POLICE BHAVAN KALABURAGI

POLICE BHAVAN KALABURAGI

05 July 2013

GULBARGA DISTRICT REPORTED CRIMES

ಎತ್ತುಗಳು ಕಳ್ಳತನ ಪ್ರಕರಣ:
ನೆಲೋಗಿ  ಪೊಲೀಸ್ ಠಾಣೆ: ಬಿಲ್ಲಾಡ ಗ್ರಾಮದ ಶ್ರೀ ಮಲ್ಲೇಶಪ್ಪ ತಂದೆ ಸಿದ್ರಾಮಪ್ಪ ಪಾಟೀಲ ರವರು ನಮ್ಮ ಹೊಲ ಸರ್ವೆ ನಂ 23 ರಲ್ಲಿ ದಿನಾಂಕ:01/07/2013 ರಂದು  ಎರಡು ಬಿಳಿಯ ಬಣ್ಣದ ಎತ್ತುಗಳು ಇದ್ದು ಯಾರೋ ಕಳ್ಳರು ರಾತ್ರಿಯ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನಮ್ಮ ಆಳು ಮಗನಾದ ಶ್ರೀ ಪದ್ಮಣ್ಣ ಪೂಜಾರಿ ಸಾ:ಬಂದೇನಮಡವ ಹಾ:ವ:ಬಿಲ್ಲಾಡ ಇತನು ತಿಳಿಸಿದನು. ನಮ್ಮ ಆಳು ಮಗ ಹೊಲದಲ್ಲಿ ಮಲಗಿಕೊಂಡಿದ್ದಾಗ ಜೋಡಿ ಎತ್ತುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:102/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶರಣಪ್ಪ ತಂದೆ ಮಾರುತಿ ಕಟ್ಟಿಮನಿ ಸಾ: ಹಳ್ಳಿಖೇಡ  (ಕೆ) ತಾ: ಹುಮನಾಬಾದ ಜಿ: ಬೀದರ ರವರು ದಿನಾಂಕ:04/07/2013 ರಂದು ಮುಂಜಾನೆ ನಾನು ಮತ್ತು ಸುರೇಶ ತಂದೆ ದೇವಿಂದ್ರಪ್ಪ ತಡೋಳಕರ ಸಾ: ಕಲ್ಲೂರ ಇಬ್ಬರೂ ಕೂಡಿಕೊಂಡು ಟಾಟಾ ಎಸಿಇ ವಾಹನ ನಂಬರ ಕೆಎ 39/7694 ನೇದ್ದನ್ನು ತೆಗೆದುಕೊಂಡು ಹುಮನಾಬಾದಕ್ಕೆ ಆಲಗೂಡ ಕ್ರಾಸ ಹತ್ತಿರ ಹೋಗುತ್ತಿರುವಾಗ ಎಸಿಇ ವಾಹನ ಚಾಲಕ ತನ್ನ  ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿ ಮುಂದೆ ಹೊರಟ ರೋಡ ರೂಲರಗೆ ಡಿಕ್ಕಿ ಪಡೆಯಿಸಿದ್ದರಿಂದ ವಾಹನದಲ್ಲಿದ್ದ ನನಗೆ ಆತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ರೋಡ ರೂಲರ ಚಾಲಕನು ತನ್ನ ವಾಹನವನ್ನು ರಸ್ತೆಯ ಮೇಲೆ ಸಂಚಾರಕ್ಕೆ ಅಡ ತಡೆಯಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗುತ್ತಾ ಯಾವುದೇ ಮುನ್ಸೂಚನೆಯನ್ನು ನೀಡದ ಒಮ್ಮೇಲೆ ತನ್ನ ವಾಹವನ್ನು ನಿಲ್ಲಿಸಿದ್ದರಿಂದ ಟಾಟಾ ಎಸಿಇ ವಾಹನದ ಚಾಲಕ ಹಿಂದೆ ಡಿಕ್ಕಿ ಹೊಡೆದಿದ್ದರಿಂದ ಗಾಯಗಳಾಗಿರುತ್ತವೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:333/13 ಕಲಂ 279,338,283 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿರುತ್ತಾರೆ.