POLICE BHAVAN KALABURAGI

POLICE BHAVAN KALABURAGI

08 February 2012

Gulbarga Dist Reported Crime

ದರೋಡೆ ಪ್ರಕರಣ:
ಗ್ರಾಮೀಣ ಠಾಣೆ ಗುಲಬರ್ಗಾ:
ಶ್ರೀ ಶ್ರೀಕಾಂತ ತಂದೆ ನಾಗರಾಜ ಬೆಡಪಳ್ಳಿ ಸಾ ರಾಮನಗರ ಕಾಲೂನಿ ಗುಲಬರ್ಗಾರವರು ನಾವು ಮೂವರು ಅಣ್ಣ ತಮ್ಮಂದಿರಿದ್ದು ನಾನೇ ಹಿರಿಯವನಾಗಿರುತ್ತೇನೆ ,ರಾಮನಗರ ರಿಂಗರೋಡಿನ ಸಮರ್ಥ ವೈನ ಶಾಪ ಎದರುಗಡೆ ಒಂದು ಪಾನ ಶಾಪ ಅಂಗಡಿ ಇಟ್ಟುಕೊಂಡಿರುತ್ತೇನೆ. ಈ ಪಾನ ಅಂಗಡಿ ಬೆಳಗ್ಗೆ 6-00 ಗಂಟೆಗೆ ತೆರೆದು ರಾತ್ರಿ 10 -11 ಗಂಟೆ ತನಕ ಅಂಗಡಿಯಲಿದ್ದು ಕೊಂಡು ವ್ಯಾಪಾರ ಮಾಡುತ್ತೇನೆ .ದಿನಾಂಕ 06-02-2012 ರಂದು ಈಬ್ಬರು ಹುಡುಗರು ಅಂದಾಜು 28-32 ವಯಸ್ಸಿನವರು ಕ್ರೋಸರನಲ್ಲಿ ಬಂದು ವೈನಶಾಪ ಸಮರ್ಥದಲ್ಲಿ ಕುಡಿದು ತಕರಾರು ಮಾಡಿದರು ಅವರಲ್ಲಿ ಒಬ್ಬ ಹಳದಿ ಬಣ್ಣದ ಟಿಶರ್ಟ ಹಾಕಿದ್ದು ಇನೊಬ್ಬ ಬಿಳಿ ಶರ್ಟ ಬೂದಿ ಬಣ್ಣದ ಪ್ಯಾಂಟು ಹಾಕಿಕೊಂಡಿದ್ದರು ಅವರು ವೈನ ಶಾಪದಿಂದ ತಕರಾರು ಮಾಡಿ ನನ್ನ ಶಾಪ ಹತ್ತಿರ ಬಂದು ಸಿಕ್ರೇಟ ತೆಗೆದುಕೊಂಡು ಹೋದರು. ನಾನು ರಾತ್ರಿ 11 ಗಂಟೆಯಾಗಿದ್ದರಿಂದ ಅಂಗಡಿ ಮುಚ್ಚುವ ಸಲುವಾಗಿ ಗಲ್ಲಾದಲ್ಲಿದ ಹಣ ಎಣಿಲಾಗಿ 2500/- ರೂ ಇದ್ದವು ಈ ಮೊದಲು ವೈನ ಶಾಪದಲ್ಲಿ 50/- ರೂ ಸಲುವಾಗಿ ತಕರಾರು ಮಾಡಿ ಹೋಗಿದ್ದ ಈಬ್ಬರು ಕ್ರೋಸರದಲ್ಲಿ ಬಂದು ಅವರಲ್ಲಿ ಹಳದಿ ಟಿಶರ್ಟ ಧರಿಸಿದವನು ನನಗೆ “ ಎ ಕಿಂಗ ಸೈಜ ಸಿಕ್ರೇಟ ತಾಲೆ “ ಅಂದನ್ನು ನಾನು ಸಿಗರೇಟ ಕೊಟ್ಟೆನು ನಾನು ಎಣಿಸುತ್ತಿದ್ದಾಗ ಹಳದಿ ಬಣ್ಣದ ಟಿ-ಶರ್ಟ ಧರಿಸಿದವನು ನನ್ನ ಕೈಯಲಿದ್ದ 2500/- ರೂ ಕಸಿದ ಕೊಂಡನು ನಾನು ಅವನಿಗೆ ನನ್ನ ಹಣ ಕೊಡು ಅಂತಾ ಕೇಳಿದಾಗ ಟಿ-ಶರ್ಟ ಧರಿಸಿದವನು ಬೆನ್ನಿನ ಹಿಂದೆ ಇಟ್ಟುಕೊಂಡಿದ್ದ ಮಚ್ಚನ್ನು ತೆಗೆದು ನನ್ನಗೆ ಹೊಡೆಯುತ್ತಿರುವಾಗ ನಾನು ತಪ್ಪಿಸಿಕೊಂಡೆನು, ಮಚ್ಚಿನ ಎಟು ಪಾನ ಶಾಪನ ಶೋ ಗ್ಲಾಸಿಗೆ ಹೊಡೆದನು ನಮ್ಮ ತಂದೆ ನಾಗರಾಜ ಪಾನ ಶಾಪ ಹತ್ತಿರ ಬಂದು ಮಚ್ಚು ಹಿಡಿದವನಿಗೆ ಯಾಕೆ ನಮ್ಮ ಹುಡುಗನ ಜೋತೆ ಜಗಳ ಮಾಡುತ್ತಿದ್ದಿಯಾ ಅಂತಾ ಅದಿದ್ದಕ್ಕೆ ಮಚ್ಚು ಹಿಡಿದವನು ಅದೇ ಮಚ್ಚನಿಂದ ನಮ್ಮ ತಂದೆ ಹೊಡಯಲು ನಮ್ಮ ತಂದೆ ತಪ್ಪಸಿಕೊಂಡು ನನ್ನ ತಂದೆ ಮಚ್ಚು ಹಿಡಿದವನಿಗೆ ಗಟ್ಟಿಯಾಗಿ ಹಿಡಿದುಕೊಂಡು ನಮ್ಮ ತಂದೆಗೆ ಹೋಡೆಯಲು ಬಂದಾಗ ನಮ್ಮ ತಂದೆ ಜಾಡಿಸಿ ಹೊಟ್ಟೆಯ ಮೇಲೆ ಒದ್ದನ್ನು ಅವನು ಒದ್ದ ರಬಸಕ್ಕೆ ನೆಲಕ್ಕೆ ಬಿದ್ದ ಬಿದ್ದಿದರಿಂದ ಅವನ ಬಲ ತಲೆಗೆ ರೋಡಿಗೆ ಬಿದ್ದ ಕಲ್ಲು ತಲೆಗೆ ಹತ್ತಿ ರಕ್ತ ಗಾಯವಾಗಿರುತ್ತದೆ. ನಮ್ಮ ತಂದೆ ಹಳದಿ ಟಿಶರ್ಟ ಧರಿಸಿದವನಿಗೆ ಅಲೇ ಬಿದ್ದ ಕಲ್ಲು ತೆಗೆದುಕೊಂಡು ಕಲ್ಲಿನಿಂದ ಮುಖದ ಮೇಲೆ ಮತ್ತು ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅವರಿಗೆ ಯಾವುದೋ ಆಟೋದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ. 392 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.