ಜೇವರ್ಗಿ ಠಾಣೆ : ದಿನಾಂಕ:
29.08.2015 ರಂದು 21:35
ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು
ಸಾರಾಂಶವೆನೆಂದರೆ “ ದಿನಾಂಕ
28.08.2015 ರಂದು ಸಾಯಂಕಾಲ 06:00 ಗಂಟೆಗೆ ಕಟ್ಟಿ ಸಂಗಾವಿ ಗ್ರಾಮದ ನಿಂಗಯ್ಯ ಮುತ್ಯಾನ ಗುಡಿಯ ಹತ್ತಿರ ಆರೋಪಿತರೆಲ್ಲರು
ಕೂಡಿಕೊಂಡು ಬಂದು ನನ್ನ ಅಣ್ಣನ ಹೆಂಡತಿ ರತ್ನಮ್ಮ ಇವಳ ಸಂಗಡ ಮಲ್ಲಪ್ಪ ಹೆಳೂರ ಈತನು ಸಲುಗೆಯಿಂದ
ಮಾತನಾಡಿದ ವಿಷಯ ನಮಗೆ ಕೇಳಿರುತ್ತಿ ಅಂತಾ ಆರೋಪಿತರು ವೈಮನಸ್ಸು ಮಾಡಿಕೊಂಡು ನನಗೆ ಮತ್ತು ನನ್ನ
ಹೆಂಡತಿ ತುಳಜಾಬಾಯಿಗೆ ಹಾಗು ತಾಯಿ ಕಮಲಾಬಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನಗೆ ಕಲ್ಲಿನಿಂದ ಹೊಡೆ ಬಡೆ ಮಾಡಿ
ನನ್ನ ಹೆಂಡತಿಗೆ ಮತ್ತು ತಾಯಿಗೆ ಕೈ ಹಿಡಿದು ಜಗ್ಗಾಡಿ ಮಾನ ಭಂಗ ಮಾಡಿ ಜಾತಿ ಎತ್ತಿ
ಬೈದಿದ್ದುಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು” ಅಂತ ಇತ್ಯಾದಿ ವಗೈರೆ
ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಆರೋಪಿತರ ಹೆಸರು, ವಿಳಾಸ : 1. ಮಲ್ಲಪ್ಪ ತಂದೆ ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ, 2) ಯಲ್ಲಪ್ಪ ತಂದೆ
ಭೀಮರಾಯ ಜಾ|”| ಹೇಳವರ ಸಾ|| ಕಟ್ಟಿ ಸಂಗಾವಿ, 3) ಪಾಪಣ್ಣ ತಂದೆ
ಭೀಮರಯಾ ಜಾ|| ಹೇಳವರ ಸಾ|| ಕಟ್ಟಿ ಸಂಗಾವಿ, 4) ಹಣಮಂತ ತಂದೆ
ಭೀಮರಾಯ ಜಾ|| ಹೆಳವರ ಸಾ|| ಕಟ್ಟಿ ಸಂಗಾವಿ, 5) ಭೀಮರಾಯ ತಂದೆ
ಯಲ್ಲಪ್ಪ ಜಾ|| ಹೆಳವರ ಸಾ|| ಕಟ್ಟಿ ಸಂಘಾವಿ .
