POLICE BHAVAN KALABURAGI

POLICE BHAVAN KALABURAGI

26 October 2014

Gulbarga District Reported Crimes

ಕೊಲೆ ಪ್ರಕರಣ :
ರೇವೂರ ಠಾಣೆ : ಶ್ರೀ ಅರ್ಜಿನ ತಂದೆ ಅಂಬೂತ ತ್ರೀಮುಖಿ ಸಾ||ಬೈರಾಮಡಗಿ ಇವರು ದಿನಾಂಕ:24-10-2014 ರಂದು ಮದ್ಹಾಹ್ನ 2:00 ಗಂಟೆ ಸುಮಾರಿಗೆ ನಾನು ನಮ್ಮೂರಿನ ಅಗಸಿ ಹತ್ತಿರ ಕುಳಿತಾ ನಮ್ಮೂರಿನ ಶಿವಪ್ಪ ತಂದೆ ಶ್ರೀಮಂತ ಚಾಳಿಕರ್ ಎಂಬಾತನು ಬಂದು ತಿಳಿಸಿದ್ದೇನೆಂದರೆ, ಗೊಬ್ಬುರ (ಬ) ದಿಂದ ಬೈರಾಮಡಗಿಗೆ ಬರುವ ರೋಡಿನ ಪಕ್ಕದಲ್ಲಿ ಗುಂಡಪ್ಪ ಜೋಗದ ಇವರ ಹೊಲಕ್ಕೆ ಹೊಂದಿಕೊಂಡಿದ್ದ ತಗ್ಗಿನಲ್ಲಿ ನಿಂತ ನೀರಿನಲ್ಲಿ ಒಬ್ಬಳು ಅಪರಿಚಿತ ಹೆಣ್ಣು ಮಗಳ ಶವ ಬೆತ್ತಲೆ ಸ್ಥಿತಿಯಲ್ಲಿ ತೆಲುತ್ತಿದೆ ಅಂತಾ ತಿಳಿಸಿದಾಗ ವಿಷಯ ಗೊತ್ತಾದ ಕೂಡಲೇ ನಾನು ಮತ್ತು ನಮ್ಮೂರಿನ ಹುಸೇನಿ ತಂದೆ ಗುಡುಸಾಬ ಜಾಮಾದಾರ, ಅಣವೀರಪ್ಪ ತಂದೆ ಸಿದ್ರಾಮಪ್ಪ ಗುರನಂಜ ಮತ್ತಿರರು ಸ್ಥಳಕ್ಕೆ ಬಂದು ನೋಡಿರು ತ್ತೆನೆ. ಸದರಿ ಶವವು ಅಪರಿಚಿತ ಹೆಣ್ಣು ಮಗಳ ಶವವಿದ್ದು ಮೃತಳ ಅಂದಾಜು ವಯಸ್ಸು 35-40 ವರ್ಷ ಇರುತ್ತದೆ ಮೃತಳ ಚಹರೆ ದುಂಡು ಮುಖ, ಸಾದಾಗಪ್ಪು ಮೈಬಣ್ಣ ಇದ್ದು, ಸಾದಾರಣ ಕೈಟ್ಟು ಹೊಂದಿರುತ್ತಾಳೆ, ಸದರಿಯವಳಿಗೆ ಹೆಣ್ಣು ಮಕ್ಕಳು ಮುಖಕ್ಕೆ ಕಟ್ಟುವ ಬಟ್ಟೆಯಿಂದ ಮತ್ತು ಒಂದು ಹಸಿರು ಬಣ್ಣದ ಹಗ್ಗದಿಂದ ಬಿಗಿದು ಎಲ್ಲೋ ಕೊಲೆ ಮಾಡಿ ಸ್ತಾಕಿ ಪುರಾವೆಗಳು ನಾಶ ಪಡಿಸುವ ಉದ್ದೇಶದಿಂದ ಇಲ್ಲಿಗೆ ತಂದು ನೀರಿನಲ್ಲಿ ಹಾಕಿ ಹೋಗಿರುತ್ತಾರೆ. ಸದರಿಯವಳಿಗೆ ದಿನಾಂಕ:23, 24-10-2014 ರಂದು ರಾತ್ರಿ ವೇಳೆಯಲ್ಲಿ ಎಲ್ಲೋ ಕೊಲೆ ಮಾಡಿ ಹಾಕಿದಂತೆ ಕಂಡು ಬಂದಿರುತ್ತದೆ.ಮೃತ ಶವದ ಮೈಮೇಲೆ 1] ಒಂದು ಬಿಳಿ ಮತ್ತುಗುಲಾಬಿ ಬಣ್ಣ ಡಿಜೇನ ಓಡ್ನಿ 2] ಒಂದು ನೇರ ಗೆರೆಯುಳ್ಳ ಗುಲಾಬಿ ಬಣ್ಣದ ಚುಡಿದಾರ  3] ಒಂದು ಬಿಳಿ ಮತ್ತು ಗುಲಾಬಿ ಬಣ್ಣ ಡಿಜೇನ ಸಿಲ್ವಾರ 4] ಒಂದು ಕಪ್ಪು ಬಣ್ಣ ಅಂಡರವೇರ 5] ಒಂದು ಬಿಳಿ ಬಣ್ಣದ ಬ್ರಾ 6] ಕುತ್ತಿಗೆ ಹೆಣ್ಣು ಮಕ್ಕಳು ಮುಖಕ್ಕೆ ಕಟ್ಟು ಕಂದು ಬಿಳಿ ಬಣ್ಣ ಹೂವಿನ ಡಿಜೈನ ಬಟ್ಟೆ ಹಾಗು ಒಂದು ಹಸಿರು ಬಣ್ಣ ನೈಲನ ಹಗ್ಗದಿಂದ ಬಿಗಿದಿದ್ದು ಇರುತ್ತದ. 7] ಬಲಕಿನ ಕೈಯಲ್ಲಿ ಒಂದು ಪಂಚ ಲೋಹ ಖಡ್ಗ 8] ಎರಡು ಕಾಲಲ್ಲಿ ಒಂದೊಂದು ಬೆಳ್ಳಿ ನಮೂನೆ ಕಾಲುಂಗುರಗಳು ಇರುತ್ತವೆ. ಎರಡು ಕೈಗಳಿಗೆ ಮೆಹಿಂದ ಹಚ್ಚಿದ್ದು ಕೈ ಮತ್ತು ಕಾಲುಗಳ ಉಗುರುಗಳಿಗೆ ಕೆಂಪು ಬಣ್ಣ ನೇಲ ಹಚ್ಚಿರುತ್ತಾಳೆ. ಸದರಿಯವಳಿಗೆ ಯಾರೋ ವ್ಯಕ್ತಿಗಳು ಯಾವೋದೋ ದುರದ್ದೇಶದಿಂದ ಕುತ್ತಿಗೆಗೆ ಬಟ್ಟೆ ಮತ್ತು ಹಗ್ಗದಿಂದ ಬಿಗಿದು ಎಲ್ಲೋ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವ ಇಲ್ಲಿಗೆ ರೋಡಿನ ಪಕ್ಕದ ತಗ್ಗಿನಲ್ಲಿ ನಿಂತ ನೀರಿನಲ್ಲಿ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಅಪಫಜಲಪೂರ ಠಾಣೆ : ಶ್ರೀ ವಿಕ್ರಮ ತಂದೆ ಶಿವು ರಾಠೋಡ ಸಾ|| ದೇಸಾಯಿ ಕಲ್ಲೂರ ತಾಂಡಾ ಇವರು ದಿನಾಂಕ 25/10/2014  ರಂದು  ತನ್ನ ಮೋ ಸೈ ನಂಬರ ಕೆಎ-32 ಎಎಫ್-2068 ನೇದ್ದರ ಮೇಲೆ ಅಫಜಲಪೂರದಿಂದ ದೇಸಾಯಿ ಕಲ್ಲೂರ ತಾಂಡಾದ ಕಡೆಗೆ ಹೋಗುತ್ತಿರುವಾಗ ಅಪ್ಪು ಮಸ್ತಾರ ರವರ ಹೊಲದ ಹತ್ತಿರ  ರೋಡಿನ ಮೇಲೆ ಎದರುಗಡೆಯಿಂದ ಟ್ರಾಕ್ಟರ ನಂ ಕೆಎ-32 ಟಿ 8975 ನೇದ್ದರ ಚಾಲಕ ಟ್ರಾಕ್ಟರನ್ನು ಅತಿವೇಗವಾಗಿ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿ ರಕ್ತ ಗಾಯ ಮತ್ತು  ಗುಪ್ತ  ಗಾಯ ಪಡಿಸಿ ತನ್ನ ಟ್ರಾಕ್ಟರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಶರಣಪ್ಪ ತಂದೆ ಕುಪೇಂದ್ರ ಅವಟಿ ಸಾ: ಪ್ಲಾಟ ನಂ 90 ಆನಂದೇಶ್ವರ ನಗರ ಸಾಹಿ ಮಂದಿರ ಸಮೀಪ ಗುಲಬರ್ಗಾ ರವರ  ತಂದೆಯಾದ ಕುಪೇಂದ್ರ ಅವಟಿ ಇವರು ದಿನಾಂಕ:24/10/2014 ರಂದು ಬೆಳಿಗ್ಗೆ 10=30 ಗಂಟೆಗೆ ರಂದು ಸಂಗಮೇಶ್ವರ ಏಜೇನ್ಸಿಯಲ್ಲಿ ಗ್ಯಾಸ ನಂಬರ ಹಚ್ಚುವ ಕುರಿತು ರಾಮ ಮಂದಿರ ರಿಂಗ ರೋಡ ದಿಂದ ಸಂಗಮೇಶ್ವರ ಏಜೇನ್ಸಿ ಕಡೆಗೆ ನಡೆದುಕೊಂಡು ರೋಡ ಎಡಗಡೆಯಿಂದ ಹೋಗುತ್ತಿರುವಾಗ ಆನಂದ ಆಸ್ಪತ್ರೆಯ ಎದುರಿನ ರೋಡ ಮೇಲೆ ಹಿಂದಿನಿಂದ ಮೋ/ಸೈಕಲ್ ನಂ; ಕೆಎ 32 -1183 ರ ಸವಾರ ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ತಂದೆಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಎಡಗಡೆ ಹಣೆಯ ಮೇಲೆ ಭಾರಿ ಪೆಟ್ಟು ಬಿದ್ದು ರಕ್ತ ಬಂದಿರುತ್ತದೆ. ಎಡ ಕಪಾಳ ಮೇಲೆ ತರಚೀದಗಾಯ  ಎಡ ಹುಬ್ಬಿಗೆ ಪೆಟ್ಟು , ಬಲ ಮೊಳಕಾಲಿಗೆ ,ಎಡ ಮೊಳಕಾಲಿಗೆ ತರಚೀದಗಾಯ ಮಾಡಿ ಮೋ/ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ರಾಜು ತಂದೆ ಹಣಮಂತ ಕಾಂಬಳೆ ಸಾ: ಸಾಲೇಗಾಂವ ಇವರು ದಿನಾಂಕ:23/10/2014 ರಂದು 05:30 ಪಿ.ಎಂ. ಗಂಟೆಗೆ ನಾನು ನಮ್ಮ ಮಾವನ ಮನೆಯಾದ ಸಕ್ಕರಗಾದಲ್ಲಿದ್ದು ಲಿಂಗಾಯತ ಜಾತಿಗೆ ಸೇರಿದ ಸಿದ್ದಾರಾಮ ತಂದೆ ಶ್ರೀಶೈಲ ಬಿರಾದಾರ, ಗುರು ತಂದೆ ಶ್ರೀಶೈಲ ಬಿರಾದಾರ ಇವರ ತಾಯಿಯಾದ ನಾಗಮ್ಮಾ ಗಂಡ ಶ್ರೀಶೈಲ ಬಿರಾದಾರ ಇವರು ನಿನ್ನೆ ದಿನಾಂಕ: 23/10/2014 ರಂದು ರಾಜು ಗೌಡ ಮತ್ತು ಮಾದನ ಹಿಪ್ಪರಗಾದ 08-10 ಜನರು ಸೇರಿಕೊಂಡು ನಮ್ಮ ಮನೆಗೆ ಬಂದು ನನ್ನನ್ನು ಕಮಾಂಡರ ಜೀಪ್ ನಂ: ಕೆ.ಎ: 28 ಎಮ್:2131 ಈ ಸಂಖ್ಯೆ ವ್ಯಾನಿನಲ್ಲಿ ನನ್ನನೂ ಎತ್ತಿ ಹಾಕಿಕೊಂಡು ಪಂಚಾಯತಿ ಕಟ್ಟೆಗೆ ಒಯ್ದು ಅಲ್ಲಿಂದ ಅವರ ಮನೆಗೆ ಕರೆದುಕೊಂಡು ಹೋಗಿ ಏ ಹೊಲೆ ಸೂಳೆ ಮಗನೇ ನಿನ್ನದು ಬಹಳ ಆಗಿದೆ ಈಗ ಏನು ಮಾಡುತ್ತಿ ಮಾಡು ಅನ್ನುತ್ತಾ ಹಿಡಿಗಲ್ಲು ಹಿಡಿದು ನನ್ನ ಬಲಭಾಗ ಪಕ್ಕೆಗೆ ಜೋರಾಗಿ ಹೊಡೆದನು ಮತ್ತು ಅಲ್ಲೇ ಇದ್ದ ಸಿದ್ದಾರಾಮ ತಂದೆ ಶ್ರೀಶೈಲ ಬಿರಾದಾರ ಇತನು ಬಲಭಾಗದ ತೊಡೆಗೆ ಜೋರಾಗಿ ಮತ್ತು ಗುರು ತಂದೆ ಶ್ರೀಶೈಲ ಬಿರಾದಾರ ಕಲ್ಲಿನಿಂದ ಗುಪ್ತಾಂಗಕ್ಕೆ ಮತ್ತು ಬೇನ್ನ, ಹೊಟ್ಟೆಯ ಮೇಲೆ ಮನ ಬಂದಂತೆ ಹೊಡೆದನು ಆಗ ನಾನು ಚೀರಾಡುವದನ್ನು ಕಂಡು ನನ್ನ ತಾಯಿ ನನ್ನ ರಕ್ಷೀಸಲು ಪ್ರಯತ್ನ ಪಟ್ಟಾಗ ನಾಗಮ್ಮಾ ಗಂಡ ಶ್ರೀಶೈಲ ಇವಳು ನನ್ನ ತಾಯಿಯನ್ನು ಎಳೆದಾಡಿ ಈ ಹೊಲೆಯ ರಂಡೀಗೆ ಬೀಡಬೇಡಿರಿ ಇವಳಿಗೂ ಹೊಡೆಯಿರಿ ಎಂದು ಹೇಳಿದಳು ಆಗ ಅಲ್ಲೆ ಇದ್ದ ಅವಳ ಮಕ್ಕಳು ಮತ್ತು ಮಾದನ ಹಿಪ್ಪರಗಾದಿಂದ ಕರೆಯಿಸಿದ 08-10 ಜನರು ಒಟ್ಟಿಗೆ ಸೇರಿ ಕೆಳಗೆ ಹಾಕಿ ಕಾಲಿನಿಂದ ಮನ ಬಂದಂತೆ ಒದ್ದಾಗ ನನ್ನ ಗುಪ್ತಾಂಗಕ್ಕೆ ಬಲವಾಗಿ ಪೆಟ್ಟು ಬಿದ್ದಿದರಿಂದ ನನಗೆ ಪ್ರಜ್ಞೆ ತಪ್ಪಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 25/10/2014 ರಂದು ರಾತ್ರಿ 12.45 ಗಂಟೆಗೆ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಬ್ರಹ್ಮಪೂರ ಬಡಾವಣೆಯ ರಾಮ ಮಂದಿರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್‌ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಕೆ.ಎಂ.ಸತೀಶ ಪಿಐ ಸಾಹೇಬರು ಬ್ರಹ್ಮಪೂರರವರು ಸಿಬ್ಬಂದಿಯವರಾದ ಪಿಸಿ-115 ನಿಜಲಿಂಗಪ್ಪಾ, ಪಿಸಿ-761 ರಾಮು, ಪಿಸಿ-920 ಪ್ರಶಾಂತ, ಪಿಸಿ-376 ಅಶೋಕ, ಪಿಸಿ-320 ಶಿವಲಿಂಗಪ್ಪಾ ವಾಹನ ಚಾಲಕ ಪಿಸಿ-1036 ಆನಂದ ಮತ್ತು ರಾಘವೇಂದ್ರ ನಗರ ಪೊಲೀಸ ಠಾಣೆಯ ಪಿಸಿ-1021 ನಿತ್ಯಾನಂದ, ಪಿಸಿ-343 ತುಕಾರಾಮ, ಹೆಚ್‌ಸಿ-157 ಅಶೋಕ ಮತ್ತು ಪಂಚರೊಂದಿಗೆ ದಾಳಿಮಾಡಿ 7 ಜನರನ್ನು ಹಿಡಿದು ಇಸ್ಪೀಟ್‌ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 42550/-ರೂ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅತ್ಯಾಚಾರ ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಇವರನ್ನು  ಈಗ 4 ವರ್ಷಗಳ ಹಿಂದೆ ಇದೂರಲ್ಲೇ ರಾಜು ತಂದೆ ಗುಂಡಪ್ಪಾ ಇತನೊಂದಿಗೆ ಮದುವೆ ಮಾಡಿಕೊಟ್ಟುದ್ದು ನನಗೆ ಈಶ್ವರಿ ಅಂತ 3 ವರ್ಷದ ಹೆಣ್ಣು ಮಗು ಇದ್ದು ಮನೆಯಲ್ಲಿ ನಾನು ಗಂಡ ಮಾವ,ಹಾಗೂ ನಾದೀನಿಯರು ಒಟ್ಟಿಗೆ ವಾಸಿಸುತ್ತಿದ್ದು ನಮ್ಮ ಮನೆಯ ಬಾಜು ಮನೆಯವರಾದ ಮಲ್ಲಿಕಾರ್ಜುನ ತಂದೆ ಪೀರಪ್ಪಾ ಇತನೂ ನನಗೆ ಆಗಾಗ ಕೆಣಕುವುದು,ಕೈ ಸನ್ನೆ ಮಾಡುವುದು ನನ್ನ ಮನಸ್ಸು ನಿನ್ನ ಮೇಲೆ ಬಂದಿದೆ. ನಿನಗೆ ಓಡಿಸಿಕೊಂಢು ಹೋಗುತ್ತೇನೆ. ಅಂತ ಹೇಳುತ್ತಿದ್ದು ಅದಕ್ಕೆ ನಾನು ಮದುವೆಯಾಗಿ ಮಗು ಸಹ ಇದ್ದು ಈ ರೀತಿ ಮಾಡುವುದು ಸರಿ ಅಲ್ಲ ಅಂತ ಹೇಳುತ್ತಿದ್ದು ಸುಮಾರು 4 ತಿಂಗಳ ಹಿಂದೆ ಮಲ್ಲಿಕಾರ್ಜುನ ಯಾನಾಗುಂದಿ ಜಾತ್ರೆಯಿಂದ ಬಳೆ ತಂದು ಅದರದ ಜೊತೆ ಒಂದು ಫೋಟೊ ಸಹ ಕೊಟ್ಟಿದ್ದು ಈ ವಿಷಯ ಗಂಡನಿಗೆ ತಿಳಿಸಿ ಅವರ ಮನೆಗೆ ಹೋಗಿ ಆತನ ತಾಯಿಗೆ ಹೇಳಿ ಬಳೆ.ಫೊಟೊ ವಾಪಸ್ಸ ಕೊಟ್ಟಿದ್ದು . ನಂತರ ಕೇಲವು ದಿವಸಗಳು ಆದ ನಂತರ ಮಲ್ಲಿಕಾರ್ಜುನ ನನಗೆ ಕೈ ಮಾಡಿ ಕರೆದು ನೀನು ಬರಲೇ ಬೇಕು ಬರಲಿಲ್ಲ ಅಂದರೆ ನಾನು ಸಾಯುತ್ತೇನೆ ಅಂತ ಹೇಳಿ ಮನೆ ಪಕ್ಕದಲ್ಲಿರುವ ಕಂಟಿಯ ಹತ್ತಿರ ಏಳೆದುಕೊಂಡು ಹೋಗಿ ಜಬರದಸ್ತಿಯಿಂದ ಸಂಭೋಗ ಮಾಡಿ ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೂ ಹಾಗೂ ಗಂಡನಿಗೂ ಜೀವ ಸಹಿತ ಬಿಡುವುದಿಲ್ಲಾ ಅಂತ ಜೀವದ ಬೇದರಿಕೆ ಹಾಕಿದ್ದು ದಿನಾಂಕ: 22-10-14 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾನು ಓಣಿಯಲ್ಲಿರುವಾಗ ಮಲ್ಲಿಕಾರ್ಜುನ ಇತನೂ ನನಗೆ ಏಳೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಒಂದು ರೂಮನಲ್ಲಿ ನಾನು ಬೇಡ ಅಂದರೂ 2 ಸಲ ಜಬರಿ ಸಂಭೋಗ ಮಾಡಿದ್ದು ನಂತರ ನನ್ನ ಗಂಢ ಹಾಗೂ ನಾದೀನಿಯ ಗಂಡ ಅಶೋಕ ಇಬ್ಬರೂ ಬಂದು ಬಾಗಿಲು ತೆಗೆದಿದ್ದು ಇರುತ್ತದೆ. ಅದಾದ ನಂತರ ನಿನ್ನೆ ದಿನಾಂಕ:23-10-14 ರಂದು ನಮ್ಮ ಸಂಬಂಧಿಕರು ಮಲ್ಲಿಕಾರ್ಜುನನ ತಾಯಿ ಹಾಗೂ ಆತನ ಸಂಬಂಧಿಕರೊಂದಿಗೆ ಪಂಚಾಯತಿ ಮಾಡಿದರೂ ಒಪ್ಪದೆ ನೀವು ಏನು? ಮಾಡುತ್ತೀರಿ ಮಾಡಿಕೊಳ್ಳಿ ಅಂತ ಹೇಳಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.