POLICE BHAVAN KALABURAGI

POLICE BHAVAN KALABURAGI

08 November 2013

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ದೇವಿಂದ್ರಪ್ಪಾ ತಂದೆ ಮರೆಪ್ಪಾ ಮದಿನಕರ ಸಾಃ ಕುರಿಕೊಟಾ ತಾ. ಜಿಃ ಗುಲಬರ್ಗಾ ರವರು ದಿನಾಂಕ 07-11-2013  ರಂದು ಬೆಳಿಗ್ಗೆ 10:30 ಗಂಟೆಗೆ ನಾನು ಕುರಿಕೊಟಾದಿಂದ ಗುಲಬರ್ಗಾಕ್ಕೆ ಬಂದು ಕೊರ್ಟಿನಲ್ಲಿ ವಕೀಲರ ಹತ್ತಿರ ಕೆಲಸವಿರುವುದರಿಂದ ಕೊರ್ಟಿಗೆ ಹೋಗುತ್ತಿರುವಾಗ ಕೊರ್ಟಿನ ಗೇಟಿನ ಹತ್ತಿರ ನಿಂತುಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಹಲ್ಲೆ ಮಾಡಿದವರಗಳ ಹೆಸರು ಶಿವಾನಂದ ತಂದೆ ಚಂದ್ರಶೇಖರ ಕಲ್ಲಶೇಟ್ಟಿ ಮತ್ತು ಅವರ ತಾಯಿತಾದ ಜಗದೇವಿ ಗಂಡ ಚಂದ್ರಶೇಖರ ಕಲ್ಲಶೆಟ್ಟಿ ಅವರ ಮಗಳು, ಜಗದೇವಿ ಅಳಿಯ ಇವರು ನಾಲ್ಕು ಜನ  ಕೂಡಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಇವರು ಸಾಃ ಕುರಿಕೊಟಾ ತಾ. ಜಿಃ ಗುಲಬರ್ಗಾ ನೀನು ಹೊಲೆಯ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲಿನ ಅಂಗಿ ಹಿಡಿದು ಹೊಡೆದಿದ್ದಾರೆ. ನಾನು ಯಾಕಂತ ಕೆಳಿದರು ಕೂಡಾ ನಾನು ಒಬ್ಬನೆಯಾಗಿರುವಾಗ ಅವರ ನಾಲ್ಕು ಜನ ಕೂಡಿ ಅವಾಚ್ಯ ಶಬ್ದಗಳಿಂದ ಬೈದು  ಜಾತಿ ನಿಂದನೆ ಮಾಡಿ ಹೊಡೆಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.