POLICE BHAVAN KALABURAGI

POLICE BHAVAN KALABURAGI

13 October 2015

Kalaburagi District Reported Crimes

ಅತ್ಯಾಚಾರ ಪ್ರಕರಣ :
ಅಫಜಲಪೂರ ಠಾಣೆ : ಕುಮಾರಿ ಇವಳು ತಮ್ಮ ಸಮಾಜದ ಸಂಜೀವಕುಮಾರ ತಂದೆ ಖಾಜಪ್ಪ ನಿಂಬಾಳ ರವರ ಹೊಲಕ್ಕೆ ಕಸ ತಗೆಯಲು ಹೋಗಿದ್ದು ಸಂಜಿವಕುಮಾರನ ಅಜ್ಜಿ ರತ್ನಾಬಾಯಿ ಇವಳು ಸಹ ಕಸ ತಗೆಯಲು ಬಂದಿದ್ದಳು. ಮದ್ಯಾಹ್ನ ಎಲ್ಲರು ಊಟ ಮಾಡಿದ ನಂತರ 3:00 ಗಂಟೆ ಸುಮಾರಿಗೆ ಸಂಜಿವಕುಮಾರನು ನನ್ನ ಹತ್ತಿರ ಬಂದು, ನನಗೆ ನೀನು ಇಲ್ಲಿ ಕಸ ತಗೆಯಬೇಡ ಪಕ್ಕದ ಹೊಲದಲ್ಲಿ ಕಸ ಜಾಸ್ತಿ ಬೇಳೆದಿದೆ ನೀನು ಅಲ್ಲಿ ಕಸ ತಗೆಯುವಿಯಂತೆ ನಡೆ ಎಂದು ಹೇಳಿದನು. ನಾನು ಸಂಜಿವಕುಮಾರನೊಂದಿಗೆ ಪಕ್ಕದ ಹೊಲದಲ್ಲಿ ಹೋಗಿ ಅವನು ಹೇಳಿದ ಜಾಗದಲ್ಲಿ ಕಸ ತಗೆಯುತ್ತಿದ್ದೇನು. ಆ ಸಮಯದಲ್ಲಿ ಸಂಜಿವ ಕುಮಾರನು ನನಗೆ ಇಬ್ಬರು ಮಲಗೋಣಾ ಬಾ ಅಂತಾ ಕರೆದನು, ಅದಕ್ಕೆ ನಾನು ಯಾಕ ಹಿಂಗ್ಯಾಕ ಮಾತಾಡ್ತಿ ನನಗೆ ಏನ ತಿಳಕೊಂಡಿದ್ದಿ ಅಂತಾ ಅಂದಾಗ ಅವನು ನನಗೆ ಕೂಗಾಡದಂತೆ ನನ್ನ ಬಾಯಿ ಒತ್ತಿ ಹಿಡಿದು ಚಾಕು ತೋರಿಸಿ ಕೂಗಾಡಿದರೆ ನಿನ್ನನ್ನು ಚಾಕುವಿನಿಂದ ಹೊಡೆದು ಕೊಲೆ ಮಾಡುತ್ತೇನೆ ಅಂದನು. ನಾನು ಹೇದರಿ ಸುಮ್ಮನಾಗಿದ್ದರಿಂದ ಮರೆಯಲ್ಲಿ ಏಳೆದುಕೊಂಡು ಹೋಗಿ ನನ್ನನ್ನು ಮಲಗಿಸಿ ಬಲತ್ಕಾರದಿಂದ ಸಂಭೋಗ ಮಾಡಿದನು. ಸಂಭೋಗ ಮಾಡಿದ ನಂತರ ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇದರಿಸಿದನು. ನಾನು ಆತನಿಗೆ ಹೆದರಿ  ಈ ವಿಷಯವನ್ನು ಯಾರಿಗೂ ಹೇಳಿರುವುದಿಲ್ಲ. ಮುಂದೆ ಅವನು ನಾನು ಕೆಲಸಕ್ಕೆಂದು ಅವರ ಹೊಲಕ್ಕೆ ಹೋದಾಗಲೆಲ್ಲ ಇದೆ ರೀತಿ ಇಲ್ಲಿಯವರೆಗೆ ನನಗೆ ಬಲತ್ಕಾರದಿಂದ ಸಂಬೋಗ ಮಾಡುತ್ತಾ ಬಂದಿರುತ್ತಾನೆ. ಈಗ ಸುಮಾರು ಒಂದು ವಾರದ ಹಿಂದೆ ನನಗೆ  ಹೊಟ್ಟೆ ನೋವು ಆಗಿದ್ದರಿಂದ ನಾನು ನನ್ನ ತಾಯಿ  ಮತ್ತು ನನ್ನ ಅಕ್ಕ  ಇವರಿಗೆ ತಿಳಿಸಿದ್ದು ಅವರು ಕಲಬುರಗಿಯ ಯಾವುದೊ ಒಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ನನ್ನನ್ನು ತಪಾಸಣೆ ಮಾಡಿದ ನಂತರ ನೀನು ಗರ್ಬಿಣಿಯಾಗಿರುತ್ತಿ ಅಂತಾ ತಿಳಿಸಿರುತ್ತಾರೆ, ವೈದ್ಯರು ತಿಳಿಸಿದ ನಂತರ ನನ್ನ ಅಕ್ಕ ಮತ್ತು ತಾಯಿ ನನ್ನನ್ನು ವಿಚಾರಿಸಿದಾಗ ದಿನಾಂಕ 15-05-2015 ರಂದು ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಸಂಜಿವಕುಮಾರ ನಿಂಬಾಳ ಎಂಬಾತನು ನನಗೆ ದೇಸಾಯಿ ಕಲ್ಲೂರ ಸೀಮಾಂತರದಲ್ಲಿರುವ ತಮ್ಮ ಹೊಲದಲ್ಲಿ ಚಾಕು ತೋರಿಸಿ ಜೀವದ ಭಯ ಹಾಕಿ ಒತ್ತಾಯಪೂರ್ವಕವಾಗಿ ಜಬರಿ ಸಂಭೋಗ ಮಾಡಿ, ಮುಂದೆ ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನ್ನ ಕೊಲೆ ಮಾಡುತ್ತೇನೆ ಅಂತಾ ಹೆದರಿಕೆ ಹಾಕಿದ್ದರಿಂದ ನಾನು ಆತನಿಗೆ ಹೆದರಿ ಇಲ್ಲಿಯವರೆಗೆ ನಿಮಗೆ ತಿಳಿಸಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಡಾ|| ಶರಣೇಂದ್ರ ತಂದೆ ಬಸವಣ್ಣಪ್ಪಾ ಪಾಗಾ ಸಾ:ಮನೆ ನಂ. 