POLICE BHAVAN KALABURAGI

POLICE BHAVAN KALABURAGI

31 August 2015

Kalaburagi District Reported Crimes.

ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 21:35 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 28.08.2015 ರಂದು ಸಾಯಂಕಾಲ 06:00 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರೆಲ್ಲರು ಕೂಡಿಕೊಂಡು ಬಂದು ನನ್ನ ಅಣ್ಣನ ಹೆಂಡತಿ ರತ್ನಮ್ಮ ಇವಳ ಸಂಗಡ ಮಲ್ಲಪ್ಪ ಹೆಳೂರ ಈತನು ಸಲುಗೆಯಿಂದ ಮಾತನಾಡಿದ ವಿಷಯ ನಮಗೆ ಕೇಳಿರುತ್ತಿ ಅಂತಾ ಆರೋಪಿತರು ವೈಮನಸ್ಸು ಮಾಡಿಕೊಂಡು ನನಗೆ ಮತ್ತು ನನ್ನ ಹೆಂಡತಿ ತುಳಜಾಬಾಯಿಗೆ ಹಾಗು ತಾಯಿ ಕಮಲಾಬಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನಗೆ  ಕಲ್ಲಿನಿಂದ ಹೊಡೆ ಬಡೆ ಮಾಡಿ ನನ್ನ ಹೆಂಡತಿಗೆ ಮತ್ತು ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನ ಭಂಗ ಮಾಡಿ ಜಾತಿ ಎತ್ತಿ ಬೈದಿದ್ದುಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಆರೋಪಿತರ ಹೆಸರು, ವಿಳಾಸ  : 1. ಮಲ್ಲಪ್ಪ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ, 2) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ, 3) ಪಾಪಣ್ಣ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ, 4) ಹಣಮಂತ ತಂದೆ ಭೀಮರಾಯ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿ, 5) ಭೀಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಘಾವಿ .                                                                                                                                                       
ಅಶೋಕ ನಗರ ಠಾಣೆ : ದಿನಾಂಕ 30/08/2015 ರಂದು 10:00 ಎಎಮ್ ಕ್ಕೆ ಫಿರ್ಯಾದಿ ನರಸಿಮಲು ತಂದೆ ನರಸಯ್ಯಾ ಕಾವಲೆ ಸಾ: ಅನಂತಪೂರ ಪೋಸ್ಟ ರಿಬ್ಬನಪಲ್ಲಿ ತಾ: ಸೇಡಂ ಜಿ: ಕಲಬುರಗಿ ಇವರು ಕನ್ನಡದಲ್ಲಿ ಬರೆದ ಅರ್ಜಿ ಹಾಜರು ಪಡೆಸಿದ್ದು ತನಗೆ ಪವನಕುಮಾರ ಅಂತಾ 17 ವರ್ಷದ ಮಗನಿದ್ದು ನನ್ನ ಮಗ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಸೇಡಂದಲ್ಲಿಯೇ ವಿದ್ಯಾಬ್ಯಾಸ ಮಾಡಿ ಮುಂದಿನ ವಿದ್ಯಾಬ್ಯಾಸಕ್ಕಾಗಿ ಕಲಬುರಗಿಯ ಸರ್ವಜ್ಞ ಕಾಲೇಜಕ್ಕೆ ನನ್ನ ಮಗ ಪಿಯುಸಿಯ ಪ್ರಥಮ ವರ್ಷ ಪಾಸಾಗಿದ್ದು 2015ನೇ ಸಾಲಿನಲ್ಲಿ ದ್ವೀತಿಯ ವಿದ್ಯಾಬ್ಯಾಸಕ್ಕಾಗಿ ಸರ್ವಜ್ಞ ಶಾಲೆಯಲ್ಲಿ ಮುಂದುವರೆಸಿದ್ದು ನನ್ನ ಮಗನು ವಾಸಕ್ಕಾಗಿ ಅಲ್ಲಿಯೇ ಶಾಲೆಯ ಹತ್ತಿರದ ಸಾಯಿ ಮಂದಿರದ ಹತ್ತಿರ ಚಂದಪ್ಪಾ ಎಂಬುವರ ಮನೆಯಲ್ಲಿ ಭಾಡಿಗೆ ರೂಮ ಮಾಡಿ ಇಟ್ಟಿದ್ದು ಆಗಾಗೆ ರೂಮಿಗೆ ಬಂದು ಹೋಗುತ್ತಿದ್ದು ಅದೆ. ಹೀಗಿದ್ದು ದಿನಾಂಕ 27/08/2015 ರಂದು ನಾನು ಸಾಯಂಕಾಲ 7:30 ಗಂಟೆಗೆ ಕಲಬುರಗಿಯ ನಮ್ಮ ಬಾಡಿಗೆ ಮನೆಗೆ ಬಂದು ನೋಡಲಾಗಿ ನನ್ನ ಮಗ ಪವನಕುಮಾರ ಮನೆಯಲ್ಲಿ ಇದ್ದಿರುವದಿಲ್ಲಾ ಮನೆಗೆ ಕೀಲಿ ಹಾಕಿದ್ದು ನಂತರ ನಾನು ಕಾಲೇಜಕ್ಕೆ ಹೋಗಿ ವಿಚಾರಿಸಿದ್ದು ಇಂದು ಮುಂಜಾನೆ ಕಾಲೇಜದಲ್ಲಿ ಪ್ರಿನ್ಸಿಪಲರು ಗೈರುಹಾಜರಾದ ಬಗ್ಗೆ ಕೇಳಿದ್ದಕ್ಕೆ ಆತನ ಕ್ಲಾಸಿಗೆ ಹಾಜರಾಗದೇ ಎಲ್ಲಿಯೋ ಹೋಗಿರುತ್ತಾನೆ ಅಂತಾ ಆತನ ಗೆಳೆಯರಾದ ಸಚೀನ ಮತ್ತು ವಿಶ್ವಜ್ಯೋತಿ ತಿಳಿಸಿರುತ್ತಾರೆ ನಾನು ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು ನಂತರ ಬೀಗರ ಹತ್ತಿರ ಎಲ್ಲಾ ಗ್ರಾಮಗಳಲ್ಲಿ ವಿಚಾರಿಸಲಾಗಿ ನನ್ನ ಮಗ ಸಿಕ್ಕಿರುವದಿಲ್ಲಾ ನನ್ನ ಮಗನಿಗೆ ಕನ್ನಡ, ತೆಲಗೂ, ಹಿಂದಿ ಮಾತನಾಡಲು ಬರುತ್ತದೆ ತೆಳ್ಳನೆ ಮೈಕಟ್ಟು, ಗೋದಿ ಮೈಬಣ್ಣ, ಹಣೆಯ ಮೇಲೆ ಸುಟ್ಟಗಾಯ ಹೋಗುವಾಗ ಅವನ ಹತ್ತಿರ ಮೊಬಾಯಿಲ ಇದ್ದು ಸಿಮ್ ನಂ. 7676076441 ಅಂತಾ ಇದ್ದು ನನ್ನ ಮಗನಿಗೆ ಯಾರೋ ತೆಗೆದುಕೊಂಡು ಹೋಗಿರುತ್ತಾರೋ ತಾನೇ ಹೋಗಿದ್ದಾನೆ ಗೊತ್ತಿಲ್ಲಾ ಸಂಶಯ ಬರುತ್ತದೆ. ಮಗನಿಗೆ ಪತ್ತೆಹಚ್ಚಿಕೊಡಿಸಬೇಕು ಅಂತಾ ಇತ್ಯಾದಿ ದೂರು ಇರುತ್ತದೆ. ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

ಸ್ಟೇಷನ್ ಬಜಾರ ಠಾಣೆ : ದಿನಾಂಕ.30.08.2015 ರಂದು 12.00 ಗಂಟೆಗೆ ಶ್ರೀ ಗೋಪಾಲ ತಂದೆ ಪಾಂಡು ಚವ್ಹಾಣ ಸಾ|| ಖಣದಾಳ ತಾ|| & ಜಿ|| ಕಲಬುರಗಿ ರವರು ಠಾಣೆಗೆ ಹಾಜರಾಗಿ ಲಿಖೀತ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ. ದಿನಾಂಕ. 04.08.2015 ರಂದು 7.00 ಪಿ.ಎಂಕ್ಕೆ ತನ್ನ ಹಿರೋ ಹೊಂಡಾ ಫ್ಯಾಶನ್ ಪ್ರೋ ಮೊಟಾರ್ ಸೈಕಲ ನಂ. KA-32-Y-7819 ಚಾರ್ಸಿ ನಂ. MBLHA10EWBHG02582, ಇಂಜಿನ್ ನಂ. HA10EDBHF42280 ಅಕಿ|| 35,000/- ರೂ ನೆದ್ದು ರೈಲ್ವೆ ಸ್ಟೇಷನ ಹತ್ತಿರದ ಜನತಾ ಹೊಟೇಲ ಎದುರುಗಡೆ ನಿಲ್ಲುಗಡೆ ಮಾಡಿ ರೈಲ್ವೆ ಸ್ಟೇಷನದಲ್ಲಿ ಹೋಗಿ 7.30 ಪಿ.ಎಂಕ್ಕೆ ಮರಳಿ ಬಂದು ನೋಡಿವಷ್ಟರಲ್ಲಿ ಮೊಟಾರ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಹ ಸಿಕ್ಕಿರುವುದಿಲ್ಲ ಅಂತಾ ವಗೈರೆ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

