POLICE BHAVAN KALABURAGI

POLICE BHAVAN KALABURAGI

03 February 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 02/02/18 ರಂದು ಫರತಾಬಾದ ಠಾಣಾ ವ್ಯಾಪ್ರಿಯ  ತಿಳಗೊಳ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಂದು ರೂಪಾಯಿಗೆ 80/- ರೂ ಕೊಡುವ ಕರಾರಿನಲ್ಲಿ ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಟ್ಟು ಮೋಸ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ವಾಹಿದ ಕೊತ್ವಾಲ್ ಪಿ.ಎಸ್.ಐ ಪರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಶಿವಯ್ಯ ತಂದೆ ರಾಮಯ್ಯ ಗುತ್ತೆದಾರ ಸಾಃ ತಿಳಗೊಳ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ  1730/-ರೂ, ಒಂದು ಬಾಲ ಪೇನ, ಎರಡು ಮಟಕಾ ಚೀಟಿ ಜಪ್ತಿ ಪಡಿಸಿಕೊಂಡು, ಆರೋಪಿತನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಶ್ರೀದೇವಿ ಅಮೃತರಾವ ನಿಲೂರ ಸಾ: ದುತ್ತರಗಾವ ತಾ: ಆಳಂದ ಜಿ: ಕಲಬುರಗಿ ಹಾ:ವ: ಪ್ಲಾಟ ನಂ 3 ದೇವಿ ನಗರ ಕಲಬುರಗಿ ರವರ ಗಂಡನಾದ ಅಮೃತರಾವ ತಂದೆ ಬಸವಣ್ಣಪ್ಪ ನಿಲೂರ ಇವರು ತಮ್ಮ ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದು ಸಾಲಗಾರರು ನನ್ನ ಗಂಡನಿಗೆ ಮರಳಿ ಹಣ ಕೇಳುತ್ತಿದ್ದರಿಂದ ಈಗ ಸುಮಾರು 8 ತಿಂಗಳ ಹಿಂದೆ ನನ್ನ ಗಂಡನು ಮನೆ ಬಿಟ್ಟು ಹೋಗಿದ್ದು ಇರುತ್ತದೆ. ನನ್ನ ಗಂಡನು ನಮ್ಮ ಹತ್ತಿರ ಬರದೆ ಮಹಾರಾಷ್ಟದಲ್ಲಿ ವಾಸವಾಗಿದ್ದು ಆಗಾಗ ನಮ್ಮ ಸಂಬಂದಿಕರಿಗೆ ಬೆಟಿಯಾಗಿ ನಮ್ಮ ಮನೆಯ ಬಗ್ಗೆ ವಿಚಾರಿಸುತ್ತಾ ಬಂದ್ದಿದ್ದು ಇರುತ್ತದೆ. ನನ್ನ ಗಂಡ ಮನೆ ಬಿಟ್ಟು ಹೋದ ನಂತರ ನನ್ನ ಸಂಗಡ ಮಾತನಾಡಿರುವದಿಲ್ಲ ಮತ್ತು ನನ್ನ ಗಂಡನು ಮರಳಿ ಮನೆಗೆ ಬಂದಿರುವದಿಲ್ಲ.