ಮಟಕಾ ಜೂಜಾಟದಲ್ಲಿ
ನಿರತವನ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 14/06/2016 ರಂದು ಧುತ್ತರಗಾಂವ
ಗ್ರಾಮದಲ್ಲಿ ಭೀಮಶಾ ರಾಜೋಳ ಇವರ ಹೊಟೇಲ ಮುಂದುಗಡೆ ಸಾರ್ವಜನಿಕ ರೋಡಿನ ಮೇಲೆ ಮಟಕಾ ಜೂಜಾಟ
ನಡೆಯುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಧುತ್ತರಗಾಂವ ಗ್ರಾಮಕ್ಕೆ ಹೋಗಿ
ಭೀಮಶಾ ರಾಜೋಳ ಇವರ ಹೊಟೇಲ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹೊಟೇಲ ಮುಂದುಗಡೆ
ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1
ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ
ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು
ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ವಿಚಾರಿಸಲು ಆತನು ತನ್ನ ಹೆಸರು ಅರುಣ
ತಂದೆ ಸಿದ್ದಲಿಂಗಯ್ಯ ವಿಶ್ವನಾಥ ಮಠ ವ|| 19 ವರ್ಷ, ಜಾ|| ಜಂಗಮ, ಉ|| ಕೂಲಿ ಕೆಲಸ, ಸಾ|| ಧುತ್ತರಗಾಂವ ಅಂತ
ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 480/- ರೂಪಾಯಿ ಮತ್ತು ಒಂದು ಮಟಕಾ
ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ
ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಶಾಂತಮ್ಮ ಗಂಡ ಹಣಮಂತ ಬಳಿಚಕ್ರ ಇವಳು ತನ್ನ ಮನೆಯ ಮುಂದಿನ ರೋಡ ಆಚೆ ಎಸಿಸಿ ಕಂಪೌಂಡ
ಪಕ್ಕದಲ್ಲಿ ಸಂಡಸ್ ಮಾಡಿ ಬರಲು ಹೋಗಿ ರೋಡ ಪಕ್ಕದಲ್ಲಿ
ಕುಳಿತು ಕೊಂಡಾಗ 5-00 ಪಿ.ಎಮ್ ಸುಮಾರು ಬಲರಾಮ ಚೌಕ ಕಡೆಯಿಂದ ಒಬ್ಬನು ಲಾರಿಯನ್ನು
ಚಲಾಯಿಸಿಕೊಂಡು ಬಂದು ರೋಡ ಸೈಡಿಗೆ ನಿಲ್ಲಿಸಲು ಹೋಗಿ ಶಾಂತಮ್ಮ ಇವಳ ಎರಡು ಪಾದದ ಮೇಲಿಂದ
ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದರಿಂದ ಅವಳ ಎರಡು ಕಾಲು ಪಾದಗಳಿಗೆ ಭಾರಿ ರಕ್ತ ಹಾಗೂ ಗುಪ್ತಗಾಯಗಳಾಗಿದ್ದು
ಈ ವಿಷಯ ಹುಡುಗರಿಂದ ಶಾಂತಮ್ಮಳ ಮಗಳು ರುಬೀ
ಇವಳಿಗೆ ಗೋತ್ತಾಗಿ ಸ್ಥಳಕ್ಕೆ ಹೋಗಿ ಶಾಂತಮ್ಮಳಿಗೆ ವಾಡಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು
ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ
ಉಪಚರಿಸಿಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು
ಇರುತ್ತದೆ. ಲಾರಿ ನಂಬರ ನೋಡಿರುವುದಿಲ್ಲ ಅಂತಾ ತಿಳಿಸಿದ್ದು ದಿನಾಂಕ:13/06/2016 ರಂದು ಮೃತಳ ಮಗಳಾದ ಪಿರ್ಯಾದಿ ರೂಬಿ ಗಂಡ ವಿಜಯಕುಮಾರ ಬಳಿಚಕ್ರ ರವರ
ಪುರವಣಿ ಹೇಳಿಕೆ ನೀಡಿದ್ದನೇಂದರೆ ನನ್ನ ತಾಯಿ ಶಾಂತಮ್ಮ ಇವಳು ದಿನಾಂಕ:10/06/2016 ರಂದು 5.00
ಪಿಎಮ್ ಸುಮಾರಿಗೆ ಯಾವೊದೊ ಒಂದು ಲಾರಿ ಅಪಘಾತಪಡಿಸಿದ್ದರಿಂದ ನನ್ನ ತಾಯಿಗೆ ಎಡ ಮತ್ತು ಬಲಗಾಲಿಗೆ
ಭಾರಿ ಒಳಪೆಟ್ಟಾಗ ರಕ್ತಗಾಯವಾಗಿ ಉಪಚಾರ ಒಂದು ಇಂದು ದಿನಾಂಕ:13/06/2016 ರಂದು 11.50 ಎಎಮ್
ಸುಮಾರಿಗೆ ಮೃತ ಪಟ್ಟಿರುತ್ತಾಳೆ . ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.