ಸ್ಟೇಷನ್ ಬಜಾರ ಠಾಣೆ : ದಿನಾಂಕ. 30.08.2015 ರಂದು 1.30 ಪಿ.ಎಂಕ್ಕೆ ಶ್ರೀ ಗುರಣ್ಣಾ ಹೆಚ್.ಸಿ 373 ಬ್ರಹ್ಮಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾಧಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಾನು ಸುಮಾರು 3 ವರ್ಷಗಳಿಂದ ವಾರಂಟ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ಹೀಗಿದ್ದು ನಿನ್ನೆ ದಿನಾಂಕ 29/08/2015 ರಂದು ಮಧ್ಯಾಹ್ನ 03:00 ಪಿ.ಎಮ್ ಸುಮಾರಿಗೆ ಎಸ್.ಸಿ ನಂ.221/14 ನೇದ್ದರಲ್ಲಿ ಆರೋಪಿ ಹೀರಾ ಈತನ ಜಾಮೀನುದಾರನಾದ ಶಿವರಾಜ ತಂದೆ ಅಣವೀರಪ್ಪಾ ಕುಮಸಿ ಸಾಃ ಭೀಮಳ್ಳಿ ಈತನಿಗೆ ಮಾನ್ಯ 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಹಾಜರು ಪಡಿಸುವ ಕುರಿತು ಕರೆದುಕೊಂಡು ಬಂದು ಕೊರ್ಟ ಆವರಣದಲ್ಲಿ ನಿಲ್ಲಿಸಿ ನಾನು 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹೋಗಿ ನಿಂತಾಗ ಸದರಿ ಎಸ್.ಸಿ ನಂಬರ ನೇದ್ದರಲ್ಲಿ ಆರೋಪಿತನಾದ ಸತೀಶ @ ಬಾಂಬೆ ಸತ್ಯಾ ಈತನಿಗು ಮಾನ್ಯ ನ್ಯಾಯಾಲಯದಲ್ಲಿ ಹಾಜರು ಪಡಿಸುವ ಕುರಿತು ಡಿ.ಎ.ಆರ್ ಪೊಲೀಸರು ಕರೆದುಕೊಂಡು ಬಂದಿದ್ದರು. ಆಗ ಸದರಿ ಸತೀಶ @ ಬಾಂಬೆ ಸತ್ಯಾ ಈತನಿಗೆ ನಾನು ಹೀರಾ ಎನ್ನುವವನು ಯಾರು ಅಂತಾ ಕೇಳಿದಾಗ ಸತೀಶ ಈತನು ಏ ಭೋಸಡಿ ಮಗನೆ ನನಗೆ ಏನು ಕೇಳುತ್ತಿಅಂತಾ ಹೊಡೆಯಲು ಬಂದಾಗ ಬೆಂಗಾವಲು ಕರ್ತವ್ಯಕ್ಕೆ ಬಂದ ಸಿದ್ದಣ್ಣ ಎ.ಹೆಚ್.ಸಿ-77, ಅಶೋಕ ಎ.ಹೆಚ್.ಸಿ-102, ಶ್ರೀಮಂತ ಎ.ಪಿ.ಸಿ-09, ಗುರುನಾಥ ಎ.ಪಿ.ಸಿ-12 ಇವರು ಸದರಿಯವನಿಗೆ ಹಿಡಿದುಕೊಂಡರು. ಆಗ ಬಾಂಬೆ ಸತ್ಯಾ ಇವನು ನೀನು ಹೀರಾ ಈತನ ಬಗ್ಗೆ ನನಗೆ ಇನ್ನೊಮ್ಮೆ ಕೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾಅಂತಾ ಜೀವದ ಬೆದರಿಕೆ ಹಾಕಿ ನನ್ನ ಕರ್ತವ್ಯಕ್ಕೆ ಅಡೆತಡೆ ಮಾಡಿದನು. ನಾನು ವಿಚಾರ ಮಾಡಿ ಇಂದು ತಡವಾಗಿ ಅರ್ಜಿ ಸಲ್ಲಿಸುತ್ತಿದ್ದೆನೆ. ಕಾರಣ ಸತೀಶ @ ಬಾಂಬೆ ಸತ್ಯಾ ಈತನ ಮೇಲೆ ಕಾನೂರು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಅಂತಾ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

30 August 2015

Kalaburagi District Reported Crimes.

ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 22:45 ಗಂಟೆಗೆ ಫಿರ್ಯಾದಿದಾರನು ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 28.08.2015 ರಂದು ಸಾಯಂಕಾಲ 05:30 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರಿಬ್ಬರು ಕೂಡಿಕೊಂಡು ಬಂದು ನನಗೆ ಮತ್ತು ನನ್ನ ತಂದೆಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದ್ದು ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 238/2015 ಕಲಂ 341 323. 324. 504. 506 ಸಂ 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
ಜೇವರ್ಗಿ ಠಾಣೆ  : ದಿನಾಂಕ: 29.08.2015 ರಂದು 21:35 ಗಂಟೆಗೆ ಫಿರ್ಯಾದಿದಾರ ಹಣಮಂತ ತಂದೆ ಭೀಮರಯಾ ವಡ್ಡರ್ ಜಾ|| ವಡ್ಡರ್ ಸಾ|| ಕಟ್ಟಿ ಸಂಗಾವಿ  ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 28.08.2015 ರಂದು ಸಾಯಂಕಾಲ 06:00 ಗಂಟೆಗೆ  ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರೆಲ್ಲರು ಕೂಡಿಕೊಂಡು ಬಂದು ನನಗೆ ಮತ್ತು ನನ್ನ ಹೆಂಡತಿಗೆ ಹಾಗು ತಾಯಿ ಕಮಲಾಬಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ  ಕಲ್ಲಿನಿಂದ ಹೊಡೆ ಬಡೆ ಮಾಡಿ ನನ್ನ ಹೆಂಡತಿಗೆ ಮತ್ತು ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನ ಭಂಗ ಮಾಡಿ ಜಾತಿ ಎತ್ತಿ ಬೈದಿದ್ದು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕುಅಂತ ಇತ್ಯಾದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 237/2015 ಕಲಂ 143. 147 323. 324. 354. 504. ಸಂ 149 ಐಪಿಸಿ ಮತ್ತು 3 (1) (10) (11) ಎಸ್.ಸಿ/ಎಸ್.ಟಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  ಆರೋಪಿತರ ಹೆಸರು, ವಿಳಾಸ  : 1. ಮಲ್ಲಪ್ಪ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ,  2) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ,  3) ಪಾಪಣ್ಣ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ,  4) ಹಣಮಂತ ತಂದೆ ಭೀಮರಾಯ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿ,   5) ಭೀಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಘಾವಿ.     ಗಾಯಾಳು  : 1) ಯಲ್ಲಪ್ಪ ತಂದೆ ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ, 2) ಭಿಮರಾಯ ತಂದೆ ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿಆರೋಪಿತರ ಹೆಸರು, ವಿಳಾಸ : 1. ಹಣಮಂತ ತಂದೆ ಭೀಮರಯಾ ವಡ್ಡರ್ ಜಾ|| ವಡ್ಡರ್ ಸಾ|| ಕಟ್ಟಿ ಸಂಗಾವಿ , 2) ತುಳಜಾಬಾಯಿ ಗಂಡ ಹಣಮಂತ ವಡ್ಡರ್ ಸಾ|| ಕಟ್ಟಿ ಸಂಗಾವಿ.
ಜೇವರ್ಗಿ ಠಾಣೆ : ದಿನಾಂಕ: 29.08.2015 ರಂದು 20:15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಸ.ತರ್ಫೇಯಿಂದ ಒಂದು ವರದಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 29.08.2015 ರಂದು 19:00 ಗಂಟೆಗೆ ಠಾಣೆಯ ಸಿಬ್ಬಂದಿ ಜನರು ಮತ್ತು ಇಬ್ಬರು ಪಂಚರ ಸಮಕ್ಷಮದಲ್ಲಿ ಜೇವರಗಿ ಪಟ್ಟಣದ ಗಂಗಾಮಯಿ ಮಠದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ 72.150/-- ರೂ ಗಳು ನಗದು ಹಣ ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿದ್ದು ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕುರಿತು ಅಂತ ವರದಿ ವಗೈರೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 236/2015 ಕಲಂ 87 ಕೆ.ಪಿ ಆಕ್ಟ್‌ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.  ಆರೋಪಿತರ ಹೆಸರು, ವಿಳಾಸ  : 1. ರಾಜು ತಂದೆ ಕ್ರೀಷ್ಣಾಜಿ ಸಲಗರ ಸಾ|| ಜೇವರಗಿ,  2) ಮಹಾಂತೇಷ ತಂದೆ ಶರಣಗೌಡ ಆನೂರ ಸಾ|| ಯಾತನೂರ  3) ಹಣಮಂತ ತಂದೆ ಅಶೋಕ ಸಾ|| ಬುದ್ದ ನಗರ ಜೇವರಗಿ,  4) ಪ್ರೇಮನಗೌಡ ತಂದೆ ಚಂದ್ರಶೇಖರ ಕಲ್ಲೂರ ಸಾ|| ನೇಲೋಗಿ,  5) ನಿಂಗಣಗೌಡ ತಂದೆ ಶರಣಗೌಡ ಚೆನ್ನೂರ ಸಾ|| ಚೆನ್ನೂರ,  6) ರೇವಣಸಿದ್ದ ತಂದೆ ಶಾಂತಗೌಡ ಸಾ|| ಚೆನ್ನೂರ,   7) ಸಿದ್ದು ತಂದೆ ಭಗವಂತರಾಯ ಕಡ್ಲೆವಾಡ ಸಾ|| ಕೆಲ್ಲೂರ,  8) ಸಿದ್ದು ತಂದೆ ಶಿವಶರಣಪ್ಪ ಹರವಾಳ ಸಾ|| ಹರವಾಳ  .
ಜೇವರ್ಗಿ  ಠಾಣೆ : ದಿನಾಂಕ 29.08.2015 ರಂದು 17:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 24.08.2015 ಮುಂಜಾನೆ 09:00 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ರಾಸ್ ದಿಂದ ಶಹಾಫುರ ಕಡೆಗೆ ಹೋಗುವ ರಸ್ತೆಯ ಪಕ್ಕ ಇರುವ ಪೆಟ್ರೋಲ್ ಪಂಪ್ ಹತ್ತಿರ ಜೇವರಗಿ ಶಹಾಪುರ ರಸ್ತೆ ಮೇಲೆ ನನ್ನ ತಂದೆ ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ವಿ7157 ನೇದ್ದರ ಮೇಲೆ ನನ್ನ ಅಜ್ಜಿಯವರು ಕುಳಿತುಕೊಂಡು ಶಹಾಪುರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಎದುರಿನಿಂದ ಟ್ರ್ಯಾಕ್ಟರ್ ನಂ ಕೆ.ಎ32ಟಿಎ2623 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನನ್ನ ತಂದೆ ನಡೆಸುತ್ತಿದ್ದ ಮೋಟಾರು ಸೈಕಲ್‌ಗೆ ಎದುರುನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ತಂದೆ ಮತ್ತು ಅಜ್ಜಿಗೆ ಭಾರಿ ಮತ್ತು ಸಾದಾ ಗಾಯಪಡಿಸಿ ಅಪಘಾತದ ನಂತರ ಟ್ರ್ಯಾಕ್ಟರ್ ಅನ್ನು ಸ್ಥಳದಲ್ಲಿ ಯೆ ಬಿಟ್ಟು ಓಡಿ ಹೋಗಿದ್ದು, ನನ್ನ ತಂದೆ ಮತ್ತು ಅಜ್ಜಿಯವರಿಗೆ ಆಸ್ಪತ್ರೆಯಲ್ಲಿ ಉಪಚಾರ ಪಡಿಸಿ ನಂತರ ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಕಾರಣ ಸದರಿ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 235/15 ಕಲಂ 279. 337. 338. ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ರಾಘವೇಂದ್ರ ನಗರ  ಠಾಣೆ : ದಿನಾಂಕ:29/08/2015 ರಂದು ಬೆಳಗ್ಗೆ 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶರಣಬಸಪ್ಪಾ ತಂದೆ ಶಂಭುಲಿಂಗಪ್ಪಾ ಹೂಗಾರ ವ:32 ಉ:ಖಾಸಗಿ ಕೆಲಸ ಸಾ:ಮಾತೋಶ್ರೀ ನಿಲಯ ಚಿಂಚೋಳಿ ಲೇ ಔಟ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:28/08/2015 ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿ ಕೊಂಡಾಗ ರಾತ್ರಿ 11.30 ರಿಂದ ಬೆಳಗ್ಗೆ 5.00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಮನೆಯಲ್ಲಿದ್ದ ಅಲಮಾರ ತೆರೆದು ಅದರಲ್ಲಿ ಇದ್ದ ಅರ್ಧತೊಲೆ ಬಂಗಾರದ ಆಭರಣ ಅಂದಾಜು ಕಿಮ್ಮತ್ತು 12000/-ರೂ ಹಾಗೂ ನಗದು ಹಣ 10000/-ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.120/15 ಕಲಂ:457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.

«±Àé«zÁå®AiÀÄ oÁuÉ :  ªÁå¦ÛAiÀÄ°è ¢£ÁAPÀ: 06/08/2014 gÀAzÀÄ ªÀÄzÁåºÀß ªÉüÉAiÀÄ°è ®Qëöä £ÀUÀgÀzÀ°è ªÀÄ£ÉUÉ ©ÃUÀ ºÁQzÀÄÝ AiÀiÁgÉÆà PÀ¼ÀîgÀÄ ªÀÄ£ÉAiÀÄ »A¢£À ¨ÁV® Qð ªÀÄÄjzÀÄ ªÀÄ£ÉAiÀÄ M¼ÀUÀqÉ ¥ÀæªÉñÀ ªÀiÁr ªÀÄ£ÉAiÀÄ C®ªÀiÁj ªÀÄÄjzÀÄ ªÀÄ£ÉAiÀÄ°èlÖzÀ 170 UÁæA §AUÁgÀzÀ D¨sÀgÀtUÀ¼ÀÄ ºÁUÀÆ £ÀUÀzÀÄ ºÀt 29000 »ÃUÉ MlÄÖ 5,22,000/- gÀÆ. ¨É¯É¨Á¼ÀĪÀ ªÀiÁ®£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. «±Àé«zÁå®AiÀÄ ¥ÉưøÀ oÁuÉAiÀÄ ªÁå¦ÛAiÀÄ°è ¢£ÁAPÀ: 19/06/2015 gÀAzÀÄ gÁwæ ªÉüÉAiÀÄ°è ¥ÉÆæÃ¥sɸÀgï PÁ¯ÉÆä AiÀÄ°è gÁwæ ªÉüÉAiÀÄ°è ªÀÄ£ÉAiÀÄ ¨ÁV®Ä Qð ºÁQzÀÝ£ÀÄß £ÉÆÃr ªÀÄ£ÉAiÀÄ ¨ÁV® Qð ªÀÄÄjzÀÄ ªÀÄ£ÉAiÀÄ C®ªÀiÁjAiÀÄ°è EnÖzÀÝ 5.09 UÁæA §AUÁgÀzÀ ««zsÀ £ÀªÀÄÆ£ÉAiÀÄ §AUÁgÀzÀ D¨sÀgÀtUÀ¼ÀÄ C:Q: 1,47,500/- PÀ¼ÀîvÀ£À ªÀiÁrPÉÆArzÀÄÝ ºÉÆÃVzÀÄÝ EgÀÄvÀÛzÉ ªÉÄîÌAqÀ «µÀAiÀÄzÀ §UÉÎ «±Àé«zÁå®AiÀÄ ¥ÉưøÀ oÁuÉAiÀÄ°è ¥ÀæPÀgÀtUÀ¼ÀÄ zÁR¯ÁVzÀÄÝ EgÀÄvÀÛªÉ. ¸ÀzÀj ¥ÀæPÀgÀtUÀ½UÉ ¸ÀA§A¢ü¹zÀAvÉ ªÀiÁ£Àå ²æÃ.C«ÄvÀ ¹AUï J¸ï.¦ ¸ÁºÉç PÀ®§gÀÄV, ªÀiÁ£Àå ²æÃ.dAiÀÄ¥ÀæPÁ±À ºÉZÀÄѪÀj J¸ï.¦ ¸ÁºÉç PÀ®§ÄgÀV, ªÀiÁ£Àå «dAiÀÄ CAa rªÉÊJ¸ï.¦ ¸ÁºÉç UÁæªÀiÁAvÀgÀ G¥À-«¨sÁUÀ, ªÀiÁ£Àå eÉ.ºÉZï E£ÁªÀÄzÁgÀ ¹.¦.L JªÀÄ.© £ÀUÀgÀ ªÀÈvÀÛ PÀ®§ÄgÀV gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ «±Àé«zÁå®AiÀÄ ¥ÉưøÀ oÁuÉAiÀÄ ²æÃ.f.J¸ï gÁWÀªÉÃAzÀæ ¦.J¸ï.L (PÁ.¸ÀÄ), ºÁUÀÆ C¥ÀgÁzsÀ «¨sÁUÀ ¹§âA¢AiÀĪÀgÁzÀ ¸ÀAvÉƵÀ ¹.¦.¹ 935, zÁåªÀ¥Àà ¹.¦.¹ 942, ¸ÀįÁÛ£À ¹.¦.¹ 958, gÀªÀgÀÄ DgÉÆæüvÀgÁzÀ 1) C§ÄÝ® ªÀÄwãÀ vÀAzÉ G¸Áä£À C°, ¸Á: GªÀÄgÀ PÁ¯ÉÆä DeÁzÀ¥ÀÆgÀ gÉÆÃqÀ ªÀĺÀä¢ ªÀÄfÃzÀ ºÀwÛgÀ PÀ®§ÄgÀV, 2) ªÀĺÀäzÀ C§gÁgÀ CºÀäzÀ vÀAzÉ ªÀĺÀäzÀ UÀįÁªÉÆâݣÀ ¸Á: CºÀäzÀ £ÀUÀgÀ 3£Éà PÁæ¸ï £ÀÆgÀ ªÀÄfÃzÀ ºÀwÛgÀ DeÁzÀ¥ÀÆgÀ gÉÆÃqÀ PÀ®§ÄgÀV 3) ±ÉÃR ªÀĺɧƧ SÁf vÀAzÉ ªÀĺÀäzÀ SÁeÁ«ÄAiÀiÁ, ¸Á: ªÀÄPÁÌ PÁ¯ÉÆä ªÁlgÀ mÁåAPÀ ºÀwÛgÀ PÀ®§ÄgÀV EªÀgÀ£ÀÄß ªÀ±ÀPÉÌ vÉUÉzÀÄPÉÆAqÀÄ DgÉÆævÀjAzÀ MlÄÖ 170 UÁæA §AUÁgÀ, ºÁUÀÆ ªÀÄÆgÀÄ ¢éZÀPÀæ ªÁºÀ£ÀUÀ¼ÀÄ(§¸ÀPÀ¯Áåt ©ÃzÀgÀ°è PÀ¼ÀîvÀ£À ªÀiÁrzÀ) J¯Áè ¸ÉÃj MlÄÖ 5,00,000/- ¨É¯É¨Á¼ÀĪÀ §AUÁgÀzÀ D¨sÀgÀtUÀ¼ÀÄ ºÁUÀÆ 3 ¢éZÀPÀæ ªÁºÀ£ÀUÀ¼À£ÀÄß d¥ÀÛ ¥Àr¹PÉÆArzÀÄÝ EgÀÄvÀÛzÉ.


29 August 2015

Kalaburagi District Reported Crimes.

ಕಮಲಾಪೂರ ಠಾಣೆ : ದಿನಾಂಕ 29-08-2015 ರಂದು ಬೆಳಗ್ಗೆ 0745 ಗಂಟೆಗೆ ಹುಮನಾಬಾದ ಸಂಚಾರಿ ಪೊಲೀಸ ಠಾಣೆಯಿಂದ ಆರ್.ಟಿ.ಐ ಎಮ್.ಎಲ್.ಸಿ ವಸೂಲಾದ ಪ್ರಯುಕ್ತ ಹುಮನಾಬಾದ ಸರ್ಕಾರಿ  ಆಸ್ಪತ್ರೆಗೆ ಭೇಟ್ಟಿಕೊಟ್ಟಾಗ ಶ್ರೀನಿವಾಸ ತಂದೆ ಪ್ರಕಾಶ ದಾಡಗಿ ವಯ 32 ವರ್ಷ ಜಾ; ಮಾದಿಗಾ ಉ; ಕೂಲಿಕೆಲಸ ಸಾ; ಯರಭಾಗ ತಾ; ಬಸವಕಲ್ಯಾಣ ಜಿ; ಬೀದರ ಇವರು ಹೇಳಿಕೆ ಬರೆಯಿಸಿದ ಹೇಳಿಕೆ ಸಾರಾಂಶವೆನೆಂದರೆ, ದಿನಾಂಕ 28-08-2015 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ನನ್ನ ತಮ್ಮನಾದ ಪ್ರದೀಪ ತಂದೆ ಪ್ರಕಾಶ ದಾಡಗಿ ವಯ 26 ವರ್ಷ ಈತನು ಮತ್ತು ಆತನ ಗೆಳೆಯನಾದ ಲೋಕೇಶ ತಂದೆ ರಾಜಪ್ಪ @ ರಾಜಕುಮಾರ ವಯ 22 ವರ್ಷ ಇಬ್ಬರು ಕೂಡಿಕೊಂಡು ಲೋಕೇಶನ ಹಿರೋ ಹೊಂಡಾ ಸ್ಪೇಂಡರ್ ಮೋಟಾರ ಸೈಕಲ್ ನಂ ಕೆಎ-56-ಇ-5743 ನೇದ್ದನು ತೆಗೆದುಕೊಂಡು ಲೋಕೇಶನು ಮೋಟಾರ ಸೈಕಲ್ ನಡೆಸಿಕೊಂಡು ಕಲಬುರಗಿಯಲ್ಲಿರುವ ನಮ್ಮ ಸೋದರೆ ಅತ್ತೆಯನ್ನು ಭೇಟ್ಟಿಯಾಗಿ ಬರಲು ಹೋಗಿ ರಾತ್ರಿ ಅಂದಾಜು 8 ಪಿ.ಎಮ್ ಕ್ಕೆ ವಾಪಾಸ ಯರಭಾಗಕ್ಕೆ ಬರುವಾಗ ಕಿಣ್ಣಿಸಡಕ್ ಗ್ರಾಮ ಇನ್ನು ಮುಂದೆ ಇದ್ದಾಗ ಜಿಲ್ಲಾ ಮುಬರಾಕ್ ಬೋರ್ಡ ಹತ್ತಿರ ಎದುರಗಡೆಯಿಂದ ಬಜಾಜ್ ಪಲ್ಸಾರ್ ಮೋಟಾರ ಸೈಕಲ್ ಕೆಎ-39-ಎಲ್-2511 ನೇದ್ದರ ಚಾಲಕನಾದ ಸೂರ್ಯಕಾಂತ ತಂದೆ ರಾಮಣ್ಣ ಸಾ; ಜಹೀರಪೇಟ್ ಹುಮನಾಬಾದ ಈತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿಕೊಂಡು ನನ್ನ ತಮ್ಮನು ಕುಳಿತು ಬರುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದನನ್ನ ತಮ್ಮ ಪ್ರದೀಪನಿಗೆ ತೆಲೆಗೆ ಮತ್ತು ಇತರ ಕಡೆಗೆ ಭಾರಿಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿದ್ದು , ಇನ್ನುಳಿದವರಿಗೆ ಅಲ್ಲಲಿ ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತ ವಗೈರೆ ಹೇಳಿಕೆ ಪಿರ್ಯಾದಿಯನ್ನು  ಪಡೆದುಕೊಂಡು ಇಂದೆ ಮುಂಜಾನೆ 0945 ಗಂಟೆಗೆ ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ  ಸಾರಾಂಶದ  ಪ್ರಕಾರ ಪ್ರಕರಣ ದಾಖಲಗಿರುತ್ತದೆ.

Kalaburagi District Reported Crimes.

ಸೇಡಂ ಠಾಣೆ : ದಿನಾಂಕ:28-08-2015 ರಂದು 1700 ಗಂಟೆಗೆ, ತೆಲ್ಕೂರ ಗ್ರಾಮ ಪಂಚಾಯತ ಪಿ.ಡಿ.ಓ ರವರಾದ ಶ್ರೀ. ಸುಮಿತ್ರಪ್ಪ ತಂದೆ ಬಸವರಾಜ ಲಿಂಗೇರಿ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅರ್ಜಿ ತಂದು ಹಾಜರುಪಡಿಸಿದ್ದು ಸಾರಂಶವೇನೆಂದರೆ, ಇಂದು ದಿ:28-08-2015 ರಂದು ಬೆಳಗ್ಗೆ ನನಗೆ ಮಾನ್ಯ ತಹಸಿಲ್ದಾರ ಸಾಹೇಬರು ಸೇಡಂ ರವರು ಫೋನ ಮೂಲಕ ಮಾಹಿತಿ ತಿಳಿಸಿದ್ದೇನೆಂದರೆ, ನಾನು ತೆಲ್ಕೂರ ಗ್ರಾಮದ ಸೀಮಾಂತರದಲ್ಲಿ ಮತ್ತು ಹಾಬಾಳ (ಟಿ) ಏರಿಯಾದಲ್ಲಿ ಬರುವ ಕಲ್ಲು ಖಣಿಯಲ್ಲಿ ದುರ್ನಾತ ಎದ್ದಿದ್ದು ಯಾರೋ ಯಾವುದೊ ಒಂದು ರಸಾಯನ ವಸ್ತು ಚೆಲ್ಲಿ ಹೋಗಿದ್ದು ಹಾಗೂ ರೋಡಿನ ಮೇಲೆ ಸಹಾ ಬಿದ್ದಿದ್ದರಿಂದ ಏರಿಯಾದಲ್ಲಿ ದುರ್ನಾತ ಎದ್ದಿದ್ದು, ಯಾರೋ ಉದ್ದೇಶ ಪೂರ್ವಕವಾಗಿ ಈ ರೀತಿ ರಸಾಯನ ವಸ್ತುವನ್ನು ಚೆಲ್ಲಿಹೋಗಿರುತ್ತಾರೆ ಅಂತ ಸಾರ್ವಜನಿಕರು ತಿಳಿಸಿರುತ್ತಾರೆ ಅಂತ ತಿಳಿಸಿ ನನಗೆ ಸ್ಥಳಕ್ಕೆ ಬರಲು ಸೂಚಿಸಿದ್ದರ ಮೇರೆಗೆ ನಾನು ಸಹಾ ಹಾಬಾಳ (ಟಿ) ಏರಿಯಾದಲ್ಲಿದ್ದ ಕಲ್ಲು ಖಣಿಗಳ ಸ್ಥಳಕ್ಕೆ ಬಂದಾಗ ಮಾನ್ಯ ತಹಸಿಲ್ದಾರ ಸಾಹೇಬರು ಸಹಾ ಹಾಜರಿದ್ದು ನಾವೆಲ್ಲರೂ ಅಲ್ಲಿ ಹೋಗಿ ನೋಡಲಾಗಿ ಅದು ಹಾಬಾಳ (ಟಿ) ಗ್ರಾಮದ, ಶ್ರೀ. ನಾಗೇಂದ್ರಪ್ಪ ಪೂಜಾರಿ ಇವರಿಗೆ ಸಂಭಂದಿಸಿದ ಕಲ್ಲು ಖಣಿಯಾಗಿದ್ದು ಅಲ್ಲಿ ಪೂರ್ತಿ ದುರ್ನಾತ ಎದ್ದಿದ್ದು ಕೆಲವು ಚೀಲಗಳಲ್ಲಿ ಕಪ್ಪುಬಣ್ಣದ ಹಾಗೂ ಬಿಳಿ ಪೌಡರನಂತಿದ್ದ ರಾಸಾಯನಿಕ ವಸ್ತು ಬಿದ್ದಿದ್ದು ಮತ್ತು ಇನ್ನುಳಿದ ರಾಸಾಯನಿಕ ವಸ್ತುಗಳನ್ನು ಕಲ್ಲು ಖಣಿಗಳಲ್ಲಿ ಹಾಕಿ ಮುಚ್ಚಿರುತ್ತಾರೆ. ಏರಿಯಾ ತುಂಬಾ ದುರ್ನಾತ ಎದ್ದು ಜನರು ಹಾಗೂ ಪ್ರಾಣಿ ಪಕ್ಷಿಗಳು ಅನಾರೋಗ್ಯವಾಗುವಂತಹ ವಾತಾವರಣ ನಿರ್ಮಾಣವಾಗಿದ್ದು ಮತ್ತು ಸದರಿ ದುರ್ನಾತದಿಂದ ಜನರು ಮತ್ತು ಪ್ರಾಣಿ ಪಕ್ಷಿಗಳಿಗೆ ಪ್ರಾಣ ಹಾನಿ ಆಗುವ ಸಂಭವ ಇರುತ್ತದೆ. ಸದರಿ ಕಲ್ಲು ಖಣಿಯಲ್ಲಿ ಒಂದು ಜೀಪ ನಂ-KA28M1773 ನೇದ್ದು ಸಹಾ ಬಿಟ್ಟು ಹೋಗಿರುತ್ತಾರೆ. ಈ ಘಟನೆಯನ್ನು ಯಾರೊ ದುರುದ್ದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಚೆಲ್ಲಿ ಖಣಿಯಲ್ಲಿ ಮುಚ್ಚಿ ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ:26-08-2015 ರಿಂದ 27-08-2015 ರ ರಾತ್ರಿ ವೇಳೆಯಲ್ಲಿ ಜರುಗಿದ್ದು ಇರುತ್ತದೆ. ಕಾರಣ ಈ ಘಟನೆಗೆ ಕಾರಣೀಕರ್ತರಾದವರ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. 

27 August 2015

Kalaburagi District Reported Crimes.

ಗ್ರಾಮೀಣ  ಠಾಣೆ : ದಿನಾಂಕ: 27/08/2015 ರಂದು 11-00 ಎಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಶಂಕರ ತಂದೆ ಶರಣಪ್ಪ ಹಡಪದ ವಯ: 31 ವರ್ಷ ಜಾತಿ: ಹಡಪದ ಉ: ಕ್ಷೌರಿಕ ಕೆಲಸ ಸಾ: ಹಸರಗುಂಡಗಿ ತಾ: ಅಫಜಲಪೂರ ಹಾ:ವ: ಕಮಲನಗರ ಸುಲ್ತಾನಪೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಏನೆಂದರೆ, ನಾನು ಈಗ್ಗೆ 15 ವರ್ಷಗಳಿಂದ ಕಮಲನಗರದಲ್ಲಿ ಹೆಂಡತಿ ಮಗನೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಈಗ್ಗೆ 6 ತಿಂಗಳಿಂದ ಕಮಲನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು  ದಿನಾಂಕ: 26/08/2015 ರಂದು ನಾನು ಎಂದಿನಂತೆ ಕೆಲಸ ಮುಗಿಸಿಕೊಂಡು ನಮ್ಮ ಅಣ್ಣನ ಮಗ ಅಂಬ್ರೇಶನೊಂದಿಗೆ ರಾತ್ರಿ 10-00 ಗಂಟೆಗೆ ಕಮಲನಗರದಲ್ಲಿರುವ ನಮ್ಮ ಮನೆಗೆ ಬಂದು ನನ್ನ ಹೆಂಡತಿಯೊಂದಿಗೆ ಊಟ ಮುಗಿಸಿಕೊಂಡು ನಾವೆಲ್ಲರೂ ನಮ್ಮ ಮನೆಯ ಎರಡೂ  ಬಾಗಿಲ ಕೀಲಿ ಹಾಕಿಕೊಂಡು ಮಾಳಿಗೆ ಮೇಲೆ ಹೋಗಿ ಮಲಗಿಕೊಂಡೆವು. ನಂತರ ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ಸುಮಾರಿಗೆ ಮಾಳಿಗೆ ಮೇಲಿಂದ ಎದ್ದು ನಾನು ನನ್ನ ಹೆಂಡತಿ ಕೆಳಗೆ ಬಂದು ಒಂದು ಕೋಣೆಯಲ್ಲಿ ಮಲಗಿಕೊಂಡೆವು. ನಂತರ ಎಂದಿನಂತೆ ಬೆಳಿಗ್ಗೆ 6-00 ಗಂಟೆ   ಸುಮಾರಿಗೆ ಎದ್ದು ಬಾಗಿಲು ತೆರೆಯಲು ಬಾಗಿಲು ತೆರೆಯಲಿಲ್ಲ. ಯಾರೋ ಹೊರಗಡೆಯಿಂದ ಬಾಗಿಲ ಕೊಂಡಿ ಹಾಕಿದ್ದು ನಾನು ಅಂಬ್ರೇಶನಿಗೆ ಫೋನ ಮಾಡಿ ಬಾಗಿಲು ತೆಗೆಯಲು ಹೇಳಿದಾಗ ಅಂಬ್ರೇಶನು ಮಾಳಿಗೆ ಮೇಲಿಂದ ಕೆಳಗೆ ಇಳಿದು ಬಂದು ನಾವಿದ್ದ ರೂಮನ ಬಾಗಿಲು ತೆರೆದನು. ನಾನು ಹೊರಗೆ ಬಂದು ನೋಡಲು  ನಮ್ಮ ಮನೆಯ ಇನ್ನೊಂದು  ಕೋಣೆಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಬಾಗಿಲು ಅರ್ಧ ತೆರೆದಿರುವುದನ್ನು ನೋಡಿ ನಾನು ನನ್ನ ಹೆಂಡತಿ ಮತ್ತು ಅಂಬ್ರೇಶ ಗಾಬರಿಯಿಂದ ಒಳಗೆ ಹೋಗಿ ನೋಡಲು ಅಲಮಾರಾದ ಬಾಗಿಲು ತೆರೆದಿದ್ದು ಅಲಮಾರಾದ ಒಳಗಡೆ ಲಾಕರ್ ಮುರಿದಿದ್ದು ಅಲಮಾರಾದಲ್ಲಿಟ್ಟ ಸಾಮಾನುಗಳೆಲ್ಲ ಹೊರಗಡೆ ಬಿದ್ದಿದ್ದು ಕಂಡು ನಾವು ಗಾಬರಿಯಿಂದ ಅಲಮಾರಾದಲ್ಲಿಟ್ಟಿದ್ದ ನಮ್ಮ ಮದುವೆ ಸಮಯದಲ್ಲಿ 2005ರಲ್ಲಿ ಖರೀದಿಸಿದ್ದ ಹಳೆಯ 1) 10 ಗ್ರಾಂ ಬಂಗಾರದ ಲಾಕೇಟ ಅ.ಕಿ= 10000/-ರೂ 2) 10 ಗ್ರಾಂ ಬಂಗಾರದ 2ತಾಳಿ ಮತ್ತು ಅಷ್ಟಪುಲಿ ಗುಂಡುಗಳು ಅ.ಕಿ= 10000/-ರೂ ಹಾಗೂ 3) 5 ಗ್ರಾಂ ಬಂಗಾರದ ಕಿವಿಯ ಜುಮಕಿ ಬೆಂಡೋಲೆ ಅ.ಕಿ= 4500/- ರೂ ಹೀಗೆ ಒಟ್ಟು 24500/-ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ದಿಂದ ಬೆಳಿಗ್ಗೆ 6-00 ಗಂಟೆ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೊಂಡಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ನಮ್ಮ ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಿ ನಮಗೆ ವಾಪಸ್ಸು ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಫಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಗೈರೆ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.
ಹೆಚ್ಚುವರಿ ಸಂಚಾರಿ ಠಾಣೆ: ದಿನಾಂಕ 27-08-2015 ರಂದು ಮದ್ಯಾಹ್ನ 12-00 ಗಂಟೆಗೆ ಗುರುರಾಜ ತಂದೆ ಶರಣಬಸಪ್ಪಾ ಬಿರಾದಾರ ಇತನು  ಮೋಟಾರ ಸೈಕಲ ನಂ ಕೆಎ32/ಇಬಿ-1761 ನೇದ್ದನ್ನು ಮುಕ್ತಾಂಬಿಕ ಕಾಲೇಜ ಕಡೆಯಿಂದ ಗೋವಾ ಹೋಟೆಲ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ಲಾಲಗೇರಿ ಕ್ರಾಸ ಮತ್ತು ಗೋವಾ  ಹೋಟೆಲ ಕ್ರಾಸ  ಮುಖ್ಯ ರಸ್ತೆ ಮೇಲೆ ಬರುವ  ಅರಬ ಮಜೀದ್ ಸಮೀಪ್ ಬರುವ ಪ್ರತಿಭಾ  ಡಿಜಿಟಲ್ ಸ್ಟೂಡಿಯೋ ಎದುರು ರೋಡ ಮೇಲೆ ಒಮ್ಮೇಲೆ ಬ್ರೇಕ್ ಹಾಕಿ ಮೋಟಾರ ಸೈಕಲ ಸ್ಕೀಡ ಮಾಡಿ ತನ್ನಿಂದತಾನೆ ಬಿದ್ದು ತೆಲೆಗೆ ಭಾರಿ ಗುಪ್ತ ಪೆಟ್ಟು ಮತ್ತು ಮೈಯಲ್ಲ ಒಳಪೆಟ್ಟು ಹೊಂದಿ  108 ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಧಾರಿ ಮದ್ಯ ಮದ್ಯಹ್ನ 12-00 ಗಂಟೆಯಿಂದ 12-35 ಗಂಟೆಯ ಅವದಿಯ ಮದ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ  ಅಂತಾ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 27.08.2015 ರಂದು 08:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 26.08.2015 ಸಾಯಂಕಾಲ 07:45 ಗಂಟೆಯ ಸುಮಾರಿಗೆ ಬೂತಪುರ ಕಲ್ಯಾಣ ಮಂಟಪದ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು 45 ರಿಂದ 50 ವಯಸ್ಸಿನ ಅಪರಿಚತ ಮಹಿಳೆಗೆ ಡಿಕ್ಕಿ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಸದರಿ ಅಪಘಾತದಿಂದ ಅಪರಿಚಿತ ಮಹಿಳೆಯ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ಸದರಿ ಅಪರಿಚಿತ ಮಹಿಳೆಯು ದಿನಾಂಕ 26.08.15 ರಂದು ರಾತ್ರಿ 09:20 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕಾರಣ ಸದರಿ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ಧಾಖಲಾಗಿರುತ್ದೆ. 

