POLICE BHAVAN KALABURAGI

POLICE BHAVAN KALABURAGI

16 September 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-09-2018 ರಂದು ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಮಾರುತಿ ಎಎಸ್ ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದಿನ ಸಾರ್ವಜನಿಕ ರಸ್ತೆಯ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಆಗ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ಪೈಗಂಬರ ತಂದೆ ಶೇಖ ಬಾಬು ಮುಲ್ಲಾ ಸಾ|| ಉಡಚಾಣ ತಾ|| ಅಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಗಿದೆ
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಪದ್ಮಾವತಿ ಗಂಡ ಗುರುಲಿಂಗಯ್ಯ ಒಡೇಯರ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ರವರ ಮಗನಾದ ಸಾಗರ ಇತನು ನಮ್ಮ ಓಣಿಯ ಅಮೋಘಿಸಿದ್ದ ಗುಡಿ ಹತ್ತಿರ ಪಾಸ ಶಾಪ್ ಇಟ್ಟು ವ್ಯಾಪಾರ ಮಾಡಿಕೊಂಡಿರುತ್ತಾನೆ. ನಮ್ಮ ಓಣಿಯವರೇಯಾದ ವಿಠ್ಠಲ ತಂದೆ ಸಿದ್ರಾಮ ಇಂಗಳಗಿ ರವರು ಅಮೋಘಿಸಿದ್ದ ಗುಡಿ ಹತ್ತಿರ ಹೊಟೇಲ ಇಟ್ಟುಕೊಂಡಿರುತ್ತಾರೆ ವಿಠ್ಠಲ ಹಾಗು ಅವರ ಮಗ ಮಲ್ಲಪ್ಪ ಇಬ್ಬರು ನನ್ನ ಮಗನೊಂದಿಗೆ ಆಗಾಗ ನೀ ಇಲ್ಯಾಕ ಪಾನಶಾಪ್ ಹಾಕಿದಿ ನಮ್ಮ ಹೊಟೇಲ ಕೆಲಸಕ್ಕೆ ತೊಂದರೆಯಾಗುತ್ತಿದೆ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜಗಳ ಮಾಡುತ್ತಾ ಬಂದಿರುತ್ತಾರೆ. ನಿನ್ನೆ  ದಿನಾಂಕ 14/09/2018 ರಂದು ಅಮೋಘಸಿದ್ದ ಗುಡಿಯ ಮುಂದೆ ಜನರು ಬಾಯಿ ಮಾಡುವ ಸಪ್ಪಳ ಕೇಳಿ ನಾನು ಹಾಗು ನಮ್ಮ ಅಕ್ಕಳಾದ ಸಾಮಬಾಯಿ ಗಂಡ ಬಸಣ್ಣ ಒಡೇಯರ ಇಬ್ಬರು ಕೂಡಿ ಓಡಿ ಹೋಗಿ ನೋಡಲಾಗಿ ಅಮೋಘಿಸಿದ್ದ ಗುಡಿಯ ಮುಂದೆ ನಮ್ಮ ತಮ್ಮನಾದ ಬಿಳಿಯಣಿಸಿದ್ದ ತಂದೆ ಅಮೋಘೆಪ್ಪ ಒಡೇಯರ ಈತನೋಂದಿಗೆ ವಿಠ್ಠಲ ಹಾಗು ಮಲ್ಲಪ್ಪ ಇಬ್ಬರು ರಂಡಿ ಮಕ್ಕಳ್ಯಾ ನಿಮ್ಮ ಅಳಿಯ ಸಾಗರನ ಪಾನ ಶಾಪ್ ತಗಸ್ರಿ ಅಂತ ಹೇಳಿದರು ಕೇಳಲ್ಲ ಅಂತ ಬೈಯುತಿದ್ದಾಗ ಅಲ್ಲೆ ಇದ್ದ ಭೀಮಣ್ಣ ತಂದೆ ಬಸಣ್ಣ ಅಂದೋಡಗಿ, ಲಕ್ಷ್ಮಿಪುತ್ರ ತಂದೆ ಪರೇಪ್ಪ ಬಳೂರ್ಗಿ ಹಾಗು ನನ್ನ ಮಗನಾದ ಸಾಗರ ಮೂರು ಜನರು ಸದರಿಯವರಿಗೆ ತಿಳುವಳಿಕೆ ಹೇಳುತಿದ್ದಾಗ ನಾವು ನಡುವೆ ಬಿಡಿಸಲು ಹೋದರೆ ವಿಠ್ಠಲ ಇತನು ಒಂದು ಬಡಿಗೆಯಿಂದ ನಮ್ಮ ತಮ್ಮನ ಹೆಡಕಿಗೆ ಜೋರಾಗಿ ಹೊಡೆದನು ನಮ್ಮ ತಮ್ಮ ನೆಲಕ್ಕೆ ಬಿದ್ದಾಗ ಮಲ್ಲಪ್ಪ ಈತನು ನಮ್ಮ ತಮ್ಮನಿಗೆ ಕಾಲಿನಿಂದ ಒದೆಯುತಿದ್ದಾಗ ನಾನು ಬಿಡಿಸುವಾಗ ವಿಠ್ಠಲ ಈತನು ಬಡಿಗೆ ಅಲ್ಲೆ ಬಿಸಾಡಿ ತನ್ನ ಕೈಯಿಂದ ನನ್ನ ಕಪಾಳಕ್ಕೆ ಒಡೆದಿರುತ್ತಾನೆ ನಂತರ ವಿಠ್ಠಲ ಹಾಗು ಮಲ್ಲಪ್ಪ ಅಲ್ಲಿಂದ ಹೋಗುವಾಗ ರಂಡಿ ಮಕ್ಕಳ್ಯಾ ಪಾನ ಶಾಪ್ ಇಲ್ಲಿಂದ ತಗೆದ್ರಿ ಚೊಲೋ ಅದಾ ಇಲ್ಲಂದ್ರ ನಿಮಗ ಖಲಾಸ ಮಾಡ್ತಿವಿ ಅಂತ ಅಂದು ಅಲ್ಲಿಂದ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹಾದೇವ ತಂದೆ ಭೀಮಣ್ಣಾ ಚಿಣಮಗೇರಿ ಸಾ:ನಾಗರ ಕಟ್ಟಾ ಹತ್ತಿರ ಗಂಗಾನಗರ ಕಲಬುರಗಿ ಇವರು ದಿನಾಂಕ:15/09/2018 ರಂದು ನಾನು ಲಾಲಗೇರಿ ಕ್ರಾಸದಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಜಂಗೇ ಬ್ರದರ್ಸ್‌ ಹತ್ತಿರ ಸಿದ್ದು ಯಾದವ ಇತನು ನಿಂತಿದ್ದನು ನನಗೆ ತಡೆದು ಏ ಭೋಸಡಿ ಮಗನೆ ನಿನ್ನೆ ನಾನು ಕುಡಿಯಲು ಹಣ ಕೇಳಿದರೆ ಇಲ್ಲಾ ಅಂತಾ ಹೇಳುತ್ತಿಯಾ ನಿನ್ನ ಸೊಕ್ಕ ಬಹಳ ಆಗಿದೆ ಅಂತಾ ಬೈದನು ಆಗ ನಾನು ಯಾಕೆ ಬೈಯುತ್ತಿಯಾ ನನ್ನ ಹತ್ತಿರ ಹಣ ಇದ್ದಾಗ ಕೊಟ್ಟಿದ್ದೆನೆಲ್ಲಾ ಅಂದಾಗ ನನಗೆ ಎದರು ಮಾತನಾಡುತ್ತಿಯಾ ಅಂತಾ ಅಂದವನೆ ಅಲ್ಲೆ ಬಿದ್ದಿದ್ದ ಬಡಿಗೆ ತೆಗೆದುಕೊಂಡು ನನ್ನ ತಲೆಯ ಮೇಲೆ ಎಡಗಡೆಗೆ ಹೋಡೆದನು ರಕ್ತ ಬರಹತ್ತಿತ್ತು ಆಗ ಮತ್ತೆ ಹೊಡೆಯಲು ಬಂದಾಗ ನನ್ನ ಬಲಗೈ ಅಡ್ಡ ವೈದಾಗ ಬಲಗೈಗೆ ಬಡಿಗೆ ಬಡೆದು ಗುಪ್ತಗಾಯವಾಯಿತು. ಆಗ ಅಲ್ಲೆ ಹೊರಟಿದ್ದ ನನ್ನ ತಮ್ಮ ನಿಂಗಪ್ಪಾ ಹಾಗೂ ಆನಂದ ಜಮಾದಾರ ಕೂಡಿ ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನೂ ಹೊಡೆಬಡೆ ಮಾಡುತ್ತಿದ್ದನು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.