POLICE BHAVAN KALABURAGI

POLICE BHAVAN KALABURAGI

16 February 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ಉಮೇಶ ತಂದೆ ಅಮೃತರಾವ ಗೋಣಿಗಿಕರ ಸಾಃ ಕಿಣ್ಣಿಸಡಕ ತಾಃಜಿಃ ಗುಲಬರ್ಗಾರವರು ನಾನು ಮತ್ತು ನನ್ನ ತಮ್ಮ ಸುರೇಶ, ಪರಮೇಶ ಮಗ್ಗಿ, ಮಹೇಂದ್ರ ಹೋಳ್ಕರ ಕೂಡಿಕೊಂಡು ದಿನಾಂಕ:16/02/2012 ರಂದು ಮಧ್ಯಾಹ್ನ ಸುಮಾರಿಗೆ ನಮ್ಮೂರಿನಿಂದ ಪಾಸಪೋರ್ಟ ಅರ್ಜಿ ವಿಚಾರಣೆ ಕುರಿತು ಕಮಲಾಪೂರಕ್ಕೆ ಬಂದು ಪಾಸಪೋರ್ಟಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಝರಾಕ್ಸ ಮಾಡಿಸಲು ಮಾಟೂರ ಕಾಂಪ್ಲೆಕ್ಸಗೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಮಾಟುರ ಕಾಂಪ್ಲೇಕ್ಸ ಎದುರುಗಡೆ ರೋಡಿನ ಮೇಲೆ ಹಿಂದುಗಡೆಯಿಂದ ಆಟೋ ರೀಕ್ಷಾ ನಂ. ಕೆಎ:39-1245 ಚಾಲಕನಾದ ವಾಸಿಂ ತಂದೆ ಗೊರೇಸಾಬ ಖೋರಬಾ ಸಾಃ ಕಮಲಾಪೂರ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸುರೇಶ ಮತ್ತು ಮಹೇಂದ್ರ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವರಿಗೆ ಅಲ್ಲಲ್ಲಿ ತರಚಿದ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತವೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 15/2012 ಕಲಂ. 279, 337, 338 ಐಪಿಸಿ ಸಂ. 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮುಂಜಾಗ್ರತೆ ಕ್ರಮ:

ನೆಲೋಗಿ ಪೊಲೀಸ್ ಠಾಣೆ: ದಿನಾಂಕ 15-02-2012 ರಂದು ಮುಂಜಾನೆ 9:30 ಗಂಟೆಗೆ ನೆಲೋಗಿ ಬಸ್ಸ ನಿಲ್ದಾಣದ ಹತ್ತಿರ ಒಬ್ಬನು ಸಾರ್ವಜನಿಕ ರಸ್ತೆಯಲ್ಲಿ ನಿಂತು ಸಾರ್ವಜನಿಕರೊಂದಿಗೆ ಅಸಬ್ಯವಾಗಿ ವರ್ತಿಸುತ್ತಾ ಅವ್ಯಾಚ್ಚ ಶಬ್ದಗಳಿಂದ ಬೈದಾಡುತ್ತಾ ತೊಂದರೆ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಶ್ರೀ ಸುಭಾಷ ಎ ಎಸ್ ಐ ಹಾಗೂ ಜಗಧೀಶ ಸಿಪಿಸಿ ರವರೊಂದಿಗೆ ಹೋಗಿ ಆತನನ್ನು ವಿಚಾರಿಸಲಾಗಿ ಚಂದ್ರಕಾಂತ ತಂದೆ ಸಿದ್ರಾಮಪ್ಪ ಪಾರಗೊಂಡ ಸಾ: ಬಳ್ಳುಂಡಗಿ ಅಂತಾ ಹೇಳಿದನು ಸದರಿಯನನ್ನು ಹಾಗೇ ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುತ್ತಾನೆ ಅಂತಾ ತಿಳಿದು ಆತನನ್ನು ವಶಕ್ಕೆ ತೆಗೆದುಕೊಂಡು ಬಂದು ಮುಂಜಾಗ್ರತೆ ಕ್ರಮ ಕುರಿತು.ಠಾಣೆ ಗುನ್ನೆ ನಂ 21/2012 ಕಲಂ 110 (ಇ) & (ಜಿ) ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಹಾವು ಕಚ್ಚಿ ಹುಡಗಿ ಸಾವು:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀದೇವಿ ತಂದೆ ಭೀಮಶ್ಯಾ ಕಿವಡೆಕರ ವ: 18 ವರ್ಷ ಇವಳು ದಿನಾಂಕ 15/2/2012 ರಂದು ರಾತ್ರಿ ಮಲಗಿಕೊಂಡಾಗ ಅವಳ ಎಡಗೈ ಹಸ್ತದ ಕೆಳಗೆ ಹಾವು ಕಚ್ಚಿದ್ದು ಉಪಚಾರ ಕುರಿತು ಖಾಸಗಿ ಜೌಷದ ಇಲಾಜ ಮಾಡಿಸಿದ್ದು, ಸದರಿ ಶ್ರೀದೇವಿ ಇವಳು ಗುಣಮುಖವಾಗದೆ ಇಂದು ದಿನಾಂಕ 15/2/12 ರಂದು ಮಧ್ಯರಾತ್ರಿ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ರಾಣಪ್ಪ ತಂದೆ ಭೀಮಶ್ಯಾ ಕಿವಡಿಕರ ಸಾ: ಕಲ್ಲಹಂಗರಗಾ ತಾ: ಜಿ: ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.