POLICE BHAVAN KALABURAGI

POLICE BHAVAN KALABURAGI

06 July 2012

GULBARGA DIST REPORTED CRIMES


ವೈರ್ ಕಳ್ಳತನ :
ಶಹಾಬಾದ ನಗರ ಪೊಲೀಸ ಠಾಣೆ : ಶ್ರೀ ಬಾಲಗೊವಿಂದ ತಂದೆ ಹಣಮಜಿ ಕುಸಾಳೆ ಸಾ: ವಡ್ಡರ ಸ|| ಶಹಾಬಾದ ರವರು ದಿನಾಂಕ: 12/06/2012 ರಂದು ತರನಳ್ಳಿ ಗ್ರಾಮದ  ಹೊಲ ಸರ್ವೇ ನಂಬರ 11/2 ನೇದ್ದರಲ್ಲಿ ಸಾಯಾಂಕಾಲ 7 ಗಂಟೆಯವರೆಗೆ ಕ್ವಾರಿ ಕಟಿಂಗ ಮಾಡಿ ಮಷಿನ ಬಂದ ಮಾಡಿಕೊಂಡು ಮನೆಗೆ ಹೋಗಿದ್ದು , ದಿನಾಂಕ:13/06/2012 ರಂದು ಮುಂಜಾನೆ 7-00  ಗಂಟೆಗೆ ಕ್ವಾರಿ ಕಟಿಂಗ ಮಾಡುವ ಸಲುವಾಗಿ ಕೆಲಸಗಾರರೊಂದಿಗೆ ಬಂದು ನೋಡಲಾಗಿ ಕರೆಂಟ ಮೋಟಾರಗೆ ಜೊಡಿಸಿದ ಕೇಬಲ ವೈರನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕೇಬಲ ವೈರ್ 120 ಪೀಟ ಇದ್ದು ಅ.ಕಿ.12000/- ರೂಪಾಯಿದ್ದು ಆಗುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 91/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸದಾಶಿವ ತಂದೆ ತಿಪ್ಪಣ್ಣಾ ಸಿಂಗೆ ಸಾ|| ಮಾಲಗತ್ತಿ ರವರು ನಾನು ದಿನಾಂಕ: 31/05/2012 ರಂದು ರಾತ್ರಿ 8-00  ಗಂಟೆಯವರೆಗೆ ಖಣಿಯಲ್ಲಿಯ ಕಲ್ಲುಗಳು ಕತ್ತರಿಸುವ ಕೆಲಸ ಮುಗಿಸಿ ಕ್ವಾರಿಕಟಿಂಗ ಮಶಿನ್ ಬಂದ ಮಾಡಿ ಮನೆಗೆ ಬಂದಿರುತ್ತೆನೆ. ದಿನಾಂಕ: 01/06/2012 ರಂದು ಬೆಳ್ಳಿಗ್ಗೆ ಬಂದು ನೋಡಲು ಖಣಿಯಲ್ಲಿಯ ಕಲ್ಲುಗಳ ಕತ್ತರಿಸುವ ಕ್ವಾರಿ ಕಟ್ಟಿಂಗ ಮಶೀನಗೆ ಜೊಡಿಸಿದ ಕೇಬಲ ವೈರ್ ವಾಯರ 120 ಪೀಟ ಅ.ಕಿ. 12000/- ರೂಪಾಯಿಗಳದ್ದು,  ಯಾರೊ ಕಳ್ಳರು ಕತ್ತಿರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 90/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ  ಶಿವಾನಂದ ತಂದೆ ನೀಲಕಂಠ ಹವಿಲೇ ಉ: ಜೀಪ ಚಾಲಕ  ಸಾ; ಬಾಹರಪೇಟ ಆಳಂದ ರವರು ನಾನು ದಿನಾಂಕ:05-07-2012 ರಂದು ಮಧ್ಯಾಹ್ನ2-00 ಗಂಟೆಗೆ ನನ್ನ ಬುಲೇರೋ ಜೀಪ ನಂಬರ ಕೆಎ-32 ಎಮ್-8566 ನೇದ್ದನ್ನು ಎಸ್.