POLICE BHAVAN KALABURAGI

POLICE BHAVAN KALABURAGI

26 February 2013

GULBARGA DISTRICT


ಅಪ್ರಾಪ್ತ ವಯಸ್ಸಿನ ಹುಡಗರಿಂದ ಹಣ ಮತ್ತು ಮೊಬಾಯಿಲ್ ದರೋಡೆ:
ಅಶೋಕ ನಗರ ಪೊಲೀಸ ಠಾಣೆ:ದಿನಾಂಕ:26/11/2012 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಗೋದುತಾಯಿ ನಗರದ ರೈಲ್ವೆ ಹಳೆಯ ಹತ್ತಿರ ಶ್ರೀ ಚೇತನ ತಂದೆ ಗುಂಡಪ್ಪ ಕೊಟಗಿ ಮತ್ತು ಶಫೀಮುಲ್ಲಾ ಇಬ್ಬರು ವಿದ್ಯಾರ್ಥಿಗಳು ನಿಸರ್ಗಾ ಕಾಲೇಜದಲ್ಲಿ ಟಿವಿಶನ್ ಮುಗಿಸಿಕೊಂಡು ರೈಲ್ವೆ ಹಳೆಯ ದಾಟಿ ಬರುತ್ತಿರುವಾಗ ಇಬ್ಬರು ಅಪರಿಚಿತ ಹುಡುಗರು ಬಂದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಂಭೀರ ಸ್ವರೂಪದ ಗಾಯಗೊಳಿಸಿ ಮೊಬೈಲ ಮತ್ತು ಹಣ ಕಸಿಕುಕೊಂಡು ಹೋಗಿರುತ್ತಾರೆ ಅಂತಾ ಚೇತನ ತಂದೆ ಗುಂಡಪ್ಪ ಕೊಟಗಿ ಸಾ||ಗೋದುತಾಯಿ ನಗರ ಗುಲಬರ್ಗಾ ರವರು ದೂರು ನೀಡಿದ್ದರಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 107/2012 ಕಲಂ 397 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಕೊಂಡ  ಶ್ರೀ ಟಿ.ಹೆಚ್. ಕರೀಕಲ್ ಪಿ.ಐ ಅಶೋಕ ನಗರ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರಾದ ಸುರೇಶ, ರಫೀಕ, ಬಸವರಾಜ, ಉಮ್ಮಣ್ಣ ಪಿ.ಸಿ ರವರು ವೈಜ್ಞಾನಿಕ ತಂತ್ರಾಂಶದಿಂದ ಹಣ ಮತ್ತು ಮೊಬೈಲ ಕಸಿದುಕೊಂಡು ಹೋಗಿದ್ದ ಅಪ್ರಾಪ್ತ ವಯಸ್ಸಿನ ಆಪಾಧಿತರಾದ ಸಮೀರ ತಂದೆ ಸೈಯದ ಮಹೆಬೂಬ ಸಾ|| ವಿದ್ಯಾನಗರ ಗುಲಬರ್ಗಾ, ಶಫೀ @ ಮಹ್ಮದ ಶಫೀಯೊದ್ದಿನ್ ತಂದೆ ಮಹ್ಮದ ಇಮ್ತಿಯಾಜ ಸಾ|| ಶಾಂತಿನಗರ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿರುತ್ತಾರೆ. 

