POLICE BHAVAN KALABURAGI

POLICE BHAVAN KALABURAGI

03 September 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬೌರಮ್ಮಾ ಗಂಡ ಭೂತಾಳಿ ಹಟ್ಟಿ ಸಾ|| ಬಿಲ್ವಾಡ ತಾ|| ಅಫಜಲಪೂರ ಇವರ ಮದುವೆ ಭೂತಾಳಿ ತಂದೆ ಪೀರಪ್ಪಾ ಹಟ್ಟಿ ಇವರ ಜೋತೆ 10/05/2012 ರಂದು ವರನ ಮನೆಯ ಮುಂದೆ ಅಫಜಲಪೂರ ತಾಲೀಕಿನ ಬಿಲ್ವಾಡ (ಕೆ) ಗ್ರಾಮದಲ್ಲಿ ಹಿಂದು ಧರ್ಮದ ಸಂಪ್ರದಾಯದ ವಿಧಿ-ವಿಧಾನಗಳ ಪ್ರಕಾರ ಜರುಗಿದ್ದು ನಂತರ ಫಿರ್ಯಾದಿದಾರಳಿಗೆ  8,00,000/- ವರದಕ್ಷಣೆ ಹಾಗೂ 20 ಗ್ರಾಂ ಬಂಗಾರ ತರುವಂತೆ ಪ್ರತಿದಿನ ತೊಂದರೆ ಕೊಡುತಿದ್ದು, ಎಲ್ಲಾ ಆರೋಪಿತರು ಅನಾವಶ್ಯಕವಾಗಿ ಮಾನಸಿಕ ಹಿಂಸೆ ಹಾಗೂ ಜೀವ ಬೇದರಿಕೆ ಹಾಕುವದು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ದಿನಾಂಕ 02-09-2014 ರಂದು ಸಾಯಂಕಾಲ 5:00 ಗಂಟೆಗೆ ಶ್ರೀಮತಿ ಕವಿತಾ ಗಂಡ ಚಿದಾನಂದ ಜನ್ನಾ ಸಾ ಮಣೂರ ಇವರ ಗಂಡ ಚಿದಾನಂದ ಇವರು ಮನೆಗೆ ಪತ್ರಾಸ ಹಾಕುತ್ತಿದ್ದನು, ಆಗ ನಮ್ಮ ಮನೆಯ ಮುಂದೆ ಇದ್ದ  ಕೆ..ಬಿ ಕರೆಂಟ ವಾಯರ ಬಹಳ ಕೆಳಗೆ ಇದ್ದು, ನನ್ನ ಗಂಡನಿಗೆ ವಾಯರ ಕೇಳಗೆ ಇದೆ ನೋಡಿ ಕೆಲಸ ಮಾಡಿ ಅಂತಾ ಹೇಳಿದೆನು, ಆಗ ನನ್ನ ಗಂಡ ನೋಡೆ ಕೆಲಸ ಮಾಡುತ್ತೆನೆ ಅಂತಾ ಹೇಳಿ ನಮ್ಮ ಮನೆಗೆ ಪತ್ರಾಸ ಹಾಕುವ ಕೆಲಸ ಮಾಡುತ್ತಿದ್ದನು, ಅಂದಾಜು 6:00 ಗಂಟೆ ಸಮಯಕ್ಕೆ ನನ್ನ ಗಂಡ ಚಿದಾನಂದ ಈತನು ಮನೆಗೆ ಪತ್ರಾಸ ಹಾಕುತ್ತಾ, ಪತ್ರಾಸ ಮೇಲಕ್ಕೆ ಎತ್ತಿದಾಗ, ಸದರಿ ಪತ್ರಾಸ ಕರೆಂಟ ವಾಯರಕ್ಕೆ ತಾಗಿ ನನ್ನ ಗಂಡನಿಗೆ ಒಮ್ಮಿಂದೊಮ್ಮಲೆ ಕರೆಂಟ ಶಾಟ ಹೋಡೆದು ಜಾಡಿಸಿ ಕೇಳಗೆ ಬಿದ್ದನು, ಆಗ ನಾನು ಮತ್ತು ಅಲ್ಲೆ ಇದ್ದ ನಮ್ಮ ಭಾವ ಚಂದ್ರಕಾಂತ ಮತ್ತು ನನ್ನ ಗಂಡನ ಅಣ್ಣ ತಮ್ಮಕಿಯ ಅಶೋಕ ಜನ್ನಾ, ಖಾಜಪ್ಪ ಜನ್ನಾ ಇವರು ಬಂದಿದ್ದು ಎಲ್ಲರೂ ಕೂಡಿ ನನ್ನ ಗಂಡನಿಗೆ ನೀರು ಹಾಕಿ ನೋಡಲು ನನ್ನ ಗಂಡ ಸ್ಥಳದಲ್ಲೆ ಮೃತ ಪಟ್ಟಿದರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಘಾತ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಸಿದ್ದಾರಾಮ ತಂದೆ ಶಂಕರ ಮೇಲಿನಕೇರಿ ಸಾ:ಝಳಕಿ [ಕೆ] ಇವರು ಮತ್ತು ನಮ್ಮೂರಿನ ಶಿವಯ್ಯ ತಂದೆ ಶಾಂತಯ್ಯ ದೇವಂತಗಿ ಇಬ್ಬರೂ ಕೂಡಿ ಅವರ ವಾಹನ ಸಂಖ್ಯೆ ಕೆ.ಎ:32 ಇ.ಎಫ್:1269 ಹಿರೋ ಕಂಪನಿಯ ಎಚ್.ಎಫ್.ಡಿಲಕ್ಸ್ ಮೋಟರ ಸೈಕಲ ಮೇಲೆ ಕುಳಿತು ನನ್ನ ಖಾಸಗಿ ಕೆಲಸ ಇದ್ದ ಪ್ರಯುಕ್ತ ತಾಳೆವಾಡ ಗ್ರಾಮಕ್ಕೆ ಇಂದು ದಿ:02/09/2014 ರಂದು ಹೋಗಿ ವಾಪಸ ಬರುವಾಗ ಮಾದನ ಹಿಪ್ಪರಗಾ ಗ್ರಾಮದ ಅರಗಲ ಮಡ್ಡಿ ಹತ್ತಿರದ ಸ್ವಲ್ಪ ದೂರದಲ್ಲಿ ಅಂದಾಜು ಸಮಯ ರಾತ್ರಿ 09:00 ಗಂಟೆ ಸುಮಾರಿಗೆ ರಸ್ತೆ ಮೇಲೆ ನಾವು ಬರುತ್ತಿರುವಾಗ ನಮ್ಮ ಎದುರುಗಡೆಯಿಂದ ಮೋಟರ ಸೈಕಲ ನಂಬರ್ ಕೆ.ಎ:34 ಇ.ಬಿ:1687 ಮೋಟರ್ ಸೈಕಲ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿದ್ದು ನಮ್ಮ ಮೋಟರ್ ಸೈಕಲವನ್ನು ಶಿವಯ್ಯ ದೇವಂತಗಿಯವರು ನಡೆಸುತ್ತಿದ್ದು ನಾನು ಹಿಂದುಗಡೆ ಕುಳಿತಿದ್ದು ಸದರಿಯವನು ಡಿಕ್ಕಿಪಡಿಸಿದರಿಂದ ನಮ್ಮ ಮೋಟರ ಸೈಕಲ ರಸ್ತೆ ಮೇಲೆ ಬಿದ್ದಿದು ಆಗ ನನಗೆ ತಲೆಯ ಹಿಂದುಗಡೆ ಭಾರಿ ಒಳಪೆಟ್ಟಾಗಿದ್ದು ಮತ್ತು ಬಲಗಲ್ಲಿನ ಮೇಲೆ ರಕ್ತಗಾಯವಾಗಿದ್ದು ಹಾಗೂ ಬಲಗಾಲಿಗೆ ಅಲಲ್ಲಿ ತರಚಿದ ಗುಪ್ತ ಹಾಗೂ ರಕ್ತಗಾಯವಾಗಿರುತ್ತದೆ. ನಮ್ಮಗೆ ಡಿಕ್ಕಿಪಡಿಸಿದ ವಾಹನ ಚಾಲಕನ ಹೆಸರು ವಿಚಾರಿಸಲಾಗಿ ಶಿವಾನಂದ ತಂದೆ ಶರಣಪ್ಪಾ ಪೂಜಾರಿ ಸಾ:ಬೆಣ್ಣಿಶಿರೂರ ಅಂತಾ ತಿಳಿಸಿರುತ್ತಾನೆ. ಕಾರಣ ಸದರಿ ಮೋಟರ್ ಸೈಕಲ ನಂ: ಕೆ.ಎ:34 ಇ.ಬಿ:1687 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಹಣಮಂತ್ರಾವ ತಂದೆ ಲಗಮಣ್ಣ ಹೊಳಕುಂದಿ ಸಾ: ಕುಡಕಿ ಇವರು ದಿನಾಂಕ 02-09-2014 ರಂದು ತನ್ನ ಮೋಟಾರ ಸೈಕಲ್ ನಂ ಕೆಎ-32-ಈ.ಎಫ್-7784 ನೇದ್ದರ  ಮೇಲೆ ಕುಳಿತುಕೊಂಡು ಗುಲಬರ್ಗಾಕ್ಕೆ ಹೊರಟಾಗ ಸ್ಟೇಶನ್ ಗಾಣಗಾಪೂರದ ಕಂಕರ ಮಶೀನ್ ದಾಟಿ ಕಲ್ಲು ಕಣಿ ಹತ್ತಿರ 09:30 ಎ.