POLICE BHAVAN KALABURAGI

POLICE BHAVAN KALABURAGI

22 February 2018

Kalaburagi District Press Note

ಪತ್ರಿಕಾ ಪ್ರಕಟಣೆ
ಚೌಕ ಠಾಣೆ : ಎರಡು ಜನರ ಬಂಧನ, ಅಂದಾಜು 6 ಲಕ್ಷ ಮೌಲ್ಯದ 21 ದ್ವಿಚಕ್ರ ವಾಹನಗಳು ಜಪ್ತಿ
ಮಾನ್ಯ ಎಸ್.ಪಿ. ಸಾಹೇಬರು ಕಲಬುರಗಿ, ಹೆಚ್ಚುವರಿ ಎಸ್.ಪಿ. ಸಾಹೇಬರು ಕಲಬುರಗಿ ಮತ್ತು ಶ್ರೀ ಬಿ ಪಾಂಡುರಂಗಯ್ಯ ಡಿ.ಎಸ್.ಪಿ. ಬಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಸ್.ಹಿರೇಮಠ ಪಿ.ಐ. ಚೌಕ ಠಾಣೆ, ಶ್ರೀಮತಿ ನರಸಮ್ಮ ಮ.ಪಿ.ಎಸ್.ಐ. ಚೌಕ ಠಾಣೆ ಹಾಗು ಸಿಬ್ಬಂದಿಯವರಾದ ರಮೇಶ, ಉಮೇಶ ಮತ್ತು ಸಿದ್ರಾಮಯ್ಯಾ  ರವರೊಂದಿಗೆ ಕಾರ್ಯಾಚರಣೆ ಮಾಡಿ ಆರೋಪಿತರಾದ 1. ಸೈಯದ ಮಕಬೂಲ @ ರಾಹೀಲ ತಂದೆ ಸೈಯದ ಇಲಾಹಿ ಸಾ : ಅರ್ಫತ ಕಾಲೂನಿ 2. ಹಬೀಬ ತಂದೆ ಮಹಿಬೂಬಸಾಬ ಶರ್ತಿವಾಲೆ ಸಾ : ಅಬೂಬಕರ ಕಾಲೂನಿ ಕಲಬುರಗಿ ಇವರುಗಳನ್ನು ದಸ್ತಗೀರ ಮಾಡಿ ಆರೋಪಿತರಿಂದ 6 ಲಕ್ಷ ಮೌಲ್ಯದ 21 ದ್ವಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ಸದರಿ ಇಬ್ಬರು ಮತ್ತು ಇನ್ನೋರ್ವ ಸಹಚರನೊಂದಿಗೆ ಸೇರಿ ಕಲಬುರಗಿ ನಗರದ ವಿವಿಧ ಕಡೆಗಳಲ್ಲಿ ಮೋಟಾರ ಸೈಕಲ್ ಗಳನ್ನು ಕಳವು ಮಾಡಿದ್ದು ಅವರಿಂದ ಕೇರೋ ಹೊಂಡಾ ಕಂಪನಿಯ ಸ್ಪ್ಲೆಂಡರ ಪ್ಲಸ್ ಹೀರೋ ಹೊಂಡಾ,  ಫ್ಯಾಶನ ಹೀರೋ ಹೊಂಡಾ,  ಹೀರೋ ಹೊಂಡಾ ಸಿಡಿ – 100 ಹೀಗೆ ಒಟ್ಟು 18 ಮೋಟಾರ ಸೈಕಲ್ ಗಳನ್ನು ಒಂದು ಬಜಾಜ ಪಲ್ಸರ, 2 ಡಿಯೊ ಹೀಗೆ ಒಟ್ಟು 21 ಮೋಟಾರ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡಿದ್ದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಇನ್ನೊರ್ವ ಸಹಚರ ಪರಾರಿ ಇದ್ದು  ಪತ್ತೆ ಕಾರ್ಯ ಮುಂದುವರೆದಿದೆ.