POLICE BHAVAN KALABURAGI

POLICE BHAVAN KALABURAGI

12 February 2017

KALABURAGI DISTRICT POLICE PRESS NOTE

ಪತ್ರಿಕಾ ಪ್ರಕಟಣೆ:

ಕೋರ್ಸ ಕಂಪನಿಯ ವೈಟ್ನರಗಳನ್ನು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಅಮಲಿನ ಪದಾರ್ಥದ ರೂಪದಲ್ಲಿ ಬಳಸುವುದನ್ನು ಗಮನಿಸಲಾಗಿದೆ. ಇದನ್ನು ದ್ರವ ರೂಪದಲ್ಲಿ ಮಾರಾಟ ಮಾಡುವುದು ಈಗಾಗಲೇ ನಿಷೇಧಿಸಲಾಗಿದ್ದು ಇರುತ್ತದೆ. ದ್ರವರೂಪದ ವೈಟ್ನರಗಳ ಮಾರಟ ಮಾಡುವುದು ನಿಷೇಧಿಸಿದ್ದರು ಸಹ ಪುಸ್ತಕ ಮಳಿಗೆಯಲ್ಲಿ, ದಿನಸಿ ಅಂಗಡಗಳಲ್ಲಿ ಸುಲಬವಾಗಿ ಸಿಗುತ್ತಿರುವುದು ಕಂಡು ಬಂದಿರುತ್ತದೆ.
ಕೋರ್ಸ ಕಂಪನಿಯ ವೈಟ್ನರಗಳನ್ನು, ದ್ರವ ರೂಪದ ವೈಟ್ನರಗಳನ್ನು ಶಾಲಾ ಕಾಲೇಜಿಗಳ ಆವರಣದಿಂದ 100 ಯಾರ್ಡ ಅಂತರದಲ್ಲಿ ನಿಷೇದಿಸಿದೆ. ಮತ್ತು ಪುಸ್ತಕ ಮಳಿಗೆಯಲ್ಲಿ, ದಿನಸಿ ಅಂಗಡಗಳಲ್ಲಿಯೂ ಸಹ ನಿಷೇಧಿಸಲಾಗಿದೆ. ಒಂದು ಸಮಯ ಮಾರಾಟ ಮಾಡಿದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಎಂದು ಈ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

                                     ಪೊಲೀಸ್ ಅಧೀಕ್ಷಕರು
                                           ಕಲಬುರಗಿ 

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-10/02/2017 ರಂದು ರಾತ್ರಿ 11:00 ಗಂಟೆಯಿಂದ ಇಂದು ದಿನಾಂಕ:-11/02/2017 ರಂದು ಬೆಳಗಿನ 06:00 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಒಬ್ಬ ಅಪರಿಚಿತ ಗಂಡು ಮನುಷ್ಯ ಅಂದಾಜು ವಯಸ್ಸು- 25-28 ವರ್ಷ ಇತನಿಗೆ ಕಲಬುರಗಿ ನಗರದ ಹೊರವಲಯದಲ್ಲಿರುವ ರಾಮನಗರ ಏರಿಯಾದ ಟಿವಿ ಸ್ಟೇಶನ ಹಿಂಭಾಗದ ಬಯಲು ಜಾಗೆಯಲ್ಲಿ ಕರೆ ತಂದು ಯಾವುದೋ ಕಾರಣಕ್ಕಾಗಿ ಹರಿತವಾದ ಅಯುದಗಳಿಂದ ಹಾಗು ಶಹಾಬಾದ ಪರ್ಸಿ ಕಲ್ಲಿನಿಂದ ಆತನಿಗೆ ಮನ ಬಂದಂತೆ ಹೊಡೆದು ಮುಖವು ಸರಿಯಾಗಿ ಗುರುತು ಸಿಗದಂತೆ ಜಜ್ಜಿ  ಸಾಕ್ಷಿ ಸಿಗದಂತೆ ಕೊಲೆ ಮಾಡಿ ಬಿಸಾಕಿ ಹೋಗಿದ್ದು ಕಂಡು ಬಂದಿರುತ್ತದೆ  ಅಂತಾ ಶ್ರೀ ಸಂತೋಷಕುಮಾರ ತಂದೆ ಉತ್ತಮರಾವ ಗುತ್ತೆದಾರ ಸಾ : ಲಕ್ಷ್ಮೀ ಗುಡಯ ಹತ್ತಿರ ರಾಮನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ನೀಲಪ್ಪಗೌಡ ತಂದೆ ಬಸಪ್ಪಗೌಡ ಪಾಟೀಲ ಸಾ: ಮೋರಟಗಿ ತಾ ಸಿಂದಗಿ ಜಿ: ವಿಜಯಪೂರ ಇವರ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರೆ ಇರುತ್ತೇವೆ. ನಮ್ಮ ಮನೆ ಸಮೀಪದಲ್ಲಿ ನಮ್ಮೂರ ಗುರುಪಾದ ತಂದೆ ಶರಣಪ್ಪ ಜೇರಟಗಿ ಇವರ ಮನೆ ಇರುತ್ತದೆ. ಈಗ 2 ವರ್ಷಗಳ ಹಿಂದೆ ಗುರುಪಾದ ಜೇರಟಗಿ ಇತನು ನಮ್ಮ ಮನೆಗೆ ಬಂದು ತನ್ನ ಸಂಸಾರದ ಅಡಚಣೆಗಾಗಿ 2,00,000/-ರೂಪಾಯಿ ತೆಗೆದುಕೊಂಡಿದ್ದನು. ಹಣ  ಕೊಡುವ ಮತ್ತು ತೆಗೆದುಕೊಳುವ ವ್ಯವಹಾರ  ಹೆಚ್ಚಾಗಿ ನನ್ನ ಹೆಂಡತಿ ಪಾರ್ವತಿ ಇವಳೆ ಮಾಡುತ್ತಿದ್ದಳು, ನಂತರ ನಾನು ಮತ್ತು ನನ್ನ ಹೆಂಡತಿ ಪಾರ್ವತಿ ಕೂಡಿ ಗುರುಪಾದಪ್ಪನಿಗೆ ನಮ್ಮ ಹಣ ವಾಪಾಸ ಕೊಡು ಅಂತಾ ಕೇಳಿದರೆ ಅವನು ಇಂದು ನಾಳೆ ಕೊಡುತ್ತೇನೆ ಅಂತಾ ಸುಳ್ಳು ಹೇಳುತ್ತಾ ಬಂದಿದ್ದು ಇಲ್ಲಿಯವರೆಗೆ ಹಣ ಕೊಟ್ಟಿರಲಿಲ್ಲ. ದಿ: 7-2-17 ರಂದು  ಮುಂಜಾನೆ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಗುರುಪಾದಪ್ಪನ ಮನೆಗೆ ಹೋಗಿ ನಮ್ಮ ಮಗನ ಮದುವೆ ಮಾಡುವದಿದೆ ಅದಕ್ಕಾಗಿ ನಮ್ಮ ಹಣ ಕೊಡು ಅಂತಾ ಕೇಳಿದೇವು. ಆಗ ಗುರುಪಾದನು ಮೇಣಸಿನಕಾಯಿ ಮಾರಿದ ನಂತರ ಕೊಡುತ್ತೇನೆ ಅಂತಾ ಅಂದನು. ಆಗ ನನ್ನ ಹೆಂಡತಿಯು ಗುರುಪಾದಪ್ಪನ ಸಂಗಡ ಬಾಯಿ ಮಾತಿನಿಂದ ತಕರಾರು ಮಾಡಿ ಎಷ್ಟು ದಿನ ಅಂತಾ ಸುಳ್ಳು ಹೇಳುತ್ತಿ ನಿನಗೆ ಮಾನ ಮರ್ಯಾದೆ ಇಲ್ಲ ಅಂತಾ ಅಂದಿದ್ದಳು. ಆಗ ಗುರುಪಾದಪ್ಪನು ನನ್ನ ಹೆಂಡತಿಗೆ ನೀನು ಈ ರೀತಿ ಮಾತಾಡಬೇಡ ಬಹಳ ಮಾತನಾಡಿದರೆ ನಿನಗೆ ಬೇರೆ ರೀತಿಯಿಂದ ನೋಡಿಕೊಳ್ಳುತ್ತೇನೆ ಅಂತಾ ಅಂಜಿಕೆ ಹಾಕಿದ್ದನು. ದಿನಾಂಕ: 08.02.2017 ರಂದು ಮುಂಜಾನೆ ನಾನು ನಮ್ಮ ಹೊಲಕ್ಕೆ ಹೋಗಿದ್ದೇನು. ನನ್ನ ಹೆಂಡತಿ ಪಾರ್ವತಿ ಮನೆಯಲ್ಲಿ ಇದ್ದಳು. ಸಾಯಾಂಕಾಲ ನಾನು ಮನೆಗೆ ಬಂದಾಗ ನಮ್ಮ ಮನೆಯ ಬಾಗಿಲು ಕೀಲಿ ಹಾಕಿತ್ತು. ನಾನು ನನ್ನ ಹೆಂಡತಿ ಊರಲ್ಲಿ ಏಲ್ಲಿಯಾದರು ಹೋಗಿರಬಹುದು ಅಂತ ಸುಮ್ಮನಿದ್ದೇನು. ರಾತ್ರಿಯಾದರು ಕೂಡಾ ನನ್ನ ಹೆಂಡತಿ ಮನೆಗೆ ಬರಲಾರದಕ್ಕೆ ನಾನು ಊರಲ್ಲಿ ಹುಡುಕಾಡಿದರು ಸಿಗಲಿಲ್ಲಾ. ನನ್ನ ಹೆಂಡತಿ ಎಲ್ಲಿಯಾದರು ನಮ್ಮ ಸಂಬಂಧಿಕರ ಊರಿಗೆ ಹೋಗಿರಬೇಕು ಅಂತಾ ತಿಳಿದುಕೊಂಡಿದ್ದೇನು.  ಮರು ದಿವಸ ದಿ: 9-2-17 ರಂದು ಮುಂಜಾನೆ ನಾನು ನನ್ನ ಮಕ್ಕಳಿಗೆ ಫೋನ ಮಾಡಿ ನಿಮ್ಮ ತಾಯಿ ನಿಮ್ಮ ಹತ್ತಿರ ಬಂದಿದ್ದಾಳೆ ಏನು ಅಂತ ಕೇಳಿದಾಗ ಅವರು ಬಂದಿರುವದಿಲ್ಲಾ ಅಂತ ಹೇಳಿದರು. ನಂತರ ನಾನು ಅವಳು ಎಲ್ಲಿ ಹೋಗಿರಬೇಕು ಅಂತಾ ಹುಡುಕಾಡುತ್ತಾ ನಮ್ಮೂರ ಬಸ್ಸ ನಿಲ್ದಾಣದ ಹತ್ತಿರ ಬಂದಾಗ ಅಲ್ಲಿ ನನಗೆ ನಮ್ಮೂರ ಜಾಫರ ಅಲಿ ಗೋಗಿ ಇತನು ಸಿಕ್ಕನು. ನಾನು ಅವನ ಮುಂದೆ ನನ್ನ ಹೆಂಡತಿ ಕಾಣದ ವಿಷಯ ಹೇಳಿದಾಗ ಜಾಫರ ಅಲಿ ಇತನು ನಿನ್ನೆ ದಿನಾಂಕ: 8-2-17 ರಂದು ಮುಂಜಾನೆ ನಾನು ಬಸ್ಸ ನಿಲ್ದಾಣದ ಹತ್ತಿರ ಇದ್ದಾಗ ನಮ್ಮೂರ ಗುರುಪಾದಪ್ಪ ಜೇರಟಗಿ ಮತ್ತು ಅವನ ಮಗನಾದ ಚನ್ನಬಸಪ್ಪ ಜೇರಟಗಿ ಮತ್ತು ನಿನ್ನ ಹೆಂಡತಿ ಪಾರ್ವತಿ ಮೂವರು ಗುರುಪಾದಪ್ಪ ಇವರ ಮೋಟರ ಸೈಕಲ ನಂ ಕೆಎ-32-ಎಸ್-6782 ನೇದ್ದರ ಮೇಲೆ ಕುಳಿತು ಜೇರಟಗಿ ಕಡೆಗೆ ಹೋಗುವದನ್ನು ನಾನು ನೋಡಿರುತ್ತೇನೆ ಅಂತಾ ಹೇಳಿದನು. ಆಗ ನನಗೆ ಅನುಮಾನ ಬಂದು ಗುರುಪಾದಪ್ಪನಿಗೆ ಕೇಳಿದರಾಯಿತು ಅಂತ ಅವರ ಮನೆಗೆ ಹೋದಾಗ ಅವರ ಮನೆಯಲ್ಲಿ ಯಾರು ಇರಲಿಲ್ಲ. ಗುರುಪಾದಪ್ಪನು ಹಣ ಕೊಡುವ ಸಲುವಾಗಿ ನನ್ನ ಹೆಂಡತಿಗೆ ಎಲ್ಲಿಗೆಯಾದರು ಕರೆದುಕೊಂಡು ಹೋಗಿರಬೇಕು ಅಂತಾ ತಿಳಿದು ಅವನು ಬಂದ ಮೇಲೆ ವಿಚಾರಿಸಬೇಕು ಅಂತಾ ಊರಲ್ಲಿಯೇ ಇದ್ದೇನು. ಅಂದು ರಾತ್ರಿ ಕೂಡಾ ಗುರುಪಾದಪ್ಪನು ಊರಿಗೆ ಬರಲಿಲ್ಲ. ದಿ: 10-2-17 ರಂದು ನಾನು ನನ್ನ ಹೆಂಡತಿಗೆ ಹುಡುಕಾಡುತ್ತಾ ಸೊನ್ನ ಕ್ರಾಸ ಹತ್ತಿರ ಬಂದಾಗ ಕ್ರಾಸ ಹತ್ತಿರ ಇದ್ದ ಜನರು, ಜೇವರಗಿ ತಾಲೂಕಿನ ಚಿಗರಳ್ಳಿ ಕ್ರಾಸ ಹತ್ತಿರ ಕೆನಾಲ ನೀರಿನಲ್ಲಿ ಒಬ್ಬ ಅಪರಿಚಿತ ಹೆಣ್ಣು ಮಗಳ ಹೆಣ ಸಿಕ್ಕಿದ್ದು ಈ ಬಗ್ಗೆ ಜೇವರಗಿ ಪೊಲೀಸ ಠಾಣೆಯಲ್ಲಿ ಕೇಸು ಆಗಿರುತ್ತದೆ ಅಂತಾ ಮಾತನಾಡುತ್ತಿರುವದನ್ನು ಕೇಳಿಸಿಕೊಂಡು ಈ ವಿಷಯ ನಮ್ಮೂರಿನಲ್ಲಿ ಯಾರಿಗಾದರು ಹೇಳಬೇಕು ಅಂತಾ ತಿಳಿದು ಅಲ್ಲಿಂದ ಪುನ ನಮ್ಮೂರಿಗೆ ಹೋದೆನು. ಊರಿಗೆ ಹೋದಾಗ ಊರಲ್ಲಿ ಜನರು ಕೂಡಾ ಚಿಗರಳ್ಳಿ ಕ್ರಾಸ ಹತ್ತಿರ ಕೆನಾಲ ನೀರಿನಲ್ಲಿ ಒಬ್ಬ ಅಪರಿಚಿತ ಹೆಣ್ಣು ಮಗಳ ಶವ ಸಿಕ್ಕ ಬಗ್ಗೆ ಮತ್ತು ಜೇವರಗಿ ಠಾಣೆಯಲ್ಲಿ ಕೇಸು ಆದ ಬಗ್ಗೆ ವಿಷಯ ಪೇಪರನಲ್ಲಿ ಬಂದಿರುತ್ತದೆ ಅಂತಾ ಹೇಳಿದರು. ನಂತರ ಇಂದು ದಿನಾಂಕ 11.02.17 ರಂದು ನಾನು ಮತ್ತು ನನ್ನ ಮಗನಾದ ಬಾಬುಗೌಡ ಹಾಗೂ ನಮ್ಮೂರ ನಿಂಗನಗೌಡ ತಂದೆ ನಂದಪ್ಪಗೌಡ ಪಾಟೀಲ, ರಾಹುಲ ಬರಡೊಲ್  ಎಲ್ಲರೂ ಕೂಡಿ ಜೇವರಗಿ ಪೊಲೀಸ್ ಠಾಣೆಗೆ ಬಂದು ಪಿ.ಎಸ್.ಐ ರವರಿಗೆ ವಿಚಾರಿಸಿದಾಗ ಪಿ.ಎಸ್.ಐ ರವರು ನಮಗೆ ಹೆಣದ ಫೋಟುಗಳು, ಮತ್ತು ಹೆಣ ಮೈಮೇಲೆ ಸಿಕ್ಕ ಬಟ್ಟೆಗಳಾದ 1) ಬಿಳಿ ಬಣ್ಣದ ಜಂಪರ್ 2) ಹಳದಿ ಬಣ್ಣದ ಲಂಗ್ಗಾ,  ಹಾಗೂ ಕೊರಳಲ್ಲಿನ ಬೆಳ್ಳಿ ಲಿಂಗದಕಾಯಿ ಇವಳನ್ನು ತೊರಿಸಿದಾಗ ನಾವು ನೋಡಲು ಶವ ನನ್ನ ಪಾರ್ವತಿ ಇವಳದೆ ಇರುತ್ತದೆ ಅಂತಾ ಗುರುತು ಹಿಡಿದಿರುತ್ತೆವೆ. ನಂತರ ಪಿ.ಎಸ್.ಐ ರವರು ಈ ಬಗ್ಗೆ ಜೇವರಗಿ ಠಾಣೆಯಲ್ಲಿ ಯು.ಡಿ.ಆರ್. ಕೇಸು ದಾಖಲಾದ ಬಗ್ಗೆ ಹೇಳಿರುತ್ತಾರೆ,   ನಮ್ಮೂರ ಗುರುಪಾದಪ್ಪ ಜೇರಟಗಿ ಮತ್ತು ಅವನು ಮಗನಾದ ಚನ್ನಬಸಪ್ಪ ಜೇರಟಗಿ ಇಬ್ಬರೂ ಕೂಡಿ ನನ್ನ ಹೆಂಡತಿಗೆ ಕೊಲೆ ಮಾಡುವ ಉದ್ದೇಶದಿಂದ, ಅವಳಿಗೆ ಹಣ ಕೊಡುತ್ತೇವೆ ಅಂತ ನಂಬಿಸಿ ದಿ: 8-2-17 ರಂದು ತಮ್ಮ ಮೋಟರ ಸೈಕಲ ಮೇಲೆ ಜೇವರಗಿ ಕಡೆಗೆ ಕರೆದುಕೊಂಡು ಬಂದು ಚಿಗರಳ್ಳಿ ಕೆನಾಲ ಕಡೆಗೆ ಕರೆದುಕೊಂಡು ಹೋಗಿ, ನನ್ನ ಹೆಂಡತಿ ನೀರಿನಲ್ಲಿ ಮುಳುಗಿ ಸತ್ತಿರಬೇಕೆಂದು  ಜನರು ತಿಳಿದುಕೊಳ್ಳಲಿ ಎಂದು ಸಾಕ್ಷಿ ನಾಶ ಮಾಡುವ ಸಲುವಾಗಿ ಅವಳಿಗೆ ಚಿಗರಳ್ಳಿ ಕ್ರಾಸ್ ಸಮೀಪ್ ಇರುವ  ಕೇನಾಲ್ ನೀರಿನಲ್ಲಿ ನೂಕಿಸಿಕೊಟ್ಟು ಅಥವಾ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುತ್ತಾರೆ. ಸದರ ಕೊಲೆ ದಿ. 08.02.2017 ರ ಮುಂಜಾನೆ 11.00 ಗಂಟೆಯಿಂದ ದಿ. 09.02.2017 ರಂದು ಮುಂಜಾನೆ 11.00 ಮದ್ಯದ ಅವದಿಯಲ್ಲಿ ಮಾಡಿರಬೇಕು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ:11/02/2017 ರಂದು ಬೆಳಗ್ಗೆ ಗಂಟೆಗೆ ನನ್ನ ಗಂಡ ಮನೆ ಕಟ್ಟಿಸಲು ಸಾಮಾನುಗಳು ತರುತ್ತೇನೆ ಅಂತಾ ಆಳಂದಕ್ಕೆ ಹೋಗಿದ್ದು ರಾತ್ರಿ 08:00 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ರೋಡಿನ ಸಿದ್ರಾಮಪ್ಪಾ ವಠಾರ ಇವರ ಹೊಲದ ಹತ್ತಿರ ನನ್ನ ಗಂಡನಿಗೆ ಮೋಟರ್ ಸೈಕಲ ಅಪಘಾತವಾಗಿರುತ್ತದೆ ಎಂದು ಜನರು ಅಂದಾಡುವುದು ಕೇಳಿ ನಾನು ನನ್ನ ಮಕ್ಕಳು ಹಾಗೂ ನನ್ನ ಓಣಿಯ ಜನರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಗಂಡನು ಭೇಹೋಷ ಆಗಿ ಬಿದ್ದಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ನಂತರ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಆಳಂದಕ್ಕೆ ತಂದಿರುತ್ತೆವೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನಂತರ ವಿಷಯ ಗೊತ್ತಾಗಿದ್ದೆನೆಂದರೆ ದಿನಾಂಕ: 11/02/2017 ರಂದು ಸಾಯಂಕಾಲ 07:30 ಗಂಟೆಗೆ ಸುಮಾರಿಗೆ ನನ್ನ ಗಂಡನು ಆಳಂದದಿಂದ ನಮ್ಮೂರ ಕಡೆಗೆ ಮೋಟರ್ ಸೈಕಲ್ ನಂ:KA:32 R:9352 ನೇದ್ದರ ಮೇಲೆ ಬರುವಾಗ ಸಿದ್ರಾಮಪ್ಪಾ ವಠಾರ ಇವರ ಹೊಲದ ಹತ್ತಿರ ಬಂದಾಗ ರೋಡಿನ ಮೇಲೆ ಹಳ್ಳಿ ಸಲಗರ ಕಡೆಯಿಂದ ಮೋಟರ್ ಸೈಕಲಲ ನಂ: MH:25 