ಎಮ್ ಕ್ಕೆ ಎದುರಿನಿಂದ ಒಂಟು ಟ್ರಾಕ್ಟರ ಟ್ರೈಲಿ ಸಮೇತ ಅದರ ಚಾಲಕನು ಟ್ರ್ಯಾಕ್ಟರ ಅನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಮಾನವ ಜೀವಕ್ಕೆ ಹಾನಿ ಆಗುವ ರೀತಿಯಲ್ಲಿ ನಡೆಸಿಕೊಂಡು ಬಂದವನೇ ಡಿಕ್ಕಿ ಹೊಡೆದು ಅಪಘಾತ ಪಡೆಸಿದ್ದು ಅಪಘಾತದಲ್ಲಿ ತಲೆಗೆ, ಮುಖಕ್ಕೆ, ಎರಡು ಕೈ ಮತ್ತು ಕಾಲುಗಳಿಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿ ರಕ್ತ ಸ್ರಾವವಾಗಿ ಬೇಹೋಷ ಆಗಿ ಸ್ಥಳದಲ್ಲಿ ಬಿದ್ದಿದ್ದು ನನಗೆ ಯಾರೋ ಇಬ್ಬರು ಉಪಚಾರ ಕುರಿತು  ಸ್ಟೇಶನ್ ಗಾಣಗಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ನನಗೆ ನನ್ನ ಮಕ್ಕಳಾದ ರಮೇಶ, ಉಮೇಶ ನನ್ನ ಹೆಂಡತಿಯಾದ ಶಾಂತಾಬಾಯಿ ಇವರು 108 ವಾಹನದಲ್ಲಿ ಹಾಕಿಕೊಂಡು ಕಾಮರಡ್ಡಿ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಸಿರುತ್ತಾರೆ ಅಪಘಾತ ಪಡೆಸಿದ ಟ್ರಾಕ್ಟರ ನಂ ಮತ್ತು ಚಾಲಕ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ ಶ್ರೀ ಚಂದ್ರಕಾಂತ ವಡ್ಡರ ಸಾ: ಸ್ಟೇಶನ್ ಗಾಣಗಾಪೂರ ಇವರ ಟ್ರ್ಯಾಕ್ಟರ ಅಂತಾ ತಿಳಿದು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಸಂಚಾರಿ ಠಾಣೆ : ದಿನಾಂಕ 02-09-2014 ರಂದು 02-45 ಪಿ.ಎಮ್ ಕ್ಕೆ ನೇಹರು ಗಂಜ ಬಸ್ ನಿಲ್ದಾಣ ಕಡೆ ಹೋಗುವ ರೋಡಿನಲ್ಲಿ ಬರುವ ಸವೇರಾ ಹೋಟೆಲ ಹತ್ತಿರ ಎದರುಗಡೆ ರೋಡಿನ ಮೇಲೆ ಶಿವಕುಮಾರ ತಂದೆ ಜಗನಾಥ ಮಾಲಿ ಪಾಟೀಲ, ಸಾಃ ಬಂಬು ಬಜಾರ ಗುಲಬರ್ಗಾ ಇವರು  ತನ್ನ ಮೋಟಾರ ಸೈಕಲ ನಂ. ಕೆ.ಎ 01 ಇ.ಎಮ್ 3726 ನೇದ್ದನ್ನು ಕಿರಣಾ ಬಜಾರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀ ಜಗನಾಥ ತಂದೆ ನಾಗೇಂದ್ರಪ್ಪಾ ಮಾಲಿ ಪಾಟೀಲ, ಸಾಃ ಶರಫೋಸ ಕಿಣ್ಣಿ, ತಾಃ ಗುಲಬರ್ಗಾ, ಹಾ.ವ ಬಂಬು ಬಜಾರ ಗುಲಬರ್ಗಾ ಇವರ ಮಗನಾದ ಶಿವಕುಮಾರ ವಃ 14 ವರ್ಷ, ಈತನು ನಗರೇಶ್ವರ ಶಾಲೆ ಕಡೆಯಿಂದ ನಡೆಸಿಕೊಂಡು ಬರುತ್ತಿದ್ದ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿ ಮಗನಿಗೆ ತಲೆಗೆ ಭಾರಿ ಪೆಟ್ಟು ಬಿದ್ದು ಮೂಗಿನಿಂದ ರಕ್ತ ಸ್ರಾವ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.