POLICE BHAVAN KALABURAGI

POLICE BHAVAN KALABURAGI

08 October 2013

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 07-10-2013 ರಂದು ರಾತ್ರಿ 1130 ಗಂಟೆಗೆ ಎಮ್. 80 ಕ್ರಾಸ್ ಹತ್ತಿರ ಇರುವ ಜಗದಂಬಾ ಹೋಟೆಲ ಎದರುಗಡೆ ರೋಡಿನ ಮೇಲೆ ರಾಹುಲ ತಂದೆ ಚನ್ನಪ್ಪಾ ಇತನು ತನ್ನ ಅಟೋರಿಕ್ಷಾ ನಂ. ಕೆ.ಎ 32 ಬಿ 7950 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಲೆ ಕಟ್ ಹೊಡೆದಿದ್ದರಿಂದ ಅಟೋರಿಕ್ಷಾದಲ್ಲಿ ಕುಳಿತ ಶ್ರೀ ಮಹಿಬೂಬ ತಂದೆ ಇಸ್ಮಾಯಿಲಸಾಬ  ಸಾಃ ಖುರೇಶಿ ಪಂಕ್ಷನ್ ಹಾಲ್ ಹತ್ತಿರ ಮಿಜಗುರಿ ನಯಾ ಮೊಹಲ್ಲಾ ಗುಲಬರ್ಗಾ ರವರಿಗ ಕೆಳಗೆ ಬಿದ್ದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :

ಫರತಾಬಾದ ಠಾಣೆ : ಶ್ರೀಮತಿ ಕಾಂತಮ್ಮ ಗಂಡ ಭೀಮಾಶಂಕರ ಯಾದಗಿರಕರ ರವರು ಸಾ: ಚಿಂಚೀಳಿತಾಲ್ಲುಕಿನ ನರನಾಳ ಗ್ರಾಮವಿದ್ದು ನನಗೆ ನಮ್ಮ ತಂದೆ ತಾಯಿವರು 7 ವರ್ಷಗಳ ಹಿಂದೆ ಚಿತಾಪೂರ ತಾಲ್ಲೂಕಿನ ಶರಣಪ್ಪ ಯಾದಗಿರಕರ ಇವರ ಮಗನಾದ ಬೀಮಾಶಂಕರ ಇತನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಈಗ ನಾವು 4 ತಿಂಗಳುಗಳ ಹಿಂದೆ ನಾವೆಲ್ಲರು ಫರಹತಾಬಾಧ ಗ್ರಾಮಕ್ಕೆ  ಮಾಡಿ ಉಣಲು ಬಂದು ವಾಸವಾಗಿರುತ್ತೆವೆ.. ನನ್ನ ಗಂಡನು ಗುಲಬರ್ಗಾದಲ್ಲಿ ಖಾಸಗಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ದಿನಾಂಕ: 06-10-2013 ರಂದು ಮದ್ಯಾನ್ಹ 3:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳು ಹಾಗೂ ನಮ್ಮ ಅತ್ತೆ ಎಲ್ಲರೂ ಕೂಡಿಕೊಂಡು ತಿಳೂಗುಳ ಗ್ರಾಮದಲ್ಲಿರುವ ನಮ್ಮ ಬಿಗರ ಮನೆಯಲ್ಲಿ ಕುರಿಗೆ ಪೂಜೆ ಇರುವದರಿಂದ ಹೊಗುತ್ತಿರುವಾಗ ನನ್ನ ಗಂಡನು ಫರಹತಾಬಾದ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ನನ್ನ ಗಂಡನು ಸಿಕ್ಕಿದ್ದು, ಅವನು ಕುಡಿದ ನಿಶೆಯಲ್ಲಿ ಇದ್ದನು. ನಾವು ತಿಳಗೂಳ ಗ್ರಾಮಕ್ಕೆ ಹೊರಟಿದ್ದಿವೆ ಅಂತಾ ಹೇಳಿ ಹೋಗಿದ್ದು ಇರುತ್ತದೆ. ನಂತರ ದಿನಾಂಕ:07-10-2013 ರಂದು 6-30 ಪಿಎಮ್‌ಕ್ಕೆ ನಾವು ತಿಳಗೂಳ ಗ್ರಾಮದ ನಮ್ಮ ಬಿಗರ ಮನೆಯಲ್ಲಿದ್ದಾಗ ನಮ್ಮ ಮನೆಯ ಮಾಲಿಕಳಾದ ಪಾರ್ವತಿ ಇವಳು ನನಗೆ ಪೋನ್‌ ಮಾಡಿ ತಿಳಿಸಿದ್ದೆನಂದರೆ ನಿಮ್ಮ ಮನೆಯ ಬಾಗಿಲು ತೆರೆದಿದ್ದು ಒಳಗಡೆಯಲ್ಲಿ ನಾಯಿ ಹೊಗಿ ಬರುತ್ತಿದ್ದರಿಂದ ನಾಯಿಯನ್ನು ಹೊಡೆದು ಮನೆಯಾಗ ಯಾರಿದ್ದರಿ ಅಂತಾ ಕರೆದು ಕೇಳಲಾಗಿ ಏನು ಹೇಳದೆ ಇದ್ದರಿಂದ ನಾನು ಒಳಗಡೆ ಹೊಗಿ ನೋಡಲಾಗಿ ನಿನ್ನ ಗಂಡನು ಮನೆಯಲ್ಲಿನ ಜಂತಿಗೆ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನೀನು ಬೇಗನೆ ಬಾ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಅತ್ತೆ ಹಾಗೂ ನಮ್ಮ ಬೀಗರು ಗಾಬರಿಗೊಂಡು ರಾತ್ರಿ ಬಂದು ನೋಡಲಾಗಿ ಸದರಿ ನನ್ನ ಗಂಡನು ಮನೆಯಲ್ಲಿನ ಜಂತಿಗೆ ಹಗ್ಗದಿಂದ ನೆಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.