಿರುತ್ತಾನೆ. ಇಂದು ದಿನಾಂಕ 24.03.2016 ರಂದು ಕಲಬುರಗಿ ಬಸ್‌ ಸ್ಟ್ಯಾಂಡದಲ್ಲಿ ಬಿಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು
ಕಳವು ಪ್ರಕರಣ :
ಆಳಂದ ಠಾಣೆ :  ಶ್ರೀ ಜಾಫರ್‌ ತಂದೆ ಮೈಮೂದಮಿಯಾ ಮುರುಮಕರ್‌ ಸಾ: ರಜವಿರೋಡ ಆಳಂದ ,ರವರು ದಿನಾಂಕ: 23/03/2016 ರಂದು ರಾತ್ರಿ 08-30 ಗಂಟೆಗೆ ನಾನು ಎಂದಿನಂತೆ ನಮ್ಮ ಕಿರಾಣಿ ಅಂಗಡಿಯನ್ನು ಬಂದ ಮಾಡಿ ಸೆಟರ್‌ ಅಂಗಡಿ ಕೀಲಿ ಹಾಕಿ ಮನೆಗೆ ಹೋಗಿರುತ್ತೇನೆ. ನಂತರ ದಿನಾಂಕ: 24/03/2016 ರಂದು ಬೆಳಗ್ಗೆ ಎಂದಿನಂತೆ ದುಖಾನ ತೆರೆಯಲು ಬಂದಾಗ ಅಂಗಡಿಯ ಸೆಟರ್‌ ಕೀಲಿ ಮುರಿದುದ್ದು ಮತ್ತು ಬಲಗಡೆಗೆ ಪಕ್ಕದಲ್ಲಿ ಸೆಟರ್‌ ರಾಡದಿಂದ ಬಾಗಿಸಿದ್ದು ಎದುರಿಗೆ ಸೆಟರ್ ಎತ್ತಿ ಒಂದು ಪರಸಿ ನಿಲ್ಲಿಸಿದ್ದು ನೋಡಲಾಗಿ, ಯಾರೋ ನಮ್ಮ ಕಿರಾಣಿ ಅಂಗಡಿ ಕಳ್ಳತನ ಮಾಡಿರುತ್ತಾರೆ ಅಂತಾ ಅನುಮಾನ ಬಂದು ನಾನು ಮತ್ತು ನನ್ನ ತಂದೆ ಮೈಮೂದಮಿಯಾ ತಂದೆ ಮೀರಾಸಾಬ್‌ ಮುರುಮಕರ್‌ ಕೂಡಿ ಒಳಗಡೆ ಹೋಗಿ ನೋಡಲು ಒಳಗಡೆ ಸಾಮಾನುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿದ್ದು ಚೆಕ್‌ ಮಾಡಿ ನೋಡಲು 01) 10 ಚೀರಿ ಕಿಂಗ್‌ ಸೈಜ್‌ ಸಿಗರೇಟ್ 02) ಒಂದು ಭಾಕ್ಸ ಆರ್‌.ಎಮ್‌.ಡಿ 03) 02 ಪುಡಾ ಬ್ರಿಸ್ಟೆಲ್‌ ಸಿಗರೆಟ್‌ 04) 05 ಪುಡಾ ಕ್ಲಾಸಿಕ್‌ ಸಿಗರೇಟ್‌ 05) ಒಂದು ಕೇ.ಜಿ ಯ 04 ರಜನಿ ಗಂದಾ ಪಾನ ಮಸಾಲಾ ಡಬ್ಬಿ06) 100 ಗ್ರಾಂ ದ 4 ಭಾಕ್ಸ ರಜನಿ ಗಂದಾ 07) ಚಿಲ್ಲರೆ ಹಣ ಮತ್ತು ಇತರೆ ಸಾಮಾನುಗಳು ಒಟ್ಟು ಅಕಿ: 24,000/- ರೂ ಬೆಲೆಬಾಳುವ ವಸ್ತುಗಳನ್ನು ದಿನಾಂಕ: 23/03/2016 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 24/03/2016 ರಂದು ರಾತ್ರಿ 04-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಕೀಲಿ ಮುರಿದು, ಸೆಟರ್‌ ಒಡೆದು ಒಳಗಡೆ ಪ್ರವೇಶಿಸಿ ಅಂಗಡಿಯಲ್ಲಿದ್ದ ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 24.03.2016 ರಂದು ಮುಂಜಾನೆ 1೦.45 ಗಂಟೆಗೆ  ಚಿಗರಳ್ಳಿ ಸಮೀಪ ಶಿವ ಮಂದೀರದ ಎದುರಿನ ಜೇವರಗಿ ಶಹಾಪುರ ರಸ್ತೆ ಮೇಲೆ ಆರೋಪಿತನು ತನ್ನ ಕಾರ್‌ ನಂ ಕೆ.ಎ32ಎನ್‌1239 ನೇದ್ದನ್ನು ಅತೀ ವೇಗೆ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಕಟ್‌ ಹೋಡೆದು ಕಾರ್‌ ಅನ್ನು ರೋಡಿನ ಪಕ್ಕದಲ್ಲಿನ ಪಲ್ಟಿ ಪಡಿಸಿ ಕಾರ್‌ ಅನ್ನು ಜಖಂ ಗೊಳಿಸಿದ್ದು ಕಾರಣ ಸದರಿ ಕಾರ್‌ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತಾ ಶ್ರೀ ಬಸವರಾಜ ತಂದೆ ಹನಮಂತಪ್ಪ ಗುಂಡುರು ಸಾ: ಯತ್ತಿನಹಳ್ಳೀ ತಾ : ಸಿರಹಟ್ಟಿ ಜಿ : ಗದಗ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.