9-953/5ಬಿ ಜನತಾ ಲೇ ಔಟ ಎಸ್‌ಬಿ ಟೆಂಪಲ್‌ ರೋಡ ಕಲಬುರಗಿ ರವರು ಸಲ್ಲಿಸಿದ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ   ನಾನು ರಾಮ ಮಂದಿರ ಸರ್ಕಲ್‌ ಹತ್ತಿರ ವಿಜಯಕುಮಾರ ಇವರ ಕಾಂಪ್ಲೆಕ್ಸದಲ್ಲಿ ಕಳೆದ 3 ವರ್ಷಗಳಿಂದ ಚೇತನಾ ಹೊಮಿಯೋಪಥಿ ಅಂತಾ ಆಸ್ಪತ್ರೆ ತೆಗೆದದಿದ್ದು ಇರುತ್ತದೆ. ಆಸ್ಪತ್ರೆಯಲ್ಲಿ ನಮ್ಮ ಸಂಬಂದಿ ಈರಣ್ಣ ಅಂತಾ ಕಂಪೌಡರ್‌ ಇರುತ್ತಿದ್ದು ರಾತ್ರಿ 9:30 ಗಂಟೆಗೆ ಮುಚ್ಚಿಕೊಂಡು ಮನೆಗೆ ಹೋಗಿದ್ದು 3 ದಿನಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಕಾಸ್ಮೆಟಿಕ್‌ ಉಪಚಾರ ಮಾಡವ ಯಂತ್ರ  ಅರ್ದ ಕಂತು ಕೊಟ್ಟು ಖರಿದಿಸಿದ್ದು ದಿನಾಂಕ 12/10/2015 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಕಂಪೌಡರ್‌ ಈರಣ್ಣ ಇಬ್ಬರು ಕೂಡಿಕೊಂಡು ಆಸ್ಪತ್ರೆ ತೆರೆದಿರುತ್ತೆವೆ. ನಾನು ಕಾಸ್ಮೆಟಿಕ್‌ ಮಾಡುವ ಯಂತ್ರವನ್ನು ಖರಿದಿಸಿದ ಮಶಿನಿನ ಕಂತನ್ನು ಕಟ್ಟುವ ಕುರಿತು ಮನೆಯಿಂದ ನಗದು ಹಣ 75,000/- ರೂಗಳನ್ನು ತೆಗೆದುಕೊಂಡು ಬಂದಿರುತ್ತೆನೆ. ಸದರಿ ಹಣವನ್ನು ಕಂತು ಕಟ್ಟಲು ಕಂಪನಿಯವರನ್ನು ಕರೆದಾಗ ಸದರಿಯವರು ನಾವು ಜರ್ನಿಯಲ್ಲಿ ಹೋಗುತ್ತೆವೆ, ನೀವು ನಾಳೆ ನಮ್ಮ ಅಕೌಂಟಿಗೆ ಹಾಕ್ರಿ ಅಂತಾ ತಿಳಿಸಿದ್ದರಿಂದ ನಾನು ಮನೆಯಿಂದ ತೆಗೆದುಕೊಂಡು ಬಂದ ನಗದು ಹಣ 75,000/- ರೂಗಳನ್ನು ನಾಳೆ ಕಟ್ಟಿದರಾಯಿತು ಅಂತಾ ನನ್ನ ಟೆಬಲಿನ ಡ್ರಾದಲ್ಲಿ ಇಟ್ಟು ಕೀಲಿ ಹಾಕಿರುತ್ತೆನೆ. ಅದರ ಜೋತೆಗೆ ನನ್ನ ಡೆಲ್‌ ಕಂಪನಿಯ ಲ್ಯಾಪಟಾಪನ್ನು ಸಹ ಇಟ್ಟಿರುತ್ತೆನೆ. ಸದರಿ ಕೀಲಿ ಕೈಯನ್ನು ಟೆಬಲ್‌ನ ಕೆಳಗೆ ಪೆಪರಗಳಲ್ಲಿ ಇಟ್ಟಿರುತ್ತೆನೆ. ನಂತರ ರಾತ್ರಿ 9:30 ಗಂಟೆಯ ಸುಮಾರಿಗೆ ಆಸ್ಪತ್ರೆಯ ಶೆಟರ್‌ನ್ನು ಮುಚ್ಚಿಕೊಂಡು ಮನೆಗೆ ಹೋಗಿರುತ್ತವೆ. ಇಂದು ದಿನಾಂಕ:13/10/2015 ರಂದು 4:50 ಎಎಮ್‌ ಸುಮಾರಿಗೆ ಪೊಲೀಸ್‌ನವರು ನನಗೆ ಫೊನ್‌ ಮಾಡಿ ನಿಮ್ಮ ಆಸ್ಪತ್ರೆಯ ಶೆಟರ್‌ ತೆಗೆದಿದೆ ನೀವು ಒಳಗಡೆ ಮಲಗುತ್ತಿರಾ ಹೇಗೆ ಅಂತಾ ಕೇಳಿದಾಗ ಇಲ್ಲ ಅಂತ ತಿಳಿಸಿದ್ದು ಇರುತ್ತದೆ. ನಿಮ್ಮ ಆಸ್ಪತ್ರೆಯ ಶೆಟರ್‌ ತೆರೆದಿದೆ ಅಂತ ಹೇಳಿದ್ದರಿಂದ ನಾನು ಅಲ್ಲಿಗೆ ಬಂದು ನೋಡಲಾಗಿ ನಮ್ಮ ಆಸ್ಪತ್ರೆಯ ಶೆಟರ್‌ ಕೀಲಿ ಮುರಿದು ಶೆಟರನ್ನು ಹಿಗ್ಗಿಸಿದ್ದು ಇರುತ್ತದೆ. ನಂತರ ನಾನು ಪೊಲೀಸ್‌ನವರೊಂದಿಗೆ ಒಳಗಡೆ ಹೋಗಿ ನೋಡಲಾಗಿ ನನ್ನ ಟೆಬಲ್‌ನ ಡ್ರಾದ ಕೀಲಿ ತೆಗದಿದ್ದು ಅದರಲ್ಲಿ ನಾನು ಇಟ್ಟಿದ್ದ ನಗದು ಹಣ 75,000/- ರೂಗಳು ಮತ್ತು ಒಂದು ಲ್ಯಾಪಟಾಪ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-10-2015 ರಂದು ರಾತ್ರ ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಇದ್ದಾಗ ಬನ್ನಟ್ಟಿ ಕಡೆಯಿಂದ ಒಂದು ಟ್ರಾಕ್ಟರ ಬರುತಿದ್ದು ನಾನು ಸದರಿ ಟ್ರಾಕ್ಟರ ಚಾಲಕನಿಗೆ ಟ್ರಾಕ್ಟರ ನಿಲ್ಲಿಸುವಂತೆ ಕೈ ಸೊನ್ನೆ ಮಾಡಿದಾಗ ಸದರಿ ಚಾಲಕನು ನನಗೆ ನೋಡಿ ತನ್ನ ಟ್ತಾಕ್ಟರ ನಿಲ್ಲಿಸಿದ ತಕ್ಷಣ ಕತ್ತಲಲ್ಲಿ ಓಡಿ ಹೋಗಿರುತ್ತಾನೆ ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿರುತ್ತದೆ ಅಂತ ರಾತ್ರಿ ಗಸ್ತು ಬಿಟ್ ನಂ 04 ರಲ್ಲಿ ಕರ್ತವ್ಯದಲಿದ್ದ ಗುಂಡಪ್ಪ ಪಿಸಿ-339 ರವರು ನನಗೆ ನಿಸ್ತಂತು ಮೂಲಕ ಕಾಲ ಮಾಡಿ ತಿಳಿಸಿದ್ರ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಕ್ಷ್ಮಿ ಗುಡಿ ಹತ್ತಿರ ಹೋಗಿ ನೋಡಲಾಗಿ ಒಂದು ಟ್ರಾಕ್ಟರ ಇದ್ದು ಅಲ್ಲಿ ನಮ್ಮ ಸಿಬ್ಬಂದಿಯಾದ ಗುಂಡಪ್ಪ ಪಿಸಿ-339ರವರು ಹಾಜರಿದ್ದು ಸದರಿ ಟ್ರಾಕ್ಟರ ನೋಡಲಾಗಿ ಸದರಿ ಟ್ರಾಕ್ಟರ ಚಾಲಕನು  ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ್ದು ಇದ್ದಿದ್ದು ಪಂಚರ ಸಮಕ್ಷಮ ನಾನು ಟ್ರಾಕ್ಟರನ್ನು   ಚಕ್ಕ ಮಾಡಲು, ಸ್ವರಾಜ ಕಂಪನಿಯ  ಟ್ರಾಕ್ಟರ ಇದ್ದು ಅದರ ಇಂಜಿನ ನಂ 43.3008/ಎಸ್ ಆರ್ ಹೆಚ್ 08671 ಚೆಸ್ಸಿ ನಂ ಡಬ್ಲೂಎಸಿಹೆಚ್ 40906160567 ಅಂತ ಇದ್ದು, ಸದರಿ ಟ್ರಾಕ್ಟರದಲ್ಲಿ ಮರಳು ತುಂಬಿದ್ದನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಗಿರೇಪ್ಪ ತಂದೆ ಗುಂಡಪ್ಪ ಶಾಖಾವ ಸಾ:ಬೆಳಕೋಟಾ ಆಎರ.ಸಿ ಕಮಲಾಪೂರ ತಾ:ಜಿ:ಕಲಬುರಗಿ ಇವರು  ದಿನಾಂಕ: 11-10-2015  ರಂದು ರಾತ್ರಿ ತಮ್ಮ  ಮಗ ಸಂತೋಷ ಈತನು ಕಮಲಾಪೂರ ಗ್ರಾಮದ ಅಯ್ಯುಬ ಧಾಭಾದ ಮುಂದಿನಿಂದ ತಮ್ಮ ಮನೆಯ ಕಡೆಗೆ ಹೋಗುವಾಗ ಆನಂದನು ಕುಡಿದ ನಶೆಯಲ್ಲಿ ಅವಾಚ್ಯವಾಗಿ ಬೈಯುತ್ತಿದ್ದಾಗ ಫಿರ್ಯಾಧಿ ಹಾಗೂ ಆರೋಪಿತರ ಮದ್ಯ ಬಾಯಿಮಾತಿನ ತಕರಾರು ಆಗಿದ್ದು. ಅಲ್ಲದೆ ರಾತ್ರಿ ಆರೋಪಿತರು ಫಿರ್ಯಾಧಿಯ ಮನೆಯ ಮುಂದೆ ಹೋಗಿ ಕಲ್ಲು ತುರಾಟ ಮಾಡಿ ಫಿರ್ಯಾಧಯವರ ಮನೆಯ ಮುಂದಗಡೆ ನಿಲ್ಲಿಸಿದ ಕಾರ ಜಖಂ ಮಾಡಿ ಜಗಳಾ ಮಾಡಿದ್ದು. ಅದೇ ವಿಷಯದಲ್ಲಿ ಇಂಧು ದಿನಾಂಕ: 12-10-2015 ರಂದು ಸಾಯಂಕಾಲ ಗಿರೇಪ್ಪ ಶಾಖಾ ಅವರ ಹೆಂಡತಿ ಮಲ್ಲಮ್ಮ ಹಾಗೂ ಮಗ ಸಂತೋಷ ಇವರು ಬೇಳಕೋಟಾ ಆರ.ಸಿ ಕಮಲಾಪೂರನ ತಮ್ಮಮನೆಯ ಮುಂದೆ ಮಾತನಾಡುತ್ತಾ ಕುಂತಾಗ ಪರಮೇಶ @ ಪಮ್ಮು ತಂದೆ ಪೀರಪ್ಪ ಗೌರೆ ಅರವಿಂದ ತಂದೆ ಪೀರಪ್ಪ ಗೌರೆ ಆನಂದ ತಂದೆ ಪೀರಪ್ಪ ಗೌರೆ ಅನೀಲ ತಂದೆ ಪೀರಪ್ಪ ಗೌರೆ ದಯಾನಂದ ಗೌರೆ ರಘು ಹಾಲು ರಾಜು ಹಾಲು ಅನೀಲ ಸೂಗೂರ ಅವಿನಾಶ ಹಾಲು ಜಗದೀಶ ಗೌರೆ ಹಾಗೂ ಅಂಬವ್ವ ಗೌರೆ ಸಾ:ಎಲ್ಲರೂ ಕಮಲಾಪೂರ ಇವರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಚಿರಾಡುತ್ತಾ ಬಂದು ಫಿರ್ಯಾಧಿಗೆ ಅವನ ಹೆಂಡತಿಗೆ ಹಾಗೂ ಮಗನಿಗೆ ಹೋಡೆ ಬಡೆ ಮಾಡಿ ಫಿರ್ಯಾಧಿ ಹೆಂಡತಿ ಮಲ್ಲಮ್ಮಳಿಗೆ ತಲೆಯ ಕೂದಲು ಹಿಡಿದು ಎಳೆದಾಡಿ ಅವಮಾನ ಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮ,ಏಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KALABURAGI DISTRICT REPORTED CRIMES.