ಅಶೋಕ ನಗರ ಠಾಣೆ : ದಿನಾಂಕ 30/08/2015 ರಂದು 10:00 ಎಎಮ್
ಕ್ಕೆ ಫಿರ್ಯಾದಿ ನರಸಿಮಲು ತಂದೆ ನರಸಯ್ಯಾ ಕಾವಲೆ ಸಾ: ಅನಂತಪೂರ ಪೋಸ್ಟ ರಿಬ್ಬನಪಲ್ಲಿ ತಾ: ಸೇಡಂ
ಜಿ: ಕಲಬುರಗಿ ಇವರು ಕನ್ನಡದಲ್ಲಿ ಬರೆದ ಅರ್ಜಿ ಹಾಜರು ಪಡೆಸಿದ್ದು ತನಗೆ ಪವನಕುಮಾರ ಅಂತಾ 17
ವರ್ಷದ ಮಗನಿದ್ದು ನನ್ನ ಮಗ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಸೇಡಂದಲ್ಲಿಯೇ ವಿದ್ಯಾಬ್ಯಾಸ
ಮಾಡಿ ಮುಂದಿನ ವಿದ್ಯಾಬ್ಯಾಸಕ್ಕಾಗಿ ಕಲಬುರಗಿಯ ಸರ್ವಜ್ಞ ಕಾಲೇಜಕ್ಕೆ ನನ್ನ ಮಗ ಪಿಯುಸಿಯ ಪ್ರಥಮ
ವರ್ಷ ಪಾಸಾಗಿದ್ದು 2015ನೇ ಸಾಲಿನಲ್ಲಿ ದ್ವೀತಿಯ ವಿದ್ಯಾಬ್ಯಾಸಕ್ಕಾಗಿ ಸರ್ವಜ್ಞ ಶಾಲೆಯಲ್ಲಿ
ಮುಂದುವರೆಸಿದ್ದು ನನ್ನ ಮಗನು ವಾಸಕ್ಕಾಗಿ ಅಲ್ಲಿಯೇ ಶಾಲೆಯ ಹತ್ತಿರದ ಸಾಯಿ ಮಂದಿರದ ಹತ್ತಿರ
ಚಂದಪ್ಪಾ ಎಂಬುವರ ಮನೆಯಲ್ಲಿ ಭಾಡಿಗೆ ರೂಮ ಮಾಡಿ ಇಟ್ಟಿದ್ದು ಆಗಾಗೆ ರೂಮಿಗೆ ಬಂದು ಹೋಗುತ್ತಿದ್ದು ಅದೆ. ಹೀಗಿದ್ದು ದಿನಾಂಕ 27/08/2015 ರಂದು ನಾನು
ಸಾಯಂಕಾಲ 7:30 ಗಂಟೆಗೆ ಕಲಬುರಗಿಯ ನಮ್ಮ ಬಾಡಿಗೆ ಮನೆಗೆ ಬಂದು ನೋಡಲಾಗಿ ನನ್ನ ಮಗ ಪವನಕುಮಾರ
ಮನೆಯಲ್ಲಿ ಇದ್ದಿರುವದಿಲ್ಲಾ ಮನೆಗೆ ಕೀಲಿ ಹಾಕಿದ್ದು ನಂತರ ನಾನು ಕಾಲೇಜಕ್ಕೆ ಹೋಗಿ
ವಿಚಾರಿಸಿದ್ದು ಇಂದು ಮುಂಜಾನೆ ಕಾಲೇಜದಲ್ಲಿ ಪ್ರಿನ್ಸಿಪಲರು ಗೈರುಹಾಜರಾದ ಬಗ್ಗೆ ಕೇಳಿದ್ದಕ್ಕೆ
ಆತನ ಕ್ಲಾಸಿಗೆ ಹಾಜರಾಗದೇ ಎಲ್ಲಿಯೋ ಹೋಗಿರುತ್ತಾನೆ ಅಂತಾ ಆತನ ಗೆಳೆಯರಾದ ಸಚೀನ ಮತ್ತು
ವಿಶ್ವಜ್ಯೋತಿ ತಿಳಿಸಿರುತ್ತಾರೆ ನಾನು ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು ನಂತರ ಬೀಗರ
ಹತ್ತಿರ ಎಲ್ಲಾ ಗ್ರಾಮಗಳಲ್ಲಿ ವಿಚಾರಿಸಲಾಗಿ ನನ್ನ ಮಗ ಸಿಕ್ಕಿರುವದಿಲ್ಲಾ ನನ್ನ ಮಗನಿಗೆ ಕನ್ನಡ, ತೆಲಗೂ, ಹಿಂದಿ ಮಾತನಾಡಲು ಬರುತ್ತದೆ ತೆಳ್ಳನೆ ಮೈಕಟ್ಟು, ಗೋದಿ ಮೈಬಣ್ಣ, ಹಣೆಯ ಮೇಲೆ ಸುಟ್ಟಗಾಯ ಹೋಗುವಾಗ ಅವನ