AA-2987 ಹಿರೋ ಸ್ಲೆಂಡರ್ ಇದರ ಚಾಲಕನಾದ ಗಣೇಶ ತಂದೆ ಲಕ್ಷ್ಮೀಕಾಂತ ಜಿರೊಳ್ಳಿ ಸಾ:ಮುರುಮ ಅಂತಾ ಗೊತ್ತಾಗಿರುತ್ತದೆ. ಇತನು ಅತೀವೇಗ ಮತ್ತು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಮೋಟರ್ ಸೈಕಲ ಚಲಾಯಿಸಿ ನನ್ನ ಗಂಡನಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿ ತಲೆಗೆ ಭಾರಿ ಗಾಯಗೊಳಿಸಿ ಸಾವಿಗೆ ಕಾರಣನಾಗಿರುತ್ತಾನೆ. ಅಂತಾ ಶ್ರೀಮತಿ ಸಂಪತಬಾಯಿ ಗಂಡ ವಿಠಲ್ ವಾಘಮೋರೆ ಸಾ:ಹಳ್ಳಿ ಸಲಗರ ತಾ:ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 10-02-2017 ರಂದು ಬೆಳಿಗ್ಗೆ 10:00 ಗಂಟೆಗೆ ತೆಗ್ಗೆಳ್ಳಿ ಗ್ರಾಮದಲ್ಲಿ ಸರ್ವೆ ಮಾಡುವ ಕೆಲಸ ಇದ್ದ ಮೇರೆಗೆ ನಮ್ಮ ಕಾರ್ಯಾಲಯದ ಗಾಳೆಪ್ಪ ಶಿರಸ್ತೇದಾರರು, ಸಂತೋಷ ಎಫ್.ಡಿ., ಅಲಿಅಹ್ಮದ ಸರ್ವೇಯರ್ ಹಾಗೂ ನಮ್ಮ ಜೀಪಿನ ಚಾಲಕ ರಜೆಯಲ್ಲಿ ಇದ್ದರಿಂದ ಮೋಯಿದ್ದಿನ್  ಎಂಬುವವರನ್ನು ಜೀಪ ಚಾಲಕನಾಗಿ ಕರೆಸಿಕೊಂಡು ಎಲ್ಲರೂ ಕೂಡಿ ನನ್ನ ಕಾರ್ಯಾಲಯದಿಂದ ಹೊರಟು ತೆಗ್ಗಳ್ಳಿ ಗ್ರಾಮಕ್ಕೆ ಹೋಗಿ, ಅಲ್ಲಿಂದ ಮರಳಿ ಗ್ರಾಮಗಳಿಗೆ ಭೇಟಿ ನೀಡುತ್ತಾ ಮದ್ಯಾಹ್ನ 3:45 ಗಂಟೆ ಸುಮಾರಿಗೆ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮೀ ಗುಡಿಯ ಹತ್ತಿರ ಬಂದಾಗ ಎದುರುಗಡೆ ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿತ್ತು, ಆಗ ನಾನು ಸದರಿ ಟ್ಯಾಕ್ಟರನ್ನು ನಿಲ್ಲಿಸಿ ಚೆಕ್ ಮಾಡಬೇಕೆಂದು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ನನ್ನ ಮೇಲೆ ಹಾಯಿಸಲು ಬಂದನು, ಆಗ ನಾನು ಟ್ಯಾಕ್ಟರ ನನ್ನ ಮೇಲೆ ಹಾಯಿಸುವಷ್ಟರಲ್ಲಿ ನಾನು ಅದೃಷ್ಟವಶಾತ ತಪ್ಪಿಸಿಕೊಂಡಿರುತ್ತೇನೆ. ಆಗ ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಅಲ್ಲೇ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ನಾವು ಸದರಿ ಟ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು, ಟ್ಯಾಕ್ಟರ ನಂಬರ ನೋಡಲಾಗಿ ಅದರ ನಂಬರ ಕೆಎ-32 ಟಿಎ-7837 ಅಂತಾ ಇದ್ದು ನಂಬರ ಸರಿಯಾಗಿ ಹಾಗೂ ದೂರದಿಂದ ಕಾಣಬಾರದು ಎಂಬ ಉದ್ದೇಶದಿಂದ ನಂಬರ ಪ್ಲೇಟಿನ ಮೇಲೆ ಬಿಳಿಯ ಬಣ್ಣದ ಪೆಂಟನ್ನು ಹಚ್ಚಿರುತ್ತದೆ. ಹಾಗೂ ಸದರಿ ಟ್ಯಾಕ್ಟರ ENG NO: 43.3008/STA00398  CH NO:- WXCA40906089195  ಅಂತಾ ಇದ್ದು ಸ್ವರಾಜ ಕಂಪನಿಯ ಟ್ಯಾಕ್ಟರ ಇರುತ್ತದೆ. ಸದರಿ ಟ್ಯಾಕ್ಟರ ನಂಬರ ಪ್ಲೇಟಿಗೆ ನಂಬರ ಕಾಣದಂತೆ ಪೆಂಟನ್ನು ಹಚ್ಚಿರುವುದು ನೋಡಿದರೆ ಸದರಿ ಟ್ಯಾಕ್ಟರ ಮರಳು ಸಾಗಾಣಿಕೆಗೆ ಬಳವುಸುವ ಟ್ಯಾಕ್ಟರ ಆಗಿರುತ್ತದೆ. ಸರ್ಕಾರದಿಂದ ಟಿಪ್ಪರ ವಾಹನಗಳಿಗೆ ಮಾತ್ರ ರಾಯಲ್ಟಿ ಕೊಡುತ್ತಿದ್ದು, ಟ್ಯಾಕ್ಟರಗಳಿಗೆ ರಾಯಲ್ಟಿ ಕೊಟ್ಟಿರುವುದಿಲ್ಲ. ಸದರಿ ಟ್ಯಾಕ್ಟರ ಚಾಲಕ ಸದರಿ ಟ್ಯಾಕ್ಟರನಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾಗ, ನಾನು ನಮ್ಮ ಸಿಬ್ಬಂದಿಯವರೊಂದಿಗೆ ಸದರಿ ಟ್ಯಾಕ್ಟರನ್ನು ಹಿಡಿಯಲು ಹೋದಾಗ ನನ್ನ ಸರ್ಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಮರಳು ತುಂಬಿದ ಟ್ಯಾಕ್ಟರನ್ನು ನನ್ನ ಮೈ ಮೇಲೆ ಹಾಯಿಸಲು ಬಂದು ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ, ಅಂತಾ ಶ್ರೀಮತಿ ಶಶಿಕಲಾ ಜಿ ಪಾದಗಟ್ಟಿ ತಹಸಿಲ್ದಾರರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:10/02/17 ರಂದು ಮದ್ಯಾನ ಠಾಣಾ ವ್ಯಾಪ್ತಿಯಲ್ಲಿ ಬರುವ ಮದಿನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಜನರು ರಸ್ತೆಯ ಪಕ್ಕದಲ್ಲಿ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಾ ಮೋಸ ಮಾಡುತ್ತಿರುವ  ಬಗ್ಗೆ ಖಚಿತ ಮಾಹೀತಿ ಬಂದ ಮೇರೆಗೆ ಶ್ರೀ ಫಜಲರಹೇಮಾನ ಎ.