POLICE BHAVAN KALABURAGI

POLICE BHAVAN KALABURAGI

26 September 2013

ಅಪಘಾತ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ಹರೀ ತಂದೆ ಠಾಕೂರ ಚವ್ಹಾಣ   ಸಾ:ಬಿಜಲಿಗುಂಡ ತಾಂಡ ಮಟಗೀ ರೋಡ ಆಳಂದ ಇವರು  ದಿನಾಂಕ:25/09/2013 ರಂದು ನಾಗು ಯಲಬಾರವರ ಕಡೆಯಿಂದ ಕಬ್ಬು ಕಡೆಯುವ ಲೇಬರ್ ಪೆಮೇಟ್ ಅಡವಾನ್ಸ್ ಹಣ ತಗೆದಿಕೊಂಡು ಮನೆಗೆ ಬರುವಾಗ ದರ್ಗಾಶಿರೂರ-ಅಲ್ಲಾಪೂರ ರಸ್ತೆಯ ಮಧ್ಯದಲ್ಲಿ ಸೈಬಣ್ಣಾ ಭಜಂತ್ರಿರವರ ಹೊಲದ ಹತ್ತಿರ ಕರವಿಂಗ್ ರಸ್ತೆಯಲ್ಲಿ ಮದ್ಯಾಹ್ನ 02:30 ಗಂಟೆಯ ಸುಮಾರಿಗೆ ನನ್ನ ಅಳಿಯ ಸುಭಾಷ ತಂದೆ ಅಂಬಾದಾಸ ರಾಠೊಡ ಇತನು ತನ್ನ ಮೋಟರ್ ಸೈಕಲ್ ನಂ: ಕೆ.ಎ: 32 ವಿ: 5651 ನೇದ್ದರ ಮೇಲೆ ರಸ್ತೆಯಲ್ಲಿ ಬರುವಾಗ ಹಿಂದಿನಿಂದ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಅಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ನನ್ನ ಅಳಿಯನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದರಿಂದ ನನ್ನ ಅಳಿಯನು ಮೋಟರ್ ಸೈಕಲ್ ಮೇಲಿಂದ ಬಿದ್ದು ಬಾಯಿಂದ,ಮೂಗಿನಿಂದ ರಕ್ತಬಂದು ಹಾಗೂ ತೊರಡಿಗೆ ಬಾರಿ ರಕ್ತಗಾಯವಾಗಿ ಅಲ್ಲಲ್ಲಿ ಮೈಮೇಲೆ ಕಾಲಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಗಂಡ ಸುರೇಶ ಅನ್ನದವರ ಜಾ: ಹರಿಜನ ಸಾ: ಕೂಟನೂರ ರವರು  ದಿನಾಂಕ: 24-09-2013 ರಂದು ರಾತ್ರಿ 08.30 ಪಿ ಎಮ್ ದ ಸುಮಾರಿಗೆ ನನ್ನ ಅಣ್ಣ ಬಾಬು ಇವನು ನನ್ನ ಮನೆಯ ಮುಂದೆ ತನ್ನ ಹೆಂಡತಿಗೆ ಬೈಯುತ್ತಿದ್ದ, ಆಗ ಅವನು ಬೈಯುವದನ್ನು ನೋಡಿ ನಮ್ಮೂರ ಮಲ್ಲಪ್ಪ ತಂದೆ ಭೀಮರಾಯ ತಳವಾರ, ಬಸಮ್ಮ ಗಂಡ ಭೀಮರಾಯ ತಳವಾರ, ಶಾಂತಬಾಯಿ ಗಂಡ ಮಲ್ಲಪ್ಪ ತಳವಾರ ಇವರು ಬಂದು ವೀನಾ ಕಾರಣ ನನಗೆ ಏ ರಂಡಿ ನಿನ್ನ ಅಣ್ಣ ಬಾಬುಗೆ ಹೇಳಲಿಕ್ಕೆ ಬರುವದಿಲ್ಲಾ. ರಸ್ತೆಯಲ್ಲಿ ನಿಂತು ಬೈಯುತ್ತಾನೆ ಅಂದವರೆ ಶಾಂತಾಬಾಯಿ ಇವಳು ನನಗೆ ಕೈಯಿಂದ ಬೆನ್ನ ಮೇಲೆ ಹೊಡೆದಳು. ಆಗ ಮಲ್ಲಪ್ಪ ತಳವಾರ, ಬಸಮ್ಮ ತಳವಾರ ಇವರು ಹೊಡಿ ಜಾತಿ ನಿಂದನೆ ಮಾಡಿ ಜಾತಿ ಎತ್ತಿ ಬೈದಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 24-09-13 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಬಸ್ಸು ಮತ್ತು  ಆತನ ಗೆಳೆಯರು ಉಟಕ್ಕೆಂದು ಸಂತೋಷ ದಾಬಾಕ್ಕೆ ಬಂದಿದ್ದು ಚಿಕನ ಆರ್ಡರ ಮಾಡಿದ್ದು ಬಸ್ಸು ಚಿಕನ ಸರಿಯಾಗಿ ಮಾಡಿಲ್ಲಾ ಭೋಸಡಿ ಮಗನೇ ಎಂದು ಬೈಯ್ಯುತ್ತಿದ್ದಾಗ  ಶ್ರೀ ಅಂಬಾರಾಯ ತಂದೆ ನರಸಿಂಗರಾವ ಮಾನೆ ಸಾ: ಚನ್ನವೀರ ನಗರ ಗುಲಬರ್ಗಾ ರವರು   ಕೇಳಿ ಆರೋಪಿತನ ಹತ್ತಿರ ಹೋಗಿ ಯಾಕೇ ಬೈಯ್ಯುತ್ತಿದ್ದಿ ಎಂದು ಕೇಳಿದ್ದಕ್ಕೆ ಅವಾಚ್ಯ ಬೈದು ಫಿರ್ಯಾದಿ ತಲೆ ಮೇಲೆ ಬಾಟಲಿಯಿಂದ ಹೊಡೆದು ರಕ್ತಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.