ಚೌಕ ಠಾಣೆ : ದಿನಾಂಕ 31/08/2015 ರಂದು 7 ಪಿ.ಎಂ, ಕ್ಕೆ ಶ್ರೀ ಶಿವಾನಂದ ಕಟ್ಟಿ ತಂದೆ
ಸಿದ್ದಲಿಂಗಪ್ಪ ಕಟ್ಟಿ ವಯಃ 70 ವರ್ಷ ಜಾಃ
ಗಂಗಾಮಾತ(ಕಬ್ಬೇರ) ಉಃ ನಿವೃತ ಜಿಲ್ಲಾ ಮತ್ತು
ಸತ್ರ ನ್ಯಾಯಾಧೀಶರು ಸಾಃ ಮನೆ ನಂ 9-587/24/109 ಅಕ್ಕ ಮಹಾದೇವಿ ಗುಡಿ ಹತ್ತಿರ ಗಂಧಿಗುಡಿ ಲೇಔಟ
ಕಲಬುರಗಿ ತಮ್ಮಲ್ಲಿ ವಿನಂತಿಸಿ ಕೋಳ್ಳುವದೆನೆಂದರೆ ನಾನು ನಿವೃತ ನ್ಯಾಯಾಧೀಶನಾಗಿದ್ದು ಸದ್ಯ
ನಿವೃತಿ ಜೀವನ ನಡೆಸುತ್ತಿದೆನೆ. ಹೀಗಿದ್ದು ನಾನು ಕುಟುಂಬದವರು ನಿಶ್ಚಯಿಸಿದಂತೆ ನಮ್ಮ ಮನೆಯ
ದೇವರಾದ ಗಜೇಂದ್ರಗಡದ ಕಾಲಕಾಳಕೇಶ್ವರ ದೇವರ ಹರಕೆ ಇರುವದರಿಂದ ನಾವು ದೇವರ ದರ್ಶನ ಕುರಿತು ನಾನು
ಮತ್ತು ನಮ್ಮ ಕುಟುಂಬದ ಸದಸ್ಯರೆಲ್ಲರು ಸೇರಿಕೊಂಡು
ದಿನಾಂಕಃ 28.08.2015 ರಂದು ಬೆಳಿಗ್ಗೆ 9.15 ಗಂಟೆಗೆ ನಮ್ಮ ಮನೆಯ ಮುಖ್ಯ ದ್ವಾರಕ್ಕೆ
ಇನ್‌ರ ಲಾಕ (ಸೆಂಟ್ರ್‌ಲಾಕ) ಹಾಕಿಕೊಂಡು ದೇವರ ದರ್ಶನ ಕುರಿತು ಗಜೇಂದ್ರಗಡಕ್ಕೆ ಹೋಗಿದ್ದು ಮನೆಯಲ್ಲಿ ಯಾರು ಇರಲ್ಲಿಲ. ದೇವರ ದರ್ಶನ ಮಾಡಿಕೊಂಡು
ಮರಳಿ ದಿನಾಂಕಃ 29.08.2015 ರಂದು ರಾತ್ರಿ 10.10 ಪಿಎಮ್‌ಕ್ಕೆ ಮನೆಗೆ ಮರಳಿ ಬಂದು ನೋಡಿದ್ದಾಗ
ನಾವು ಹಾಕಿರುವ ಮುಖ್ಯ ದ್ವಾರದ ಬಾಗಿಲಗೆ ಸೆಂಟರ್ ಲಾಕ ತೆಗೆದಾಗ ಅದು ತೆಗೆಯಲ್ಲಿಲ.ಒಳಗಿನಿಂದ
ಕೊಂಡಿ ಹಾಕಿದಂತೆ ಕಂಡುಬಂದಿದ್ದು ಇದರಿಂದ
ಗಾಬರಿಯಾಗಿ ನಾವು ನಮ್ಮ ಮನೆಯ ಬಾಲಕೋನಿ ನೋಡಲು ಬಾಗಿಲು ತೆರೆದಂತೆ ಕಂಡು ಬಂದಿದ್ದು ನಾನು ನಮ್ಮ
ಕಾರಿನ ಡ್ರೈವನಾದ ಸದಾಂ ಇತನಿಗೆ ಬಾಲಕೋನಿ
ಮುಖಾಂತರ ಮೇಲೆ ಏರಿಸಿ ಆತನು ಒಳಗೆ ಬಂದು ಬಾಗಿಲದ
ಲಾಕ ತೆಗೆದಿದ್ದು ನಂತರ ನಾವೇಲ್ಲರೂ ಒಳಗಡೆ ಬಂದು ನೋಡಿದ್ದಾಗ ನಮ್ಮ ಮನೆಯ ಮೇಲಿನ ವೆಂಟಲೆಟರ್‌ದ ಗ್ಲಾಸ್ ಒಡೆದು ಮನೆಯ ಒಳಗಡೆ
ಎಲ್ಲಾ ಕಡೆ ಗ್ಲಾಸಿನ ಒಡೆದ ಚೂರುಗಳು
ಬಿದ್ದಿದ್ದು ಮತ್ತು ಮನೆಯಲ್ಲಿದ್ದ ಸಾಮಾನಗಳು ಸಹ
ಚಲಾಪಿಲ್ಲೇ ಆಗಿ ಬಿದಿದ್ದು ಆಗ ನಾವು ಗಾಬರಿಗೊಂಡು ಎಲ್ಲಾ ರೋಂಗಳಲ್ಲಿ ಒಳಗಡೆ ಹೋಗಿ ನೋಡಿದಾಗ
ನಮ್ಮ ಮಗ ಸಿದ್ದಣ ಕಟ್ಟಿ ಮತ್ತು ಸೋಸೆ ಯಶೋದಾ ಕಟ್ಟಿ ಇವರು ಮಲಗುವ ಬೆಡ್‌ರೋಂ ಕೋಣೆಯಲ್ಲಿಯ
ಅಲಮಾರಿಯು ಸಹ ತೆಗದಿದ್ದು ಸಾಮಾನಗಳು ಚಲ್ಲಾಪಿಲ್ಲೇಯಾಗಿ ಬಿದಿದ್ದು ಯಾರೋ ಕಳ್ಳರು ನಾವು ಮನೆಯಲ್ಲಿ
ಇರದ ವೇಳೆಯಲ್ಲಿ ನಮ್ಮ ಮನೆಯ ವೆಂಟಿಲೆಟ್‌ರ ಗ್ಲಾಸ್ ಒಡೆದು ವೆಂಟಿಲೆಟ್‌ರ ಮುಖಾಂತರ ಒಳಗಡೆ
ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರಿ ಚಾವಿಯನ್ನು ತೆಗೆದುಕೊಂಡು ಅಲಮಾರಿಯನ್ನು ತೆರೆದು
ಅಲಮಾರಿಯಲ್ಲಿಟ್ಟಿದ 1) ಬಂಗಾರದ ಪಾಟ್ಲಿ 60 ಗ್ರಾಂ ಅಃಕಿಃ 84,000/-, 2) ಬಂಗಾರದ ಲಾಕೇಟ್ 06 ಗ್ರಾಂ ಅಃಕಿಃ 9000/-, 3) ಕರೀಮಣಿಯ ತಾಳಿ 2 ಗ್ರಾಂ ಅಃಕಿಃ 2000/- 4) ಬಂಗಾರದ ಸಣ್ಣ ಗುಂಡುಗಳು 5 ಗ್ರಾಂ
ಅಃಕಿಃ 7000/-, 5) ಬಂಗಾರದ ಉಂಗೂರ
ಹರಲಿನದ್ದು 3 ಗ್ರಾಂ ಅಃಕಿಃ 3000/-,
6) ಬಂಗಾರದ
ಉಂಗೂರ 4 ಗ್ರಾಂ ಅಃಕಿಃ 4000/-,
7)
ಬೆಳ್ಳಿಯ ಮಕ್ಕಳ ಕಾಲುಗಡಗ್ 50ಗ್ರಾಂ ಅಃಕಿಃ
2500/-, 8) ಬೆಳ್ಳಿಯ ಕಾಲು
ಚೈನ್ 50 ಗ್ರಾಂ ಅಃಕಿಃ2500/-,
9) ಬೆಳ್ಳಿಯ
ಕಾಲು ಚೈನ್ 60 ಗ್ರಾಂ ಅಃಕಿಃ 3000/-, 10) ಬೆಳ್ಳಿಯ ಕಾಲೂಂಗರ 20 ಗ್ರಾಂ
ಅಃಕಿಃ 1000/-, ಬೆಳ್ಳಿಯ ಕಾಲೂಂಗರ 21
ಗ್ರಾಂ ಅಃಕಿಃ 1000/- ಹೀಗೇ ಒಟ್ಟು 80 ಗ್ರಾಂ ಬಂಗರಾದ ಆಭರನಗಳು ಅಃಕಿಃ 1,09,000/-, ಮತ್ತು 201 ಗ್ರಾಂ
ಬೆಳ್ಳಿಯ ಸಾಮಾನಗಳು ಅಃಕಿಃ 10,000/- ಹೀಗೆ ಒಟ್ಟು 1,19,000 ಬೆಲೆಯುಳ್ಳ ಸಾಮಾನಗಳು ಅಲಮಾರಿಯಲ್ಲಿಟ್ಟಿದ್ದು ಅವು ಇರಲ್ಲಿಲ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ದಿನಾಂಕಃ
28.08.2015 ರ 9.15 ಎಎಮ್ ದಿಂದ ದಿನಾಂಕಃ 29.08.2015 ರ ರಾತ್ರಿ 10.10 ಪಿಎಮ್‌ದ ಮದ್ಯದ ಅವದಿಯಲ್ಲಿ ನಾವು ದೇವರ
ದರ್ಶನಕ್ಕೆ ಹೋದ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ
ವೆಂಟಿಲೆಟ್ಟರ ಖಿಡಕಿಯ ಗ್ಲಾಸ್ ಒಡೆದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿರುವ ಬಂಗಾರದ ಮತ್ತು
ಬೆಳ್ಳಿಯ ಆಭರಣಗಳು ಕಳ್ಳತನ ಮಾಡಿಕೊಂಡು
ಹೋಗಿದ್ದು ಈ ಬಗ್ಗೆ ನನ್ನ ಸೋಸೆ ಮತ್ತು ಮೊಮ್ಮಗಳಿಗೆ ಮೈಯಲ್ಲಿ ಆರಾಮ
ಇಲ್ಲದೆ ಇರುವದರಿಂದ ಅವರಿಗೆ ಆಸ್ಪತ್ರೆಯಲ್ಲಿ ದಾಖಲ ಮಾಡಿ ಉಪಚಾರ ಪಡಿಸಿ ಅವರುನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಮನೆಗೆ ತಂದು ಎಲ್ಲಾ
ಸಾಮಾನಗಳನ್ನು ನನ್ನ ಸೋಸೆಯಿಂದ ಪರಿಶೀಲನೆ ಮಾಡಿಸಿ
ಇಂದು ಠಾಣೆಗೆ ಬಂದು ಫಿರ್ಯಾದಿ ಕೊಡಲು
ತಡವಾಗಿರುತ್ತದೆ. ಕಾರಣ ಕಳ್ಳುವಾದ ನನ್ನ
ಬಂಗಾರದ ಮತ್ತು ಬೆಳ್ಳಿಯ ಸಾಮಾನಗಳುನ್ನು
ಪತ್ತೆ ಮಾಡಿ ಕಳ್ಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ
ಜರಗಿಸಲು ವಿನಂತಿ ಅದೆ. ಅಂತಾ ವಗೈರೆ ಪಿರ್ಯಾದಿಯ ಸಾರಾಂಶದ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 31/08/15 ರಂದು ರಾತ್ರಿ 9.00 ಗಂಟೆಗೆ
ಪಿರ್ಯಾದಿ ಶ್ರೀಮತಿ ನರಸುಬಾಯಿ ಗಂಡ ಸಿದ್ರಾಮಪ್ಪ ದಾಮಜಿಗರ ವ||58 ಸಾ|| ಪ್ಲಾಟ ನಂ 40 ಉದನೂರ ಲೇಔಟ ಕಲಬುರಗಿರವರು ಠಾಣೆಗೆ ಹಾಜರಾಗಿ
ಒಂದು ಲೀಖಿತ ದೂರು ಸಲ್ಲಿಸಿದ್ದು ಅದರ ಸಾರಂಶವೆನಂದರೆ ಇಂದು ದಿ||31/08/15 ರಂದು ಸಾಯಂಕಾಲ 7.30 ಗಂಟೆಯ
ಸೂಮಾರಿಗೆ ನಾನು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ದರ್ಶನ ಮಾಡುತ್ತಿರುವಾಗ
ಅಲ್ಲಿ ಭಕ್ತಾಧಿಗಳು ಬಹಳಷ್ಟು ಇದ್ದು ನನ್ನ ಕೊರಳಲ್ಲಿದ್ದ 8 ಗ್ರಾಂ ಬಂಗಾರದ ಮಂಗಳ ಸೂತ್ರ ಅದರ ಅ||ಕಿ|| 24000 ರೂ ಬೆಲೆಬಾಳುವುದು ಯಾರೊ ಕಳವು ಮಾಡಿಕೊಂಡು ಹೋಗಿದ್ದು
ಪತ್ತೆ ಹಚ್ಚಿಕೊಡಬೇಕು ಅಂತಾ ಪಿರ್ಯಾದಿಯ ದೂರು ಇದ್ದು ದೂರಿನ ಸಾರಂಶದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment