ಅಫಜಲಪೋರ ಠಾಣೆ : ದಿನಾಂಕ
04-10-2015 ರಂದು ಬೆಳಿಗ್ಗೆ 09:00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಕಾಶಿಬಾಯಿ ಹಾಗೂ
ಇಬ್ಬರು ಬಳುರ್ಗಿ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂಬರ 74 ನೇದ್ದಕ್ಕೆ ಹತ್ತಿ ಬೇಳೆಯಲ್ಲಿ
ಕಸ ತಗೆಯಲು ಹೋಗಿರುತ್ತೇವೆ. ಅಂದಾಜು 10:00 ಗಂಟೆ ಸುಮಾರಿಗೆ ನನ್ನ ಮಗಳು ರಾಗಿಣಿ, ಮಗ ಶಿವರಾಜಕುಮಾರ ಹಾಗೂ ನನ್ನ ಹೆಂಡತಿಯ
ತಮ್ಮ ಸೋಮಶೇಖರ ಮೂರು ಜನರು ಕೂಡಿ ಇಂದು ಶಾಲೆ ರಜೆ ಇದ್ದ ಕಾರಣ ಹೊಲ ನೋಡುವ ಸಂಭಂದ ಹೊಲಕ್ಕೆ
ಬಂದಿರುತ್ತಾರೆ, ಮದ್ಯಾಹ್ನ
ಅಂದಾಜು 3:00 ಗಂಟೆ ಸುಮಾರಿಗೆ ನಾವೆಲ್ಲರು ಹೊಲದಲ್ಲಿದ್ದಾಗ ಮಳೆ ಬರತೊಡಗಿತು ಆಗ ನಾವು ಮತ್ತು
ಎತ್ತು ಮೇಯಿಸಲು ಬಂದ ನಮ್ಮ ಅಣ್ಣ ತಮ್ಮಕಿಯ ಬಸವರಾಜ ತಂದೆ ಶಿವುಕುಮಾರ ಅತನೂರ ಈತನು ಬಂದಿದ್ದು
ಎಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿರುವ ಪತ್ರಾಸ ಸೆಡ್ಡಿನಲ್ಲಿ ಹೋಗಿ ಕುಳಿತಿರುತ್ತೇವೆ, ಅಂದಾಜು ಮದ್ಯಾಹ್ನ 3:30 ಗಂಟೆ
ಸುಮಾರಿಗೆ ಮಳೆ ಬರುತ್ತಿದ್ದಾಗ ಏಕಾ ಏಕಿ ಗುಡುಗಿ (ಗದ್ದರಿಸಿ) ನಾವು ಕುಳಿತಲ್ಲಿಗೆ ಸಿಡಿಲು
ಬಡೆದು ಕಣ್ಣಿಗೆ ಕತ್ತಲಾಗಿತು. ತದನಂತರ ನಮ್ಮ ಪಕ್ಕದಲ್ಲಿಯೆ ಕುಳಿತಿದ್ದ ನನ್ನ ಮಗಳು ರಾಗಿಣಿ
ಹಾಗೂ ಬಸವರಾಜ ಇಬ್ಬರು ಮೃತಪಟ್ಟಿದ್ದರು, ಸೋಮಶೇಖರ ಈತನು ಸಿಡಿಲಿನಿಂದ ಗಾಯಗೊಂಡು ಬಿದ್ದು
ಒದ್ದಾಡುತ್ತಿದ್ದನು, ಉಳಿದಂತೆ
ನನಗೆ ಮತ್ತು ನನ್ನ ಹೆಂಡತಿ ಕಾಶಿಬಾಯಿ ಹಾಗೂ ಮಗ ಶಿವುರಾಜಕುಮಾರ ಮೂರು ಜನರಿಗೆ ಏನು
ಆಗಿರುವುದಿಲ್ಲ, ಆಗ
