POLICE BHAVAN KALABURAGI

POLICE BHAVAN KALABURAGI

22 April 2012

GULBARGA DIST REPORTED CRIMES


ವರದಕ್ಷಿಣೆ ಪ್ರಕರಣ:
ಮಹಿಳಾ ಪೊಲೀಸ ಠಾಣೆ
:
 ರಾಜೇಶ್ರಿ ಗಂಡ ಸತೀಶ ಸಾ||ಮನೆ ನಂ 11-1872/27-ಎ ವಸಂತ ನಗರ ಗುಲಬರ್ಗಾರವರು ನನ್ನ ಮದುವೆಯು ಸತೀಶ ತಂದೆ ವಿನಾಯಕರಾವ ರವರೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು ನನಗೆ 2 ಜನ ಮಕ್ಕಳಿರುತ್ತಾರೆ. ನನ್ನ ಗಂಡನು ನನ್ನ ಜೊತೆ ಜಗಳ ತೆಗೆದು ಹೊಡೆ-ಬಡೆ  ಮಾಡುವುದು ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ದಿನಾಂಕ20.04.2012 ರಂದು ರಾತ್ರಿ 10 ಗಂಟೆ ಸುಮಾರಿ ನನ್ನ ಗಂಡ ಇತನು ಕುಡಿದು ಬಂದು ಮನಬಂದಂತೆ ಹೋಡೆದು ಅವಾಚ್ಯವಾಗಿ ಬೈದು ಜಗಳ ಬಿಡಿಸಲು ಬಂದ ನನ್ನ ಅಕ್ಕನಿಗೆ ಕೂಡ ಹೊಡೆದಿದ್ದಾನೆ ಮತ್ತೆ ನನಗೆ ಇಂದು ಬೆಳಗ್ಗೆ 7.30 ಸುಮಾರಿಗೆ ಹೊಡೆಯಲು ಬಂದಾಗ ನನ್ನ ಮಗ ಸುಶಾಂತ, ಮಗಳು ಸ್ವೂರ್ತಿ ಅಕ್ಕ ಮಂದಾಕಿನಿ ಮತ್ತು ಅಕ್ಕನ ಮಗ  ವಲ್ಲಬ್ ಅವರಿಗೂ   ಸಹ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ 34/12 ಕಲಂ 498(ಎ).504.506 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:
ಶ್ರೀ. ಶರಣಬಸಪ್ಪ ತಂದೆ ಬಸವಂತರಾಯ ಘಟ್ಟಗೊಂಡ ಸಾ||ಜೀವಣಗಿ ತಾ:ಗುಲಬರ್ಗಾ ರವರು ನಾನು ದಿನಾಂಕ: 11/04/2012 ರಂದು ರಾತ್ರಿ  11-30 ಗಂಟೆ ಸುಮಾರಿಗೆ ಮನೆಯ ಮುಂದೆ ಮೋಟರ್ ಸೈಕಲ್ ನಂ:ಕೆಎ-32-ಡಬ್ಲೂ-4243 ನೇದ್ದನ್ನು ನಿಲ್ಲಿಸಿದ್ದು, ದಿನಾಂಕ: 12/04/2012 ರ ಬೆಳೆಗ್ಗೆ 6-00 ಎದ್ದು ನೋಡಲಾಗಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಮುಂದುಗಡೆ ನಿಲ್ಲಿಸಿದ ನನ್ನ ಕಪ್ಪು ಬಣ್ಣದ ನೀಲಿ ಪಟ್ಟಿಗಳುಳ್ಳ ಹಿರೋಹೊಂಡಾ ಸ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ: ಕೆಎ-32-ಡಬ್ಲೂ-4243 ನೇದ್ದು ಅಂದಾಜು ಕಿಮ್ಮತ್ತು 20,000/- ರೂಪಾಯಿ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:45/2012 ಕಲಂ:379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ರಫೀಕ ತಂದೆ ಮಹಮ್ಮದ ಉಸ್ಮನ ಶೇಖ ಸಾ:ತೊನಸಳ್ಳಿ ರವರು ನಾನು ಮತ್ತು ನನ್ನ ತಮ್ಮ ಶಫಿ. ಇಬ್ಬರೂ ಕೂಡಿಕೊಂಡು ದಿನಾಂಕ: 20-04-2012 ರಂದು 8 ಪಿ.ಎಂ ಸುಮಾರಿಗೆ ತೊನಸಹಳ್ಳಿಯಿಂದ ಶಹಾಬಾದಕ್ಕೆ ಟಂ ಟಂ ನಂ ಕೆ.ಎ. 32 ಎ 3092 ನೇದ್ದರಲ್ಲಿ ಕುಳಿತಿದ್ದು ಅದರಲ್ಲಿ ನಮ್ಮೂರವರಾದ ಲಕ್ಷ್ಮಿಕಾಂತ ,ಇನ್ನೂ 3 ಜನರು ಕುಳಿತು ಬರುತ್ತಿರುವಾಗ ದಾದೀಪೀರ ದರ್ಗಾದ ಹತ್ತಿರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಪಲ್ಟಿ ಮಾಡಿದನು. ನನ್ನ ತಮ್ಮನಿಗೆ ತಲೆಗೆ, ಎಡಮೋಳಕಾಲ ಕೆಳಗಿ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 41/2012 ಕಲಂ 279 337 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:
ಶ್ರೀ ಬಾಬು ತಂದೆ ಮಹಿಬೂಬಸಾಬ ಶೇಖ ಸಾ:ಮರತೂರ ರವರು ನನ್ನ ಅತ್ತಿಗೆಯಾದ ಶಬಾನಾ ಗಂಡ ಚಾಂದಶೇಖ ಇವಳು ದಿನಾಂಕ:21/04/2012 ರಂದು 7.00 ಪಿಎಂ ಸುಮಾರಿಗೆ  ಮನೆಯ ಮುಂದೆ ಕುಳಿತಾಗ ತಾರಾ ಇವಳು ಬಂದು ವಿನಾಕಾರಣ ಜಗಳ ತೆಗೆದು   ನಮ್ಮ ತಿಪ್ಪೆಯಲ್ಲಿ ಕಸ ಚಲ್ಲುತ್ತೇವೆ ನಿನ್ನ ದೇನು ಅಂತಾ ಜಗಳ ತೆಗೆದು ಕೈಯಿಂದ ಹೊಡೆದಳು ಅಪ್ಸನಾ ಇವಳು ಬಿಡಿಸಲು ಬಂದಾಗ ಮಹ್ಮದ ರಫೀಕ ಇತನು ಕಲ್ಲಿನಿಂದ ತಲೆಯ ಎಡಭಾಗಕ್ಕೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಜಗಳದ ಸಪ್ಪಳ ಕೇಳಿ ಸಂತೋಷ ತಂದೆ ಪರಮೇಶ್ವರ ಬರುತ್ತಿದ್ದಾಗ ಮೈನೋದ್ದಿನ ಇತನು ತಡೆದು ನಿಲ್ಲಿಸಿ ಚಾಕು ಹಿಡಿದು ನನಗೆ ಬಾಯಿಗೆ ಹೊಡೆದಾಗ ತರಚಿದ ಗಾಯ ಆಗಿರುತ್ತದೆ ರಫೀಕ, ಶಫೀಕ ಹಾಗೂ ತಾರಾ ಇವಳು ಕೈಯಿಂದ ಹೊಡೆದಿರುತ್ತಾರೆ. ಮತ್ತು ಸಂತೋಷ ಇತನಿಗೆ ಮೈನೋದ್ದಿನ ಇತನು ಕೈಯಿಂದ ಮುಷ್ಠಿಮಾಡಿ ಎಡಗಣ್ಣೆಗೆ & ಬಲಗಣ್ಣೆನ ಕೆಳಗೆ ಬಲವಾಗಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 42/2012 ಕಲಂ 147 341 323 324 504 506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀ ಮಹ್ಮದ ಶಫೀಕ ತಂದೆ ಗಫೂರ ಸಾಬ ಮೌಜಿನ  ಸಾ:ಮರತೂರ ರವರು ಅಕ್ಕಳಾದ ತಾಹೇರ @ ತಾರಾ ಇವಳು ಬಾಬುರವರ ಮನೆಯ ಮುಂದೆ ಹೋಗಿ ತಿಪ್ಪೆ ಕಸ ಸಂಬಂಧವಾಗಿ ಕೇಳಲು