ಕಳವು ಪ್ರಕರಣ:
ಅಶೋಕ ನರ ಪೊಲೀಸ್ ಠಾಣೆ : ದಿನಾಂಕ 12/10/2015  ರಂದು ಶ್ರೀ. ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಶ್ರೀಗಿರಿ ಸಾ: ಅರಳಗುಂಡಗಿ ರವರು ಠಾಣೆಗೆ ಹಾಜರಾಗಿ ತಾನು ಮತ್ತು ತನ್ನ ಪತ್ನಿ ಕಲ್ಪನಾ ಅವರ ಜೊತೆ ಕಲಬುರಗಿ ಬಿಜಾಪೂರ  ಬಸ್ಸಿನಲ್ಲಿ ತನ್ನ ಸ್ವಂತ ಊರಿಗೆ ಹೋಗುವ ಕುರಿತು ಕೇಂದ್ರ ಬಸ ನಿಲ್ದಾಣದಲ್ಲಿ ಬಸ್ ನಲ್ಲಿ ಕುಳಿತಿದ್ದಾಗ ನಾಲ್ಕು ಜನ ಮಹಿಳೆಯರು ಬಸ ಹತ್ತಿ ತಮ್ಮ ಸೀಟಿನ ಪಕ್ಕದಲ್ಲಿ ಕುಳಿತು ನಂತರ ಸ್ವಲ್ಪ ಸಮಯದ ನಂತರ ಇಳಿದು ಹೋಗಿದ್ದು. ನಂತರ ನಾವು ನೇದಲಗಿ ಗ್ರಾಮದಲ್ಲಿ ಇಳಿದು ನೊಡಿದಾಗ ನಮ್ಮ ಬ್ಯಾಗ ನೋಡಲಾಗಿ ಬ್ಯಾಗಿನ ಚೈನ ತೆರೆದಿರುವುದು ಕಂಡು ಬಂದಾಗ ನೋಡಲಾಗಿ ಬ್ಯಾಗಿನಲ್ಲಿದ್ದ 10 ಗ್ರಾಮ ಲಾಕೇಟ, 40 ಗ್ರಾಮ ಪಾಟ್ಲಿ,  40 ಗ್ರಾಂ ತಾಳಿ ಚೈನ ಒಟ್ಟು ಮೌಲ್ಯ 1,80,000/- ರೂ ಇದ್ದ  ಚಿನ್ನದ ಆಭರಣದ ಡಬ್ಬಿ ಸಮೇತ ಕಳುವಾಗಿದ್ದು. ತಾವು ಕಳುವಾದ ತಮ್ಮ ಆಭರ ಪತ್ತೆ ಹಚ್ಚಿ ಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಎಮ್.ಬಿ.ನಗರ ಪೊಲೀಸ್ ಠಾಣೆ : ದಿನಾಂಕಃ 12/10/2015 ರಂದು ಶ್ರೀ ಎಚ್. ಸಾಯಿ ಧರ್ಮೇಂದ್ರ ತಂದೆ ಎಚ್. ರವೀಂದ್ರ ಹಮೀಲಪೂರಕರ್ ಸಾಃ ಗುಬ್ಬಿ ಕಾಲೋನಿ ಸೇಡಂ ಇವರು ಠಾಣೆಗೆ ಹಾಜರಾಗಿ ತಾವು ಆರ್.ಟಿ.ಓ ಆಫೀಸ್ ನಲ್ಲಿ ಪ್ರಥಮ ದರ್ಜೆ ಸಹಾಯಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ತಾನು ದಿನಾಂಕಃ 09/10/2015 ರಂದು 10:00 ಎ.ಎಂ. ಕ್ಕೆ ಎಂದಿನಂತೆ ಆರ್.ಟಿ.ಓ ಕಛೇರಿಯಲ್ಲಿ ತನ್ನ ಕರ್ತವ್ಯ ಮಾಡುತ್ತಿರುವಾಗ ಅದೇ ಆರ್.ಟಿ.ಓ ಕಛೇರಿಯಲ್ಲಿ ಏಜೆಂಟ್ ಅಂತಾ ಕೆಲಸ ಮಾಡುತ್ತಿರುವ 1) ಶ್ರೀನಿವಾಸ ಶೆಟಗಾರ 2) ಮಂಜುನಾಥ ಶೆಟಗಾರ ಹಾಗು 3) ಉಮೇಶ್ ಸಂಗೋಳ್ಗಿ ಈವರು ಬಂದು ತನಗೆ ಶ್ರೀನಿವಾಸ ಶೆಟಗಾರ ಈತನು ಸ್ವಲ್ಪ ಜಲ್ದಿ ಫೈಲ್ ಪುಟಪ್ ಮಾಡುವ ಸಂಬಂಧ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಮಗನೆ ಮಾಡು ಮಾಡಿಕೊಡು ಇಲ್ಲ ಅಂದರೆ ನೂಡು ಅಂತಾ ಅಂದವನೇ ಟೇಬಲ್ ಮೇಲಿದ್ದ ಫೈಲ್ ಬಂಡಲ್ಲ ಎತ್ತಿ ಬಿಸಾಡುತ್ತಾ ನೀವು ದಲಿತರದು ಬಹಳ ಆಗ್ಯಾದ ನಿಮಗೆ ನೌಕರಿ ಕೊಟ್ಟಿದ್ದೇ ತಪ್ಪು ಎಂದು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಹಾಗು ಕೈಯಿಂದ ಕಪಾಳಕ್ಕೆ ಹಾಗು ಬೆನ್ನಿಗೆ ಹೊಡೆಯುತ್ತಿರುವಾಗ ಶ್ರೀ ನರಸಪ್ಪ ಒಡಿಯಾಳ ಕಛೇರಿಯ ಅಧೀಕ್ಷಕರು ಮತ್ತು ಯಲ್ಲಪ್ಪ ಪಿವುನ್ ಇವರು ಬಿಡಿಸಿರುತ್ತಾರೆ. ನಂತರ ಅಷ್ಟರಲ್ಲಿ ಸಿದ್ದು ಸಂಗೋಳ್ಗಿ ಈತನು ಆರ್.ಟಿ.ಓ ಆಫೀಸಿನ ಚೇಂಬರನಲ್ಲಿ ಬಂದು ಲೇ ಮಗನೆ ನಿನ್ನ ಬಹಳ ಆಯಿತು. ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ನನಗೆ ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಘಟನೆ ನಂತರ ಮಾನಸಿಕವಾಗಿ ನೊಂದಿದ್ದು ನನಗೆ ಗೆಳೆಯರು ಮತ್ತು ನನ್ನ ಸಮಾಜದವರು ಬಂದು ಈ ಘಟನೆಯ ಬಗ್ಗೆ ವಿಚಾರಿಸಿ ಇಂದು ತಡಮಾಡಿ ದೂರು ಸಲ್ಲಿಸಿರುತ್ತೇನೆ ಅಂತಾ ವಗೈರೆಯಾಗಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮ ಹತ್ಯೆ ಪ್ರಕರಣ:
ಆಳಂದ ಪೊಲೀಸ್‌ ಠಾಣೆ: ದಿನಾಂಕ:12/10/2015 ರಂದು ಶ್ರೀಮತಿ.ವಿಜಯಲಕ್ಷ್ಮಿ ಗಂಡ ಅಶೋಕ ಕಾಳೆ ಸಾ: ಕಣಮಸ ಇವರು  ಠಾಣೆಗೆ ಹಾಜರಾಗಿ ತಾನ ಕಣಮುಸ ಗ್ರಾಮದಲ್ಲಿ ತನ್ನ ಪತಿ ಮತ್ತು  03 ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗನೊಂದಿಗೆ ವಾಸವಿದ್ದು ತಡಕಲ ಗ್ರಾಮದ ಸೀಮಾಂತರದಲ್ಲಿ ನಮಗೆ ಒಟ್ಟು 11 ಎಕರೆ ಜಮೀನು ಇದ್ದು ನನ್ನ ಹೆಸರಿನಲ್ಲಿ 03 ಎಕರೆ ನನ್ನ ಗಂಡನ ಹೆಸರಿನಲ್ಲಿ 03 ಎಕರೆ ಮತ್ತು ನಮ್ಮ ಅತ್ತೆಯವರ ಹೆಸರಿನಲ್ಲಿ 05 ಎಕರೆ ಜಮೀನು ಇದ್ದು ಎಲ್ಲರೂ ಒಟ್ಟಿಗೆ ಇರುತ್ತೆವೆ.ಕೃಷಿ ಕೆಲಸಕ್ಕಾಗಿ  ಪ್ರ.ಕೃ.ಗ್ರಾಮೀಣ ಬ್ಯಾಂಕ ತಡಕಲದಲ್ಲಿ  4,00,000/- ರೂ ಹಾಗೂ ಸ.ಕೃ..ಬ್ಯಾಂಕ ತಡಕಲದಲ್ಲಿ  25,000/- ಹೀಗೆ ಒಟ್ಟು ಬ್ಯಾಂಕಿನಿಂದ 4,25,000/-ರೂ ಹೊಲದ ಮೇಲೆ ಸಾಲ ಪಡೆದಿದ್ದು ಇರುತ್ತದೆ. ಅಲ್ಲದೆ ನನ್ನ ಮಗಳ ಮದುವೆ ಸಂಬಂಧ ಮತ್ತು  ನನ್ನ ಮಗನ ವಿದ್ಯಾಭ್ಯಾಸದ ಸಲುವಾಗಿ ಹಾಗೂ ಹೊಲದಲ್ಲಿ ಬಾವಿ ತೊಡುವ ಸಲುವಾಗಿ ಗ್ರಾಮದಲ್ಲಿ ಕೈಗಡವಾಗಿ ನನ್ನ ಪತಿ ಸಾಲವಾಗಿ ಹಣ ಪಡೆದಿದ್ದು ಪಡೆದ ಸಾಲವನ್ನು ಹೇಗೆ ತಿರಿಸಬೇಕೆಂದು ವಿಚಾರಿಸುತ್ತಾ  ಮನೆಯಲ್ಲಿ ನನ್ನೊಂದಿಗೆ ದಿನಾಲು ವಿಚಾರಮಾಡುತ್ತಾ ಕುಳಿತುಕೊಳ್ಳುತ್ತಿದ್ದರು ನಾನು ಸುಮಾರು ಬಾರಿ ಹೇಗಾದರೂ ಮಾಡಿ ತಿರಿಸೋಣ ಅಂತಾ ಸಮಜಾಯಿಸುತ್ತಾ ಬಂದಿರುತ್ತೆನೆ.
            ಹೀಗಿದ್ದು ದಿನಾಂಕ: 11-10-2015 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಎಂದಿನಂತೆ ಎಲ್ಲರೂ ಊಟ ಮಾಡಿಕೊಂಡು ನಾನು ನನ್ನ ಮಕ್ಕಳೊಂದಿಗೆ ಪ್ಲಾಟಿನಲ್ಲಿರುವ ಒಂದು ಪತ್ರಾ ಸೆಡ್ಡಿನಲ್ಲಿ ಮಲಗಿಕೊಳುವಾಗ ನನ್ನ ಗಂಡನು ನಾನು ಪಕ್ಕದ ದನ ಕಟ್ಟುವ ಪತ್ರಾ ಸೆಡ್ಡಿನಲ್ಲಿ ಮಲಗುತ್ತೆನೆ ಅಂತಾ ಹೇಳಿ ಹೊದನು. ನಂತರ ನಾವು ಮಲಗಿಕೊಂಡು ಬೆಳಿಗ್ಗೆ  6:00 ಗಂಟೆ ಸುಮಾರಿಗೆ ಎದ್ದು ನನ್ನ ಗಂಡನಿಗೆ ಎಬ್ಬಿಸಲು ಹೋದಾಗ ಆ ಪತ್ರ ಸೆಡ್ಡಿಗೆ ಒಳಗಡೆ ಕಬ್ಬಿಣದ ಪಟ್ಟಿಗೆ ಉರಲು ಹಾಕಿಕೊಂಡಿರುತ್ತಾರೆ.
            ಕಾರಣ ನನ್ನ ಗಂಡನು ಗ್ರಾಮೀಣ ಬ್ಯಾಂಕಿನಿಂದ ಪಡೆದ ಸಾಲ ಹಾಗೂ ಕೈಗಡವಾಗಿ ತಗೆದುಕೊಂಡ ಹಣ ತಿರಿಸಲಾಗದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಸಾಲ ಬಾಧೆ ತಾಳಲಾರದೆ ದಿ:11-10-2015 ರಂದು ರಾತ್ರಿ 11:00 ಗಂಟೆಯಿಂದ ದಿ:12-10-2015 ರಂದು ಬೆಳಗಿನ 06:00 ಗಂಟೆಯ ಮಧ್ಯದ ಅವಧಿಯಲ್ಲಿ ದನ ಕಟ್ಟುವ ಪತ್ರ ಶೆಡ್ಡಿನ ಕಬ್ಬಿಣದ ಪಟ್ಟಿಗೆ ಉರಲು ಹಾಕಿಕೊಂಡು ಮೃತ ಪಟ್ಟಿದ್ದು. ಸರಕಾರದಿಂದ ಪರಿಹಾರ ಧನ ಒದಗಿಸಿಕೊಡುವಂತೆ ಮತ್ತು ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮ ಹತ್ಯೆ ಪ್ರಕರಣ:
ಆಳಂದ ಪೊಲೀಸ್‌ ಠಾಣೆ: ದಿನಾಂಕ: 12/10/2015 ರಂದು ಜಗದೇವಿ ಗಂಡ ವಿಶ್ವನಾಥ ಸುತ್ತಾರ ಸಾ:ಸಾವಳೇಶ್ವರ ಇವರು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನಗೆ 3 ಜನ ಮಕ್ಕಳಿದ್ದು 1) ಸರಸ್ವತಿ 2) ಸಿದ್ದಾರಾಮ 3) ಶಿವಪುತ್ರ ಹೀಗೆ 03 ಜನ ಮಕ್ಕಳಿದ್ದು ಸರಸ್ವತಿ ಇವಳಿಗೆ ಮದುವೆ ಮಾಡಿ ಕೊಟ್ಟಿದ್ದು ಇಬ್ಬರು ಮಕ್ಕಳು ಗಂಡನೊಂದಿಗೆ ಒಕ್ಕಲುತನ ಮಾಡಿಕೊಂಡು ಉಪಜೀವಿಸುತ್ತೆವೆ. ನನ್ನ ಗಂಡನ ಹೆಸರಿನಲ್ಲಿ ಸಾವಳೇಶ್ವರ ಸೀಮಾಂತರದಲ್ಲಿ 18 ಎಕರೆ ಹೊಲ ಇದ್ದು ಸದರಿ ಹೊಲದ ಮೇಲೆ ಕೃಷ್ಣಾ ಗ್ರಾಮೀಣ ಬ್ಯಾಂಕ ಸರಸಂಬಾದಲ್ಲಿ 01 ಲಕ್ಷ ರೂಪಾಯಿ ಬ್ಯಾಂಕಿನಿಂದ ಸಾಲ ಪಡೆದಿದ್ದು ಮತ್ತು ಒಕ್ಕಲುತನಕ್ಕಾಗಿ ಹಾಗೂ ನನ್ನ ಹಿರಿಯ ಮಗಳ ಮದುವೆಗೊಸ್ಕರ ಖಾಸಗಿಯಾಗಿ ಸಾಲ ಪಡೆದಿದ್ದು ಇರುತ್ತದೆ. ಇದರಿಂದ ನನ್ನ ಮಗ ಸಿದ್ದಾರಾಮನು ಮನೆಯಲ್ಲಿ ಆಗ್ಗಾಗ ಈ ಬಾರಿ ಮಳೆ ಬರದಿದ್ದರಿಂದ ಹೊಲದಲ್ಲಿ ಯಾವುದೇ ಬೆಳೆ ಇಲ್ಲ ಯಾವ ರೀತಿಯಾಗಿ ಸಾಲ ತೀರಿಸಬೇಕಂತ ಆಗಾಗ ಒಬ್ಬಂಟಿಗನಾಗಿ ಕುಳಿತು ವಿಚಾರಿಸುತ್ತಿದ್ದನು.
           ಹೀಗಿದ್ದು ಇಂದು ದಿನಾಂಕ: 12/10/2015 ರಂದು 11:00 ಎ.ಎಂ.ಕ್ಕೆ ನಾವೆಲ್ಲರೂ ದಸರಾ ಹಬ್ಬದ ಬಟ್ಟೆ ತೊಳೆಯಲು ಎಲ್ಲರೂ ಹೋದಾಗ ಮನೆಯಲ್ಲಿ ಸಿದ್ದಾರಾಮ ಒಬ್ಬನೆ ಇದ್ದನು. ನಂತರ 12:30 ಗಂಟೆ ಸುಮಾರಿಗೆ ನಾವು ಮನೆಗೆ ಬಂದು ನೋಡಲಾಗಿ ನನ್ನ ಮಗ ಸಿದ್ದಾರಾಮನು ಕಸವಿಸಿಯಿಂದ ಹೊರಳಾಡುತ್ತಿರುವುದನ್ನು ಕಂಡು ಗಾಬರಿಗೊಂಡು ನೋಡಲಾಗಿ ಅವನು ನಾವು ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಮನೆಯಲ್ಲಿದ್ದ ರೋಗರಎಣ್ಣಿ (ವಿಷ) ಕುಡಿದು ಹೊದ್ದಾಡುತ್ತಿರುವುದನ್ನು ಕಂಡು ಖಾಸಗಿ ವಾಹನದಲ್ಲಿ ಆಳಂದ ಸರ್ಕಾರಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರಕ್ಕಾಗಿ ಗುಲ್ಬರ್ಗಾದ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಬಂದಾಗ ಗುಲ್ಬರ್ಗಾದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.  
            ಕಾರಣ ನನ್ನ ಮಗ ಹೊಲದ ಮೇಲೆ ಪಡೆದ 01 ಲಕ್ಷ ರೂಪಾಯಿ ಹಾಗೂ ಖಾಸಗಿಯಾಗಿ ಪಡೆದ ಸಾಲ ತೀರಿಸಲಾಗದೆ ಮನನೊಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ರೋಗರಎಣ್ಣೆ ಕುಡಿದು ಮೃತಪಟ್ಟಿದ್ದು ನನ್ನ ಮಗನು ದಿನಾಂಕ: 12/10/2015 ರಂದು ಮದ್ಯಾಹ್ನ  12:00 ರಿಂದ 12:30 ರ ಮಧ್ಯದ ವಿಷ ಸೇವಿಸಿ 04:30 ಪಿ.ಎಂ. ಮೃತಪಟ್ಟಿರುತ್ತಾನೆ. ಸರಕಾರದಿಂದ ಪರಿಹಾರ ಧನ ಒದಗಿಸಿಕೊಡುವಂತೆ ಮತ್ತು ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ 12-10-2015 ರಂದು ಶ್ರೀ §¸ÀªÀgÁd vÀAzÉ dgÉÃ¥Àà ºÁ®UÉÃj ¤ªÀÈvÀÛ PÉ.J¸ï.Dgï.n.¹ £ËPÀgÀ ¸Á: QtÂÚ ¸ÀqÀPÀ ಇವರು ಠಾಣೆಗೆ ಹಾಜರಾಗಿ ಕಿಣ್ಣಿ ಸಡಕ ಗ್ರಾಮದ ಸಿಮಾಂತರದಲ್ಲಿ ನನ್ನ ಸ್ವಂತ ಹೊಲವಿದ್ದು ಎಂದಿನಂತೆ ಇಂದು ದಿನಾಂಕ 12.10.2015 ರಂದು ಮಧ್ಯಾನ ನಾನು ನಮ್ಮ ಹೊಲಕ್ಕೆ ಹೊಗಿದ್ದು ನಾನು ಹೊಲವನ್ನು ತಿರುಗಾಡಿ ನೋಡಿ ನಮ್ಮ ಹೊಲದ ಬಂದಾರಿಗೆ ಇರುವ ಹುಣುಸೆ ಮರದ ನೇರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಕುರಿತು ಹುಣಸೆ ಮರದ ಹತ್ತಿರ ಬಂದು ನೋಡಲು ಹುಣುಸೆ ಮರಕ್ಕೆ ಒಬ್ಬ ವ್ಯಕ್ತಿಯು ತನ್ನ ಅಂಗಿಯಿಂದ ಉರುಲು ಹಾಕಿ ಕೊಂಡು ಮೃತ ಪಟ್ಟಿದ್ದು ಸದರಿ ಮೃತನ ಮೈಮೇಲೆ ಅಂಗಯಾಗಲಿ ಬನಿಯನಾಗ ಇರುವದಿಲ್ಲ ಒಂದು ಕರಿ ಬಣ್ಣದ ಪ್ಯಾಂಟ ಇರುತ್ತದೆ. ಸದರಿ ಮೃತನ ಬಗ್ಗೆ ನಾನು ನಮ್ಮ ಗ್ರಾಮಕ್ಕೆ ಹೊಗಿ ಗ್ರಾಮಸ್ಥರಲ್ಲಿ ವಿಚಾರಿಸಿದ್ದು ಸದರಯವನ ಬಗ್ಗೆ ಯಾವುದೆ ಮಾಹಿತಿ ಲಭ್ಯವಾಗಿರುವದಲ್ಲಿ. ಸದರಿ ಮೃತನು ಅಂದಾಜ 32-38 ವರ್ಷ ವಯಸ್ಸಿನವನಾಗಿದ್ದುಮೃತನ ತಲೆಯ ಮೇಲೆ 2-3 ಇಂಚ್ ಕಪ್ಪು ಕುದಲು ಇದ್ದುಮುಖದ ಮೇಲೆ ಕಪ್ಪುಬಿಳಿ ಸಣ್ಣ ದಾಡಿ ಇದ್ದುಗೊಲು ಮುಖ ಹೊಂದಿದ್ದುಅಂದಾಜ 5 ಫೀಟ್ 6 ಇಂಚ್ ಎತ್ತರ ಹೊಂದಿದ್ದು ಸದೃಡ ಮೈಕಟ್ಟು ಉಳ್ಳವನಾಗಿದ್ದು ಮೃತನ ಬಲಗೈ ತೊಳಿನ ಪಕ್ಕ ಎದೆಯ ಮೇಲೆ ಹಳೆಯಗಾಯವಿದ್ದು ಸದರಿಯವನ ಹೆಸರು ವಿಳಾಸ ಪತ್ತೆ ಕುರಿತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಯಾವುದೆ ಮಾಹಿತಿ ಲಬ್ಯವಾಗಿರುವದಿಲ್ಲ.  