POLICE BHAVAN KALABURAGI

POLICE BHAVAN KALABURAGI

12 June 2014

Gulbarga District Reported Crimes

ಹಲ್ಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ನರಸಯ್ಯ ತಂದೆ ಮುದ್ದಯ್ಯ ಈಳಿಗೇರ  ಸಾ : ಹುಡಾ ಬಿ ತಾ : ಸೇಡಂ ರವರು ದಿನಾಂಕ 10.06.14 ರಂದು ರಾತ್ರಿ 11:೦೦ ಗಂಟೆಯ ಸುಮಾರಿಗೆ ನಾನು ಆರ್.ಸಿ.ಎಫ್ ನ ಲಾರಿ ಯಾರ್ಡನಲ್ಲಿ ಹೋಗುತ್ತಿದ್ದಾಗ 1. ಮುಜಮ್ಮಿಲ್  ತಂದೆ ಮೌಲಾನ 2. ಸಮೀರ 3. ಸದ್ದಾಮ್ ತಂದೆ ಇಬ್ರಾಹಿಂ 4. ಅಫ್ರೋಜ್ ಲೋಕಂಡೆ ಸಾ : ಎಲ್ಲರು  ಳಖೇಡ ಸಂಗಡ 5, 6, ಜನರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈದು ಕೈ ಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ: 05-06-2014 ರಂದು ಸುಪರ ಮಾರ್ಕೆಟದ ಹನುಮಾನ ಗುಡಿಯ ಹತ್ತಿರ ಅಂದಾಜು 40 ವರ್ಷದ ಒಬ್ಬ ಅಪರಿಚಿತ ಗಂಡು ವ್ಯಕ್ತಿ ತನಗಿದ್ದ ಯಾವುದೋ ಕಾಯಿಲೆಯಿಂದ ಮದ್ಯಾಹ್ನ 12:00 ಗಂಟೆಗೆ ಸುಮಾರಿಗೆ ಮೃತ್ತ ಪಟ್ಟಿದ್ದು ಸದರಿ ಮೃತ ವ್ಯಕ್ತಿಯ ಬಗ್ಗೆ ಯಾರಾದರೂ ವಾರಸುದಾರರು ಬರಬಹುದು ಅಂತಾ ತಿಳಿದು ಶವವನ್ನು ಬ್ರಹ್ಮಪೂರ ಠಾಣೆಯ ಸಿಬ್ಬಂದಿಯವರು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ತಂದು ಇಟ್ಟಿದ್ದು ಇರುತ್ತದೆ. ಆದರೆ ಇಲ್ಲಿಯವರೆಗೆ ಸದರಿ ಅಪರಿಚಿತ ಗಂಡು ವ್ಯಕ್ತಿಯ  ವಾರಸುದಾರರು ಬರದೆ ಇರುವದರಿಂದ, ದಿನಾಂಕ 11-06-2014 ರಂದು ಬ್ರಹ್ಮಪೂರ ಠಾಣೆಯಲ್ಲಿ ಸ ಸ್ವಾಭಾವಿಕ ಸಾವು ಅಂತಾ ಪ್ರಕರಣ ದಾಖಲಿಸಲಾಗಿದೆ. 

Gulbarga District Reported Crimes

ಅ ಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ. ಜಯಶ್ರೀ ಗಂಡ ಸುನೀಲ ಹೊಸಮನಿ, ಸಾ : ಮಾಲಗತ್ತಿ, ತಾ:ಜಿ: ಗುಲಬರ್ಗಾ ರವರು ದಿನಂಪ್ರತಿ ಬೆಳಿಗ್ಗೆ ನಮ್ಮೂರಿನ ಶಾಲೆಗೆ ಹೋಗಿ ಶಾಲೆಯ ಆಗು ಹೋಗುಗಳಿಗೆ ವಿಚಾರ ವಿನಿಮಯ ಮಾಡುತ್ತಾ ಇರುತ್ತೇನೆ. ದಿನಾಂಕ: 11-06-2014 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ನಮ್ಮೂರ ಅಂಗನವಾಡಿ ಕಾರ್ಯಕರ್ತೆಯಾದ ಕುಮಾರಿ.ಲಕ್ಷ್ಮಿ ತಂದೆ ದೇವಿಂದ್ರಪ್ಪ ಕೊಡದೂರ ಇವರು ನನಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ಏನೆಂದರೆ ನಮ್ಮೂರಿನ ದತ್ತಾತ್ತೇಯ ತಂದೆ ಶರಣಪ್ಪ ಕಾಂಬಳೆ ಇವರ ಮಗಳು ಸೌಮ್ಯ, ಇವಳು ಶಾಲೆಯ ವಿರಾಮ ಬಿಟ್ಟಾಗ ಮನೆಗೆ ಹೋಗಿ ಊಟ ಮಾಡಿಕೊಂಡು ಮರಳಿ ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಮ್ಮ ಶಾಲೆಯ ಆವರಣದಲ್ಲಿ ಬರುತ್ತಿರುವಾಗ ಆಗ ನಮ್ಮೂರಿನ ರಾಣೋಜಿ ತಂದೆ ಮಲ್ಲಿಕಾರ್ಜುನ ಕೊಡದೂರ ಈತನು ಮೋಟರ ಸೈಕಲ್ ಮೇಲೆ ಬಂದು ಶಾಲೆಯ ಆವರಣದಲ್ಲಿ ಬಂದು ನಿಂತು ಅಂಜಲಿಗೆ ಕರೆದುಕೊಂಡು ಹೋಗುತ್ತಿದ್ದಾಗ ನಾನು ರಾಣೋಜಿಗೆ ವಿಚಾರಿಸಲಾಗಿ ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವಿ ಅಂತಾ ಕೇಳಿದಾಗ ಅವಳ ಫೋಟೋ ತೆಗೆಯಿಸಿಕೊಂಡು ಬರಲು ಕರೆದುಕೊಂಡು ಹೋಗುತ್ತಿದ್ದೇನೆ ಅಂತಾ ಹೇಳಿ ಹೋಗಿರುತ್ತಾನೆ. ತದ ನಂತರ ನಾನು ಅವನ ಮೇಲೆ ಸಂಶಯ ಬಂದಿದ್ದರಿಂದ ಅಂಜಲಿ ಮನೆಗೆ ಹೋಗಿ ಅವಳ ತಂದೆ-ತಾಯಿಯವರಿಗೆ ವಿಚಾರಿಸಲು ಮಗಳು ಊಟ ಮಾಡಿ ಶಾಲೆಗೆ ಹೋಗಿರುತ್ತಾಳೆ ಅಂತಾ ಅಷ್ಟೆ ಹೇಳೀದರು. ಆಗ ನಾನು ಪುನಃ ಶಾಲೆಗೆ ಬಂದು ಶಾಲೆಯ ಮುಖ್ಯಗುರುಗಳಾದ ಜಯಶ್ರೀ, ಹಾಗೂ ಸಹ ಶಿಕ್ಷಕಿಯರಾದ ಕಾಶಿಬಾಯಿ, ಸುಶಿಲಾಬಾಯಿ, ಶಕುಂತಲಾ, ಶಿಲ್ಪಾ, ಇಂದುಮತಿ ಇವರಿಗೆ ವಿಷಯ ತಿಳಿಸಿದ್ದು ಅಂತಾ ನನಗೆ ಹೇಳಿದಾಗ ನಾನು ಕೂಡಲೆ ನಮ್ಮೂರಿನ ಶಾಲೆಗೆ ಬಂದು ನಾನು ಮತ್ತು ಮೇಲೆ ನಮೂದಿಸಿದ ಶಿಕ್ಷಕರೊಂದಿಗೆ ಅಂಜಲಿಯ ತಂದೆ-ತಾಯಿಯ ಮನೆಗೆ ಹೋಗಿ ವಿಷಯ ತಿಳಿಸಿ ನಾವು ಮತ್ತು ಅವರ ತಂದೆ-ತಾಯಿಯವರು ಎಲ್ಲಾ ಕಡೆ ಹುಡುಕಾಡುತ್ತಿದ್ದಾಗ ಅಂಜಲಿ ಇವಳು ತಮ್ಮ ಮನೆಯ ಹತ್ತಿರ ಬಂದ ಬಗ್ಗೆ ವಿಷಯ ಗೊತ್ತಾಗಿ ನಾವೆಲ್ಲರೂ ಅಲ್ಲಿಗೆ ಹೋಗಿ ಅಂಜಲಿಗೆ ವಿಚಾರಿಸಲು ನನ್ನ ಮಾವನಾದ ರಾಣೋಜಿ ಈತನು ಶಾಲೆಯಿಂದ ತನ್ನ ಮೋಟರ ಸೈಕಲ್ ಮೇಲೆ ನನಗೆ ಭೂಪಾಲ ತೆಗನೂರ ಕಡೆ ಕರೆದುಕೊಂಡು ರಸ್ತೆಯ ಫೂಲ್ ಹತ್ತಿರ ನಿಲ್ಲಿಸಿ ನನಗೆ ಪೂಲ್ ಕೆಳಗೆ ಕರೆದುಕೊಂಡು ಹೋಗಿ ನನ್ನ ಮೈಮೇಲೆ ಇರುವ ಬಟ್ಟೆಗಳನ್ನು ಬಿಚ್ಚಿ ನನ್ನ ಮೈಮೇಲೆ ಬಿದ್ದು, ನಾನು ಏಕಿ ಹೊಯ್ಯುವ ಜಾಗದಲ್ಲಿ ಸಂಭೋಗ ಮಾಡಿದನು. ನಂತರ ನನಗೆ ಬಟ್ಟೆ ತೊಡಿಸಿ, ಅವನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ನಮ್ಮ ಮನೆಯ ಹತ್ತಿರ ಬಿಟ್ಟು ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.