ಅಪಘಾತ
ಪ್ರಕರಣ:
ಹೆಚ್ಚುವರಿ
ಸಂಚಾರಿ ಪೊಲೀಸ್ ಠಾಣೆ: ಶ್ರೀ ಸದಾಶಿವ ತಂದೆ ವಿಶ್ವನಾಥ ಗಲಿಗಲಿ ಸಾ: ಮಲ್ಲಿಕಾರ್ಜುನ ಗುಡಿ ಹತ್ತಿರ ಹಿರಾಪೂರ ಗುಲಬರ್ಗಾರವರು ನಾನು ದಿನಾಂಕ:08-02-2013 ರಂದು ಮಧ್ಯಾಹ್ನ 1=30 ಗಂಟೆಗೆ ನನ್ನ ಅಟೋರಿಕ್ಷಾ ನಂಬರ ಕೆಎ-32 ಎ-4784 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು
ಸುಪರ ಮಾರ್ಕೆಟ ಕಡೆಯಿಂದ ರೇಲ್ವೆ ಸ್ಟೇಷನ ಕಡೆಗೆ ಹೋಗುತ್ತಿದ್ದಾಗ ಜಿಲ್ಲಾ ಪಂಚಾಯತ ಕಾರ್ಯಾಲಯದ ಎದುರುಗಡೆ ಕಾರ ನಂಬರ ಕೆಎ-32 ಟಿ
ಎಕ್ಸ-8195 ರ ಚಾಲಕನ್ನು ಜಗತ ಸರ್ಕಲ ಕಡೆಯಿಂದ ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಟೋರಿಕ್ಷಾಗೆ ಡಿಕ್ಕಿ
ಪಡಿಸಿದನು. ಅಪಘಾತ
ಪಡಿಸಿದ್ದರಿಂದ ನನಗೆ ಗಾಯಗಳಾಗಿರುತ್ತವೆ. ಅಂತಾ ಸದಾಶಿವ ರವರು ದೂರು ಸಲ್ಲಿಸಿದ ಸಾರಾಂಶದ
ಮೇಲಿಂದ ಠಾಣೆ ಗುನ್ನೆ ನಂ:10/2013 ಕಲಂ: 279, 337 ಐ.ಪಿ.ಸಿ. ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಸುಭಾಷ್ ತಂದೆ ಭೀಮಯ್ಯ ಗುತ್ತೇದಾರ್ ಸಾ: ತಾವರಗೇರಾ ರವರು ನಾನು ತಹಶೀಲ್ ಆಫೀಸ್
ಗುಲಬರ್ಗಾಕ್ಕೆ ಹೋಗಿ ಕಂದಾಯ ಇಲಾಖೆಯಲ್ಲಿ ವಿಚಾರಣೆ ಮಾಡಿದಾಗ ತಾವರಗೇರಾ ಜಮೀನ ಸರ್ವೆ ನಂ: 2/93
ನೇದ್ದರ ದಾಖಲಾತಿಯಲ್ಲಿ ಮಾಲಿಕತ್ವವನ್ನು ಬದಲಾಯಿಸಲಾಗಿದೆ. ರಾಜೇಂದ್ರ ತಂದೆ ತಿಪ್ಪಯ್ಯ ಗುತ್ತೇದಾರ್,ಪ್ರಭಾವತಿ ಗಂಡ ರಾಜೇಂದ್ರ
ಗುತ್ತೇದಾರ,ಶಿವಶಂಕರ ತಂದೆ ರಾಜೇಂದ್ರ ಗುತ್ತೇದಾರ,ಸುಮಿತ್ರಾಬಾಯಿ ತಂದೆ ರಾಜೇಂದ್ರ ಗುತ್ತೇದಾರ,
ಸಾ;ಎಲ್ಲರೂ ತಾವರಗೇರಾ ರವರು ನಂಬಿಕೆ ದ್ರೋಹ ಮಾಡಿರುತ್ತಾರೆ. ಕೇಳಲು ಹೋದಾಗ ನನಗೆ
ಬಡಿಗೆಯಿಂದ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ: 87/2013 ಕಲಂ, 323, 324, 504, 506, 403, 406, 417, 419, 489
ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾಗ್ರಾಮೀಣ ಪೊಲೀಸ ಠಾಣೆ:ದಿನಾಂಕ
08-02-13 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮೃತ ಮಾಳಿಂಗರಾಯ ಮತ್ತು ರಾಜೇಂದ್ರ ಇವರಿಬ್ಬರು
ಬಜಾಜ ಡಿಸ್ಕವರಿ ಕೆಎ-32 ಇಬಿ 1653 ಮೇಲೆ ಬನ್ನೂರದಿಂದ ಗುಲಬರ್ಗಾಕ್ಕೆ ಜೆ.ಸಿ.ಬಿ. ಸಾಮಾನು
ಮತ್ತು ಡಿಜೇಲ ಖರೀದಿ ಮಾಡಿಕೊಂಡು ಮರಳಿ ಬನ್ನೂರ ಗ್ರಾಮಕ್ಕೆ ಮೋಟಾರ ಸೈಕಲ ಮೇಲೆ ಬರುತ್ತಿರುವಾಗ
ಮಧ್ಯರಾತ್ರಿ 12-30 ಗಂಟೆ ಸುಮಾರಿಗೆ ತಾವರಗೇರಾ ಕ್ರಾಸ ಸಮೀಪ ಎದುರುನಿಂದ ಟಾಟಾ ಇಂಡಿಕಾ ಕಾರ
ಚಾಲಕ ಕೆಎ-32 ಎಮ್-9278 ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾ
ತಿಡ್ಡಿ ನಡೆಸುತ್ತಾ ಡಿಕ್ಕಿ ಹೊಡೆದಿದ್ದರಿಂದ, ನನ್ನ ಮಗ ಮತ್ತು ರಾಜೇಂದ್ರ ಗಾಡಿಯ ಮೇಲಿಂದ
ಪುಟಿದು ರೋಡಿಗೆ ಬಿದ್ದಿದ್ದು, ಇದರಿಂದಾಗಿ ರಾಜೇಂದ್ರ ಮರ್ಮಾಂಗಕ್ಕೆ ರಕ್ತಗಾಯವಾಗಿ ಸ್ಥಳದಲ್ಲಿ
ಮೃತಪಟ್ಟಿದ್ದು, ಮತ್ತು ಮಾಳಿಂಗಾರಯನ ಎರಡು ಕಾಲು ಮುರಿದು ಭಾರಿ ರಕ್ತಗಾಯವಾಗಿದ್ದಲ್ಲದೇ ಮೋಟಾರ ಸೈಕಲ ಕಾರಿಗೆ ಸಿಕ್ಕಿ ಬಿದ್ದಿದ್ದರಿಂದ ಸ್ವಲ್ಪ
ದೂರದವರೆಗೆ ಎಳಿದುಕೊಂಡು ಹೋಗಿದ್ದರಿಂದ ಎರಡು ವಾಹನಗಳ ಘರ್ಷಣೆಯಿಂದಾಗಿ ಬೆಂಕಿ ಹತ್ತಿ ಮೋಟಾರ
ಸೈಕಲಿಗೆ ಕಟ್ಟಿದ ಡಿಜೇಲ ಡಬ್ಬಿ ಬೆಂಕಿ ಹತ್ತಿ ಪೂರ್ತಿ ಗಾಡಿ ಸುಟ್ಟಿದ್ದು. ಮಾಳಿಂಗರಾಯನಿಗೆ
ಆಸ್ಪತ್ರೆ ಸಾಗಿಸುವ ಸಮಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶಂಕ್ರೆಪ್ಪ
ತಂದೆ ಚಂದ್ರಾಮಪ್ಪ ಹಳಿಮನಿ ಸಾ||
ಬನ್ನೂರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 88/2013 ಕಲಂ
279, 304 (ಎ) ಐಪಿಸಿ ಸಂಗಡ 187 ಎಂ.ವಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ದಿನಾಂಕ: 07/02/2013 ರಂದು
ರಾತ್ರಿ 11-30 ಗಂಟೆ ಸುಮರಿಗೆ ಜೇವರ್ಗಿ ಪಟ್ಟಣದ ಲಕ್ಕಿ ದಾಬದ ಹತ್ತಿರ ರೋಡಿನಲ್ಲಿ ನನ್ನ ಮಾವ ಸುರೇಂದ್ರಪ್ರಸಾದ ತಂದೆ ನರೇಂದ್ರ ಪ್ರಸಾದ ತ್ರಿವೇದಿ ಇವರು ರೋಡ
ಕ್ರಾಸ ಹೋದಾಗ
ಯಾವುದೊ ವಾಹನ ಚಾಲಕನು ಶಹಾಪೂರದ ಕಡೆಯಿಂದ ಜೇವರ್ಗಿ ಕಡೆಗೆ ಅತೀವೇಗ ಮತ್ತು ಅಲಕ್ಷತನದಿಂದ
ನಡೆಯಿಸಿಕೊಂಡು ಬಂದು ಸುರೇಂದ್ರಪ್ರಸಾದ ಇತನಿಗೆ ಡಿಕ್ಕಿ ಪಡಿಸಿ ತನ್ನ ವಾಹನ ನಿಲ್ಲಿಸಿದೆ ಓಡಿ
ಹೋಗಿದ್ದು ಸುರೇಂದ್ರ ಪ್ರಸಾದ ಇವರು ಭಾರಿ ಗಾಯಾಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ. ಅಪಘಾತ
ಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಆತನ
ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಪವನಕುಮಾರ ತಂದೆ ರಾಜೇಂದ್ರಪ್ರಸಾದ ಸುಭೇದಾರ ಸಾ: ಹಳ್ಳಿಖೇಡ (ಬಿ) ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ನಂ:18/2013 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ಪ್ರಕಾರ
ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.