ಕಾರಣ ಮಾನ್ಯರವರು ಸದರಿ ಮೃತನ ಬಗ್ಗೆ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಮಲಾಪೂಋ ಪೊಲೀಶ್ ಠಾಣೆಯಲ್ಲಿ ಪ್ರಕರಣ ದಾಖಲಸಿ ತನಿಖೇ ಕೈಕೊಂಡಿದ್ದು. ªÉÄîÌAqÀ ಮೃತ ಅಪರಿಚಿತ  ವ್ಯಕ್ತಿಯ ಬಗ್ಗೆ  ಯಾವುದೇ  ಸುಳಿವು ಸಿಕ್ಕಲ್ಲಿ ಪಿ.ಎಸ್.ಐ ಕಮಲಾಪೂರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಸಲ್ಲಿಸಲು ಕೋರಲಾಗಿದೆ , ದೂರವಾಣಿ ಸಂ: 08478-221306, 9480803558. ಪೊಲೀಸ್ ಕಂಟ್ರೋಲ್ ರೂಮ್ 08472-20100,
ಮೃತಪಟ್ಟ  ಅಪರಿಚಿತ  ವ್ಯಕ್ತಿಯ ಚಹರಾ ಪಟ್ಟಿಯ  ವಿವರ:
ವಯಸ್ಸು: 32 ರಿಂದ 38 ವರ್ಷದ ಪುರುಷ, ಎತ್ತರ : 5 ಫೂಟ್ 6 ಇಂಚ್,  ಚಹರೆ : ಗೊಲು ಮುಖ,  ಹೊಂದಿದ್ದು ಸದೃಡ ಮೈಕಟ್ಟು ಉಳ್ಳವನಾಗಿದ್ದು ಮೃತನ ಬಲಗೈ ತೊಳಿನ ಪಕ್ಕ ಎದೆಯ ಮೇಲೆ ಹಳೆಯಗಾಯವಿರುತ್ತದೆ. ತಲೆಯ ಮೇಲೆ 2-3 ಇಂಚ್ ಕಪ್ಪು ಕೂದಲು ಇರುತ್ತದೆಮುಖದ ಮೇಲೆ ಕಪ್ಪುಬಿಳಿ ಸಣ್ಣ ದಾಡಿ ಇದ್ದು,. , ಧರಿಸಿರುವ ಉಡುಪು: 1.ಕರಿ  ಬಣ್ಣದ ಪ್ಯಾಂಟ ಧರಿಸಿತ್ತಾನೆ, ಮೃತ ದೇಹವು  ಕಿಣ್ಣಿ ಸಡಕ ಗ್ರಾಮದ ಬಸವರಾಜ ತಂದೆ ಜರೆಪ್ಪ ಹಾಲಗೇರಿ ಇವರ ಹೊಲದಲ್ಲಿ ಹುಣಸಿ ಗಿಡಿಕ್ಕೆ ತನ್ನ ಅಂಗಿಯಿಂದ ನೇಣುಹಾಕಿಕೊಂಡಿದ್ದು ಇರುತ್ತದೆ.
ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ದಿನಾಂಕ 12-10-2015 ರಂದು ಮಾದಾಬಾಳ ತಾಂಡಾದ ಸೇವಾಲಾಲ ಮಹಾರಾಜ ಗುಡಿಯ ಮುಂದಿನ ಬಯಲು ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ  ಇವರನ್ನು ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯ ತಿಳಿಸಿ  ಠಾಣೆಯ ಸಿಬ್ಬಂದಿ ಜನರಾದ 1) ಆನಂದ ಸಿಪಿಸಿ-1258 2) ಸುರೇಶ ಸಿಪಿಸಿ-801 3) ಚಿದಾನಂದ ಸಿಪಿಸಿ-1225 4) ನಿಂಗಣ್ಣ ಸಿಪಿಸಿ-894 ರವರೊಂದಿಗೆ ಪಿಎಸ್ ಐ  ಅಫಜಲಪೂರ ಪೊಲೀಸ್ ಠಾಣೆ ರವರು  ಮಾದಾಬಾಳ ತಾಂಡಾ ಶ್ರೀ ಸೇವಾಲಾಲ ಮಹಾರಾಜ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ದಾಳಿ ಮಾಡಿ ಜೂಜಾಡುತ್ತಿದ್ದ 8 ಜನರಲ್ಲಿ 3 ಜನರನ್ನು ದಸ್ತಗೀರ ಮಾಡಿ ಜೂಜಾಟದ ಪಣಕ್ಕೆ ಇಟ್ಟ ಹಣ ವಶಪಡಿಸಿಕೊಂಡು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಅರ್ಜುನ ತಂದೆ ರಾಮಜಿ ರಾಠೋಡ ಸಾ||ಮಾದಾಬಾಳ ತಾಂಡಾ 2) ಸುರೇಶ ತಂದೆ ಧಾನು ರಾಠೋಡ ಸಾ:ಮಾದಾಬಾಳ ತಾಂಡಾ, 3) ಸುರೇಶ ತಂದೆ ಬಾಛು ರಾಠೋಡ ಸಾ||ಮಾಬಾದಾಳ ತಾಂಡಾ ಎಂದು ತಿಳಿಸಿದ್ದು ಓಡಿ ಹೋದ 5 ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಸುಭಾಷ ತಂದೆ ಲಾಲು ರಾಠೋಡ 2) ಪ್ರಕಾಶ ತಂದೆ ಬಾಬು ರಾಠೋಡ 3) ಪ್ರವೀಣ ತಂದೆ ಲಕ್ಷ್ಮಣ ರಾಠೋಡ 4) ವಿಕ್ರಮ ತಂದೆ ಧನಸಿಂಗ್ ರಾಠೋಡ 5) ಯುವರಾಜ ತಂದೆ ವಿಠ್ಠಲ ರಾಠೋಡ ಸಾ||ಎಲ್ಲರು ಮಾದಾಬಾಳ ತಾಂಡಾ ಅಂತ  ತಿಳಿಸಿರುತ್ತಾರೆ. 8 ಜನರ  ಮದ್ಯ ಇಸ್ಪೇಟ ಜೂಜಾಟಕ್ಕೆ ಇಟ್ಟಿದ ಒಟ್ಟು 1120/- ರೂ ಮತ್ತು 52 ಇಸ್ಪೆಟ ಎಲೆಗಳು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.