ಎಸ್‌‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮದಿನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಹೋಗಿ ಮಜೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಎರಡು ಜನರು  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವದನ್ನು ನೋಡಿ ದಾಳಿ ಮಾಡಿ ಇಬ್ಬರನ್ನೂ ಹಿಡಿದು ಅವರ  ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1)ಇಮ್ರಾನ್‌‌ ತಂದೆ ಖಾಜಾಮೀಯ್ಯಾ ಸಾ:ಮನೆ.ನಂ.3-887 ಮಸಜೀದ್‌‌ ಸಾದತ ಅತ್ತಾರ ಕಂಪೌಂಡ ಗಾಜಿಪುರ ಕಲಬುರಗಿ 2)ಮಕಬೂಲ @ ಮಾಮು ತಂದೆ ಜಹೀರುದ್ದಿನ ಸಾ:ಜಿಲಾನಾಬಾದ ಖದೀರ ಚೌಕ ಹತ್ತಿರ ಎಂ.ಎಸ್‌‌.ಕೆ.ಮೀಲ್‌ ಕಲಬುರಗಿ ಅಂತಾ ತಿಳಿಸಿದರು ನಂತರ ಸದರಿಯವರನ್ನು ಚಕ್ಕಮಾಡಲಾಗಿ ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  2070/-ರೂ ಮತ್ತು 10 ಮಟಕಾ ನಂಬರ ಬರೆದ ಚೀಟಿಗಳೂ, 02 ಬಾಲ್‌ ಪೇನಗಳು, 03 ಮೊಬೈಲ್‌ ಪೋನಗಳು ದೊರತವು ಮತ್ತು ಕೃತ್ಯಕ್ಕೆ ಬಳಸಿದ ಸದರಿ ಆರೋಪಿ ಇಮ್ರಾನ್‌ ಈತನ ಹೀರೊಹೊಂಡಾ ಪ್ಯಾಶನ ಪ್ರೂ ಮೋ/ಸೈ ನಂ.ಕೆಎ.32 ವಿ 7817  ಅ.ಕಿ.20000/-ರೂ   ಇವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸರ್ಕಾರಕ್ಕೆ ಮೋಸ ಮಾಡಿದ ಪ್ರಕರಣ :
ಮಾಹಾಗಾಂವ ಠಾಣೆ : ಕುರಿಕೋಟಾ ಗ್ರಾಮದ ಸರ್ವೆ ನಂಬರ 146 ರಲ್ಲಿ ಬರುವ 6 ಎಕರೆ ಜಮೀನ ಪೈಕಿ ಸರ್ಕಾರದ ಆಶ್ರಯ ಯೋಜನೆಗಾಗಿ ನೀಡಿದ 4 ಎಕರೆ 20 ಗುಂಟೆ ಜಮೀನನ್ನು ರಮೇಶ ತಂದೆ ಗುಂಪ್ಪಾ ಸಾಹು ಸಂಗಡ 1 ಜನರು ಎಲ್ಲರು ಕುರಿಕೋಟಾ ದವರು ಕುಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿ ತಮ್ಮ ಹೆಸರಿಗೆ ಜಂಟಿ ವಿರಾಸತ್ ಮಾಡಿಕೊಂಡು ನಂತರ ತಮ್ಮ ಹೆಸರಿಗೆ ಪಾರ್ಟಿಶನ್ ಡಿಡ್ ಮಾಡಿಕೊಂಡಿರುತ್ತಾರೆ ಅಂತಾ ಶ್ರೀ ಬಲರಾಮ ಕಟ್ಟಿಮನಿ ತಹಸಿಲ್ದಾರರು ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.