POLICE BHAVAN KALABURAGI

POLICE BHAVAN KALABURAGI

22 February 2014

Gulbarga Dist Reported Crimes

        ಪತ್ರಿಕಾ ಪ್ರಕಟಣೆ
''ಲಿಂಗ ಸಂವೇದನಾ ಶೀಲತೆ'' ಕಾರ್ಯಾಗಾರ ಪೊಲೀಸ್ ಭವನ ಗುಲಬರ್ಗಾ 

ದಿನಾಂಕ 19/02/2014 ರಂದು ಗುಲಬರ್ಗಾ ಪೊಲೀಸ್ ಭವನದ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪೊಲೀಸ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ''ಲಿಂಗ ಸಂವೇದನಾ ಶೀಲತೆ'' ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರವನ್ನು  ಗುಲಬರ್ಗಾ ಜಿಲ್ಲಾ ವರಿಷ್ಠ ಅಧಿಕಾರಿ ಶ್ರೀ ಅಮಿತ ಸಿಂಗ್ ಐ.ಪಿ.ಎಸ್. ರವರು ಉದ್ಘಾಟಿಸಿದರು. ಈ ಕಾರ್ಯಾಗಾರವನ್ನು ನಡೆಸಲು ಬೆಂಗಳೂರಿನಿಂದ ಪ್ರೋಜೇಕ್ಟ ಟೀಮಿನ ಮುಖ್ಯಸ್ಥರಾದ ಶ್ರೀ ಗುರುರಾಜ.ಕೆ. ರವರು, ಅವರ ಇನ್ನೂ ನಾಲ್ಕು ಜನ ಪರಿಣಿತ ತಂಡದೊಂದಿಗೆ ಆಗಮಿಸಿ,ಹೆಣ್ಣು ಗಂಡುಗಳ ಭೇದಗಳ ಪರಿಣಾಮಗಳು ಹಾಗೂ ಸಮಾಜ ನೀಡುತ್ತಿರುವ ಸ್ಥಾನ ಮಾನಗಳ ಬಗ್ಗೆ ಹಾಗೂ ಶೋಷಣೆಗೆ ಒಳಗಾದ ಹಾಗೂ ವಿವಿಧ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದ ಹೆಣ್ಣುಮಕ್ಕಳ, ಹಾಗೂ ಮಕ್ಕಳಿಗೆ ಕಾನೂನಿನ ಅನ್ವಯ ಪರಿಹಾರ, ರಕ್ಷಣೆ, ಮತ್ತು ಆಪಾದಿತರಿಗೆ ಕಾನೂನು ಕ್ರಮಗಳ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿ,ಗಂಡಹೆಂಡರಲ್ಲಿ ಉಂಟಾದ ಜಗಳಗಳ ಪರಿಹಾರ ಕುರಿತು ಕೊರ್ಟ, ಸಂಘ ಸಂಸ್ಥೆಗಳ, ಮೋರೆ ಹೋಗುವ ಬಗ್ಗೆ ವಿವರಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸೂಚಿಸಿ, ಸಾರ್ವಜನಿಕರಿಗೆ ತಿಳುವಳಿಕೆ ನೀಡುವಂತೆ  ಕಾರ್ಯಾಗಾರದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ ಐಪಿಸಿ ಕಾನೂನುಗಳಲ್ಲಿ ಬದಲಾವಣೆಗೊಂಡ ಕಲಂಗಳ ಬಗ್ಗೆ ಮಾಹಿತಿ ನೀಡಿ ಮುಂಬರುವ ದಿನಗಳಲ್ಲಿ ಬದಲಾವಣೆಗೊಂಡ ಕಾನೂನುಗಳ ಅಡಿಯಲ್ಲಿ ಪರಿಣಾಮಕಾರಿ ಕ್ರಮ ಜರುಗಿಸಲು ಸೂಚಿಸಿದರು. ಈ ಕಾಯರ್ಾಗಾರ  ದಿನಾಂಕ 19/02/2014 ರಿಂದ 21/02/2014 ರ ವರೆಗೆ ಯಶಸ್ವಿಯಾಗಿ ನಡೆಸಿ ಮುಕ್ತಾಯಗೊಳಿಸಲಾಯಿತು.      