ನಮ್ಮ ಮನೆಯಲ್ಲಿ ನಾನು ನನ್ನ ಮಕ್ಕಳಾದ 1. ಕು: ಜೋತಿ ವಯ: 13 ವರ್ಷ 2. ಕು: ಮಲ್ಲಿಕಾರ್ಜುಜನ :12 ಮತ್ತು 3. ಕು: ಶಿವುಕುಮಾರ ಮಾತ್ರ ಇರುತ್ತವೆ. ನನ್ನ ಗಂಡನ ತಮ್ಮನಾದ ಚಂದ್ರಕಾಂತ ಇವರು ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು. ಆಗಾ ನಮ್ಮ ಮೈದುನ ನಮ್ಮ ಮನೆಗೆ ಬಂದು ಹೋಗುವದು ಮಾಡುತ್ತಾ ಬಂದಿದ್ದು ಇರುತ್ತದೆ. ನನ್ನ ಗಂಡನು ತನ್ನ ಸಾಲ ತೀರಿಸಿದ ನಂತರ ಮರಳಿ ನಮ್ಮ ಮನೆಗೆ ಬರಬಹುದು ಅಂತ ನಾವು ವಿಚಾರ ಮಾಡಿಕೊಂಡು ಸುಮ್ಮನಾಗಿದ್ದು ನನ್ನ ಗಂಡ ಮನೆ ಬಿಟ್ಟು ಹೋದ ಬಗ್ಗೆ ನಾವು ಯಾವುದೆ ಠಾಣೆಯಲ್ಲಿ ದೂರು ನೀಡಿರುವದಿಲ್ಲ. ಇಂದು ದಿನಾಂಕ 02.02.2018 ರಂದು ಬೆಳ್ಳಿಗ್ಗೆ 10 ಗಂಟೆಗೆ ನನ್ನ ಗಂಡನ ಗೇಳೆಯನಾದ ಕಲ್ಯಾಣಿ ಇತನು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಗಂಡು ತಿರ್ವವಾಗಿ ಕಾಮಣಿ ಕಾಯಿಲೆ ಬಳಲುತಿದ್ದು ಅವನಿಗೆ ಕುಮಸಿ ಮುತ್ಯಾ ಇವರು ಉಪಚಾರ ಕುರಿತು ಆಸ್ಪತ್ರೇಗೆ ಕರೆದುಕೊಂಡು ಬರುತ್ತಿದ್ದಾರೆ ಅಂತ ಹೇಳಿದ್ದು ಆಗ ನಾನು ಸದರಿ ಕಲ್ಯಾಣಿ ಇವರಿಗೆ ನನ್ನ ಗಂಡನಿಗೆ ಮನೆಗೆ ಕರೆದುಕೊಂಡು ಬರಲು ತಿಳಿಸಿದ್ದು ಅದರಂತೆ ಬೆಳ್ಳಿಗ್ಗೆ 12 ಗಂಟೆಯ ಸುಮಾರಿಗೆ ಕಲ್ಯಾಣಿ ಇವರು ನನ್ನ ಗಂಡ ಅಮೃತ ಇವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದು ಆಗ ನಾನು ನನ್ನ ಗಂಡನಿಗೆ ನೋಡಲು ಅವರು ಮಾತನಾಡುವ ಸ್ಥಿತಿಯಲ್ಲಿ ಇದ್ದಿರುವದಿಲ್ಲ. ಅವರ ಕಣ್ಣುಗಳು ಹಸಿರಾಗಿದ್ದು ಅವರಿಗೆ ಅತೀವವಾಗಿ ಕಾಮಣಿ (ಕಾಮಲೆ ರೋಗ) ನಿಷಕ್ತರಾದ ಹಾಗೆ ಕಂಡು ಬರುತ್ತಿದ್ದು ಆಗ ಮನೆಯಲ್ಲಿದ್ದ ನಾನು ನಮ್ಮ ಅತ್ತೆಯಾದ ಕಮಲಾಬಾಯಿ ಗಂಡ ಬಸವಣ್ಣಪ್ಪ ನಮ್ಮ ಸಣ್ಣ ಮಾವ ವಿಜಯಕುಮಾರ ತಂದೆ ಗುಂಡಪ್ಪ ಕೂಡಿಕೊಂಡು ನನ್ನ ಗಂಡನಿಗೆ ಅಟೋದಲ್ಲಿ ಕೂಡಿಸಿಕೊಂಡು ಮಧ್ಯಾನ 2;30 ಗಂಟೆಯ ಸುಮಾರಿಗೆ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ನನ್ನ ಗಂಡನಿಗೆ ಆಸ್ಪತ್ರೇಗೆ ಸೇರಿಕೆ ಮಾಡಿದ ನಂತರ ವ್ಯಧ್ಯಾಧಿಕಾರಿಗಳು ನನ್ನ ಗಂಡನಿಗೆ ಪರಿಕ್ಷೇ ಮಾಡಿದ ನಂತರ ವೈಧ್ಯಾಧಿಕಾರಿಗಳು ನನ್ನ ಗಂಡನು ಮೃತ ಪಟ್ಟಿದ್ದಾನೆ ಅಂತ ತಿಳಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.