Kalaburagi District Reported Crimes

ಅಫಜಲಪೂರ ಠಾಣೆ : ಫಿರ್ಯಾದುದಾರರು ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆ ಕರಜಗಿ ನೇದ್ದರ ಉಪಾಧ್ಯಕ್ಷರಾಗಿದ್ದು ಇರುತ್ತದೆ. ದಿನಾಂಕ:- 26/08/2015 ರಂದು ಮದ್ಯಾಹ್ನ 3:35 ಗಂಟೆಗೆ ಆರೋಪಿತರು ಫಿರ್ಯಾದುದಾರರ ಶಾಲೆಗೆ ಬಂದು ಶಾಲೆಯ ಕಾರ್ಯಾಲಯದಲ್ಲಿ ಕುಳಿತಿರುವ ಫಿರ್ಯಾದುದಾರರನ್ನು ಹಾಗೂ ಸದರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಭಗವಂತರಾಯ ಬಾಬುರಾವ ಅಳ್ಳಗಿ ಇಬ್ಬರ ಮೇಲು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಶಾಲೆ ನಡೆಸದಂತೆ ಫಿರ್ಯಾದುದಾರರಿಗೆ ಧಮಕಿ ಹಾಗೂ ಜೀವ ಬೆದರಿಕೆ ಹಾಕಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕೆಂದು ಕೊಟ್ಟ ಫಿರ್ಯಾದಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಚೌಕ  ಠಾಣೆ : ದಿನಾಂಕ 26.08.2015 ರಂದು ಸಾಯಂಕಾಲ 06-30 ಪಿ.ಎಂ.ಕ್ಕೆ ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಠಾಣಾ ವ್ಯಾಪ್ತಿಯ ನೆಹರು ಗಂಜಿನ ಎಂ.ಎಸ್.ಪಾಟೀಲ್ ಅಡತಿಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು, ಸಿಬ್ಬಂದಿ ಜನರಾದ ಮೋಸಿನ್ ಪಿಸಿ 811, ಮಹಾಂತೇಶ ಪಿಸಿ 716, ವಿನೋದ ಪಿಸಿ 444 ಮತ್ತು ಜೀಪ್ ಚಾಲಕ ಪಿಸಿ 158 ಶರೀಫ ರವರು ಮತ್ತು ಇಬ್ಬರು ಪಂಚ ಜನರಾದ   1) ಸಂತೋಷ ತಂದೆ ಮಲಕಣ್ಣ ಬಾಳಿ ವಯ: 26 ವರ್ಷ ಉ: ಅಡತ ವ್ಯಾಪಾರ ಜಾ: ಲಿಂಗಾಯತ ಉ: ಮನೆ ನಂ: 8-1535, ನಂದಿ ಕಾಲೂನಿ ಕಲಬುರಗಿ  2) ವಿರೇಶ ತಂದೆ ಶಿವಯ್ಯ ಹಿರೇಮಠ ವ: 25 ಉ: ಅಟೋರಿಕ್ಷಾ ಚಾಲಕ ಜಾತಿ: ಜಂಗಮ  ಸಾ: ಮನೆ ನಂ: 8-1545/4ಬಿ ನಂದಿ ಕಾಲೂನಿ ಕಲಬುರಗಿ ರವರನ್ನು ಠಾಣೆಗೆ ಬರಮಾಡಿಕೊಂಡು ಅವರು ಬಂದ ನಂತರ ಠಾಣೆಯ  ಸಿಬ್ಬಂದಿಯವರಿಗೆ ಮತ್ತು ಪಂಚರಿಗೆ ವಿಷಯ ತಿಳಿಯ ಹೇಳಿ ನಾವು ಮಾಡುವ ದಾಳಿಯ ಕಾಲಕ್ಕೆ ಹಾಜರ ಇದ್ದು ಪಂಚನಾಮೆ ಬರೆಸಿಕೊಡಲು ಒಪ್ಪಿಕೊಂಡಿದ್ದು ನಂತರ ಪಂಚರ ನಾನು ಮತ್ತು ಸಿಬ್ಬಂದಿ  ಕೂಡಿಕೊಂಡು ಠಾಣೆಗೆ ಒದಗಿಸಿ ಜೀಪ ನಂ ಕೆಎ-32-ಜಿ-639 ನೇದ್ದರಲ್ಲಿ ಕುಳಿತು ಬಾತ್ಮಿಯಂತೆ ನೆಹರು ಗಂಜ ಹನುಮಾನ ದೇವಸ್ಥಾನದ ಹತ್ತಿರ ಅಡತದ ಮರೆಯಲ್ಲಿ ಸಾಯಂಕಾಲ 06-45 ಪಿಎಂಕ್ಕೆ ಠಾಣೆಯಿಂದ ಹೊರಟು 07-00 ಪಿ.ಎಂ.ಕ್ಕೆ ಬಾತ್ಮೀ ಬಂದ ಸ್ಥಳಕೆಕ ಹೋಗಿ ಅಡತ ಮರೆಯಲ್ಲಿ ನಿಂತು ನೋಡಲು ಎಂ.ಎಸ್. ಪಾಟೀಲ್ ಇವರ ಅಡತಿಯ ಪಕ್ಕದ ಸಾರ್ವಜನಿಕ   ಖುಲ್ಲಾ ಬಯಲು ಜಾಗೆಯ 6 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಅಜರ್ುನ ತಂದೆ ಶರಣಪ್ಪ ಪೂಜಾರಿ ವಯ: 55 ವರ್ಷ ಜಾ: ಕುರುಬರ ಉ: ಅಡತದಲ್ಲಿ ಮುನೀಮ ಕೆಲಸ ಸಾ:ಮಲ್ಲಿಕಾಜರ್ುನ ದೇವಸ್ಥಾನದ ಹತ್ತಿರ, ತಾಜ ಸುಲ್ತಾನಪೂರ ತಾ:ಜಿ:ಕಲಬುರಗಿ  ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 570 ರೂ. ನಗದು ಹಣ, 20 ಇಸ್ಪೇಟ ಎಲೆಗಳು ದೊರೆತಿದ್ದು 2) ಶರಣಬಸಪ್ಪ ತಂದೆ ಚಂದ್ರಶ್ಯಾ ಚಿಂಚೋಳಿ  ವಯ: 37 ವರ್ಷ ಜಾ:ಲಿಂಗಾಯತ ಉ: ಅಡತದಲ್ಲಿ ಗುಮಾಸ್ತ ಕೆಲಸ ಸಾ:ಮನೆ ನಂ: 9-586/3, ಶೆಟ್ಟಿ ಟಾಕೀಜ್ ಹತ್ತಿರ, ವಿಶ್ವರಾಧ್ಯ ಕಾಲೂನಿ, ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 400 ರೂ. ನಗದು ಹಣ, 25 ಇಸ್ಪೇಟ ಎಲೆಗಳು ದೊರೆತಿದ್ದು 3) ಶರಣಬಸಪ್ಪ ತಂದೆ ಗಂಗಾಧರ ಡಿಗ್ಗಿ ವಯ: 35 ವರ್ಷ ಜಾ: ಲಿಂಗಾಯತ ಉ: ಅಡತದಲ್ಲಿ ಗುಮಾಸ್ತ ಸಾ: ರುದ್ರಪ್ಪ ಪಾಟೀಲರ ಮನೆಯಲ್ಲಿ ಬಾಡಿಗೆ, ಭವಾನಿ ನಗರ, ತಾಜಬಾಬಾ ದಗರ್ಾ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 350 ರೂ. ನಗದು ಹಣ ದೊರೆತಿದ್ದು 4) ಮಾಣಿಕಪ್ಪ ತಂದೆ ಮಡೆಪ್ಪ ಕೊಡ್ಲಿ ವಯ: 53 ವರ್ಷ ಜಾ:ಲಿಂಗಾಯತ ಉ: ಅಡತದಲ್ಲಿ ಮುನೀಮ ಸಾ: ಬಸವರಾಜ ಬಾಳಿ ರವರ ಮನೆಯಲ್ಲಿ ಬಾಡಿಗೆ, ಮುನೀಮ ಸಂಘ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 450 ರೂ. ನಗದು ಹಣ ದೊರೆತಿದ್ದು 5) ಮಹಾಂತೇಶ ತಂದೆ ಚಂದ್ರಶೇಖರ ತರನಳ್ಳಿ ವಯ: 43ವರ್ಷ ಜಾ: ಲಿಂಗಾಯತ ಉ: ಅಡತದಲ್ಲಿ ಮುನೀಮ ಕೆಲಸ ಸಾ: ಮನೆ ನಂ: 8-849, ಲೋಹಾರ ಗಲ್ಲಿ, ಮಹಾದೇವ ನಗರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 250 ರೂ. ನಗದು ಹಣ ದೊರೆತಿದ್ದು 6. ಸಿದ್ದಣ್ಣ ತಂದೆ ವಿಠಪ್ಪ  ವಯ:  63 ವರ್ಷ ಜಾ: ಪ.ಜಾತಿ ಉ: ಒಕ್ಕಲುತನ ಸಾ: ಶಹಾ ಬಜಾರ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನ ಅಂಗ ಶೋಧನೆ ಮಾಡಲಾಗಿ ಸದರಿಯವನ ಹತ್ತಿರ ರೂ. 500 ದೊರೆತಿದ್ದು ಮತ್ತು ಸ್ಥಳದಲ್ಲಿ ನಗದು ಹಣ 260 ರೂಪಾಯಿ, 7 ಎಲೆಗಳು ಹೀಗೆ ಒಟ್ಟು ಹಣ 2780 ರೂ. ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ 07-15 ಪಿ.ಎಂ.ದಿಂದ 08-15 ಪಿ.ಎಂ.ದ ವರೆಗೆ ಸ್ಥಳದಲ್ಲಿದ್ದ ಪ್ರಖರವಾದ ಬೀದಿ ಮರ್ಕ್ಯೂರಿ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿದ ಮುದ್ದೇಮಾಲಿಗೆ ಪಂಚರು ಸಹಿಮಾಡಿದ ಚೀಟಿ ಅಂಟಿಸಿ ಕೇಸಿನ ಸಾಕ್ಷಿ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ 09-00 ಪಿ.ಎಂ.ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸುತ್ತಿದ್ದು ಸದರಿಯವರ ವಿರುಧ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಆದೇಶದಂತೆ ಠಾಣೆ ಗುನ್ನೆ ನಂ. 136/2015 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 26/08/2015 ರಂದು 2030 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ  ಕಸ್ತೂರಿಬಾಯಿ ಗಂಡ ಪ್ರಭು ಬೆನಕನ ವ|| 60 ವರ್ಷ, ಜಾ|| ಹೊಲೆಯ,|| ಮನೆಕೆಲಸ, ಸಾ|| ಯಳಸಂಗಿ ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನಗೂ ಮತ್ತು ನಮ್ಮ ಬಾಜು ಮನೆಯವರಾದ ಬಸವರಾಜ ತಂದೆ ಭೂತಾಳಿ ಮದಗುಣಕಿ ಇವರಿಗೂ ಸರ್ಕಾರಿ ಮನೆಯ ಜಾಗೆಯ ಸಂಭಂಧ 4-5 ದಿವಸಗಳಿಂದ ತಕರಾರು ನಡೆಯುತ್ತಿದ್ದು ದಿನಾಂಕ 26/08/2015 ರಂದು ಮಧ್ಯಾಹ್ನ 0300 ಗಂಟೆಗೆ ನಾನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನಿಂತಾಗ ಬಸವರಾಜ ಇತನು ಏ ರಂಡಿ ನಮ್ಮ ಮನೆಯ ಜಾಗಾ ಇನ್ನು ನಿಮ್ಮ ಮನೆಯ ಹದ್ದಿಯೊಳಗೆ ಬರತಾದ ಸುಮ್ಮನೆ ಬಿಟ್ಟುಕೊಟ್ಟರೆ ನಿನಗೆ ಜೀವಂತ ಇಡತೀನಿ ಇಲ್ಲಂದರ ಕೊಡಲಿಯಿಂದ ಹೊಡೆದು ಖಲಾಸ ಮಾಡುತ್ತೀನಿ ರಂಡಿ ಅಂತಾ ಚೀರಾಡುತ್ತಿದ್ದಾಗ ಆತನ ಹೆಂಡತಿಯಾದ ನಾಗಮ್ಮಾ ಗಂಡ ಬಸವರಾಜ ಇವಳು ಬಂದು ಏ ರಂಡಿ ನಿನಗೆ ಬಹಳ ಸೊಕ್ಕು ಬಂದಾಗ ಅಂತ ಬೈದು ಕೈಯಿಂದ ಮುಂದೆ ಹೋಗದಂತೆ ತಡೆದು ಕೈಯಿಂದ ಬೆನ್ನ ಮೇಲೆ ಹೊಡೆದಳು ಬಸವರಾಜ ತಾಯಿಯಾದ ಸುಭದ್ರವ್ವ ಗಂಡ ಭೂತಾಳಿ ಮತ್ತು ಜಗಮ್ಮ ಗಂಡ ದತ್ತಪ್ಪ ಈಶ್ವರನ ಇವರು ಬಂದವರೆ ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿರುತ್ತಾರೆ, ಪ್ರಭು ತಂದೆ ದತ್ತಪ್ಪ ಈಶ್ವರನ ಇವನು ಈ ರಂಡಿಗೆ ಬಿಡಬೇಡರಿ ಅಂತ ಬೆಯ್ಯುತ್ತಿದ್ದಾಗ ಅಮೋಘಸಿದ್ದ ತಂದೆ ಧರ್ಮಣ್ಣ ಮಾಂಗ ಮತ್ತು ಶರಣಬಸಪ್ಪ ತಂದೆ ಬಾಬು ಚಂಡಕೆ ಇವರು ನೋಡಿ ಬಿಡಿಸಿರುತ್ತಾರೆ. ನನಗೆ ಜಗಳದಲ್ಲಿ ಹೇಳಿಕೊಳ್ಳುವಂತಹ ಗಾಯಗಳಾಗಿರುವದಿಲ್ಲ ಮತ್ತು ಯಾವುದೆ ದವಾಖಾನೆ ಉಪಚಾರ ಅಗತ್ಯವಿರುವದಿಲ್ಲ, ಕಾರಣ ಆಪಾದಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಿನಂತಿ ಅಂತ ಕೊಟ್ಟ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
«±Àé«zÁå®AiÀÄ oÁuÉAiÀÄ :  «±Àé«zÁå®AiÀÄ ¥ÉưøÀ oÁuÉAiÀÄ ªÁå¦ÛAiÀÄ°è ¢£ÁAPÀ: 20/01/2015 gÀAzÀÄ ¨É¼ÀV£À 0900 UÀAmÉUÉ ¸ÀĪÀiÁjUÉ w®PÀ£ÀUÀgÀ PÁæ¸ï ºÀwÛgÀ ¤AvÀ M§â ºÉtÄÚ ªÀÄUÀ¼À PÉÆgÀ½AzÀ 30 UÁæA §AUÁgÀ ªÀÄAUÀ¼À ¸ÀÆvÀæ M§â ¨ÉÊPÀ ¸ÀªÁgÀ PÀ¹zÀÄPÉÆAqÀÄ Nr ºÉÆÃVzÀÄÝ EgÀÄvÀÛzÉ. ¢£ÁAPÀ: 02/05/2015 gÀAzÀÄ gÁwæ 8:30 UÀAmÉAiÀÄ ¸ÀĪÀiÁjUÉ «.n.AiÀÄÄ PÁ¯ÉÃd »AzÀÄUÀqÉ EgÀĪÀ lªÀgÀ ºÀwÛgÀ gÉÆÃr£À ªÉÄÃ¯É ¥Àæ±ÁAvÀ £ÀUÀgÀ(©) PÀ®§ÄgÀV ºÀwÛgÀ M§â ºÉtÄÚ ªÀÄUÀ¼ÀÄ ªÁQAUÀ ªÀiÁqÀĪÁUÀ M§â ¨ÉÊPÀ ¸ÀªÁgÀ ºÉtÄÚ ªÀÄUÀ¼À PÉÆgÀ½AzÀ 45 UÁæA §AUÁgÀ ªÀÄAUÀ¼À ¸ÀÆvÀæ PÀ¹zÀÄPÉÆAqÀÄ Nr ºÉÆVzÀÄÝ EgÀÄvÀÛzÉ. ºÁUÀÆ EzÉ wAUÀ¼À°è NA £ÀUÀgÀ §qÁªÀuÉAiÀÄ CgÀ«AzÀ D±ÀæªÀÄzÀ ºÀwÛgÀ CAzÁdÄ 8:00 ¦.JªÀÄ ¸ÀĪÀiÁjUÉ ºÉtÄÚªÀÄUÀ¼ÀÄ £ÀqÉzÀÄPÉÆAqÀÄ §gÀĪÁUÀ ¸ÀzÀj ºÉtÄÚ ªÀÄUÀ¼À PÉÆgÀ¼À°èAiÀÄ ªÀÄAUÀ¼À ¸ÀÆvÀæ zÉÆÃZÀ®Ä ºÉÆÃzÁUÀ CªÀ¼ÀÄ vÀ£Àß JgÀqÀÄ PÉÊUÀ¼ÀÄ PÉÆgÀ½UÉ »rzÀÄPÉÆArzÀÄÝ ªÀÄAUÀ¼À ¸ÀÆvÀæ PÀ¹AiÀÄ®Ä DVgÀĪÀ¢®è F PÀÄjvÀÄ «±Àé«zÁå®AiÀÄ ¥ÉưøÀ oÁuÉ ºÁUÀÆ JªÀiï.© £ÀUÀgÀ ¥ÉưøÀ oÁuÉAiÀÄ°è ¥ÀæPÀgÀtUÀ¼ÀÄ zÁR¯ÁVzÀÄÝ EgÀÄvÀÛªÉ. ¸ÀzÀj ¥ÀæPÀgÀtUÀ½UÉ ¸ÀA§A¢ü¹zÀAvÉ ªÀiÁ£Àå ²æÃ.C«ÄvÀ ¹AUï J¸ï.¦ ¸ÁºÉç PÀ®§gÀÄV, ªÀiÁ£Àå ²æÃ.dAiÀÄ¥ÀæPÁ±À ºÉZÀÄѪÀj J¸ï.¦ ¸ÁºÉç PÀ®§ÄgÀV, ªÀiÁ£Àå «dAiÀÄ CAa rªÉÊJ¸ï.¦ ¸ÁºÉç UÁæªÀiÁAvÀgÀ G¥À-«¨sÁUÀ, ªÀiÁ£Àå eÉ.ºÉZï E£ÁªÀÄzÁgÀ ¹.¦.L JªÀÄ.© £ÀUÀgÀ ªÀÈvÀÛ PÀ®§ÄgÀV gÀªÀgÀ ªÀiÁUÀðzÀ±Àð£ÀzÀ ªÉÄÃgÉUÉ «±Àé«zÁå®AiÀÄ ¥ÉưøÀ oÁuÉAiÀÄ ²æÃ.f.J¸ï gÁWÀªÉÃAzÀæ ¦.J¸ï.L (PÁ.¸ÀÄ), ºÁUÀÆ C¥ÀgÁzsÀ «¨sÁUÀ ¹§âA¢AiÀĪÀgÁzÀ ¸ÀAvÉƵÀ ¹.¦.¹ 935, zÁåªÀ¥Àà ¹.¦.¹ 942, ¸ÀįÁÛ£À ¹.¦.¹ 958, ªÀÄ°èPÁdÄð£À ¹.¦.¹ 825 gÀªÀgÀÄ DgÉÆæüvÀ£ÁzÀ ¸Á©ÃgÀ@SÁeÁ¥Á±Á vÀAzÉ WÀ¤«ÄAiÀiÁ ªÀAiÀÄ: 20, eÁw: ªÀÄĹèA, G: UÉÆAr PÉ®¸À, ¸Á: UÀr vÁAqÀÆgÀ ¸ÉÖõÀ£À gÉÆÃqÀ vÁAqÀÆgÀ vÁ:f: vÁAqÀÆgÀ DAzÀæ¥ÀæzÉñÀ FvÀ£À£ÀÄß ªÀ±ÀPÉÌ vÉUÉzÀÄPÉÆAqÀÄ DgÉÆævÀ¤AzÀ 30 UÁæA ºÁUÀÆ 45 UÁæA £À MlÄÖ 75 UÁæA §AUÁgÀzÀ ªÀÄAUÀ¼À ¸ÀÆvÀæ C:Q: 1,87,500/- ¨É¯É¨Á¼ÀĪÀ ªÀÄAUÀ¼À ¸ÀÆvÀæ, ºÁUÀÆ C¥ÀgÁzsÀ ªÀiÁqÀ®Ä G¥ÀAiÉÆÃV¹zÀ ªÉÆÃlgÀ ¸ÉÊPÀ® C:Q: 30,000/- »ÃUÉ MlÄÖ 2,17,500 ¨É¯É¨Á¼ÀĪÀ ªÀiÁ®£ÀÄß d¥ÀÛ ¥Àr¹PÉÆArzÀÄÝ EgÀÄvÀÛzÉ.