ಹತ್ತಿರ ಮೊಬಾಯಿಲ ಇದ್ದು ಸಿಮ್ ನಂ. 7676076441 ಅಂತಾ ಇದ್ದು ನನ್ನ ಮಗನಿಗೆ ಯಾರೋ
ತೆಗೆದುಕೊಂಡು ಹೋಗಿರುತ್ತಾರೋ ತಾನೇ ಹೋಗಿದ್ದಾನೆ ಗೊತ್ತಿಲ್ಲಾ ಸಂಶಯ ಬರುತ್ತದೆ. ಮಗನಿಗೆ
ಪತ್ತೆಹಚ್ಚಿಕೊಡಿಸಬೇಕು ಅಂತಾ ಇತ್ಯಾದಿ ದೂರು ಇರುತ್ತದೆ. ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಸ್ಟೇಷನ್ ಬಜಾರ ಠಾಣೆ : ದಿನಾಂಕ.30.08.2015
ರಂದು 12.00 ಗಂಟೆಗೆ ಶ್ರೀ ಗೋಪಾಲ ತಂದೆ ಪಾಂಡು ಚವ್ಹಾಣ ಸಾ|| ಖಣದಾಳ ತಾ|| & ಜಿ|| ಕಲಬುರಗಿ
ರವರು ಠಾಣೆಗೆ ಹಾಜರಾಗಿ ಲಿಖೀತ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ. ದಿನಾಂಕ. 04.08.2015 ರಂದು 7.00 ಪಿ.ಎಂಕ್ಕೆ ತನ್ನ ಹಿರೋ ಹೊಂಡಾ ಫ್ಯಾಶನ್ ಪ್ರೋ ಮೊಟಾರ್ ಸೈಕಲ ನಂ. KA-32-Y-7819 ಚಾರ್ಸಿ ನಂ. MBLHA10EWBHG02582, ಇಂಜಿನ್ ನಂ. HA10EDBHF42280 ಅಕಿ|| 35,000/- ರೂ ನೆದ್ದು ರೈಲ್ವೆ ಸ್ಟೇಷನ ಹತ್ತಿರದ ಜನತಾ ಹೊಟೇಲ
ಎದುರುಗಡೆ ನಿಲ್ಲುಗಡೆ ಮಾಡಿ ರೈಲ್ವೆ
ಸ್ಟೇಷನದಲ್ಲಿ ಹೋಗಿ 7.30
ಪಿ.ಎಂಕ್ಕೆ ಮರಳಿ ಬಂದು ನೋಡಿವಷ್ಟರಲ್ಲಿ ಮೊಟಾರ ಸೈಕಲ
ಯಾರೋ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಲ್ಲಿಯವರೆಗೆ
ಎಲ್ಲಾ ಕಡೆ ಹುಡುಕಾಡಿದರು ಸಹ ಸಿಕ್ಕಿರುವುದಿಲ್ಲ
ಅಂತಾ ವಗೈರೆ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ಸ್ಟೇಷನ್ ಬಜಾರ ಠಾಣೆ : ದಿನಾಂಕ. 30.08.2015 ರಂದು 1.30 ಪಿ.ಎಂಕ್ಕೆ ಶ್ರೀ ಗುರಣ್ಣಾ ಹೆಚ್.ಸಿ 373 ಬ್ರಹ್ಮಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಒಂದು ಲಿಖಿತ
ಫಿರ್ಯಾಧಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಾನು ಸುಮಾರು 3 ವರ್ಷಗಳಿಂದ ವಾರಂಟ ಕರ್ತವ್ಯ ನಿರ್ವಹಿಸುತ್ತಿದ್ದೆನೆ.
ಹೀಗಿದ್ದು ನಿನ್ನೆ ದಿನಾಂಕ 29/08/2015 ರಂದು ಮಧ್ಯಾಹ್ನ 03:00 ಪಿ.ಎಮ್ ಸುಮಾರಿಗೆ ಎಸ್.ಸಿ ನಂ.221/14 ನೇದ್ದರಲ್ಲಿ ಆರೋಪಿ ಹೀರಾ ಈತನ ಜಾಮೀನುದಾರನಾದ ಶಿವರಾಜ ತಂದೆ
ಅಣವೀರಪ್ಪಾ ಕುಮಸಿ ಸಾಃ ಭೀಮಳ್ಳಿ ಈತನಿಗೆ ಮಾನ್ಯ 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ
ಹಾಜರು ಪಡಿಸುವ ಕುರಿತು ಕರೆದುಕೊಂಡು ಬಂದು ಕೊರ್ಟ ಆವರಣದಲ್ಲಿ ನಿಲ್ಲಿಸಿ ನಾನು 4 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹೋಗಿ ನಿಂತಾಗ ಸದರಿ
ಎಸ್.ಸಿ ನಂಬರ ನೇದ್ದರಲ್ಲಿ ಆರೋಪಿತನಾದ ಸತೀಶ @ ಬಾಂಬೆ ಸತ್ಯಾ ಈತನಿಗು ಮಾನ್ಯ
ನ್ಯಾಯಾಲಯದಲ್ಲಿ ಹಾಜರು ಪಡಿಸುವ ಕುರಿತು ಡಿ.ಎ.ಆರ್ ಪೊಲೀಸರು ಕರೆದುಕೊಂಡು
ಬಂದಿದ್ದರು. ಆಗ ಸದರಿ ಸತೀಶ @ ಬಾಂಬೆ ಸತ್ಯಾ ಈತನಿಗೆ ನಾನು ಹೀರಾ
ಎನ್ನುವವನು ಯಾರು ಅಂತಾ ಕೇಳಿದಾಗ ಸತೀಶ ಈತನು ‘ಏ ಭೋಸಡಿ ಮಗನೆ ನನಗೆ ಏನು ಕೇಳುತ್ತಿ’ ಅಂತಾ ಹೊಡೆಯಲು ಬಂದಾಗ ಬೆಂಗಾವಲು
ಕರ್ತವ್ಯಕ್ಕೆ ಬಂದ ಸಿದ್ದಣ್ಣ ಎ.ಹೆಚ್.ಸಿ-77, ಅಶೋಕ ಎ.ಹೆಚ್.ಸಿ-102, ಶ್ರೀಮಂತ ಎ.ಪಿ.ಸಿ-09, ಗುರುನಾಥ ಎ.ಪಿ.ಸಿ-12 ಇವರು ಸದರಿಯವನಿಗೆ ಹಿಡಿದುಕೊಂಡರು. ಆಗ ಬಾಂಬೆ ಸತ್ಯಾ
ಇವನು ‘ನೀನು ಹೀರಾ ಈತನ ಬಗ್ಗೆ ನನಗೆ ಇನ್ನೊಮ್ಮೆ ಕೇಳಿದರೆ ನಿನಗೆ ಜೀವ
ಸಹಿತ ಬಿಡುವುದಿಲ್ಲಾ’ ಅಂತಾ ಜೀವದ ಬೆದರಿಕೆ ಹಾಕಿ ನನ್ನ ಕರ್ತವ್ಯಕ್ಕೆ ಅಡೆತಡೆ ಮಾಡಿದನು.
ನಾನು ವಿಚಾರ ಮಾಡಿ ಇಂದು ತಡವಾಗಿ ಅರ್ಜಿ ಸಲ್ಲಿಸುತ್ತಿದ್ದೆನೆ. ಕಾರಣ ಸತೀಶ @ ಬಾಂಬೆ ಸತ್ಯಾ ಈತನ ಮೇಲೆ ಕಾನೂರು ಪ್ರಕಾರ
ಕ್ರಮ ಕೈಗೊಳ್ಳಬೇಕೆಂದು ಅಂತಾ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
No comments:
Post a Comment