POLICE BHAVAN KALABURAGI

POLICE BHAVAN KALABURAGI

03 February 2014

Gulbarga District Reported Crimes

ಆತ್ಮ ಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ರಟಕಲ್ ಠಾಣೆ : ಬಸ್ಸಪ್ಪ @ ಬಸವರಾಜ ತಂದೆ ಅಪ್ಪಣ್ಣ ಸಂ. 05 ಜನರು ಸಾ||ಎಲ್ಲರೂ ದಸ್ತಾಪೂರ ತಾ||ಚಿಂಚೋಳಿ ಇವರ  ಹೊಲವನ್ನು ಈಗ ಸುಮಾರು 7-8 ವರ್ಷದ ಹಿಂದೆ ಮಲ್ಲಪ್ಪ ತಂದೆ ಬೀರಪ್ಪ ದಂಡೆನೋರ ಸಾ||ಸಾಸರಗಾಂವ ತಾ||ಚಿಂಚೋಳಿ ರವರು ಖರಿದಿಸಿದ್ದು ಅದು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಡು ನಾವು ದುಡ್ಡು ಕೊಟ್ಟಿರುತ್ತೆವೆ ಅಂತ ಕೇಳುತ್ತಾ ಬಂದರು ನೊಂದಣಿ ಮಾಡಿಕೊಡದೆ ಇಂದು ದಿನಾಂಕ 02.02.2014 ರಂದು 11.00 ಎ.ಎಂಕ್ಕೆ ಪಂಚರ ಎದುರುಗಡೆ ಆರೋಪಿತರು ನಿಮಗೆ ಹೊಲವನ್ನು ಕೊಡುವುದಿಲ್ಲ ನೀವು ಕೊಟ್ಟ ಹಣ ಕೂಡ ವಾಪಸ್ ಕೊಡುವುದಿಲ್ಲ ಅಂದಾಗ ಮೃತನು ನೀವು ಹಾಗೆ ಮಾಡಿದರೆ ನಾನು ಸಾಯುತ್ತೆನೆ ಅಂದರೂ ನೀನು ಸತ್ತರು ನಾವು ಹೊಲವನ್ನು ಕೊಡುವುದಿಲ್ಲ ಹಣನು ಕೊಡುವುದಿಲ್ಲ ಅಂದಿದ್ದಕ್ಕೆ ಹಣ ಮತ್ತು ಹೊಲ ಎರಡು ಕಳಕೊಂಡು ಈಗ ಯಾಕೆ ಬದುಕಬೇಕು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 02.02.2014 ರಂದು 12.30 ಪಿ.ಎಂಕ್ಕೆ ಊರ ಮುಂದಿನ ಮಾವಿನ ಗಿಡದ ಬಾವಿಯಲ್ಲಿ ಬಿದ್ದಾಗ ಈಜು ಬಾರದರಿಂದ ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ಗುಡಬಾ ಗಂಗಾನಗರ ಗುಲಬರ್ಗಾ ಇವರ ಮಗನಾದ ಚಂದ್ರಕಾಂತ ತಂದೆ ಬಸವರಾಜ ಗುಡಬಾ ವಯ|| 28 ವರ್ಷ, ಸಾ||  ಗಂಗಾನಗರ  ಇವನು ದಿನಾಂಕ|| 27/01/14 ರಂದು ನನ್ನ, ಸಾಯಂಕಾಲ 06-30 ಗಂಟೆಗೆ ಪ್ರತಿನಿತ್ಯ ಹೊರಗಡೆ ಹೋಗಿ ಬರುವಂತೆ  ಇಂದು ದಿನಾಂಕ|| 27/01/14 