ಜೇವರ್ಗಿ ಠಾಣೆ : ದಿನಾಂಕ 26.08.2015 ರಂದು 15:00 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 26.08.2015 ರಂದು ಮುಂಜಾನೆ 10:45 ಗಂಟೆಗೆ ಅಲ್ಲಿಗೆನ ಹೋಲದ ಹತ್ತಿರ ಆಂದೋಳ ಬಿರಾಳ ರಸ್ತೆಯ ಸಮೀಪ ಶಿವಲಿಂಗಪ್ಪ ತಂದೆ ಕಲ್ಯಾಣಪ್ಪ ಜಳಂದರ ವಯಾ|| 32 ವರ್ಷ ಸಾ|| ಆಂದೋಲಾ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ಇಹೆಚ್‌‌7729 ನೇದ್ದನ್ನು ಚಲಾಯಿಸಿಕೊಂಡು ಆಂದೋಲದಿಂದ ತನ್ನ ಹೋಲದ ಕಡೆಗೆ ರೋಡಿನ ಸೈಡಿನಿಂದ ಹೋಗುತ್ತಿದ್ದಾಗ ಅದೆ ಸಮಯಕ್ಕೆ ಬಿರಾಳ ಕಡೆಯಿಂದ ಕ್ರೂಜರ್ ಜೀಪ್ ನಂ ಎಪಿ27ಎಕ್ಸ್‌8880 ನೇದ್ದರ ಚಾಲಕನು ತನ್ನ ಜೀಪ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಶಿವಲಿಂಗಪ್ಪನ ಮೋಟಾರು ಸೈಕಲ್‌ಗೆ ಎದುರಾಗಿ ಡಿಕ್ಕಿ ಪಡಿಸಿ ಶಿವಲಿಂಗಪ್ಪನಿಗೆ ಭಾರಿ ಗಾಯಪಡಿಸಿ ತನ್ನ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ನಂತರ ಶಿವಲಿಂಗಪ್ಪನಿಗೆ ಉಪಚಾರ ಕುರಿತು ಕಲಬುರಗಿಗೆ ಅಂಬ್ಯೂಲೇನ್ಸ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ರಸ್ತೆಯ ಮಧ್ಯದಲ್ಲಿಯೆ ಮಧ್ಯಾಹ್ನ 12:15 ಗಂಟೆಗೆ ಮೃತಪಟ್ಟಿದ್ದು ಕಾರಣ ಸದರಿ ಜೀಪ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 231/15 ಕಲಂ 279. 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.