POLICE BHAVAN KALABURAGI

POLICE BHAVAN KALABURAGI

23 July 2015

Kalaburagi District Reported Crimes

ದ್ವಿಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ನಾಗರಾಜ ತಂದೆ ಮಲ್ಲಪ್ಪಾ ವಗ್ಗೆ ಸಾ: ಪ್ಲಾಟ ನಂ.62 ಸಂತೋಷ ಕಾಲೋನಿ ಆಳಂದ ರೋಡ ಕಲಬುರಗಿ ರವರು ದಿನಾಂಕ 17/07/2015 ರಂದು ಸಂಜೆ 4:30 ಗಂಟೆಯ ಸಮಯಕ್ಕೆ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಒಳಗೆ ಸಗರನಾಡು ಬಸ್ ನಿಲ್ಲುವ ಸ್ಥಳದಲ್ಲಿ ತನ್ನ ಮೋಟಾರ ಸೈಕಲ ಹಿರೊಹೊಂಡಾ ಪ್ಯಾಶನ್ ಪ್ರೋ ಬೈಕ್ ನಂ. ಕೆ.ಎ 32 ವಿ 6069 ನೇದ್ದನ್ನು CHESSI NUMBER - MBLHA10EH9GF02868 , ENG NUMBER - HA10EA9GFO6826 ಕಿಮ್ಮತ್ತು 25000/-ರೂ. ನೇದ್ದನ್ನು  ನಿಲ್ಲಿಸಿ ಒಳಗೆ ಹೋಗಿ ಬಂದು ನೋಡಲು ಮೋಟಾರ ಸೈಕಲ್ ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಮಾಹಾನಂದ  ಗಂಡ ಅನಿಲ ಮಠಪತಿ ಸಾ: ಪ್ಲಾಟ ನಂ. 42 ದತ್ತ ಶಹಾಬಜಾರ  ಕಲಬುರಗಿ ರವರಿಗೆ  ಭಾವನವರಾದ ಶಿವಕುಮಾರ ತಂದೆ ಮಲ್ಲಯ್ಯಾ ಮಠಪತಿ ಇವರು ಯಾವುದೇ ಕೆಲಸ ಮಾಡದೇ ಮನೆಯಲ್ಲಿ ಇದ್ದು ಆಗಾಗ್ಗೆ ನಮ್ಮೊಂದಿಗೆ ತಕರಾರು ಮಾಡುವುದು ಬೈಯುವುದು ಜಗಳ ಮಾಡುತ್ತಾ ಬಂದಿರುತ್ತಾರೆ. ಅದಕ್ಕೆ ನಮ್ಮ ಅತ್ತೆ, ನನ್ನ ಗಂಡ ಹಾಗು ನಾನು ಸಹ ಸಹನೆ ಮಾಡಿಕೊಂಡು ಇದ್ದರು ಕೂಡ ದಿನಾಂಕ 22/07/2015 ರಂದು ಬೆಳಿಗ್ಗೆ 10 ಎ.ಎಂ.ಕ್ಕೆ ನಾನು ಮನೆಯಲ್ಲಿ ಕಸಗುಡಿಸುತ್ತಿದ್ದಾಗ ನನ್ನ ಭಾವನಾದ ಶಿವಕುಮಾರ ತಂದೆ ಮಲ್ಲಯ್ಯಾ ಇತನು ಬಂದವನೇ ನಿನಗೆ ರಾತ್ರಿ ಊಟಕ್ಕೆ ಕೂಡು ಅಂತಾ ಹೇಳಿದರೆ ನನಗೆ ಅಡ್ಡಾತಿಡ್ಡಿಯಾಗಿ ಎದುರು ಮಾತನಾಡುತ್ತಿ’’ಏನೇ ರಂಡಿ ನಿನಗೆ ಬಹಳ ಸೋಕ್ಕು ಬಂದಿದೆ ‘’ ಅಂತಾ ನನ್ನೊಂದಿಗೆ ಅನಾವಶ್ಯಕವಾಗಿ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈಯುತ್ತಾ ಅಲ್ಲೆ ಬಿದ್ದ ಸಲಕಿ ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆಯಲು ಬಂದಾಗ ನಾನು ನನ್ನ ಎರಡು ಕೈಗಳನ್ನು ತಲೆಯ ಮೇಲೆ ಒತ್ತಿಯಾಗಿ ಹಿಡಿದುಕೊಳ್ಳಲು ತಲೆಗೆ ಸಲಿಕೆ ಎಟು ನನ್ನ ಕೈ ಗಳ ಮೇಲೆ ( ಎಡಗೈಮೇಲೆ) ಹತ್ತಿ ಗುಪ್ತಗಾಯ ತರಚಿದ ರಕ್ತಗಾಯವಾಗಿ ಕೈ ಬಾವು ಬಂದಿದ್ದು ಮತ್ತು ತಲೆಯ ಮೇಲೆ ಗುಪ್ತಗಾಯವಾಗಿ ಬಾವು ಬಂದಿದ್ದು ಅದೆ. ಮತ್ತೆ ಅದೆ ಸಲಿಕೆ ಹಿಡಿದು ನನಗೆ ಹೊಡೆಯಲು ಬಂದಾಗ ನನ್ನ ಅತ್ತೆ ಶಿವಕಾಂತ ಗಂಡ ಮಲ್ಲಯ್ಯಾ ಮಠಪತಿ ಇವರು ನನ್ನ ಭಾವ ಶಿವಕುಮಾರ ಇತನಿಗೆ ಹಿಡಿದು ಕೊಳ್ಳಲು ಅವನು ಸಲಿಕೆ ಬಿಟ್ಟು ನನ್ನ ಅತ್ತೆಗೆ ಬೆನ್ನಿನಲ್ಲಿ ಕಾಲಿನಿಂದ ಒಯ್ದು ಗುಪ್ತಗಾಯ ಪಡಿಸಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.