ವಿ.ಪಿ ಸರ್ಕಲದಿಂದ ಜಗತ ಸರ್ಕಲ  ರೋಡ ಮುಖಾಂತರ ಹೋಗುವಾಗ ಅನ್ನಪೂರ್ಣ ಕ್ರಾಸ್ ಹತ್ತಿರ ಕಾರ ನಂ ಕೆಎ-38 ಎಫ-777 ನೆದ್ದನ್ನು   ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಹಿಂದಿನಿಂದ ನನ್ನ ಕಾರಿಗೆ ಡಿಕ್ಕಿ ಪಡಿಸಿ ಕಾರ ಜಕಮ್ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:73/2012 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಮುಧೋಳ ಪೊಲೀಸ್ ಠಾಣೆ: ಶ್ರೀಮತಿ ರಜಿಯಾ ಬೇಗಂ ಗಂಡ ಖಾಸಿಂಸಾಬ ಶೇಖ ಸಾ|| ಹುಡಾ ಗ್ರಾಮ ರವರು  ನನ್ನ ಗಂಡನಾದ ಖಾಸಿಂಸಾಬ ತಂದೆ ಮೊದಿನಸಾಬ ವ|| 38 ವರ್ಷ ಈತನು ದಿನಾಂಕ: 05-07-2012 ರಂದು ಮಧ್ಯರಾತ್ರಿ 00-30 ಗಂಟೆಯ ಸುಮಾರಿಗೆ ಹುಡಾ ಗ್ರಾಮದ ಹತ್ತಿರ ಮುಧೋಳ ಸೇಡಂ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಕಾಲಕ್ಕೆ ಯಾವುದೋ ಒಂದು ವಾಹನದ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿ ನನ್ನ ಗಂಡನಾದ ಖಾಸಿಂಸಾಬ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಈ ಅಪಘಾತದಲ್ಲಿ ನನ್ನ ಗಂಡನಿಗೆ ಭಾರೀ ಗಾಯಗಳಾಗಿ ಮೃತಪಟ್ಟಿದ್ದು ವಾಹನದ ಚಾಲಕನು ಹಾಗೇ ಓಡಿಸಿಕೊಂಡು ಹೋಗಿದ್ದು ನನ್ನ ಗಂಡನಿ ಅಪಘಾತ ಪಡಿಸಿ ಓಡಿಸಿಕೊಂಡು ಹೋದ ವಾಹನವನ್ನು ಪತ್ತೆಮಾಡಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 79/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಆಕ್ರಮವಾಗಿ ಸೀಮೆ ಎಣ್ಣೆ ಸರಬರಾಜು ಮಾಡಿದ ಬಗ್ಗೆ:

