POLICE BHAVAN KALABURAGI

POLICE BHAVAN KALABURAGI

23 March 2016

Kalaburagi District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಜ್ಞಾಣುಮುತ್ತು ಗಂಡ ಅರುಣ ಸೆಲ್ವಮ್ ಸಾ:ಶಕ್ತಿನಗರ, ರಾಯಚೂರ ಇವರ ಗಂಡ ಅರುಣ ಸೆಲ್ವಮ್ ತಂದೆ ಕೆ. ರಾಯಪ್ಪನ್ ಇವರು ರಾಯಚೂರದಿಂದ ತಮ್ಮ ಮೊಟಾರು ಸೈಕಲ್ ನಂ-KA36EB-5281 ನೇದ್ದರ ಮೇಲೆ ಸೇಡಂಕ್ಕೆ ಹೋಗಿ ಟ್ರಾನ್ಸಪೊರ್ಟದಿಂದ ಪೇಮೆಂಟ್ ತರಲು ಹೋಗಿದ್ದರು, ನಂತರ ಸಾಯಂಕಾಲ 05-30 ಗಂಟೆಗೆ ನನಗೆ ಸೇಡಂದ ಆಕಾಶ ಟ್ರಾನ್ಸಪೋರ್ಟ ಮ್ಯಾನೇಜರ್ ಬಂಡಪ್ಪ ಫೋನ ಮಾಡಿ ತಿಳಿಸಿದ್ದೇನೆಂದರೆ, ಅರುಣ್ ಸೆಲ್ವಮ್ ಇವರು ಸೇಡಂಕ್ಕೆ ಬಂದು ಪೇಮೆಂಟ್ ತೆಗೆದುಕೊಂಡು ರಾಯಚೂರಕ್ಕೆ ಸೇಡಂ-ಯಾದಗೀರ ರೋಡಿನ ಮೇಲೆ ಹೊರಟಾಗ ಕೊಡ್ಲಾ ಗ್ರಾಮ ದಾಟಿದ ನಂತರ ಸಾಯಂಕಾಲ 03-00 ಗಂಟೆಗೆ ಯಾವುದೊ ಒಂದು ವಾಹನ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಅರುಣ್ ಸೆಲ್ವಮ್ ಇವರು ನಡೆಸುತ್ತಿದ್ದ ಮೊಟಾರು ಸೈಕಲಗೆ ಅಪಘಾತ ಪಡೆಯಿಸಿ ವಾಹನ ನಿಲ್ಲಿಸದೇ ಓಡಿಹೋಗಿರುತ್ತಾನೆ. ಅಪಘಾತದಲ್ಲಿ ನಿಮ್ಮ ಗಂಡನಿಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿ ಅವನಿಗೆ ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ಅಂತ ತಿಳಿಸಿದ ಮೇರೆಗೆ ನಾವು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಬಂದು ನೋಡಲು ಸದರಿ ಘಟನೆ ಜರುಗಿದ್ದು ನಿಜವಿತ್ತು ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ, ಹೊಟ್ಟೆಗೆ ಹಾಗೂ ಎರಡೂ ಕಾಲುಗಳಿಗೆ ಭಾರಿ ರಕ್ತಗಾಯವಾಗಿತ್ತು ನನ್ನ ಗಂಡ ಉಪಚಾರ ಪಡೆಯುತ್ತಾ ಸಾಯಂಕಾಲ 06-30 ಗಂಟೆಗೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು  ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಪಡಿತರ ಆಹಾರ ಧಾನ್ಯ ಸಾಗಿಸಿದ ಪ್ರಕರಣ :
ಅಫಜಲಪೂರ ಠಾಣೆ : ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92, 93, 94, 95 ನೇದ್ದವುಗಳಿಗೆ ಮಾರ್ಚ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಹಂಚಲು ಆಹಾರ ಧಾನ್ಯವನ್ನು ಮಂಜೂರು ಮಾಡಲಾಗಿದ್ದು, ಆಹಾರ ಪಡಿತರ ಪದಾರ್ಥ ಹಂಚಿಕೆ ತಖ್ತೆ ಕ್ರ ಸಂ ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ, ಗೋದಿ, ಸಕ್ಕರೆ, ಪಾಮ್ ಆಯಿಲ್, ಉಪ್ಪು ಇವುಗಳನ್ನು ಮಾರ್ಚ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಹಂಚಲು ಆಹಾರ ಧಾನ್ಯ ಮಂಜೂರು ಮಾಡಲಾಗಿರುತ್ತದೆ. ಸದರಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92 ನೇದ್ದರ ವರ್ತಕರಾದ ಮಲ್ಲಯ್ಯ ಸ್ವಾಮಿ ಕೊರಳ್ಳಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 93 ನೇದ್ದರ ವರ್ತಕರಾದ ಬಸವರಾಜ ಮೋಸಲಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 94 ನೇದ್ದರ ವರ್ತಕರಾದಶಿವಾನಂದ ಗೊಬ್ಬುರ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 95 ನೇದ್ದರ ವರ್ತಕರಾದ ಕಾರ್ಯದರ್ಶಿ ಜೈ ಭೀಮ ನವ ತರುಣ ಸಂಘದ ಮುಖ್ಯಸ್ಥನಾದ ಪಂಚಪ್ಪ ಇವರೆಲ್ಲರೂ ಕೂಡಿಕೊಂಡು ಜಂಟಿಯಾಗಿ , ಪಡಿತರ ಚೀಟಿದಾರರಿಗೆ ಹಂಚಬೇಕಾದ ಈ ಮೇಲಿನ ಆಹಾರ ಧಾನ್ಯವನ್ನು ಅಫಜಲಪೂರ ಗೋದಾಮು ಮ್ಯಾನೇಜರ ಆದ ಎಸ್.ಬಿ.ಬಿರಾದಾರ ಇವರ ಸಹಾಯದಿಂದ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ, ಸದರಿ ವಿಷಯದ ಬಗ್ಗೆ ವಿಚಾರಣೆ ಮಾಡಿ ಪಂಚನಾಮೆ ಮಾಡಿಕೊಂಡು ವರದಿ ಕೊಡುವಂತೆ  ಮಾಣಿಕ ತಂದೆ ಬಾಳಪ್ಪ ಘತ್ತರಗಾ ಆಹಾರ ಶಿರಸ್ತೆದಾರರು ತಹಸಿಲ ಕಾರ್ಯಾಕಲಯ ಅಫಜಲಪೂರ ಮತ್ತು ಮಲ್ಲಾರಿ ತಂದೆ ಶ್ರೀನಿವಾಸರಾವ ಜೋಶಿ ಕಂದಾಯ ನಿರೀಕ್ಷಕರು ಕರಜಗಿ ಇವರನ್ನು ದಿನಾಂಕ 19-03-2016 ರಂದು ನೇಮಕ ಮಾಡಿ ಕಳುಹಿಸಿಕೊಡಲಾಗಿರುತ್ತದೆ,         ಸದರಿ ವಿಷಯಕ್ಕೆ ಸಂಭಂದಿಸಿದಂತೆ ವಿಚಾರಣೆ ಮಾಡಿ ವರದಿ ಸಲ್ಲಿಸಲು ಆದೇಶಿಸಿ ಕಳುಹಿಸಿಕೊಟ್ಟಿದ್ದ ಆಹಾರ ಶಿರಸ್ತೆದಾರರಾದ ಮಾಣಿಕ ಘತ್ತರಗಾ ಹಾಗೂ ಕಂದಾಯ ನಿರೀಕ್ಷರಾದ ಮಲ್ಲಾರಿ ಜೋಶಿ ರವರು ದಿನಾಂಕ 19-03-2016 ರಂದು ಸದರಿ ವಿಷಯದ ಪಂಚನಾಮೆ ಹಾಜರು ಪಡಿಸಿ ವರದಿ ಕೊಟ್ಟಿದ್ದೆನೆಂದರೆ, ನಾವು ಉಭಯರು ತಮ್ಮ ಆದೇಶದಂತೆ ದಿನಾಂಕ 19-03-2016 ರಂದು ಸಾಯಂಕಾಲ 4:00 ಗಂಟೆಗೆ ಮಾಶಾಳ ಗ್ರಾಮಕ್ಕೆ ಹೋಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 92. 93. 94. 95 ನೇದ್ದರ ಪಡಿತರ ಚೀಟಿದಾರರಾದ 1) ಮಲ್ಲಮ್ಮ ನಿಂಗಪ್ಪ ಪರಾಪತಿ (BPL Card No, AFZ14125664) 2) ಕಲಾವತಿ ಮಲ್ಲಪ್ಪ ಕೋರೆ (BPL Card No, AFZ14125621) 3) ಭಾಗಮ್ಮ ಶಿವಪ್ಪ ಪೂಜಾರಿ (BPL Card No, AFZ14125660) 4) ಭೀಮರಾಯ ಶಿವಯೋಗೆಪ್ಪ ಪೂಜಾರಿ (BPL Card No, AFZR00126273) 5) ದೂಳಪ್ಪ ಶಿವಯೋಗೆಪ್ಪ ಪೂಜಾರಿ (BPL Card No, AFZR00126274) 6) ಬಸವರಾಜ ಗಿರೆಪ್ಪ ಭೂಸ್ತಿ (BPL Card No, AFZ14125613) 7) ಜಕ್ಕವ್ವ ಭೀಮಶಾ ಪೂಜಾರಿ (BPL Card No, AFZR00127157) 8) ಶಿವಶರಣ ಗುಂಡಪ್ಪ ಬೂಸ್ತಿ (BPL Card No, AFZR00113678) 9) ಸಿದ್ರಾಮಪ್ಪ ರೇವಣಸಿದ್ದಪ್ಪ ಬೂಸ್ತಿ (BPL Card No, AFZ14126205) 10) ಗೋದಾವರಿ ಸಾಯಬಣ್ಣ (BPL Card No, AFZR00115922) 11) ಭಾಗವ್ವ ಶಾಂತಪ್ಪ ಪೂಜಾರಿ (BPL Card No, AFZ14126593) ಹಾಗೂ ಇನ್ನು ಕೆಲವು ಪಡಿತರ ಚೀಟಿದಾರರಿಗೆ ವಿಚಾರಣೆ ಮಾಡಿದ್ದು, ಸದರಿ ಪಡಿತರ ಚೀಟಿದಾರರು ತಮಗೆ ಯಾವುದೆ ರೀತಿ ಆಹಾರ ಧಾನ್ಯ ಹಂಚಿಕೆ ಮಾಡಿರುವುದಿಲ್ಲ ಅಂತಾ ತಿಳಿಸಿದ ಮೇರೆಗೆ, ನಾವು ಉಭಯರು ಸದರಿ ನ್ಯಾಯ ಬೆಲೆ ಅಂಗಡಿಗಳಿಗೆ ಬೇಟಿ ನೀಡಿದಾಗ ಸದರಿ ನ್ಯಾಯ ಬೆಲೆ ಅಂಗಡಿಯ ವರ್ತಕರು ನಮಗೆ ಅಂಗಡಿಯನ್ನು ತೋರಿಸಿದ್ದು, ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಬೇಕಾಗಿದ್ದ ಯಾವುದೆ ಆಹಾರ ಧಾನ್ಯಗಳು ನ್ಯಾಯ ಬೆಲೆ ಅಂಗಡಿಯಲ್ಲಿ ಇರಲಿಲ್ಲ, ಆಗ ಸದರಿ ವರ್ತಕರಿಗೆ ವಿಚಾರಿಸಿದ್ದು, ಸದರಿಯವರು ಯಾವುದೆ ಮಾಹಿತಿ ನಿಡಿರುವುದಿಲ್ಲ, ನಂತರ ನಾವು ಸದರಿ ನ್ಯಾಯ ಬೆಲೆ ಅಂಗಡಿಯ ವರ್ತಕರು ಆಹಾರ ಧಾನ್ಯ ವಿತರಣೆ ಮಾಡದೆ ಇರುವ ಬಗ್ಗೆ ಪಂಚನಾಮೆಯನ್ನು ಮಾಡುವ ಕುರಿತು ಪಂಚರು