ಅಫಘಾತ ಪ್ರಕರಣಗಳು
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ:    ದಿನಾಂಕ 21-02-2014 ರಂದು ಬೆಳಿಗ್ಗೆ ಶ್ರೀ ಶಿವಕುಮಾರ ತಂದೆ ಹಣಮಂತ ಮುಗಳಿ ಸಾ: ಸಾಯಿ ಮಂದಿರ ಹತ್ತಿರ   ಗುಲಬರ್ಗಾ  ಮತ್ತು ನಮ್ಮ ಬಡಾವಣೆಯ ಸುರ್ಯಕಾಂತ ಇಬ್ಬರೊ ಬಂಜಾರ ಕ್ರಾಸ ಸಮೀಪವಿರುವ ಜವಾಹರ ಖಾಸಗಿ ಕಾಲೇಜಕ್ಕೆ ಮೋಟಾರ ಸೈಕಲ ನಂಬರ ಕೆಎ-32 ವಾಯಿ-1976ನೇದ್ದರ ಮೇಲೆ ರಾಮಮಂದಿರ ಕ್ರಾಸ ಮುಖಾಂತರವಾಗಿ ಹೋಗುವಾಗ ಭಾಗ್ಯವಂತಿ ನಗರ ಕ್ರಾಸ ಹತ್ತಿರ ಹಿಂದಿನಿಂದ ಬರುತ್ತಿದ್ದ ಟಿಪ್ಪರ ನಂಬರ ಎಮ್.ಹೆಚ್-12 ಡಿಜೆ-5845 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಮೇಲೆ ಮತ್ತು ನನ್ನ ಮೋಟಾರ ಸೈಕಲ ಮೇಲೆ ಟಿಪ್ಪರ ಚಲಾಯಿಸಿ ಭಾರಿಗಾಯಗೊಳಿಸಿ ಟಿಪ್ಪರ ಸ್ಥಳದಲ್ಲಿ ಬಿಟ್ಟು ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜಾಟ ಪ್ರಕರಣಗಳು:
ಫರಹತಾಬಾದ ಪೊಲೀಸ್ ಠಾಣೆ :ದಿನಾಂಕ: 21-2-2014 ರಂದು ಫೀರೋಜಾಬಾದ  ಗ್ರಾಮದ ರಾಮಲಿಂಗೇಶ್ವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದೈವಲಿಲೆಯ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಶ್ರೀ ಜಾಲಿಂದರ ಸಿಹೆಚ್‌‌ಸಿ 195 ಫರಹತಾಬಾದ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿ ಮತ್ತು ಇಬ್ಬರು ಪಂಚರನ್ನು ಕರೆಯಿಸಿ ಫೀರೋಜಾಬಾದ ಗ್ರಾಮದ ರಾಮಲಿಂಗೇಶ್ವರ ಗುಡಿಯ ಮುಂದಿನ ಕಟ್ಟೆಯ ಮೇಲೆ ಒಬ್ಬ ಮನುಷ್ಯನು ಕುಳಿತು ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಮಟಕಾ ಅಂಕಿಗಳನ್ನು ಬರೆದು ಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ವೀರಣ್ಣಾ ತಂದೆ ದೇವಿಂದ್ರಪ್ಪಾ ಮಾಮನಿ ಸಾ: ಫೀರೋಜಾಬಾದ  ಅಂತಾ ತಿಳಿಸಿದ್ದು, ಆತನಿಗೆ ಚೆಕ್ಕ ಮಾಡಿದಾಗ ಆತನ ಹತ್ತಿರ 1) ಒಂದು ಮಟಕಾ ಚೀಟಿ, 2) ಒಂದು ಬಾಲ್‌ ಪೆನ್‌ 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 1760/- 4) ಒಂದು ಮೊಬೈಯಲ್ ಫೊನ್ ವಶಪಡಿಸಿಕೊಂಡು ಸದರಿಯವನ ಮೇಲೆ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಫಜಲಪೂರ ಪೊಲೀಸ್ ಠಾಣೆ :ದಿನಾಂಕ 22-02-2014 ರಂದು ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಶ್ರೀನಿವಾಸ ರೂಗಿ ಎ.ಎಸ್.ಐ ಅಫಜಲಪೂರ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪ್ರಕಾಶ ತಂದೆ ರೇವಪ್ಪ ಕಂಬಾರ ಸಾ: ಅಫಜಲಪೂರ ಎಂದು ತಿಳಿಸಿದ್ದು, ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2100/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶ ಪಡಿಸಿಕೊಂಡು ಆತನ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸುಲಿಗೆಕೋರರ ಬಂಧನ: 

