POLICE BHAVAN KALABURAGI

POLICE BHAVAN KALABURAGI

04 August 2011

GULBARGA DISTRICT REPORTED CRIMES


ಮಹಿಳೆ ಮತ್ತು 3 ವರ್ಷದ ಮಗು ಕಾಣೆಯಾದ ಬಗ್ಗೆ :

ಯಡ್ರಾಮಿ ಠಾಣೆ :ದೇವಿಂದ್ರಪ್ಪಾ ತಂದೆ ದೊಡ್ಡ ಶಂಕರಗೌಡ ಬಿರಾದಾರ ಸಾ|| ನಾಗರಳ್ಲಿ ತಾ|| ಜೇವರ್ಗಿ ರವರು ದಿನಾಂಕ: 28-07-2011 ರಂದು ಮಧ್ಯಾಹ್ನ ಶ್ರೀಮತಿ ಬಸಮ್ಮ @ ಭಾಗ್ಯ ಗಂಡ ಶರಣಗೌಡ ಹುಂಡೆಕಾರ ಮತ್ತು 3 ವರ್ಷದ ಮಗು ವಿನೋದ ಸಾ| ಆಲೂರ ಹಾ||ವ|| ನಾಗರಳ್ಳಿ ತಾ|| ಜೇವಗಿ ರವರು ಮನೆಯಿಂದ ಹೆಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಮಹಿಳೆಯು 5.1 ಇಂಚ್ ಎತ್ತರ ಸಾದರಣ ಮೈಕಟ್ಟು, ಕಪ್ಪು ಮುಖ, ಕೆಂಪು ಬಣ್ನದ ಸೀರೆ ಮತ್ತು ಕೆಂಪು ಬೌಜ್ಲ ಉಟ್ಟುಕೊಂಡಿದ್ದು ಕನ್ನಡ ಭಾಷೆ ಬಲ್ಲವಳಾಗಿರುತ್ತಾಳೆ ಹಾಗೆ ಜೋತೆಯಲ್ಲಿ 3 ವರ್ಷದ ಮಗು ವಿನೋದ ಇತನು 2.5 ಅಡಿ ಎತ್ತರ, ಉದ್ದನೆಯ ಮುಖ, ಸಾದರಣ ಮೈಕಟ್ಟು ಇರುತ್ತದೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಯಡ್ರಾಮಿ ಠಾಣೆ 08442- 226233 ಅಥವಾ ಗುಲಬರ್ಗಾ ಕಂಟ್ರೊಲ್ ರೂಮ್ ಗೆ 100 ಅಥವಾ 08472-263604 ಗೆ ಸಂಪರ್ಕಿಸಲು ಕೋರಲಾಗಿದೆ .

ಕಳ್ಳತನ ಪ್ರಕರಣ:

ಆಳಂದ ಠಾಣೆ :ಶ್ರೀ ಗುಂಡೆರಾವ ತಂದೆ ನರಹರಿರಾವ ಕುಲಕರ್ಣಿ ಸಾ|| ಬಿ.ಎಸ.ಎನ್.ಎಲ್ ಕಛೇರಿ ಆಳಂದ ರವರು ನಮ್ಮ ಕೊಡಲ್ ಹಂಗರಗಾ ಗ್ರಾಮದ ಸಮೀಪದಲ್ಲಿ ಇದ್ದ ಬಿ.ಎಸ.ಎನಲ್ ಎಲ್ ಇಲಾಖೆಗೆ ಸೇರಿದ ಬಿ.ಎಸ.ಎನ. ಎಲ್ ಟವರ ಕೇಬಲ ವೈರ್ 40 ಮೀಟರ ಉದ್ದದ 6 ಪೀಸಗಳು ಅ|| ಕಿ|| 1,08000-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ:ಶ್ರೀ ರವಿ ತಂದೆ ಶಂಕರ ತಳವಾರ ಸಾಃ ಡೊಂಗರಗಾಂವ ತಾಃಜಿಃ ಗುಲಬರ್ಗಾ ಹಾ:ವ:ಪುಣೆ ರವರು ನಾನು, ಮೋಹನಚಂದ್ರ ಮತ್ತು ಶಿವಕುಮಾರ ಎಲ್ಲರೂ ಕೂಡಿಕೊಂಡು ನಮ್ಮ ಓಣಿ ಅಂಬೇಡ್ಕರ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಗುಟ್ಕಾ ಬೇಕಾಗಿದೆ ತೆಗೆದುಕೊಂಡು ಬರೋಣಾ ಅಂತಾ ಮಾತನಾಡುತ್ತಾ ನಮ್ಮೂರಿನ ಡೊಂಗರದೇವಿ ಗುಡಿ ಹತ್ತಿರ ಇರುವ ಸಂಗಪ್ಪಾ ಇತನ ಕಿರಾಣಿ ಅಂಗಡಿಗೆ ಹೋಗಿ ನಾವು ಗುಟ್ಕಾ ಕೇಳುತ್ತಿರುವಾಗ ಅಂಗಡಿಯಲ್ಲಿದ್ದ ಸೂರ್ಯಕಾಂತ, ಕೇದಾರ ವಡ್ಡನಕೇರಿ, ಇಬ್ಬರು ಕೂಡಿ, ವಿನಾಃಕಾರಣ ಜಾತಿ ಎತ್ತಿ ಅವಾಚ್ಯವಾಗಿ ಬೈದು ಮಲ್ಲಿಕಾರ್ಜುನ ತಂದೆ ಸಂಗಪ್ಪಾ ಇತನು ತನ್ನ ಅಂಗಡಿಯಿಂದ ಹೊರಗೆ ಬಂದು ನನ್ನ ಎಡ ಭುಜದ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮೋಹನ ಮತ್ತು ಶಿವಕುಮಾರ ಇವರು ಬಿಡಿಸಲು ಬಂದಾಗ ಸಂತೋಷ ತಂದೆ ಕಾಶಪ್ಪಾ ಒಡ್ಡನಕೇರಿ ಮತ್ತು ರಾಜಕುಮಾರ ತಂದೆ ಅಪ್ಪಣ್ಣಾ ಇಬ್ಬರು ಕೂಡಿ ಜ್ಯಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿದನು. ಶಿವಕುಮಾರ ಇತನಿಗೆ ಸಂಗಪ್ಪಾ ತಂದೆ ನಾಗಶೆಟ್ಟೆಪ್ಪಾ ಮತ್ತು ಸೂರ್ಯಕಾಂತ ಇತನು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ಕಳ್ಳತನಕ್ಕೆ ಪ್ರಯತ್ನ