ನಾವು ಚೀರಾಡಿ ಅಳುತ್ತಿದ್ದ ಸಪ್ಪಳ ಕೇಳಿ ಸೋಮಶೇಖರ ಅತನೂರ, ಕಲ್ಯಾಣಪ್ಪ ಪಾಟೀಲ, ಶಿವಲಿಂಗಯ್ಯ ಹಿರೇಮಠ, ಬಸವರಾಜ ಪಾಟೀಲ ಹಾಗೂ ಇತರರು ಬಂದು
ನನ್ನ ಮಗಳ ಮತ್ತು ಬಸವರಾಜನ ಮೃತ ದೇಹವನ್ನು ಯಾವುದೋ ಒಂದು ಟಂ ಟಂ ದಲ್ಲಿ ಹಾಕಿದರು, ಹಾಗೂ ಗಾಯಗೊಂಡ ನನ್ನ ಅಳಿಯ ಸೋಮಶೇಖರ
ಈತನನ್ನು ಇನ್ನೊಂದು ವಾಹನದಲ್ಲಿ ಹಾಕಿಕೊಂಡು ಎಲ್ಲರೂ ಕೂಡಿ ಅಫಜಲಪೂರಕ್ಕೆ ಬಂದಿರುತ್ತೇವೆ.
ಗಾಯಗೊಂಡ ನನ್ನ ಅಳಿಯ ಸೋಮಶೇಖರನನ್ನು ಅಫಜಲಪೂರದಿಂದ ನಮ್ಮೂರಿನ ರಾವುತಪ್ಪ ಭಜಂತ್ರಿ, ವಿಶ್ವನಾಥ ಪಾಟೀಲ ಇಬ್ಬರು 108
ಅಂಬ್ಯಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ, ಈಗ ನನ್ನ ಮಗಳು ರಾಗಿಣಿಯ ಹಾಗೂ ನಮ್ಮ
ಅಣ್ಣ ತಮ್ಮಕಿಯ ಬಸವರಾಜನ ಶವಗಳು ಅಫಜಲಪೂರ ಸರ್ಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿ
ಬಂದಿರುತ್ತೇವೆ. ಇಂದು ದಿನಾಂಕ 04-10-2015 ರಂದು ಮದ್ಯಾಹ್ನ 3:30 ಗಂಟೆ ಸುಮಾರಿಗೆ ನಾವೆಲ್ಲರು
ಬಳುರ್ಗಿ ಸಿಮಾಂತರದ ನಮ್ಮ ಹೊಲ ಸ ನಂ 74 ನೇದ್ದರ ಪತ್ರಸಾ ಸೇಡ್ಡಿನಲ್ಲಿದ್ದಾಗ ಏಕಾ ಏಕಿ ಮಳೆ
ಬರುತ್ತಿದ್ದಾಗ ಸಿಡಲು ಬಡೆದು ನನ್ನ ಮಗಳಾದ 1) ರಾಗಿಣಿ ತಂದೆ ಅರ್ಜುನ ಅತನೂರ ವಯಾ|| 15 ವರ್ಷ ಮತ್ತು ನಮ್ಮ ಅಣ್ಣ ತಮ್ಮಕಿಯ 2) ಬಸವರಾಜ ತಂದೆ ಶಿವುಕುಮಾರ ಅತನೂರ ವಯಾ|| 25 ವರ್ಷ ಇವರಿಬ್ಬರು ಆಕಸ್ಮಿಕವಾಗಿ
ಮೃತಪಟ್ಟಿರುತ್ತಾರೆ, ಹಾಗೂ
ನನ್ನ ಅಳಿಯ ಸೋಮಶೇಖರ ತಂದೆ ಶರಣಪ್ಪ ಸಾಲುಟಗಿ ವ|| 18 ವರ್ಷ ಸಾ|| ಹರನಾಳ ತಾ|| ಜೇವರ್ಗಿ ಹಾ|| ವ|| ಹಳ್ಯಾಳ ಈತನು ಗಂಬಿರವಾಗಿ
ಗಾಯಗೊಂಡಿರುತ್ತಾನೆ. ಸದರಿ ಘಟನಯು ಆಕಸ್ಮಿಕವಾಗಿ ಜರುಗಿರುತ್ತದೆ ಮೇಲಿಂದ ಗುನ್ನೆ ದಾಖಲಾಗಿರುತ್ತದೆ..