GULBARGA DISTRICT REPORTED CRIMES


:: ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ ::
5 ಜನ ದರೋಡೆಕೋರರ ಬಂಧನ. ಬಂಧಿತರಿಂದ ನಗದು ಹಣ 2.41 ಲಕ್ಷ ರೂಪಾಯಿಗಳು, 2 ಮೋಟಾರ ಸೈಕಲ್ ಗಳು  ಹಾಗು ಮಾರಕಾಸ್ತ್ರ ಜಪ್ತಿ.
ಗುಲಬರ್ಗಾ ನಗರದ ಎಂ.ಬಿ.ನಗರ ವೃತ್ತ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯದ ಪೊಲೀಸ ಠಾಣೆ ಸರಹದ್ದಿನ ಭಾಗ್ಯನಗರ ಕ್ರಾಸ್ ಹತ್ತಿರ ಇರುವ ಪೆಟ್ರೋಲ್ ಪಂಪ್ ಮಾಲಿಕರು ದಿನಾಂಕ:23-02-2013 ರಂದು ರಾತ್ರಿ 11-00  ಗಂಟೆಗೆ ವೇಳೆಗೆ ಮನೆಗೆ ಹೋಗುತ್ತಿರುವಾಗ ದರೋಡೆಕೋರರು ಹೊಂಚು ಹಾಕಿ ಪೆಟ್ರೋಲ್ ಪಂಪ್ ಮಾಲಿಕರಿಗೆ ಹೆದರಿಸಿ ಲಾಂಗ್ ಮತ್ತು ಮಚ್ಚುನಿಂದ ತಲೆಗೆ ಇತರೆ ಕಡೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಅವರಿಂದ 2.41 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿರುವ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಹಾಗು ಶ್ರೀ ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ,ಎಸ್.ಅಸ್ಲಾಂಬಾಷ ಪ್ರಭಾರಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ.ನಗರ ಠಾಣೆ, ಗೋಪಾಲ ರಾಠೋಡ ಪಿ.ಎಸ್.ಐ, ಪ್ರದೀಪ.ಎಸ್.ಭಿಸೆ ಪಿ.ಎಸ್.ಐ (ಅ.ವಿ), ತಿಮ್ಮಣ್ಣ ಎಸ್. ಚಾಮನೂರ (ಅ.ವಿ) ಹಾಗು ಸಿಬ್ಬಂದಿಯವರಾದ ವೇದರತ್ನಂ, ವೀರಶೆಟ್ಟಿ, ರವೀಂದ್ರ, ಶ್ರೀನಿವಾಸರೆಡ್ಡಿ, ಸಂಜೀವಕುಮಾರ, ಶಾಮಪ್ರಸಾದ ಕುಲಕರ್ಣಿ,ಪ್ರಭಾಕರ, ಮನೋಹರ, ಅಜರೋದ್ದಿನ, ಶಾಂತಮಲ್ಲಪ್ಪ, ಮಲ್ಲಿನಾಥ, ಯಲ್ಲಪ್ಪಾ, ದೇವಪ್ಪ, ಶ್ರೀಶೈಲ, ಬಸವರಾಜ, ಪ್ರಕಾಶ, ಗುರುಶರಣ,ಶಿವಪ್ಪ ಕಮಾಂಡೋ ಹಾಗು ಅಶೋಕ ರವರ ತಂಡವು ದರೋಡೆಕೋರರಾದ 1) ಸಿದ್ದು @ ಸಿದ್ದಪ್ಪಾ ತಂದೆ ರಾವಪ್ಪಾ  ಆನೂರ ವಯಾ||22, ಜಾತಿಃಲಿಂಗಾಯತ ಉಃ ಶಿವಂ ಸರ್ವಿಸ್ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಸಾ|| ಸರ್ವೋದಯ ನಗರ ಅಂಬೇಡ್ಕರ ಹಾಸ್ಟಲ್ ಹತ್ತಿರ ಶಹಾಬಾದ ರೋಡ್ ಗುಲಬರ್ಗಾ. 