ವಿಶ್ವವಿದ್ಯಾಲಯ ಠಾಣೆ :ಶ್ರೀ ಮಸ್ತಾನ ಬಿರಾದಾರ ತಂದೆ ಸೈಯ್ಯದ ಬಿರಾದಾರ ಸಾ: ಮಕ್ಕಾ ಕಾಲೋನಿ ಗುಲಬರ್ಗಾ ರವರು  ಅಕ್ಬರ ಬಾಗ ಕಾಲೋನಿಯಲ್ಲಿ ನಮ್ಮದೂಂದು ಮನೆಯಿದ್ದು, ಮನೆಯ ಭಾಗದಲ್ಲಿ ಸಹರಾ ಸಂಸ್ಥೆಯ ಆಪೀಸ ಇದ್ದು ದಿನಾಂಕ 03-08-2011 ರಂದು ಬೆಳಿಗ್ಗೆ ಸಂಸ್ಥೆಯ ಕಛೇರಿಗೆ ಒಳಗೆ ಶಬ್ದ ಕೇಳಿ ಬಂತು ನಾನು ತಕ್ಷಣ  ಮೇಲೆ ಹೋದಾಗ ಯಾರೂ ಮಹಿಳಾ  ಕಳ್ಳರು ಓಡುತ್ತಿದ್ದರು ಅವರನ್ನು ಬೆನ್ನು ಹತ್ತಿ ಹಿಡಿದು  ಹೆಸರು ವಿಚಾರಿಸಲಾಗಿ ಸಾಹು  ಗಂಡ ಕಿಲಾವರ ಸಕಟ ಸಾ; ಮಾಂಗರವಾಡಿ ಗಲ್ಲಿ ಸುಂದರ ನಗರ ಗುಲಬರ್ಗಾ ಓಡಿ ಹೋದ ಇನ್ನೊಬ್ಬ ಹೆಣ್ಣು ಮಗಳ ಹೆಸರು ವಿಚಾರಿಸಲಾಗಿ ಶಮೀನಾ ಗಂಡ ಮಹಾಂತೇಶ ಕಾಳೆ ಸಾ; ಮಾಂಗರವಾಡಿ ಗಲ್ಲಿ ಅಂತಾ ತಿಳಿಸಿದ್ದು ಇರತ್ತದೆ. ಹಿಂದಿನ ಬಾಗಿಲು ಒಡೆದು ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವರ
ವಿಗ್ರಹದ
ಕಿವಿಯಲ್ಲಿದ್ದ
ಬಂಗಾರದ
ಹೂವು
ಕಳ್ಳತನ:

ರಾಘವೇಂದ್ರ ನಗರ ಠಾಣೆ :
ಶ್ರೀ ಪಾಂಡುರಂಗ ತಂದೆ ದೇವರಾವ ದೇಶಮುಖ ನಮ್ಮ ಮನೆಯಲ್ಲಿ ದಿನಾಂಕ 16-07-2011 ರಂದು ಶ್ರೀ ಪಾಂಡುರಂಗ ದೇವರ ವಿಗ್ರಹದ ಕಿವಿಯಲ್ಲಿದ್ದ ಬಂಗಾರ ಹೂವು ಅಂದಾಜು 30,000/-ರೂ ದಿಂದ 40,000/-ರೂ ಬೆಲೆಯುಳ್ಳದ್ದು
ಕಳ್ಳತನವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ:

ಅಶೋಕ ನಗರ ಠಾಣೆ : ಶ್ರೀ ಸರದಾರಸಿಂಗ ತಂದೆ ಗೋಪಾಲಸಿಂಗ ಠಾಕೂರ ಸಾ: ಆಲಮೇಲ್ (ಹಾ.ವ) ಆನಂತರಾವ ಪುರಾಣಿಕ ಇವರ ಮನೆಯಲ್ಲಿ ಬಾಡಿಗೆ ಸಂತೋಷ ಕಾಲೋನಿ ಗುಲಬರ್ಗಾ ರವರು ನನ್ನ ಮಗ ಗೋಪಾಲಸಿಂಗ ತಂದೆ ಸರದಾರಸಿಂಗ ವಯ: 13 ಉ: 9ನೇ ತರಗತಿಯ ವಿದ್ಯಾರ್ಥಿ ಜಾತಿ: ರಜಪೂತ ಸಾ: ಸಂತೋಷ ಕಾಲೋನಿ ಗುಲಬರ್ಗಾ ಇತನು ಶಾಲೆಗ ಹೋಗುತ್ತೇನೆ. ಅಂತಾ ಮನೆಯಿಂದ ಹೊದವನು ಶಾಲೆಗೆ ಹೋಗದೇ ಮನೆಗೂ ಬರದೇ ಕಳೆದ 5 ದಿವಸಗಳಿಂದ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ನಮ್ಮ ಸಂಬಂಧಿಕರಲ್ಲಿ ಮತ್ತು ಬಂಧುಗಳಲ್ಲಿ ಹುಡುಕಾಡಿದರೂ ಸಹ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾಗಿರುವ ನನ್ನ ಮಗ ಗೋಪಾಲಸಿಂಗ ಇತನಿಗೆ ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.