ರೋಜಾ ಪೊಲೀಸ್ ಠಾಣೆ:ಪ್ರೇಮಿಲಾಬಾಯಿ ಆಹಾರ ನಿರೀಕ್ಷಕರು ವಾರ್ಡ ನಂ.5-8 ಉಪ-ನಿರ್ದೇಶಕರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಗುಲಬರ್ಗಾ ರವರು ರೋಜಾ ಬಡಾವಣೆಯ ನ್ಯಾಯಬೆಲೆ ಅಂಗಡಿ ಸಂಖ್ಯೆ 170 ರ ಸೀಮೆಎಣ್ಣೆ ಕಿರುಕುಳ ಡೀಲರರಾದ ಶ್ರೀ ವಿಶ್ವನಾಥ ಜಾಧವ [ಲೈಸೆನ್ಸ ಸಂಕ್ಯೆ.24/2011-12] ಇವರು 2012 ನೇ ಜೂನ ತಿಂಗಳಿಗೆ ಹಂಚಿಕೆಯಾದ ಸೀಮೆ ಎಣ್ಣೆ ವಿತರಣೆ ಮಾಡಿರುವುದಿಲ್ಲವೆಂದು  ನನಗೆ ದೂರವಾಣಿ ಮುಖಾಂತರ ಕಾರ್ಡುದಾರರು ತಿಳಿಸಿದ ಮೇರೆಗೆ ದಿನಾಂಕ:04/07/2012 ರಂದು ಸ್ಥಳಕ್ಕೆ ಭೇಟಿ ನೀಡಿ ಪಡಿತರ ಚೀಟಿದಾರರಿಗೆ  ಜೂನ 2012 ನೇ ತಿಂಗಳಿನಲ್ಲಿ ಸೀಮೆ ಎಣ್ಣೆ ವಿತರಣೆ ಮಾಡಿದ ಬಗ್ಗೆ ನಮೂದಿಸಿರುವುದಿಲ್ಲ ಹಾಗೂ ಸೀಮೆ ಎಣ್ಣೆ ವಿತರಣೆ ಮಾಡಿರುವುದಿಲ್ಲ. ಸೀಮೆ ಎಣ್ಣೆ ಕಿರುಕುಳ ವರ್ತಕರಾದ ಶ್ರೀ ವಿಶ್ವನಾಥ ಜಾಧವನವರು ದಿನಾಂಕ:16/06/2012 ರಂದು ಸಗಟು ಸೀಮೆಎಣ್ಣೆ ವರ್ತಕರಾದ ಮೆ|| ಆರ್.ಎಸ್. ರಘೋಜಿ ಇವರ ಸಗಟು ಮಳಿಗೆಯಿಂದ 894 ಲೀಟರ್ ಸೀಮೆ ಎಣ್ಣೆ ಎತ್ತುವಳಿ ಮಾಡಿದನ್ನು ಅಂಗಡಿಗೆ ತೆಗೆದುಕೊಂಡು ಹೋಗಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡದೇ ಅವ್ಯವಹಾರ ಮಾಡಿರುವುದು ಕಂಡು ಸದರಿ ಡೀಲರರ ವಿರುದ್ದ ಅವಶ್ಯಕ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 61/2012 ಕಲಂ. 406 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಸುಹಾಸ ತಂದೆ ದತ್ತೂಪಂತ ಎಲ್.ಶೆಟ್ಟಿ ಯೋಜನೆ ನಿದೇರ್ಶಕರು ಕೃಷ್ಣಿ ಸಂಶೋಧನಾ ಕೇಂದ್ರ ಆಳಂದ ರಸ್ತೆ ಗುಲಬರ್ಗಾ ರವರು ರೈತರ ವಿಕ್ಷಣೆಗಾಗಿ 6 ಆಡು,  1 ಹೊತಗಳನ್ನು  ತಂದು ಇಟ್ಟಿದ್ದು  ಆದರ  ಕಾವಲಿಗಾಗಿ  ಮಲ್ಲಪ್ಪ ಪೂಜಾರಿ ರವರಿಗೆ ನೇಮಿಸಿರುತ್ತೆವೆ. ಸದರಿಯವರು  ದಿನಾಂಕ 05/07/2012  ರಂದು ಸಂಜೆ 6-00 ಗಂಟೆಗೆ  ಕೋಣೆಯಲ್ಲಿ ಹಾಕಿ  ಕೀಲಿ ಹಾಕಿದ್ದು  ಮುಂಜಾನೆ 7-00 ಗಂಟೆಗೆ ನೋಡಿದಾಗ   ಬಾಗಿಲಿನ  ಕೀಲಿ ಮುರಿದು  ಒಂದು ಕೇಂಪು ಬಣ್ಣದ ಹೊತವನ್ನು  ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ   ಕಳವು ಮಾಡಿಕೊಂಡು  ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:224/2012  ಕಲಂ 457 380  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.