POLICE BHAVAN KALABURAGI

POLICE BHAVAN KALABURAGI

28 April 2012

GULBARGA DIST REPORTED CRIMES


ಹಲ್ಲೆ ಪ್ರಕರಣ:


ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಮೊಹ್ಮದ ಇಕ್ಬಾಲ ತಂದೆ ಮೊಹ್ಮದ ಹುಸೇನ ತರನಳ್ಳಿ ಸಾ: ಟಿಪ್ಪುಸುಲ್ತಾನ ಚೌಕ  ರಾಮಾ ಮೊಹಲ್ಲಾ ಶಹಾಬಾದ ರವರು ದಿನಾಂಕ: 27-04-2012 ರಂದು ನಮ್ಮ ಮನೆಯ ಮುಂದೆ ಕುಳಿತಾಗ ಮುಕ್ತಾರ ಇನಾಮದಾರ ಸಂಗಡ ಮೂರು ಜನರು ಎಲ್ಲರೂ ಸಾ:ಮಜೀದ ಚೌಕ ಶಹಾಬಾದ ರವರು ವಿನಾಃಕಾರಣ ಜಗಳ ತೆಗೆದು, ಅವಾಚ್ಯವಾಗಿ ಬೈದು, ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಜೇಂದ್ರ ತಂದೆ ಹಣಮಂತ ಮೋರೆ ಸಾ:ಪ್ಲಾಟ ನಂ 20/2 ನ್ಯೂ ಗಾಟಗೆ ಲೇಔಟ ಹತ್ತಿರ ಕ್ಯಾಂಬೆಲ ಶಾಲೆ  ಗುಲಬರ್ಗಾರವರು ನಾನು  ದಿನಾಂಕ:25/04/2012 ರಂದು 8.30 ಪಿಎಂ ಸುಮಾರಿಗೆ ಗುಲಬರ್ಗಾದಿಂದ ಇಂಡಿಕಾ ಕಾರ ನಂ.ಕೆಎ-32/ಬಿ5063 ನೇದ್ದನ್ನು ಚಲಾಯಿಸಿಕೊಂಡು ಶಹಾಬಾದಕ್ಕೆ ಬಂದು,ಖಾಸಗಿ ಕೆಲಸ ಮುಗಿಸಿಕೊಂಡು ಗುಲಬರ್ಗಾಕ್ಕೆ ಹೋಗುವಾಗ ಶಹಾಬಾದ ರೇಲ್ವೆ ಬ್ರೀಡ್ಜ ಹತ್ತಿರ ನನ್ನ ಎದುರಿಗೆ ಒಂದು ಲಾರಿ ಚಾಲಕನು ತನ್ನ ಲಾರಿಯ Focus ಲೈಟನ್ನು ಹಾಕಿದ್ದರಿಂದ ನಾನು ಕಾರನ್ನು ಒಮ್ಮೆಲೆ ಬ್ರೇಕ ಹಾಕಿದ್ದರಿಂದ  ನನ್ನ ಕಾರು ರೋಡಿನ ಕೆಳಗೆ ಇಳಿದಿದ್ದರಿಂದ ಕಾರು ಪೂರ್ತಿ ಜಖಂ ಆಗಿರುತ್ತದೆ, ನನಗೆ ಕೇವಲ ಬಲಗಾಲ ಮೊಳ ಕಾಲಿಗೆ ಒಳಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 51/2012 ಕಲಂ 279, 337 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.