POLICE BHAVAN KALABURAGI

POLICE BHAVAN KALABURAGI

25 August 2017

Kalaburagi District Reported Crimes

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಬಸವರಾಜ ಹಿರಾಪೂರ ಸಾ|| ಕೋಳಕುರ ಹಾ.. ಲಕ್ಕಪ್ಪ ಲೇಔಟ್ ಜೇವರಗಿ ಇವರ ಹಿರಿಯ ಮಗ ಬಸವರಾಜ ವಯಸ್ಸು 14 ವರ್ಷ ಇರುತ್ತದೆ ಇತನು  ಜೇವರಗಿ ನಗರದ ಸರ್ಕಾರಿ ಹೈಸ್ಕೂಲನಲ್ಲಿ  8 ನೇ ಓದುತ್ತಿದ್ದಾನೆ ಎಂದಿನಂತೆ ಸದರಿ ನನ್ನ ಮಗ ಬಸವರಾಜ ಇತನು ದಿನಾಂಕ 16.08.2017 ರಂದು ಬೆಳಗ್ಗೆ 09.00 ಗಂಟೆ ಸೂಮಾರಿಗೆ ಶಾಲೆಗೆ ಹೋಗುತ್ತೇನೆ ಅಂತಾ ಹೇಳಿ  ಮನೆಯಿಂದ ಹೋಗಿರುತ್ತಾನೆ , ನಂತರ ಅಂದು ಸಾಯಾಂಕಾಲವಾದರು ಕೂಡಾ ಮನೆಗೆ ಬಾರದ ಕಾರಣ ನಾನು ನನ್ನ ಹೆಂಡತಿ ಮತ್ತು ನಮ್ಮ ಓಣಿಯ ಚಾಂದಸಾಬ ಮೂವರು ಕೂಡಿಕೊಂಡು ಜೇವರಗಿ ನಗರ ತುಂಬೆಲ್ಲಾ ಹುಡುಕಾಡಿದರು ನನ್ನ ಮಗ ಬಸವರಾಜ ಸಿಕ್ಕಿರುದಿಲ್ಲಾ ನಂತರ ನಮ್ಮ ಬೀಗರು ಮತ್ತು ಸಂಬಂದಿಕರ ಊರುಗಳಿಹೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಣೆ ಮಾಡಿದರು ಕೂಡಾ ನನ್ನ ಮಗನ ಬಗ್ಗೆ ಪತ್ತೆಯಾಗಿರುವುದಿಲ್ಲಾ ನಾವು ಅಂದಿನಿಂದ ಇಂದಿನ ವರೆಗೆ ನನ್ನ ಮಗನನ್ನು ಜೇವರಗಿ,ಸುತ್ತ ಮುತ್ತಾ ಹಳ್ಳಿಗಳಲ್ಲಿ ಹುಡುಕಾಡಿರು ಅವನು ಸಿಕ್ಕಿರುವುದಿಲ್ಲಾ , ನನ್ನ ಮಗ ಬಸವರಾಜನು ದಿನಾಂಕ 16.08.2017 ರಂದು ಬೆಳಗ್ಗೆ ಶಾಲೆಗೆ ಹೋಗುವಾಗ ಯಾರೋ ಅಪರಿಚಿತರು ಅಪಹರಿಸಿಕೊಂಡು (ಅಪಹರಣ ) ಮಾಡಿಕೊಂಡು ಹೋಗಿರಬಹುದು , ನನ್ನ ಮಗ ಬಸವರಾಜನ ಚಹರಾ ಪಟ್ಟಿ :- ಅಂದಾಜು 4 ಅಡಿ ಎತ್ತರ ಗೋಧಿ ಮೈಬಣ್ಣ ದುಂಡನೆ ಮುಖ ಇದ್ದು ಕನ್ನಡ ಭಾಷೆ ತೊದಲು ಮಾತನಾಡುತ್ತಾನೆ ಅವನು ಅಂದು ಹಳದಿ,ಕಪ್ಪು ಹಾಗೂ ಬಿಳಿ ಬಣ್ಣದ ಹಾಫ ಶರ್ಟ ಹಾಗೂ ಒಂದು ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿರುತ್ತಾನೆ , ಅವನಿಗೆ ಬಲಗಣ್ಣಿನ ಕೇಳಗೆ ಹಳೆಯ ಗಾಯದ ಗುರುತು ಇರುತ್ತದೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ಜಮೀರ ತಂದೆ ಮಹ್ಮದ ರಫೀಕ ಬಂದೇಲಿ ಸಾ: ಚಾಂದಾ ಬಾಡಾ ಶಹಾಬಾದ ಇವರು