ಅಂತಾ 1) ಪಂಡಿತ ತಂದೆ ಶಿವರಾಯ ವಯಾ|| 22 ವರ್ಷ ಉ|| ಶಿಕ್ಷಣ ಸಾ|| ಮಾಶಾಳ 2) ಭೀಮರಾಯ ತಂದೆ ಶಿವಯೋಗೆಪ್ಪ ವಯಾ|| 34 ವರ್ಷ ಉ|| ಶಿಕ್ಷಕರು ಸಾ|| ಮಾಶಾಳ 3) ಮಹಿಬೂಬ ತಂದೆ ಹುಸೇನಿ ವಯಾ|| 30 ವರ್ಷ ಉ|| ಒಕ್ಕಲುತನ ಸಾ|| ಮಾಶಾಳ ಇವರನ್ನು ಹಾಜರು ಪಡಿಸಿಕೊಂಡು ಸದರಿ ಪಂಚರ ಸಮಕ್ಷಮ ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂ 92. 93. 94. ಹಾಗೂ 95 ಪಡಿತರ ಚೀಟಿದಾರರ ವಿಚಾರಣೆ ಮಾಡಲಾಗಿ ದಿನಾಂಕ 19-03-2016 ರವರೆಗೆ ಯಾವುದೆ ತರಹದ ಆಹಾರ ಧಾನ್ಯ ವಿತರಣೆ ಮಾಡಿರುವುದಿಲ್ಲ, ಅಲ್ಲದೆ ಪ್ರತಿ ಕಾರ್ಡಿಗೆ 2 ಕೆಜಿಯಂತೆ ಕಡಿತ ಗೊಳಿಸಿದ್ದು ಮತ್ತು ಸೀಮೆ ಎಣ್ಣೆ ಕೂಡಾ ಪ್ರತಿ ಕಾರ್ಡಿಗೆ 2 ಲೀಟರನಂತೆ ವಿತರಣೆ ಮಾಡಿ, ಪ್ರತಿ ಲೀಟರಗೆ 20/- ರೂ ನಂತೆ ಮಾರಾಟ ಮಾಡಿ, 2-3 ಲೀಟರ ಸೀಮೆ ಎಣ್ಣೆ ವಿತರಣೆ ಮಾಡುತ್ತಾರೆ, ಪ್ರತಿ ಪಡಿತರ ಚೀಟಿದಾರರಿಂದ 50/- ರೂ ಯಂತೆ ಪ್ರತಿ ತಿಂಗಳು ಪಡೆಯುತ್ತಾರೆ ಎಂದು ಈ ರೀತಿ ಪಂಚನಾಮೆ ಮಾಡಿ ವರದಿ ಹಾಜರು ಪಡಿಸಿರುತ್ತಾರೆ, ಸದರಿ ವಿಷಯದ ಬಗ್ಗೆ ಪ್ರಾಥಮಿಕ ವಿಚಾರಣೆ ಕೈಗೊಂಡಡಿದ್ದು ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92 ನೇದ್ದರ ವರ್ತಕರಾದ ಮಲ್ಲಯ್ಯ ಸ್ವಾಮಿ ಕೊರಳ್ಳಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 93 ನೇದ್ದರ ವರ್ತಕರಾದ ಬಸವರಾಜ ಮೋಸಲಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 94 ನೇದ್ದರ ವರ್ತಕರಾದಶಿವಾನಂದ ಗೊಬ್ಬುರ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 95 ನೇದ್ದರ ವರ್ತಕರಾದ ಕಾರ್ಯದರ್ಶಿ ಜೈ ಭೀಮ ನವ ತರುಣ ಸಂಘದ ಮುಖ್ಯಸ್ಥನಾದ ಪಂಚಪ್ಪ ಇವರೆಲ್ಲರೂ, ಮಾರ್ಚ ತಿಂಗಳಲ್ಲಿ ಮಂಜೂರಾದ ಪಡಿತರ ಆಹಾರ ಧಾನ್ಯವನ್ನು ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡದೆ ಈ ಮೇಲಿನ ಎಲ್ಲರೂ ಕೂಡಿಕೊಂಡು ಜಂಟಿಯಾಗಿ, ಪಡಿತರ ಚೀಟಿದಾರರಿಗೆ ಹಂಚಬೇಕಾದ ಈ ಮೇಲಿನ ಆಹಾರ ಧಾನ್ಯವನ್ನು ಅಫಜಲಪೂರ ಗೋದಾಮು ಮ್ಯಾನೇಜರ ಆದ ಎಸ್.