POLICE BHAVAN KALABURAGI

POLICE BHAVAN KALABURAGI

10 September 2014

Gulbarga District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಭಿಮರಾಯ ತಂದೆ ದೇವಪ್ಪ ಅಲ್ಲೂರ ಸಾ:ಕೊಡ್ಲಾ ಇವರು ತಮ್ಮ ಗ್ರಾಮದ ನಮ್ಮ ಸಮಾಜದವರಾದ ಕೃಷ್ಣಪ್ಪ ತಂದೆ ದ್ಯಾವಪ್ಪ ತಳವಾರ ಇವರಿಗೂ ನಮಗೂ ಜಗಳವಾಗಿದ್ದು ದಿ:08-09-2014 ರಂದು ಸಾಯಂಕಾಲ 07-30 ಗಂಟೆಗೆ ನಮ್ಮ ಅಣ್ಣಂದಿರಾದ ಕಾಶಿನಾಥ ಮತ್ತು ಮಲ್ಲಪ್ಪ ಇವರಿಬ್ಬರಿಗೆ ಕೃಷ್ಣಪ್ಪ ತಂದೆ ದ್ಯಾವಪ್ಪ ತಳವಾರ ಹಾಗೂ ಇತರರು ಕೂಡಿ ನಮ್ಮೂರ ಗೇಟ್ ಹತ್ತಿರ ಜಗಳ ಮಾಡಿದ್ದರಿಂದ ನಾವು ಅಣ್ಣ ತಮ್ಮಂದಿರರು ಕೇಳಲು ಹೋಗಿದ್ದರಿಂದ ಅವರೆಲ್ಲರೂ ಕೂಡಿಕೊಂಡು ನಮಗೆ ಹಿಂದಿನ ಜಗಳದ ವೈಮನಸ್ಸಿನಿಂದ ಕೊಲೆ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಗುಂಪು ಕಟ್ಟಿಕೊಂಡು ಬಂದು ನಮಗೆ ಬಡಿಗೆ ಹಾಗೂ ಕಲ್ಲುಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ನನಗೂ ಹಾಗೂ ನಮ್ಮ ಅಣ್ಣ ತಮ್ಮಂದಿರರಿಗೂ ಸಾಧಾ ಹಾಗೂ ಭಾರಿ ರಕ್ತ ಮತ್ತು ಗುಪ್ತ ಗಾಯಗಳನ್ನು ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂಥಾ ಪ್ರಕರಣ ದಾಖಲಾಗಿದ್ದು ದಿನಾಂಕ:09-09-2014 ರಂದು ಬೆಳಗ್ಗೆ 0400 ಗಂಟೆಗೆ ಗಾಯಾಳು ಮೊಗಲಪ್ಪ ತಂದೆ ದ್ಯಾವಪ್ಪ ಅಲ್ಲೂರ, ಸಾ:ಕೊಡ್ಲಾ ಗ್ರಾಮ. ಇತನು ವಾತ್ಸಲ್ಯ ಆಸ್ಪತ್ರೆ  ಗುಲಬರ್ಗಾದಲ್ಲಿ ಉಪಚಾರ ಹೊಂದುತ್ತಾ ಗುಣಮುಖ ಹೊಂದದೇ ಭಾರಿ ಗಾಯದ ಬಾದೆಯಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಗುರುನಾಥ ತಂದೆ ಲಾಲು ಜಾಧವ ಸಾ: ಆಂದೋಲಾ ಇವರು ದಿನಾಂಕ 09-09-2014 ರಂದು ಮುಂಜಾನೆ 9-00 ಗಂಟೆಗೆ ರಾಜು ಇತನು ರಮೇಶನು ಚಲಾಯಿಸುತ್ತಿದ್ದ ಟಂ.ಟಂ. ನಂ. ಕೆ.ಎ-33-6672 ನೇದ್ದರಲ್ಲಿ ಕುಳಿತುಕೊಂಡು ಚಿಗರಳ್ಳಿ ಕ್ರಾಸದಿಂದ ಕೆಲ್ಲೂರ ಕಡೆಗೆ ಬರ್ಡ ಹಿಲ್ಸ ಶಾಲೆಯ ಹತ್ತಿರ ರಸ್ತೆಯಲ್ಲಿ ಬರುತ್ತಿದ್ದಾಗ ಎದುರಿನಿಂದ  ಬರುತ್ತಿದ್ದ ಕ್ರೂಸರ್ ವಾಹನ ನಂ ಕೆ.ಎ.32-ಎ-3036 ನೇದ್ದರ ಚಾಲಕನು ತನ್ನ ಜೀಪ ಅನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಂ.ಟಂ ವಾಹನಕ್ಕೆ ಡಿಕ್ಕಿ  ಪಡಿಸಿ ಅಪಘಾತ ಮಾಡಿದ್ದರಿಂದ ಟಂ.ಟಂ.ದಲ್ಲಿ ಕುಳಿತ ರಾಜು ಇತನಿಗೆ ಭಾರಿ ರಕ್ತ ಗಾಯವಾಗಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದು ಸದರಿ ಕ್ರೂಸರ್ ವಾಹನ ಚಾಲಕ ತನ್ನ ಜೀಪಿನೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.