ಹೋಗಿದ್ದು  ಶಬಾನಾ, ಅಪ್ಸನಾ ಮಹೆಬೂಬಿ ಇವರು ನನ್ನ ಅಕ್ಕಳನ್ನು ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು ಅಪ್ಸನಾ,ಮಹೇಬೂಬಬಿ ಹೊಡೆದಿರುತ್ತಾರೆ. ನನ್ನ ತಮ್ಮ ರಫೀಕ ಬಿಡಿಸಲು ಬಂದಾಗ ನನಗೆ ಬಾಬು ಮತ್ತು ರಫೀಕ ಇವರು ಕೈಯಿಂದ ತಲೆಯ ಹಿಂದೆ ಹೊಡೆರು ತರಚಿದ ಗಾಯಗಳಾಗಿರುತ್ತವೆ. ನಮ್ಮೆಲರಿಗೆ ಸಂತೋಷ, ಉಲ್ಲಾಸ ಇವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:43/2012 ಕಲಂ 147 323 234 504 354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸಿದ್ಧರಾಮ ತಂದೆ ಅಂಬಾರಾಯ ಶಿರ ಉ:ಟಂಟಂ ಚಾಲಕ ಸಾ: ಕೆರೆ ಭೋಸಗಾ ಗ್ರಾಮರವರು ನನ್ನ ಮಗಳಾದ ಗೌರಮ್ಮ ವಯ || 4 ಮತ್ತು ಅಣ್ಣನ ಮಗಳು ಅಶ್ವಿನಿ ವ|| 8 ವರ್ಷ ಇಬ್ಬರೂ ದಿನಾಂಕ 21-04-12 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ  ಅಂಭಾಭಾಯಿ ಗುಡಿ ಹತ್ತಿರ  ರೋಡ ಬದಿ ಹಿಡಿದುಕೊಂಡು ಹೊರಟಾಗ  ಊರ ಒಳಗಿನಿಂದ ಮೋಟಾರ ಸೈಕಲ ಕೆಎ 32 ಕ 8010 ಚಾಲಕ  ಗುಂಡಪ್ಪ ತಂದೆ ನಾಗಪ್ಪ ನಾಯಿಕೋಡಿ ಸಾ||ಕೆರೆ ಭೋಸಗಾ ಗ್ರಾಮ ಅತಿವೇಗ ಮತ್ತು ಅಲಕ್ಷನತದಿಂದ ನಡೆಸುತ್ತಾ ಬಂದು ನನ್ನ ಮಗಳಿಗೆ ಡಿಕ್ಕಿ ಪಡಿಸಿ ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:122/2012 ಕಲಂ  279,337 ಐಪಿಸಿ ಸಂ. 187 ಎಂ.ವಿ.ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಪಾರ್ವತಿ ಗಂಡ ದೇವಿಂದ್ರಪ್ಪ ರಾಮಕೋಟಿ ಸಾ: ಶರಣಸಿರಸಗಿ ತಾ||ಜಿ||ಗುಲಬರ್ಗಾ ರವರು ನಾನು ಮತ್ತು ನನ್ನ ತಾಯಿ ರಾಣಜಿಪೀರ ದರ್ಗಾ ಕ್ರಾಸ ಹತ್ತಿರ ದಿನಾಂಕ: 21/4/12 ರಂದು 1;30 ಪಿಎಮ ಸುಮಾರಿಗೆ ನಿಂತಾಗ  ಆಳಂದ ರಸ್ತೆಯ ಕಡೆಯಿಂದ ಮೋಟಾರ ಸೈಕಲ ನಂ ಕೆಎ 32 ವಾಯ  4824 ನೇದ್ದರ ಸವಾರನು ತನ್ನ ಮೋಟಾರ  ಸೈಕಲ ಸವಾರನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ  ಪಡಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:123/2012 ಕಲಂ 279 338 ಐಪಿಸಿ ಸಂ/ 187 ಐಎಂವಿ ಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.