ಬಿ.ಬಿರಾದಾರ ಇವರ ಸಹಾಯದಿಂದ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ, ಅಂತಾ ಶ್ರೀ ದಯಾನಂದ ಪಾಟೀಲ ತಾಲೂಕಾ ತಹಸಿಲ್ದಾರರು ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದರಿಯವರು ಇಲಾಖೆಗೂ ಹಾಗೂ ಸರ್ಕಾರಕ್ಕು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ, ಕಾರಣ ಸದರಿ ಈ ಮೇಲೆ ತಿಳಿಸಿದವರ ಮೇಲೆ ಕಾನೂನು ಕ್ರಮ ಜರೂಗಿಸಲು ತಿಳಿಸಲಾಗಿದೆ,
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ ಚಿತ್ರಲೇಖಾ ಗಂಡ ತುಳಜಾರಾಮ ಸೂರ್ಯವಂಶಿ ಸಾ: ಯಶ್ವಂತ ನಗರ ಕಲಬುರಗಿ ಇವರ  ಗಂಡನಾದ ಶ್ರೀ ತುಳಜಾರಾಮ ಇವರು ಅಸ್ಸಾಂ ರಾಜ್ಯದಲ್ಲಿ ಸಿ.ಆರ್.ಪಿ.ಎಫ್. ಕಾನ್ಟೇಬಲ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ದಿನಾಂಕ:21.03.2016 ರಂದು 02:00 ಎಎಮ್ ಸುಮಾರಿಗೆ ನಾನು ನನ್ನ ಎರಡು ಚಿಕ್ಕ ಮಕ್ಕಳಾದ ಶುಭಂ ಮತ್ತು ವಿರಾಟ ಇವರೊಂದಿಗೆ ಯಶ್ವಂತ ಕಾಲೋನಿಯಲ್ಲಿರುವ ನಮ್ಮ ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆ 05:30 ಗಂಟೆ ಸುಮಾರಿಗೆ ನಾನು ಎದ್ದು ನೋಡಲು ನಮ್ಮ ಮನೆಯ ಮುಖ್ಯ ದ್ವಾರದ  ಕೊಂಡಿಯನ್ನು ಯಾರೋ ಕಳ್ಳರು ಮುರದಿದ್ದು, ನಾನು ಗಾಬರಿಯಾಗಿ ಬೆಡ್ ರೂಮ ಒಳಗಡೆ ಹೋಗಿ ನೋಡಲು ಅಲ್ಮಾರಾದಲ್ಲಿದ್ದ ಎಲ್ಲಾ ಸಾಮಾನುಗಳು ಎಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲ್ಮಾರಿ ಲಾಕರನಲ್ಲಿ ಇಟ್ಟಿದ್ದ 1) ನಗದು ಹಣ ರೂ. 20,000/- ಗಳು 2) 45 ಗ್ರಾಮನ ಎರಡು ಬಂಗಾರದ ಪಾಟಲಿಗಳು ಅ.ಕಿ. 1,12,000/- ಮತ್ತು 3) 5 ಗ್ರಾಂ ನ 3 ಬಂಗಾರದ ಉಂಗರುಗಳು ಅ.ಕಿ. 40,000/- ಹೀಗೆ ಎಲ್ಲಾ ಸೇರಿ ಒಟ್ಟು ರೂ. 1,72,000/- ಕಿಮ್ಮತ್ತಿನ ನಗದು ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ:21.03.2016 ರಂದು 02:00 ಎಎಮ್ ದಿಂದ 05:30 ಎಎಮ್ ಅವಧಿಯಲ್ಲಿ ನಮ್ಮ ಮನೆಯ ಒಳಗಡೆ ಅಕ್ರಮವಾಗಿ ಪ್ರವೇಶಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.