ರಂದು ಸಹ ಹೊರಗಡೆ ಹೋಗಿ ಬರುತ್ತೆನೆಂದು ಹೇಳಿ ಹೋಗಿದ್ದು ಇವರ ಮೋಬೈಲ್  ಸಂಖ್ಯೆ 9686549026 ಮರಳೀ ತಡ ರಾತ್ರಿಯಾದರೂ ಬರಲಿಲ್ಲ ಬರದೇ ಕಾರಣ ನನ್ನ ಅಣ್ಣನ ಮಗನಾದ ಬೀಮಾಶಂಕರ ತಂದೆ ಶರಣಪ್ಪಾ ನಾಯಿಕೋಡಿ ಈತನಿಗೆ ವಿಚಾರಿಸಲಾಗಿದ್ದು ಮರಳಿ ಗುಲಬರ್ಗಾಕ್ಕೆ  ಹೋಗಿರುವುದಾಗಿ ತಿಳಿಸಿರುತ್ತಾರೆ ಕಾರಣ ನಾವು ಇನ್ನು ಎಲ್ಲಾ ಸಂಬಂಧಿಕರು ಮತ್ತು ಗೆಳೆಯರಿಗೆ ವಿಚಾರಿಸಿದ ನಂತರ ಎಲ್ಲಿ ಇರುವುದು ಗೋತ್ತಾಗಲಿಲ್ಲ  ಆದರೂ ಸಹ ನಮ್ಮ ಸಂಬಂಧಿಕರು ಸೇರಿ ಇಂದು ದಿನಾಂಕ|| 02/02/14 ರ ವರೆಗೆ ಹುಡುಕಾಡಿದೇವು ಸಿಕ್ಕಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠ!ಆಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ರಾಜಶೇಖರ ತಂದೆ ಭೀಮಯ್ಯಾ ಈಳಿಗೇರ ಸಾ|| ಪತ್ತೇಪೂರ ತಾ|| ಚಿಂಚೋಳಿ  ಮಗಳಾದ  ಕು. ಶೋಬಾ ವ|| 18 ವರ್ಷ ಇವಳು  ಪ್ರಸ್ತುತ ಶೈಕ್ಷಣೀಕ ವರ್ಷದಲ್ಲಿ ಪಿ.ಯೂ.ಸಿ ದ್ವಿತಿಯ ವರ್ಷದ ಕಲಾ ವಿಭಾಗದಲ್ಲಿ  ಸರಕಾರಿ ಕನ್ಯಾ ಪ್ರೌಡಾ ಶಾಲೆ ಚಿಂಚೋಳಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ, ಹಿಗಿದ್ದು ಮೋನ್ನೆ ದಿವಸ ನಮ್ಮ ಪಕ್ಕದ ಮನೆಯ ಶಿವಕುಮಾರ ತಂದೆ ಬಸ್ಸಪ್ಪಾ ಶಂಭು ಎಂಬುವವನು ನನಗೆ ನಿಮ್ಮ ಹಿರಿಯ ಮಗಳಾದ ಶೋಭಾಳಿಗೆ  ಅಪಹರಣ ಮಾಡಿಕೊಂಡು ಮದುವೆಯಾಗುತ್ತೆನೆ ಅಂತಾ ಅಂದಿದ್ದನು. ಅದಕ್ಕೆ ನಾನು ಅವನಿಗೆ ಆಗೇಲ್ಲಾ ಮಾತನಾಡಬೇಡಾ ನನ್ನ ಮಗಳು ಇನ್ನೂ ಚಿಕ್ಕವಳು ಇದ್ದು ಅವಳಿಗೆ ಇನ್ನೂ ವಿಧ್ಯಾಭ್ಯಾಸ ಮಾಡಿಸಿ ಸರಕಾರಿ ನೌಕರಸ್ತಳನ್ನಾಗಿ ಮಾಡುತ್ತೇನೆ ಅಂತಾ ಅಂದಿದ್ದು  ಹಿಗಿದ್ದು ನಿನ್ನೆ ದಿನಾಂಕ 01.02.2014 ರಂದು ಎಂದಿನಂತೆ ಬೆಳೆಗ್ಗೆ ಎದ್ದು ನನ್ನ ಹಿರಿಯ ಮಗಳಾದ ಕು. ಶೋಭಾಳು  ಕಾಲೇಜಿಗೆ ಬಂದು ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 12.00 ಗಂಟೆಗೆ ಮರಳಿ ನಮ್ಮೂರಿಗೆ ಬರಲೆಂದು  ಚಿಂಚೋಳಿಯ ಬಸ್ ನಿಲ್ದಾದಲ್ಲಿ ಕುಳಿತುಕೊಂಡಾಗ ನಮ್ಮೂರಿನ ಶಿವಕುಮಾರ ತಂದೆ ಬಸ್ಸಪ್ಪಾ  ಶಂಭು ಎಂಬುವವನು ನನ್ನ ಮಗಳಾದ ಕು.ಶೋಭಾಳಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳೀ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ: 2-2-2014 ರಂದು 8-20 ಎ.ಎಮ್ ಕ್ಕೆ ಯಲ್ಲಪ್ಪ ತಂದೆ ಬಸಪ್ಪ ಚಲುವಾದಿ ಸಾ: ಚಟನಳ್ಳಿ ಇವನು  ನಂಬರ ಇಲ್ಲದ ಹಿರೊ ಮೊಟರ ಸೈಕಲ್ ಇಂಜಿನ ನಂ- ಹೆಚ್.ಪಿ11ಇಎಫ್ ಡಿ9ಎಲ್49711 ನೇದ್ದನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಎದುರಿನಿಂದ ಬರುತ್ತಿದ್ದ ಮೊಟರ ಸೈಕಲ ನಂ ಕೆಎ.-32,ವಾಯ: 492 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಸದರಿ ಆರೊಪಿತನ ಮೊಟರ ಸೈಕಲ್ ಹಿಂದಿನ ಸಿಟನಲ್ಲಿ ಕುಳಿತ ಬಸವರಾಜ ಸಜ್ಜನ ಇತನ ಹಣೆಗೆ ತಿವ್ರ ಸ್ವರೂಪದ ಕತ್ತರಿಸಿದ ರಕ್ತಗಾಯವಾಗಿ ಸ್ಥಳದಲ್ಲೆ ಮೃತ್ತಪಟ್ಟಿದ್ದು ಹಾಗೂ ಸದರಿ ಅಪಘಾತದಲ್ಲಿ ವಿಜಯಕುಮಾರ ಇವರ ಹಣೆಗೆ ತಿವ್ರ ಸ್ವರೂಪದ ಗಾಯ ವಾಗಿದ್ದು ಹಾಗೂ ಸಿದ್ದಪ್ಪಗೌಡ ಇವರಿಗೆ ಸಾದಾ ಗಾಯ ವಾಗಿದ್ದು ಸದರಿಯವರಿಗೆ ಉಪಚಾರ ಕುರಿತು ಸಿಂದಗಿಯಲ್ಲಿಯ ಮನಗೂಳಿ ಆಸ್ಪತ್ರೆಗೆ ತೆಗೆದುಕೊಂಡು ಹೊಗುವಾಗ ವಿಜಯಕುಮಾರ ಇವರು ಮನ್ನಾಪೂರ ಗ್ರಾಮದ ಕ್ಯಾನಾಲ ಹತ್ತಿರದ ರಸ್ತೆಯಲ್ಲಿ ವಿಜಯಕುಮಾರ ಇವರು ಮೃತಪಟ್ಟಿದ್ದು ಸಿದ್ದಪ್ಪಗೌಡ ಇವರಿಗೆ ಉಪಚಾರ ಕುರಿತು ಆಸ್ಪತ್ರೆ ಸೇರಿಕೆ ಮಾಡಿದ್ದು ಸದರಿ ಆರೊಪಿತನು ಅಪಘಾತ ಪಡೆಸಿ ಮೊಟರ ಸೈಕಲ್ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.