POLICE BHAVAN KALABURAGI

POLICE BHAVAN KALABURAGI

21 November 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ:
ಶ್ರೀ ಶರಣಪ್ಪಾ ತಂದೆ ಮಲ್ಲಪ್ಪಾ ಗಾಣಗೇರ್ ಸಾ: ರಾಜೋಳ ತಾ: ಚಿತ್ತಾಪೂರ ರವರು ನಾನು ದಿನಾಂಕ: 19/11/2011 ರಂದು ಸಾಯಂಕಾಲ ಶಂಕ್ರವಾಡಿ ಗ್ರಾಮಕ್ಕೆ ನನ್ನ ಮಗನಾದ ಶ್ರೀಕಾತನಿಗೆ ಮಾತಾಡಿಸಲು ಬಂದಾಗ ರಾತ್ರಿ 10 ಗಂಟೆ ಸುಮಾರಿಗೆ ಸಾಬಣ್ಣಾ ತಂದೆ ಗುಂಡಪ್ಪಾ ಉಡಗಿ ಸಂಗಡ ಇನ್ನೂ ಇಬ್ಬರೂ ಅವ್ಯಾಚವಾಗಿ ಬೈದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 173/2011 ಕಲಂ:341 323 324 504 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದ ಪ್ರಕರಣ:
ಶಹಾಬಾದ ನಗರ ಠಾಣೆ :
ಶ್ರೀ ಶರಣಪ್ಪಾ ಹಿಪ್ಪರಗಿ ಪಿ.ಐ ಶಹಾಬಾದ ನಗರ ಠಾಣೆ ರವರು ದಿನಾಂಕ: 20/11/2011 ರಂದು ಸಾಯಂಕಾಲ ಠಾಣೆಯ ಸಿಬ್ಬಂದಿಯರೊಂದಿಗೆ ಪೆಟ್ರೊಲಿಂಗ ಕುರಿತು ಭಂಕೂರ ಕ್ರಾಸ ಹತ್ತಿರ ಹೊರಟಾಗ ಗುಲ್ಬರ್ಗಾ ಕಡೆಯಿಂದ ಒಂದು ಕೃಷರ್ ಜೀಪ ನಂ: ಕೆ.ಎ-32/ಬಿ-4808 ನೇದ್ದು ಅತೀವೇಗ ಮತ್ತು ನಿಷ್ಕಾಳಜಿಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಸಾರ್ವಜನಿಕ ರೋಡಿನ ಎರಡೂ ಬದಿಗೆ ಆಕಡೆ ಒಮ್ಮೇ ಈ ಕಡೆ ಒಮ್ಮೆ ಚಲಾಯಿಸುತ್ತ ಬರುವದನ್ನು ನೋಡಿ ಪಿಐ ಮತ್ತು ಸಿಬ್ಬಂದಿ ಜನರು ಕೂಡಿಕೊಂಡು ಜೀಪ ಚೆಕ್ ಮಾಡಲಾಗಿ ವಾಹನ ಚಾಲಕನ ಹೆಸರು ಸಂಜಯಕುಮಾರ ತಂದೆ ವೀರಣ್ಣಾ ದೆಸಣಗಿ ಸಾ: ದೇವನ ತೇಗನೂರ ಅಂತಾ ಹೇಳಿದನು. ಸದರಿಯವನಿಗೆ ನೋಡಲಾಗಿ ಕುಡಿದ ಅಮಲಿನಲಿದ್ದು ಆತನ ವಿರುದ್ದ ಠಾಣೆ ಗುನ್ನೆ ನಂ: 174/2011 ಕಲಂ:279 510 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಠಾಣೆ
:ದಿನಾಂಕ: 21/11/2011 ರಂದು ಪೊಲೀಸ್ ಇನ್ಸಪೇಕ್ಟರ ರವರು ಮತ್ತು ಠಾಣೆಯ ಸಿಬ್ಬಂದಿಯವರು ಕೂಡಿಕೊಂಡು ಇಸ್ಮಾಯಿಲ್ ಲಾಲ ಖಾನ ರವರ ಪಾಲೀಸ ಮಸೀನ್ ದ ಎದರುಗಡೆ ಖುಲ್ಲಾ ಜಾಗೆಯ ಮೇಲೆ ಕೆಲವು ಜನರು ಕುಳಿತು ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಆ ಸ್ಥಳಕ್ಕೆ ಹೋಗಿ ನೋಡಿ ಪಣಕ್ಕೆ ಹಣ ಹಚ್ಚಿ ಅಂದರ ಭಾಹರ ಎಂಬು ಇಸ್ಟೀಟ್ ಜೂಟಾಟ ಆಡುತ್ತಿರುವ ಅನೀಲ ತಂದೆ ಬಸವರಾಜ ಕೊಬಾಳ ಸಂಗಡ 5 ಜನರು ಸಾ: ಎಲ್ಲರೂ ಶಹಬಾದ ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ ಒಟ್ಟು 5750/- ರೂಪಾಯಿ ಹಾಗೂ ಮೊಬೈಲ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 175/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.