ದಿನಾಂಕ: 23/08/2017 ರಂದು ಮದ್ಯಾಹ್ನ ಶಹಾಬಾದದ ಮಹೆಬೂಬ ಸುಭಾನಿ ದರ್ಗಾ ಹತ್ತಿರದಿಂದ  ನಾನು ಮತ್ತು ಗಣೆಶ ವರ್ಮಾ ಕೂಡಿಕೊಂಡು ಹೋಗುತ್ತಿದ್ದಾಗ ಬಿಲಾಲ ಕೋಲಾರಕರ ಇತನು ನಿಂತಿದ್ದನು ಅವನಿಗೆ ನಾನು ನನ್ನ ಅಣ್ಣನಾದ ಮಹ್ಮದ ವಸೀಮ ನಿನ್ನಿಂದಲೇ ಸತ್ತಿರುತ್ತಾನೆ ಅಂತಾ ಅಂದಿದ್ದಕ್ಕೆ ಅವನು ಒಮ್ಮಲೆ ಸಿಟ್ಟಿಗೆ ಒಂದು ನನಗೆ ಹೋಗಲು ಬಿಡದೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕೈ ಮುಷ್ಟಿ ಮಾಡಿ ಎಡಗೈ ಗೆ ಮತ್ತು ಕುತ್ತಿಗೆ ಹಿಂದೆ ಹೊಡೆದು ಗುಪ್ತಗಾಯಾ ಪಡಿಸಿ ನಿನಗೆ ಬಿಡುವುದಿಲ್ಲಾ ಮಗನೆ ಅಂತಾ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಪುತ್ರ ತಂದೆ ಸಾಯಬಣ್ಣ :50 ಸಾ:ಕಡಬೂರ ಇವರು ದಿನಾಂಕ:11.08.2017 ರಂದು ಬೆಳಗಿನ ವೇಳೆ ತಮ್ಮೂರ ರೇವಣಸಿದ್ದಪ್ಪಾ ತಂದೆ ಶ್ರೀಮಂತ ಇತನು ಚಲಾಯಿಸುವ ಕ್ರೂಸರ್ ಜೀಪ್ ನಂ.ಕೆಎ-32 ಎಮ್-8420 ನೇದ್ದರಲ್ಲಿ ಫಿರ್ಯಾದಿ ಮಗ ಅಭಿಶೇಕ ಇತನಿಗೆ ಕೂಡಿಸಿಕೊಂಡು ಶಹಾಬಾದ ಮಾರ್ಗವಾಗಿ ಚಿತ್ತಾಪೂರಕ್ಕೆ ಹೋಗುವಾಗ 4.00 ಎಎಂಕ್ಕೆ  ಮಾಲಗತ್ತಿ ದಾಟಿ ರಸ್ತೆಯ ತಿರುವಿನಲ್ಲಿ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋಗಿ ಕಟ್ ಹೊಡೆದಿದ್ದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿ ಮಗ್ಗಲಾಗಿ ಬಿದ್ದು ಅಪಘಾತ ವಾಗಿರುತ್ತದೆ ಅಂತಾ ವಿಷಯ ಗೊತ್ತಾಗೆ ಸ್ತಳಕ್ಕೆ ಬಂದು ಗಾಯ ಪೆಟ್ಟು ಹೊಂದಿದ್ದ ಫಿರ್ಯಾದಿ ಮಗ ಅಭಿಶೇಕ ಇತನಿಗೆ ನೋಡಲಾಗಿ ಹಣೆಗೆ ಗದ್ದಕ್ಕೆ ತಲೆಗೆ ಮತ್ತು ಬಲಗೈ ಗೆ ರಕ್ತಗಾಯವಾಗಿ ಅಲ್ಲಲ್ಲಿ ರತಚಿದ ಗಾಯವಾಗಿ ಬೇ ಹೋಶ್ ಆಗಿದ್ದು ಚಾಲಕನಿಗೆ ನೋಡಲಾಗಿ ಎದೆಗೆ ಮತ್ತು ತಲೆಗೆ ಒಳಪೆಟ್ಟಾಗಿದ್ದು ಗಾಯ ಪೆಟ್ಟು ಹೊಂದಿದ ಅಭಿಶೇಕ ಇತನಿಗೆ ಕಲಬುರಗಿಯ ಸರೋಜಿನಿ ಮೋದಿ ಆಸ್ಪತ್ರೆಗೆ ದಾಖಲುಮಾಡಿದ್ದು  ಕ್ರೂಸರ್ ಜೀಪ್ ನಂ.ಕೆಎ-32 ಎಮ್-8420 ನೇದ್ದರ ಚಾಲಕ ಅತೀ ವೇಗ ಮತ್ತು ನಿಶ್ಕಾಳಜಿತನದಿಂದ ನಡೆಸುತ್ತಾ ಬಂದು ಅಪಘಾತ ಮಾಡಿದ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.