POLICE BHAVAN KALABURAGI

POLICE BHAVAN KALABURAGI

26 August 2013

ಕೊಲೆ ಪ್ರಕರಣದ ಆರೋಪಿತನ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 26-01-2013 ರೆಂದು ಮಣ್ಣೂರ ಅಗರಖೇಡ ಬೀಮಾ ಬ್ರಿಡ್ಜನ ಬಲಭಾಗದಲ್ ದಡದಲ್ಲಿ ಒಂದು ಗೋಣಿ ಚೀಲ ಕಂಡಿದ್ದು ಅದನ್ನು ಕರೆಂಟೆ ವೈರನಿಂದ ಕಟ್ಟಿ ಅದಕ್ಕೆ ಕಲ್ಲು ಕಟ್ಟಿ ನೀರಲ್ಲಿ ಒಗೆದಿದ್ದು ಸದರ ಗೋಣಿ ಚೀಲವನ್ನು ಹೋರಗೆ ತೆಗೆಸಿ ನೋಡಿದಾಗ ಅದರಲ್ಲಿ ಒಂದು ಶವವಿದ್ದು ಸದರ ಶವವನ್ನು  ನೀರಿನಲ್ಲಿ ಇರುವ ಜಲಚರಗಳು ಮುಖ ಖಾಲು, ಕೈ ಅಲ್ಲಲ್ಲಿ ತಿಂದಿದ್ದು ಶವದ ಮೈಮೇಲೆ ಚ್ಯಾಕಲೇಟ ಬಣ್ಣದ ಅಂಡರವೇರ ಬಿಳಿಯ ಶರ್ಟ ಇದ್ದು ಇದರ ಬಗ್ಗೆ ಶ್ರೀ ರಾಮು ತಂದೆ ಬೂತಾಳಿ ನಡುವಿನಕೆರಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಮಣ್ಣುರು ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಮುಂದೆ ತನಿಖೆ ಮಾಡುವಾಗ ಶವದ ಶವದ ಮೇಲೆ ಸಿಕ್ಕ ಶರ್ಟಿನ ಕಾಲರ ಮೇಲೆ ಚ್ವಾಯಿಸ ಟೇಲರ ಮಣ್ಣೂರ ಅಂತಾ ಬರೆದಿದ್ದು  ದುರೆತಿದ್ದು ಮಣ್ಣೂರ ಗ್ರಾಮದಲ್ಲಿ ಇರುವ ಶ್ರೀ ಶಣ್ಮೂಖಪ್ಪಾ ತಂದೆ ಶಂಕ್ರೆಪ್ಪಾ ಮಲ್ಲಾಬಾದ ಉ: ಚ್ವಾಯಸ ಟೇಲರ ಸಾ: ಮಣ್ಣೂರ ಇವರನ್ನು ಕರೆಸಿ ಸದರ ಶರ್ಟನ್ನು ತೋರಿಸಿ ವಿಚಾರಿಸಲಾಗಿ ಸದರ ಶರ್ಟನ್ನು ತಾನೆ ಮಣ್ಣೂರ ಗ್ರಾಮದ ಸಂತೋಷ ತಂದೆ ಸುರೇಶ ಸಾ: ಅರ್ಜಣಗಿ ಇವರಿಗೆ ಹೊಲೆದು ಕೊಟ್ಟಿರುವುದಾಗಿ ತಿಳಿಸಿದ್ದು ಇತನಿಗೆ ಯಾರೋ ಆಗದವರು ತಮ್ಮ ದ್ವೇಷ ತಿರೀಸಿಕೊಳ್ಳಲು ಸಮಯ ಸಾಧಿಸಿ ಸದರಿ ವ್ಯಕ್ತಿಗೆ ಯಾವುದೋ ವಸ್ತುವಿನಿಂದ ಹೊಡೆದು ಶವವನ್ನು ಗುರುತಿಸಲಾಗದಂತೆ ಸಾಕ್ಷಿ ಆದಾರಗಳನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು ಗೋಣಿ ಚಿಲದಲ್ಲಿ ಹಾಕಿ ಕರೆಂಟ ವೈರನಿಂದ ಬಿಗಿದು ಭಿಮಾ ನದಿ ನೀರಿಗೆ ಬಿಸಾಡಿರುತ್ತಾರೆ ಸದರ ಕೇಸಿನ ಆರೋಪಿ ಪತ್ತೆ ಕುರಿತು ಮಾನ್ಯ ಶ್ರೀ ಕಾಶೀನಾಠ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಶ್ರೀ ತಿಮ್ಮಪ್ಪಾ ಡಿ ಎಸ್ ಪಿ ಆಳಂದ, ಶ್ರೀ ಕೆ ರಾಜೇಂದ್ರ ಸಿಪಿಐ ಆಫಜಲಪೂರ  ರವರ ಮಾರ್ಗದರ್ಶನದಲ್ಲಿ ಶ್ರೀ ಮಂಜುನಾಥ ಎಸ್. ಪಿ ಎಸ್ ಐ ಅಫಜಲಪೂರ ಹಾಗು ಸಿಬ್ಬಂದಿಯವರು  ದಿನಾಂಕ 26-08-2013 ರಂದು ಬೆಳಗಿನ ಜಾವ 1 ಗಂಟೆಗೆ ಬಾತ್ಮಿ ಮೇರೆಗೆ ಮಣ್ಣೂರ ಗ್ರಾಮದ ಅಂಆಭವಾನಿ ಗುಡಿಯ ಹತ್ತಿರ ಶ್ರೀಶಯಲ ತಂದೆ ಸೂರ್ಯಕಾಂತ ಅರ್ಜಣಗಿ ಸಾ : ಮಣ್ಣೂರ ಇತನ ಮೇಲೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಹಾಜರಪಡಿಸಿದ್ದು ಸದರಿಯನು ಅಪರಾಧ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಕೃತ್ಯಕ್ಕೆ ಬಳಸಿದ ಮೊಟಾರ ಸೈಕಲ್ ನಂ  ಕೆಎ-32 ಡಬ್ಲ್ಯೂ 9802 ನೇದ್ದನ್ನು ವಶಪಡಿಸಿಕೊಂಡು ಸದರಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಹಿಸಿದ್ದು ಕೃತ್ಯಕ್ಕೆ ಸಹಕರಿಸಿದ ಆರೋಪಿತನ ತಾಯಿಯಾದ ಸೂಗಲಾಬಾಯಿ ಇವಳು ನಾಪತ್ತೆಯಾಗಿದ್ದು ಇವಳ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ.