POLICE BHAVAN KALABURAGI

POLICE BHAVAN KALABURAGI

30 December 2016

Kalaburagi District Reported Crimes.

ಫರಹತಾಬಾದ ಠಾಣೆ : ದಿನಾಂಕ 29/12/2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದಲ್ಲಿ ಆರೋಪಿತರು ಫಿರ್ಯಾದಿಯೊಂದಿಗೆ ನಿನ್ನೆ ದಿನಾಂಕ 28/12/2016 ರಂದು ನಿನ್ನ ತಾಯಿ ನಮ್ಮ ಮನೆಯ ಹತ್ತೀರ ಬಟ್ಟೆ ತೊಳೆಯಲು ಬೆರಬೆಡ ಅಂತಾಅಂದ್ರೂ ಬಟ್ಟೆತೋಲೆಯಲು  ಬ್ರುತ್ತಿದ್ದಾಳೆ ಅಂತಾಅವಾಚ್ಯ ಶಬ್ದಗಳಿಂದ ಬೈದು ತಲೆಗೆ  ಕಲ್ಲಿನಿಂದ ಹೋಡೆದು ರಕ್ತಗಾಯ  ಮಾಡಿ ಜೀವದಬೆದರಿಕೆ  ಹಾಕಿರುತ್ತಾರೆ ಅಂತಾ ಇತ್ಯಾದಿ ಸಾರಾಂಸವಿರುತ್ತದೆ ಆರೋಪಿತರು ಅರುಣಕುಮಾರ ತಂದೆ ಶರಣಗೌಡ ಪೊಲೀಸ್ ಪಾಟೀಲ ಸಂಗಡ ಇನ್ನು ಒಬ್ಬ ಸಾ// ಇಬ್ಬರೂ ಸೀತನೂರ ಸದರಿ ರವರ ವಿರುದ್ದ ಪ್ರಕರಣ ವರಿದಯಾದ ಬಗ್ಗೆ .
ಜೇವರ್ಗಿ ಠಾಣೆ : ದಿನಾಂಕ 29.12.2016 ರಂದು 14:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯರವರಲ್ಲಿ ನಾನು ಮುನ್ನಾ ತಂದೆ ಮಹ್ಮದ್ ರಫೀ ವಯಾಃ 22 ವರ್ಷ, ಜಾತಿಃ ಮುಸ್ಲಿಂ ಉಃ ಗ್ಯಾರೇಜ ಕೆಲಸ ಸಾಃ ಬಿ.ಡಿ. ಕ್ವಾರ್ಟಸ್ ಮಂಡ್ಯ ಇದ್ದು ಈ ಅರ್ಜಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ ನನಗೆ ಪರಿಚಯದ ಅಬ್ದುಲ್ ಖಾದರ ಇತನು ತನ್ನ ಲಾರಿ ನಂ ಕೆಎ-45-3807 ನೇದ್ದರಲ್ಲಿ ಎಳೆನೀರು ತೆಂಗಿನ ಕಾಯಿ ತುಂಬಿಕೊಂಡು ಮಂಡ್ಯದಿಂದ ಕಲಬುರಗಿಗೆ ಹೋಗಿ ಬಂದು ಮಾಡುತ್ತಾನೆ. ನಾನು ಕಲಬುರಗಿ ಬಂದೇ ನವಾಜ ದರ್ಗಾಕ್ಕೆ ಹೋಗಿ ನೊಡಿಕೊಂಡು ಬರುವ ಸಲುವಾಗಿ ಮೇಲೆ ನಮೂದಿಸಿದ ಎಳೆ ನೀರು ತೆಂಗಿನ ಕಾಯಿ  ತುಂಬಿದ ಲಾರಿಯಲ್ಲಿ ಕುಳಿತುಕೊಂಡು ದಿನಾಂಕ 26.12.2016 ರಂದು ರಾತ್ರಿ ಮಂಡ್ಯದಿಂದ ಕಲಬುರಗಿಗೆ ಬರುತ್ತಿದ್ದೆನುಲಾರಿಯಲ್ಲಿ ಅದರ ಕ್ಲೀನರ್ ಯಾಸೀನ ಸಹ ಇದ್ದನು, ಲಾರಿಯನ್ನು ಅಬ್ದುಲ್ ಖಾದರ ತಂದೆ ಕೆ.ಬಿ. ಮೊಹ್ಮದ್ ಈತನು ನಡೆಯಿಸುತ್ತಿದ್ದನು. ದಿ. 27.12.2016 ರಂದು ಶಹಾಪೂರ ಜೇವರಗಿ ಮಾರ್ಗವಾಗಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ಜೇವರಗಿ-ಶಹಾಪೂರ ಮೇನ್ ರೋಡ ಚಿಗರಳ್ಳಿ ಕ್ರಾಸ್ ಪೆಟ್ರೊಲ್ ಪಂಪ ಹತ್ತಿರ ರೋಡಿನಲ್ಲಿ ರಾತ್ರಿ 11.15 ಗಂಟೆಯ ಸುಮಾರಿಗೆ ನಾನು ಕುಳಿತು ಬರುತ್ತಿದ್ದ ಲಾರಿ ಚಾಲಕ ಅಬ್ದುಲ್ ಖಾದರ್ ಈತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮುಂದೆ ರೋಡಿನಲ್ಲಿ ಬರುತ್ತಿದ್ದ ಒಂದು ವಾಹನಕ್ಕೆ ಸೈಡ ಕೊಡಲು ಒಮ್ಮೇಲೆ ಕಟ್ ಹೊಡೆದಾಗ ಲಾರಿ ರೋಡಿನ ಸೈಡಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಆಗ ನನಗೆ ಎಡ ಕೈ ಮಣಿ ಕಟ್ ಹತ್ತಿರ ಮತ್ತು ಎಡ ಗಲ್ಲದ ಮೇಲೆ ಗಾಯವಾಗಿರುತ್ತದೆ. ಲಾರಿ ಮುಂದಿನ ಬಾಗ ಜಖಂಗೊಂಡಿರುತ್ತದೆ. ನಂತರ ಲಾರಿ ಕ್ಲೀನರ್ನು 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿದನು. ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ ವಾಹನದಲ್ಲಿ ನಾನು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು  ಉಪಚಾರ ಪಡೆದುಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಅದೇ ಅಂಬ್ಯುಲೆನ್ಸ್ ವಾಹನದಲ್ಲಿ ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಮನೆಯಲ್ಲಿ ವಿಚಾರ ಮಾಡಿ ತಡಮಾಡಿ ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿರುತ್ತೇನೆ ಮತ್ತು ಲಾರಿ ಕ್ಲೀನರನಿಗೆ ಯಾವುದೇ ಗಾಯವಾಗಿರುವುದಿಲ್ಲಾ. ಮೇಲೆ ನಮೂದಿಸಿದ ಲಾರಿ ನಂ ಕೆಎ-45-3807 ನೇದ್ದರ ಚಾಲಕ ಅಬ್ದುಲ್ ಖಾದರ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದರಿಂದ ಲಾರಿ ಪಲ್ಟಿಯಾಗಿರುತ್ತದೆ ಅದರಿಂದ ನನಗೆ ಗಾಯವಾಗಿದ್ದು ಕಾರಣ ಸದರಿ ಲಾರಿ ಚಾಲಕನ ವಿರುದ್ದ ಪ್ರಕರಣ ವರದಿಯಾದ ಬಗ್ಗೆ.