POLICE BHAVAN KALABURAGI

POLICE BHAVAN KALABURAGI

24 March 2012

GULBARGA DIST REPORTED CRIMES

ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ. ಶ್ರೀ. ಗಣಪತರಾವ ತಂದೆ ನಾಗಪ್ಪ ಸೋನಾನೆ ಸಾ||ಬೇಲೂರ [ಕೆ] ತಾ||ಜಿ|| ಗುಲಬರ್ಗಾರವರು ನಮ್ಮ ಹೊಲ ಬೇಲೂರ [ಕೆ] ಸೀಮಾಂತರದ ಸರ್ವೆ ನಂಬರ 81 ಇದ್ದು 12 ಪತ್ರಾಗಳನ್ನು ಹಾಕಿ ಮನೆ ಕಟ್ಟಿದ್ದು, ದಿನಾಂಕ:23-03-2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಮನೆಗೆ ಆಕಸ್ಮೀಕವಾಗಿ ಬೆಂಕಿ ತಗುಲಿ ಮನೆಯಲ್ಲಿಟ್ಟಿದ್ದ ಒಕ್ಕಲುತನದ ಸಾಮಾನುಗಳು ಮತ್ತು ಮನೆಯೊಳಗಿನ, ಹೊರಗಡೆ ನಿಲ್ಲಿಸಿದ್ದ ಎತ್ತಿನ ಗಾಡಿ,ಮನೆಯ ಹಿಂದೆ ಸಂಗ್ರಹಿಸಿ ಇಟ್ಟಿದ್ದು ಎರಡು ಗಾಡಿ ಜೋಳದ ಕಣಕಿ ಸುಟ್ಟು ಭಸ್ಮವಾಗಿ ಅಂದಾಜು ರೂ. 30000/- ನಾಶವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಎಫ್.ಎ.ನಂ: 03/2012 ಕಲಂ ಆಕಸ್ಮೀಕ ಬೆಂಕಿ ಅಪಘಾತ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಾಣೆಯಾದ ಪ್ರಕರಣ:

ನೆಲೋಗಿ ಪೊಲೀಸ್ ಠಾಣೆ:ಶ್ರೀ ದೇನು ತಂದೆ ಡಾಕು ರಾಠೋಡ ಸಾ||ಮಂದೇವಾಲ ತಾಂಡಾ ವರು ನನ್ನ ಮಗಳಾದ ಕವಿತಾಬಾಯಿ ವಯ: 16-17 ಇದ್ದು (ವರ್ಷ) ಇವಳು ದಿನಾಂಕ 15/03/2012 ರಂದು ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು, ರಾತ್ರಿ 11:00 ಗಂಟೆಯ ಸುಮಾರಿಗೆ ಕವಿತಾ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾಳೆ. ನಾವು ನಮ್ಮ ಸಂಬಂಧಿಕಕಡೆಗಳಲ್ಲಿ ಹುಡುಕಾಡಿದೆವು ಎಲ್ಲಿಯು ಪತ್ತೆಯಾಗಿರುವದಿಲ್ಲ. ನನ್ನ ಮಗಳಾದ ಕವಿತಾ ಇವಳ ಚೆಹರೆ ಪಟ್ಟಿಯ ಗುರುತುಗಳು ಹೆಸರು-ಕವಿತಾ, ಎತ್ತರ-5 ಅಡಿ ವಯಸ್ಸು- 16-17 , ತೆಳ್ಳನೆ ಮೈಕಟ್ಟು, ದುಂಡು ಮುಖ, ಗೋದಿ ಮೈಬಣ್ಣ, ಜಾತಿ- ಲಮಾಣಿ, ಮಾತನಾಡುವ ಭಾಷೆಗಳು- ಕನ್ನಡ, ಲಮಾಣಿ ಬಾಷೆ ಬಲ್ಲವಳಾಗಿರುತ್ತಾಳೆ, ಇವಳು ಕಪ್ಪು ಬಣ್ಣದ ನೈಟಿ ಹಾಕಿಕೊಂಡಿರುತ್ತಾಳೆ ಇವಳನ್ನು ಪತ್ತೆ ಮಾಡಿಕೊಡಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2012 ಕಲಂ ಹುಡಗಿ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಸದರಿಯವರ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 08442-225033/ 08472-263604 ಮೋಬಾಯಿಲ್ ನಂ: 9480803562 ನೇದ್ದವುಗಳಿಗೆ ಸಂಪರ್ಕಿಸಲು ಕೋರಲಾಗಿದೆ,

GULBARGA DIST REPORTED CRIME

ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶರಣಬಸಯ್ಯ ತಂದೆ ವೀರಯ್ಯ ಹಿರೇಮಠ ಸಾ||ಕಲ್ಲಹಂಗರಗಾ ತಾ||ಜಿ||ಗುಲಬರ್ಗಾರವರು ನನ್ನ ಮಗನಾದ ಕಾರ್ತೀಕ ವ:13 ವರ್ಷ ಇತನು ಉದನೂರ ರಿಂಗ ರೋಡ ಕ್ರಾಸಿನಲ್ಲಿ ಸೈಕಲ ಪಂಕ್ಚರ ಮಾಡಿಸಿಕೊಂಡು ಮನೆಯ ಕಡೆಗೆ ಸೈಕಲ ಮೇಲೆ ಬರುತ್ತಿರುವಾಗ ಹೈ ಕೋರ್ಟ ರಿಂಗ ರೋಡ ಕಡೆಯಿಂದ ಕೆ.ಎಸ್.ಅರ್.ಟಿ.ಸಿ. ಬಸ್ಸ ಕೆಎ 32 ಎಫ 1442 ನಾಗಪ್ಪ ಚಿಂಚೋಳಿ ಡಿಪೋ ರವರು ತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಕೆ.ಎಸ್.ಅರ್.ಟಿ.ಸಿ. ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 90/2012 ಕಲಂ 279,304(ಎ) ಐಪಿಸಿ ಸಂಗಡ 187 ಎಂ.ವಿ.ಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.