POLICE BHAVAN KALABURAGI

POLICE BHAVAN KALABURAGI

28 November 2011

GULBARGA DIST REPORTED CRIMES

ಜೂಜಾಟ ಪ್ರಕರಣ:

ಶಹಾಬಾದ ನಗರ ಠಾಣೆ : ಶಹಾಬಾದ ನಗರದ ಅಪ್ಪರ ಮಡ್ಡಿ ರೇಲ್ವೆ ಗೇಟ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಫೀಟ ಜೂಜಾಟ ಆಡುತ್ತಿದ್ಧಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಇನ್ಸಪೇಕ್ಟರ ಶಹಬಾದ ನಗರ ಠಾಣೆರವರು ಮತ್ತು ಠಾಣೆಯ ಸಿಬ್ಬಂದಿಯವರಾದ ಲಕ್ಷ್ಮಣ ಎ.ಎಸ.ಐ , ಗುಂಡಪ್ಪಾ ಸಿಪಿಸಿ, ಯೆಜಿಕಲ್ ಸಿಪಿಸಿ, ಅಮೀರಅಲಿ ಸಿಪಿಸಿ, ಶಿವರಾಜ ಸಿಪಿಸಿ, ನಾಗೇಂದ್ರಪ್ಪಾ ಸಿಪಿಸಿ ರವರು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಂದರ ಬಾಹರ ಜೂಜಾಟದಲ್ಲಿ ನಿರತರಾದ ರಮೇಶ ತಂದೆ ಬಸವರಾಜ ಹೂಗಾರ ಹಾಗೂ ಇನ್ನೂ ಮೂರು ಜನರು ಸಾ:ಎಲ್ಲರೂ ಶಹಾಬಾದ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಒಟ್ಟು 610/-ರೂ ಮತ್ತು 52 ಇಸ್ಟೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ವಾಡಿ ಪೊಲೀಸ ಠಾಣೆ: ದಿನಾಂಕ 27-11-2011 ರಂದು 3 ಗಂಟೆಯ ಸುಮಾರು ಸಿಂಡಿಕೆಟ ಏರಿಯಾದ ನಾರಿಮನ ಶೇಠ ಇವರ ಸಂಬಂಧಪಟ್ಟ ಹಳೆಯ ಕಟ್ಟಡದ ಮುಂದಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ ಬಂದ ಖಚಿತ ಬಾತ್ಮಿ ಮೇರೆಗೆ ಸಿಪಿಐ ಚಿತ್ತಾಪೂರ ವೃತ್ತ ರವರ ನೆತೃತ್ವದಲ್ಲಿ ಪಿಎಸ್ಐ (ಕಾಸು) ರವರು ಸಿಬ್ಬಂದಿಯೊಂದಿಗೆ ಜೂಜಾಟದಲ್ಲಿ ನಿರತರಾದ ಸಂತೋಷ ತಂದೆ ಧರೆಪ್ಪಾ ಬಿರಾದಾರ ಸಾ|| ಗುಲಬರ್ಗಾ ಹಾಗು ಶಿವಲಿಂಗಪ್ಪಾ, ರಾಜು, ಶಿವಶರಣಪ್ಪಾ, ರಮೇಶ, ನಾಗರಾಜ, ಸುನೀಲ, ಶಾನವಾಜ, ಸಿದ್ದಪ್ಪಾ, ಸಲೀಂ ,ಆಫ್ರೊಜ, ಮೋತಿರಾಮ, ರಾಜು, ಖಾಸಿಂ, ಮೆಹಬೂಬ, ಸಿದ್ದರಾಮ, ಅಕ್ತರಪಾಶಾ, ಮಹಮದ ಶರಿಫ ರವರನ್ನು ವಶಕ್ಕೆ ತೆಗೆದುಕೊಂಡು ನಗದು ಹಣ ಒಟ್ಟು 105023 ರೂ ಮತ್ತು 52 ಇಸ್ಪಿಟ ಎಲೆ 2 ಚಾಪೆಗಳು ಮತ್ತು 12 ಮೊಟರ ಸೈಕಲಗಳು ಅ||ಕಿ|| ಒಟ್ಟು 225000 ಬೆಲೆಬಾಳುವ ಮೋಟರ ಸೈಕಲ ಜಪ್ತ ಪಡಿಸಿಕೊಂಡಿರುತ್ತಾರೆ. ಮತ್ತು ಜೂಜಾಟದ ನಡೆಸುತ್ತಿದ್ದ ಮಾಲಿಕ ಖಧಿರ ತಂದೆ ಮಹಮ್ಮದ ಹುಸೇನ ಓಡಿ ಹೊಗಿರುತ್ತಾನೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಂಡಿದ್ದರಿಂದ ಠಾಣೆ ಗುನ್ನೆ ನಂ 223/2011 ಕಲಂ 87 ಕೆ,ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಮಹಿಳೆಯ ಕೊಲೆ:

ದೇವಲಗಾಣಗಾಪೂರ ಠಾಣೆ: ಮಾರುತಿ ತಂದೆ ಭೀಮಶ್ಯಾ ದೇವರಮನಿ ಉ: ಲಾಡ್ಜ ವ್ಯವಹಾರ ಸಾ|| ದೇವಲಗಾಣಗಾಪೂರ ರವರು ನಾನು ಕೆಲಸ ಮಾಡುವ ರಘುನಂದನ ಲಾಡ್ಜದಲ್ಲಿ ನಿನ್ನೆ ದಿನಾಂಕ: 26-11-2011 ರಂದು ರಾತ್ರಿ 9:30 ಗಂಟೆ ಸುಮಾರಿಗೆ ನನ್ನ ಮಗ ಅಶ್ವತ ಇವನು ಲಾಡ್ಜನಲ್ಲಿ ಇದ್ದಾಗ ಒಬ್ಬನು ಸುಮಾರು 20 ರಿಂದ 25 ವರ್ಷದ ಹುಡುಗ ಮತ್ತು ಒಬ್ಬಳು ಹೆಣ್ಣು ಮಗಳೊಂದಿಗೆ ನಮ್ಮ ಲಾಡ್ಜಿಗೆ ಬಂದು ದೇವರ ದರ್ಶನಕ್ಕಾಗಿ ಬಂದಿದ್ದೆವೆ, ನಾನು ನನ್ನ ತಾಯಿ ಬಂದಿದ್ದು ಒಂದು ರೂಮ ಕೊಡಲು ಕೇಳಿದರು, ನಾವು ಅವರಿಗೆ ನಮ್ಮ ಲಾಡ್ಜಿನ 11 ನೇ ನಂ. ರೂಮ ಬಾಡಿಗೆ ಕೊಟ್ಟೆವು. ನಮ್ಮ ಲಾಡ್ಜಿಂಗದ ಎಂಟ್ರಿ ರಜಿಸ್ಟ್ರದಲ್ಲಿ ಅವನು ತನ್ನ ಹೆಸರು, ರಾಜಕುಮಾರ ತಂದೆ ಸಿದ್ದಪ್ಪ ದೇವಿ ಕಾಲೋನಿ ತಾರಪೈಲ್ ಗುಲಬರ್ಗಾ ಅಂತಾ ಬರೆದು ತನ್ನ ಮೊ. ನಂ. 9972082210 ಅಂತಾ ಬರೆದಿರುತ್ತಾನೆ. ಇಬ್ಬರೂ ರೂಮಿನಲ್ಲಿ ಹೋದ ನಂತರ ರಾಜಕುಮಾರನು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ಬಂದಿರುತ್ತಾನೆ. ದಿನಾಂಕ:27-11-2011 ರಂದು ಬೆಳಗಿನ ಜಾವ 02:30 ಗಂಟೆ ಸುಮಾರಿಗೆ ರಾಜಕುಮಾರನು ತಾನು ಇದ್ದ ರೂಮಿನ ಕೊಂಡಿ ಹಾಕಿ ಹೊರಗೆ ಬಂದು ನಮ್ಮ ದೊಸ್ತರು ಇಲ್ಲೆ ಬಸ್ಸ ಸ್ಟ್ಯಾಂಡನಲ್ಲಿ ಬಂದಿದ್ದಾರೆ, ಅವರಿಗೂ ರೂಮ ಬಾಡಿಗೆ ಬೇಕಾಗಿದೆ ಅವರಿಗೆ ಕರೆದುಕೊಂಡು ಬರುತ್ತೇನೆ ಅಂತಾ ಅಂದಾಗ ನಮ್ಮ ಹುಡುಗ ವಿಶಾಲನಿಂದ ಲಾಡ್ಜಿನ ಮೇನ ಶಟರ್ ಬಾಗಿಲು ತಗೆಸಿಕೊಂಡು ಹೊರಗಡೆ ಹೋಗಿರುತ್ತಾನೆ. ಅವನು ಹೋರಗಡೆ ಹೋದವನು ಬಂದಿರಬಹುದೆಂದು ನಾವು ಸುಮ್ಮನಿದ್ದೆವು. ಈ ದಿನ ಹಗಲು ಹೊತ್ತಿನಲ್ಲಿ ಆ ರೂಮಿನಲ್ಲಿದ್ದವರು ಯಾರು ಹೊರಗಡೆ ಬರದೆ ಇದುದ್ದರಿಂದ ನಮಗೆ ಸಂಶಯ ಬಂದು ಬಾಗಿಲು ತೆರೆದು ನೋಡಲು ಹೆಣ್ಣು ಮಗಳ ಶವ ಬೆತ್ತಲಾಗಿ ಅಂಗಾತವಾಗಿ ಬಿದ್ದಿತ್ತು. ಅವಳ ಎರಡು ಕೈಗೆ ದಾರದಿಂದ ಕಟ್ಟಿದ್ದು ಅವಳ ವಯಸ್ಸು ಅಂದಾಜು 40 ರಿಂದ 45 ವರ್ಷ ಇರಬಹುದು ರಾಜಕುಮಾರ ಇತನು ಯಾವುದೋ ವಿಷಯದಲ್ಲಿ ಅವಳೊಂದಿಗೆ ದ್ವೇಷ ಇಟ್ಟುಕೊಂಡು ಅವಳಿಗೆ ದೇವರ ದರ್ಶನದ ನೆಪದಲ್ಲಿ ದೇವಲಗಾಣಗಾಪೂರಕ್ಕೆ ಕರೆದುಕೊಂಡು ಬಂದು ರಾತ್ರಿ ಕತ್ತು ಹಿಚುಕಿ ಕೊಲೆ ಮಾಡಿ ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 118/2011 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.