ಗ್ರಾಮೀಣ ಠಾಣೆ : ದಿನಾಂಕ 04-10-15 ರಂದು ಸಂಜೆ 6-00 ಗಂಟೆ ಸುಮಾರಿಗೆ
ಫಿರ್ಯಾದಿದಾರಳ ಪಕ್ಕದಲ್ಲಿ ಗಾಯಾಳು ಕು:ಸಾನಿಕಾ ಇವಳು ಕಪನೂರ ಸರಕಾರಿ ಶಾಲೆ ಎದುರುಗಡೆ ಸೈಡಿಗೆ ರೋಡ ದಾಟಲು ನಿಂತಿರುವಾಗ, ಅದೇ ವೇಳೆಗೆ
ಹುಮನಾಬಾದ ರಿಂಗ ರೋಡ ಕಡೆಯಿಂದ ಚನ್ನವೀರ ಇತನು ಬಜಾಜ
ಡಿಸ್ಕವರಿ ಕೆಎ 32 ವಾಯ 9265 ನಡೆಯಿಸಿಕೊಂಡು ಬಂದಾಗ ಸಾನಿಕಾ ಇವಳು ಹೋಗಲು ಪ್ರಯತ್ನಿಸಿದಾಗ
ಚನ್ನವೀರ ಇತನು ತನ್ನ ಮೋಟಾರ ಸೈಕಲ ಬ್ರೇಕ ಮಾಡಿದಾಗ ಅತನು ಕೆಳೆಗೆ ಬಿದ್ದಾಗ ಅಷ್ಟರಲ್ಲಿ
ಹುಮನಾಬಾದ ಕಡೆಯಿಂದ ಮೋಟಾರ ಸೈಕಲ ಕೆಎ 25 ಇಸಿ
7556 ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಮೊದಲು ಸಾನಿಕಾ ಇವಳಿಗೆ
ಅಪಘಾತಪಡಿಸಿ ಚನ್ನವೀರ ಇತನ ಎದೆಯ ಮೇಲಿಂದ ಮೋಟಾರ ಸೈಕಲ ಹಾಯಿಸಿಕೊಂಡು ಹೋಗಿ ಸ್ವಲ್ಪ ಅಂತರದಲ್ಲಿ
ನಿಲ್ಲಿಸಿ, ನಂತರ ಹಾಗೇ ಓಡಿಸಿಕೊಂಡು ಹೋಗಿದ್ದು, ಅಷ್ಟರಲ್ಲಿ ರೋಡಿಗೆ ಹೋಗುತ್ತಿದ್ದ ಮಂಜುನಾಥ
ಮೊಳೆ, ಬಸವರಾಜ ಖಜಂದಾರ, ಗೌತಮ ಖಜಂದಾರ ಇವರುಗಳು ನೋಡಿ ಸಾನಿಕಾ ಮತ್ತು ಚನ್ನವೀರ
ಇವರಿಬ್ಬರಿಗೆ 108 ಅಂಬುಲೈನ್ಸ ಗಾಡಿ ಉಪಚಾರ
ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿ ತಂದಾಗ, ಚನ್ನವೀರ ಇತನು ಮಾರ್ಗ ಮಧ್ಯದಲ್ಲಿ
ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಸಾನಿಕಾ ಇವಳಿಗೆ ಉಪಚಾರ ಕುರಿತು ಸೇರಿಕೆ
ಮಾಡಿದ್ದು, ಕಾರಣ ಮೋಟಾರ ಸೈಕಲ ಕೆಎ 25 ಇಸಿ
7556 ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ.