POLICE BHAVAN KALABURAGI

POLICE BHAVAN KALABURAGI

16 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಭೀಮರಾಯ ತಂದೆ ಗಿರೆಪ್ಪಾ ನಾಗನಹಳ್ಳಿ ಸಾ: ತಾವರಗೇರಾ ಮತ್ತು  ಮತ್ತು ಶಿವಲಿಂಗಪ್ಪ ಹಡಪದ, ಮೈನೋದ್ದಿನನ ಮಗ ಮೂವರು ದಿನಾಂಕ 14-11-2013 ರಂದು ಗಂಜ ಬಸಸ್ಟ್ಯಾಂಡದಿಂದ  ತಾವರಗೇರಾ ಗ್ರಾಮಕ್ಕೆ ಆಪಾದಿತನ ಆಟೋರಿಕ್ಷಾ ಕೆಎ 32 8052  ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದು, ಆಟೋ ಚಾಲಕ ಬಸವರಾಜ ತನ್ನ ಆಟೋವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬೀರಪ್ಪ ಗುಡಿ ಎದುರಿನ ರೋಡಿನ ಮೇಲೆ ಬಂದಾಗ ಎದುರುನಿಂದ ಯಾವುದೋ ವಾಹನ  ಬರಲು ಅದಕ್ಕೆ ವೇಗದಲ್ಲಿ ಕಟ್ಟ ಮಡಿದಾಗ ವೇಗದ ನಿಯಂತ್ರಣ ತಪ್ಪಿ ರೋಡಿನ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದು  ನನಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪೂರ ಠಾಣೆ : ಶ್ರೀ  ವಿನೋದ ತಂದೆ ಮನಹೋರ ತಳವಾರ ಸಾಸೊಂತ ತಾಜಿಗುಲಬರ್ಗಾ ಇವರ ಸಂಭಂದಿಕರ ಜವಳ ಕಾರ್ಯಕ್ರಮದ ಸಲುವಾಗಿ ಸದರ ಕಾರ್ಯಕ್ರಮಕ್ಕೆ ಹೋಗುವ ಕುರಿತು ದಿನಾಂಕ 14-11-2013 ರಂದು ಸಾಯಾಂಕಾಲದ ಸಮಯದಲ್ಲಿ ನಮ್ಮ ಗ್ರಾಮದ ಶೇರು ತಂದೆ ಯೂಸೂಫ್ ಇವರು ಚಲಾಯಿಸುವ ಕಮಾಂಡರ ಜೀಪ್ ನಂ. ಕೆಎ-39 ಎಮ್-204 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡು ನಾನು ಮತ್ತು  1. ಉದಯಕುಮಾರ ತಂದೆ ಮನೋಹರ ತಳವಾರ 2. ರವಿ ತಂದೆ ಸಿದ್ದಪ್ಪ ತಳವಾರ 3. ಅಂಭಣ್ಣ ತಂದೆ ಹಣಮಂತ ಇಪಿ ,4. ಶಿವಮ್ಮ ಗಂಡ ರುದ್ರಪ್ಪಾ ರಾಗೆನೂರ ಮತ್ತು 5. ಓಂ ಪ್ರಕಾಸ ತಂದೆ ಗುಂಡಪ್ಪಾ ಇವರು ಕೂಡಿಕೊಂಡು ಜೀಪಿನಲ್ಲಿ ಕುಳಿತು ಹೊರಟಿದ್ದು ,ಜೀಪನ್ನು ಶೇರು ತಂದೆ ಯೂಶೂಫ್ ಈತನು ಚಲಾಯಿಸುತ್ತಿದ್ದನು, ನಾವು ಕುಳತಿ ಹೊರಟ್ಟಿದ್ದ ಜೀಪ ಡೊಂಗರಗಾಂವ ಗ್ರಾಮದ ಹತ್ತಿರ ಹೊಗುತ್ತಿದ್ದಾಗ ಅಲ್ಲಿ ಕೆಲವು ಪ್ರಯಾಣಿಕರು ನಮ್ಮ ಜೀಪಿಗೆ ಕೈ ಮಾಡಿ ನಿಲ್ಲಿಸಿ ನಾವು ಕಾಳಮಂದರ್ಗಿ ಗ್ರಾಮಕ್ಕೆ ಹೋಗುತ್ತಿದ್ದು ನಮ್ಮನ್ನು ಕರೆದುಕೊಂಡು ಹೋಗಿ ಅಂತ ಅಂದಿದ್ದು ನಮ್ಮ ಜೀಪಿನಲ್ಲಿ ಇನ್ನೂ ಜಾಗ ಖಾಲಿ ಇರುವದ್ದರಿಂದ 3 ಜನ ಪ್ರಯಾಣಿಕರನ್ನು ಜೀಪಿನಲ್ಲಿ ಕೂಡಿಸಿಕೊಂಡು ಕಾಳಮಂದರಗಿ ಕಡೆಗೆ ಹೋಗುತ್ತಿರುವಾಗ ನಮ್ಮ ಜೀಪ ಚಾಲಕನಾದ ಶೇರು ಈತನು ತಾನು ಚಲಾಯಿಸುತ್ತಿದ್ದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತ ಅಡ್ಡಾ ತಿಡ್ಡಿ ಕಟ್ಟ ಹೊಡೆಯುತ್ತಿದ್ದಾಗ ಜೀಪ್ ಕಾಳಮಂದರ್ಗಿ ಸಮೀಪ ಇರುವ ರಾಚಯ್ಯ ಸ್ವಾಮಿ ಇವರ ಹೊಲದ ಹತ್ತಿರ ಹೊಗುತ್ತಿದ್ದಾಗ ಶೇರು ತಂದೆ ಯುಶೂಫ್ ಈತನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಓಮ್ಮಲೆ ಕಟ್ಟ ಮಾಡಿದಾಗ ಜೀಪಿನ ಮೇಲೆ ನಿಯಂತ್ರಣ ತಪ್ಪಿ ಜೀಪನ್ನು ರಸ್ತೆಯ ಎಡಭಾಗಕ್ಕೆ ಪಲ್ಟಿ ಮಾಡಿದ್ದು ಇರುತ್ತದೆನಂತರ ನಾವು ಜೀಪನಿಂದ ಕೆಳಗೆ ಇಳಿದು ನೋಡಲಾಗಿ ಅಂಬಣ್ಣ ತಂದೆ ಹಣಮಂತ ಇಟಿ ನೋಡಲು ಅವರ ಬಲಗಾಲಿಗೆ ಭಾರಿ ಗುಪ್ತಗಾಯಗಳಾಗಿ ಮತ್ತು ಜೀಪಿನಲ್ಲಿ ಕುಳಿತ ಇತರರಿಗೂ ಸಾದಾ ಹಾಗೂ ಭಾರಿ ರಕ್ತ ಮತ್ತು ಗುಪ್ತಗಾಗಳಾಗಿದ್ದುಜೀಪ ಚಾಲಕ ಜೀಪನು ಬಿಟ್ಟು ಓಡಿ ಹೊಗಿರುತ್ತಾನೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.