ವಾಡಿ ಪೊಲೀಸ್ ಠಾಣೆ: ದಿನಾಂಕ 03-02-2014 ರಂದು ಶ್ರೀ ಮಹ್ಮದ ಇಸ್ಮಾಯಿಲ್ ತಂದೆ ಹಸನಸಾಬ ಹೊಸೂರ ಇವರು ಎಸ್.ಬಿ.ಎಹಚ್ ಬ್ಯಾಂಕ ವಾಡಿಯಿಂದ 6,50000/- ರೂ ಡ್ರಾಮಾಡಿಕೊಂಡು ಗುಲಬರ್ಗಾಕ್ಕೆ ಹೋಗುವಾಗ ಯಾರೋ ಇಬ್ಬರು ಆಪರಿಚಿತರು ಮೋಟರ್ ಸೈಕಲ ಮೇಲೆ ಬಂದು 6,50,000/- ರೂಪಾಯಿ ಇರುವ ಹಣದ ಬ್ಯಾಗನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿದ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು . ದಿನಾಂಕ 03-02-2014 ರಂದು 6,50,000/- ರೂ ಸುಲಿಗೆಯಾದ ನಂತರ ಫಿರ್ಯಾದಿ ಮತ್ತು ಸಾರ್ವಜನಿಕರ ಮಾಹಿತಿ ಅನುಸರಿಸಿ ಆರೋಪಿಗಳ ಚಹರೆ ಅವರ ಧರಿಸಿದ ಬಟ್ಟೆಗಳು ಬೈಕಿನ ನಂ ಎಮ್.ಎಚ್-24 ಸುಳಿವಿನ ಮೇಲೆ ಶಹಾಬಾದ ಡಿವೈಎಸಪಿ ರವರು 3 ತಂಡಗಳನ್ನು ರಚಿಸಿ  ಯಾದಗೀರಿ, ಗುಲಬರ್ಗಾ, ಚಿತ್ತಾಪೂರ, ಸೇಡಂ, ತಾಂಡೂರ ಕಡೆಗೆ ತಕ್ಷಣ ಆರೋಪಿಗಳನ್ನು ಹಿಡಿಯಲು ಜಾಲ ಬಿಸಿ ಗುಲಬರ್ಗಾಧ ಸ್ಟೇಷನ ರಸ್ತೆಯಲ್ಲಿ ಸಿ.ಪಿ.ಐ ಚಿತ್ತಾಪೂರ , ಪಿ,ಎಸ್,ಐ ವಾಡಿ ಮತ್ತು ಸಿಬ್ಬಂದಿ ದಾಳಿಮಾಡಿ ಆರೋಪಿತರಾದ 1) ಬಾಬು @ ಗೂಗಲ್ ಬಾಬು ತಂ. ಮೋರಿಷ್ ಸಾ: ಕಪರಾಳ ತಿಪ್ಪ ಗ್ರಾಮ ಜಿ: ನೆಲ್ಲೂರ 2) ವಿಕ್ಟರ್ ತಂ. ರಾಮ ಬಾಬು ಸಾ: ಕಪರಾಳ ತಿಪ್ಪ ಗ್ರಾಮ ಜಿ: ನೆಲ್ಲೂರ  ಇವರನ್ನು ದಸ್ತಗೀರ ಮಾಡಿದ್ದು  ಅವರಿಂದ ರೂ  6,42,000/-ರೂ ನಗದು ಹಣ ಮತ್ತು ಬೈಕನ್ನು  ವಶಕ್ಕೆ ಪಡಿಸಿಕೊಂಡಿದ್ದು ವಿಚಾರಣೆ ನಂತರ ಸದರಿಯವರು ಈ ಹಿಂದೆ ಸಹ ಅನೇಕ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಒಪ್ಪಿಕೊಂಡಿದ್ದು .
        ಕಪ್ಪರಾಳ ತಿಪ್ಪಾ ಗ್ಯಾಂಗ್ ಎನ್ನುವ ಹೆಸರಿನಲ್ಲಿ ಬಹಳಷ್ಟು ಬ್ಯಾಂಕುಗಳ ಹತ್ತಿರ ಹಳ್ಳಿಯ ಮುಗ್ದ ಜನರ ಹಣವನ್ನು ದೋಚಿದ ಪ್ರಕರಣಗಳನ್ನು ಈ ಪ್ರಕರಣದಿಂದ ಬೇದಿಸಿದಂತಾಗಿದೆ. ಇದರಿಂದ ಪೊಲೀಸರಿಗೂ ತೆಲೆನೋವಾಗಿ ಪರಿಣಮಿಸಿದ್ದ ಈ ಹೊರ ರಾಜ್ಯದ ಗ್ಯಾಂಗನ್ನು ಹಿಡಿಯುವವಲ್ಲಿ ವಾಡಿ ಠಾಣೆಯ ಅಧೀಕಾರಿ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.ಹಿರಿಯ ಅಧಿಕಾಗಳು ವಾಡಿ ಪೊಲೀಸರ ಕಾರ್ಯವನ್ನು  ಶ್ಲಾಘೀಸಿ ಪ್ರಶಂಸೆ ಮಾಡಿರುತ್ತಾರೆ. ಮತ್ತು ಸಾರ್ವಜನಿಕರು ಸಹ ಈ ಒಳ್ಳೆಯ ಕಾರ್ಯವನ್ನು ಶ್ಲಾಘೀಸಿ ಕೃತಜ್ಞತೆ ಹೇಳಿರುತ್ತಾರೆ.
ಹಲ್ಲೆ ಪ್ರಕರಣಗಳು:
ಅಫಜಲಪೂರ ಪೊಲೀಸ್ ಠಾಣೆ :ದಿನಾಂಕ 21-02-2014 ರಂದು ಶ್ರೀ ಮಲ್ಲಪ್ಪ ತಂ. ಮಾಳಪ್ಪ ಸಾ: ಗೌರ (ಕೆ) ಮತ್ತು ಅವರ ಹೆಂಡತಿ ಶರಣಮ್ಮ ಹಾಗು ಅಣ್ಣನ ಹೆಂಡತಿ ಕವಿತಾಬಾಯಿ ಗಂಡ ಭೀಮಣ್ಣ ಹೊಸಮನಿ ಎಲ್ಲರು ತಮ್ಮ ಹೊಲದಲ್ಲಿನ ಮನೆಯ ಮುಂದೆ ಮಾತಾಡುತ್ತಾ ಕುಳತಿದ್ದೇವು. ಅದೇ ಸಮಯಕ್ಕೆ ರಮೇಶ ರೂಗಿ ಮತ್ತು ಅವರೊಂದಿಗೆ ಇನ್ನು ಇಬ್ಬರು ಕೂಡಿ ನಮ್ಮ ಹತ್ತಿರ ಬಂದು ರಮೇಶನು ವಿನಾ: ಕಾರಣ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಬಡಿಗೆ ತೆಗೆದುಕೊಂಡು ನನಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ರಮೇಶನೊಂದಿಗೆ ಬಂದಿದ್ದ ಇಬ್ಬರು ಸಹ ನನಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ  
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ|| 20/02/14 ರಂದು ಶ್ರೀ ಶಿವರಾಜ ತಂದೆ ಗೋಪಾಲರಾವ ಗದಲೆಗಾಂವ ಸಾ|| ಆರ್.ಎಸ್. ಕಾಲೋನಿ, ಟಿ.ವಿ. ಸ್ಟೇಶನ ಹತ್ತಿರ , ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಇಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ಕಲ್ಯಾಣ ಮಂಟಪದ ಪಕ್ಕದಲ್ಲಿ ಒಬ್ಬ ಅಪರಿಚಿತ ಮನುಷ್ಯ ಮೃತಪಟ್ಟಿರುತ್ತಾನೆ ಅಂತಾ ಅಂದಾಡುವುದು ಕೇಳಿ ಹೋಗಿ ನೋಡಲು ಕಲ್ಯಾಣ ಮಂಟಪದ ಪಕ್ಕದಲ್ಲಿ 40-45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತ ಪಟ್ಟಿದ್ದು ಈತನು ಬಿಕ್ಷೆ ಬೇಡುತ್ತ ಬಂದು ಕಲ್ಯಾಣ ಮಂಟಪದ ಪಕ್ಕದಲ್ಲಿ ಕುಳಿತಾಗ ಯಾವುದೆ ಒಂದೊ ಕಾಯಿಲೆಯಿಂದ ಸ್ಥಳದಲ್ಲಿಯೇ ಅಕಸ್ಮಿಕವಾಗಿ ಅಪರಿಚಿತ ವ್ಯಕ್ತಿ ಮೃತ ಪಟ್ಟಿರುವಂತೆ ಕಂಡು ಬರುತ್ತದೆ ಕಾರಣ  ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ್ದು.
ಮೃತ ಅಪರಿಚಿತ ವ್ಯಕ್ತಿಯ ಚಹರಾ ಪಟ್ಟಿ ಈ ಕೆಳಗಿನಂತಿರುತ್ತದೆ.
 ವಯಸ್ಸುಅಂದಾಜು 40 ರಿಂದ 45 ವರ್ಷ, ಎತ್ತರ-  5.5 ಫೀಟ್ , ಕಪ್ಪು ಮಿಸ್ರಿತ ಬಿಳಿ ಕೂದಲು, ಸಾದಾಕೆಂಪು ಗೋದಿ ಬಣ್ಣ, ದುಂಡು  ಮುಖ, ಸಾದಾರಣ ಮೈಕಟ್ಟು ಹೊಂದಿದ್ದು ಮೈಮೇಲೆ ಶರ್ಟ & ಪ್ಯಾಂಟು ಧರಿಸಿದ್ದು.  ಸದರಿ ಅಪರಿಒಚಿತ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಗುಲಬರ್ಗಾ ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ತಿಳಿಸಲು ಕೋರಲಾಗಿದೆ.