2) ಜಗದೀಶ ತಂದೆ ಅಮೃತಪ್ಪ ಪೂಜಾರಿ ವಯಾ|| 20,ಜಾತಿಃ ಕುರುಬ ಉಃಲಕ್ಷ್ಮಿ ವೆಂಕಟೇಶ್ವರ ಐ.ಟಿ.ಐ ಕಾಲೇಜ್ ನಲ್ಲಿ ದ್ವಿತಿಯ ಎಲೆಕ್ಟ್ರೀಷಿಯನರ್ ವಿದ್ಯಾರ್ಥಿ ಸಾಃ ಕೃಷ್ಣಾ ಕಾಲೋನಿ ರಾಣೇಶ ಪೀರ್ ದರ್ಗಾ ಹತ್ತಿರ ಆಳಂದ ರೋಡ್ ಗುಲಬರ್ಗಾ. 3) ಸುಭಾಶ ತಂದೆ ಸಿದ್ದಪ್ಪ ಪೂಜಾರಿ ವಯಾ||25, ಜಾತಿಃ ಕುರುಬ ಉಃ ಚಂದ್ರಕಾಂತ್ ಪಾಟೀಲ ಸ್ಕೂಲ್ ಬಸ್ಸಿನ ಕ್ಲೀನರ್ ಕುಸನೂರ ರೋಡ್ ಸಾಃವಸಂತ ಸ್ಕೂಲ್ ಹತ್ತಿರ ರಾಜಾಪೂರ ಗುಲಬರ್ಗಾ. 4) ಭೀಮ ತಂದೆ ಬಾಬುರಾವ್ ಪೂಜಾರಿ ವಯಾ|| 18 ಉಃ ಸ್ಯಾಮ್ ವಿಜ್ಞಾನ ಕಾಲೇಜಿನ 2 ನೇ ವರ್ಷದ ವಿದ್ಯಾರ್ಥಿ, ಕೆ.ಇ.ಬಿ ಆಫೀಸ್ ಹಿಂದುಗಡೆ ಸಾಃ ಕ್ಯೂನಿಕ್ ಕಂಪ್ಯೂಟರ್ ಅಂಗಡಿ ಹತ್ತಿರ ಬಡೆಪೂರ ಕಾಲೋನಿ ಗುಲಬರ್ಗಾ. ಮತ್ತು 5) ಶಿವಶರಣ ತಂದೆ ವೀರಣ್ಣಾ ಪೊದ್ದಾರ ವಯಾ||18 ಜಾತಿಃ ವಿಶ್ವಕರ್ಮ ಉಃಚಂದ್ರಕಾಂತ್ ಪಾಟೀಲ ಪಿ.ಯು.ಸಿ 2 ನೇ ವರ್ಷದ ವಿಜ್ಞಾನ ವಿದ್ಯಾರ್ಥಿ, ಸೇಡಂ ರೋಡ್ ಸಾಃ ಸರಸ್ವತಿ ವಿದ್ಯಾ ಮಂದಿರ ಸ್ಕೂಲ್ ಹತ್ತಿರ ಪ್ರಶಾಂತ ನಗರ (ಎ) ರಾಜಾಪೂರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು ಈ ದರೋಡೆಕೋರರ ಪೈಕಿ ಸಿದ್ದು @ ಸಿದ್ದಪ್ಪ ಎನ್ನುವವನು ಈ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಾ ಇದ್ದು, ದಿನನಿತ್ಯದ ಪೆಟ್ರೋಲ್ ಪಂಪದಲ್ಲಿ ಸಂಗ್ರಹವಾದ ಹಣವನ್ನು ಮಾಲಿಕರಾದ ಶ್ರೀ ಮೋಹನರೆಡ್ಡಿ ಇವರು ತೆಗೆದುಕೊಂಡು ಹೋಗುವಾಗ ಸಮಯವನ್ನು ಕಾಯುತ್ತಾ ಮೇಲ್ಕಂಡವರನ್ನು ಆಯೋಜಿಸಿಕೊಂಡು ದರೋಡೆಕೊರರ ಗುಂಪನ್ನು ರಚಿಸಿ ದರೋಡೆ ಮಾಡಿರುತ್ತಾರೆ. ಬಂಧಿತ ಆರೋಪಿಗಳಿಂದ ನಗದು ಹಣ 2,41,000/- ರೂಪಾಯಿಗಳು, ಈ ಕೃತ್ಯಕ್ಕೆ ಉಪಯೋಗಿಸಿದ 01 ಮಚ್ಚು ಹಾಗು 02  ಮೋಟಾರ ಸೈಕಲಗಳನ್ನು ಅಃಕಿಃ50,000/- ರೂಪಾಯಿಗಳು ಹೀಗೆ ಒಟ್ಟು 2,91,000/- ರೂಪಾಯಿಗಳನೇದ್ದುವುಗಳು ಜಪ್ತಿಪಡಿಸಿಕೊಳ್ಳಲಾಗಿದೆ.  
       ಐದು (5) ಜನ ದರೋಡೆಕೋರರನ್ನು ಪತ್ತೆ ಹಚ್ಚಿದ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ತಂಡಕ್ಕೆ ಮಾನ್ಯ ಶ್ರೀ ಎನ್. ಸತೀಷಕುಮಾರ  ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.