POLICE BHAVAN KALABURAGI

POLICE BHAVAN KALABURAGI

23 July 2014

Gulbarga District Press Note

ಪತ್ರಿಕಾ ಪ್ರಕಟಣೆ

            ದಿನಾಂಕ 21-07-2014 ರಂದು ಗುಲಬರ್ಗಾ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಂಬಂಧ ಸಭೆ ಕೈಕೊಂಡಿದ್ದು, ಈ ಸಭೆಗೆ ಜಿಲ್ಲೆಯ ಎಲ್ಲಾ ಡಿ.ಎಸ್.ಪಿ/ಸಿಪಿಐ ಮತ್ತು ಪಿ.ಐ ರವರು ಹಾಜರಿದ್ದು, ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಗುಲಬರ್ಗಾ ಜಿಲ್ಲೆಯಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಂಬಂಧ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಬಡಾವಣೆಗಳಲ್ಲಿ ಮೊಹಲ್ಲಾ ಮೀಟಿಂಗ್ ಸಭೆ ನಡೆಸುವದಲ್ಲದೆ, ಸ್ಥಾಯಿ ಆದೇಶ ಸಂಖ್ಯೆ 960 ರ ಪ್ರಕಾರ ಜನ ಸಂಪರ್ಕ ಸಭೆ ಕೈಗೊಂಡು, ಸದರಿ ಸಭೆಗೆ ಸಮಾಜದ ಪ್ರಮುಖ ಗಣ್ಯರನ್ನು ಹಾಗು ಸರಹದ್ದಿನಲ್ಲಿ ಬರುವಂತಹ ಶಾಲಾ ಕಾಲೇಜು ಮುಖ್ಯಸ್ಥರನ್ನು ಮತ್ತು ಜನಪರ ಸಂಘ ಸಂಸ್ಥೆಗಳ ಪ್ರಮುಖರನ್ನು ಬರ ಮಾಡಿಕೊಂಡು, ಈ ಗಣ್ಯರೊಂದಿಗೆ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಂಬಂಧ ಅವರಿಗೆ ಸಲಹೆ ಸೂಚನೆಗಳನ್ನು ನೀಡುವದಲ್ಲದೇ, ಇಂತಹ ಪ್ರಕರಣಗಳು ಜರುಗದಂತೆ ಮುಂಜಾಗೃತಾ ಕ್ರಮ ವಹಿಸಲು ಎಲ್ಲಾ ಅಧಿಕಾರಿಗಳಿಗೆ ತಿಳಿಸಿದೆ. ಮತ್ತು ಮೊಹಲ್ಲಾ ಮೀಟಿಂಗ ಸಭೆಯಲ್ಲಿ ಈ ತರಹದ ಘಟನೆಗಳ ಬಗ್ಗೆ ಸಾರ್ವಜನಿಕರಿಗೆ ಎನಾದರು ಪೂರ್ವ ಮಾಹಿತಿ ಇದ್ದಲ್ಲಿ ಸಹಾಯವಾಣಿ ನಂ 1098 ಅಥವಾ 9480803509 ನೇದ್ದಕ್ಕೆ ಹಾಗು ಸಂಬಂಧ ಪಟ್ಟ ಪೊಲೀಸ್ ಠಾಣಾಧಿಕಾರಿಗಳಿಗೆ ಕರೆ ಮಾಡಲು ಸೂಚಿಸಲಾಗಿದೆ.
ಮಕ್ಕಳ ಮತ್ತು ಮಹಿಳೆಯರ ಮೇಲೆ ಅತ್ಯಾಚಾರದಂತಹ ಘಟನೆಗಳನ್ನು ತಡೆಗಟ್ಟಲು ಠಾಣಾ ಸರಹದ್ದಿನಲ್ಲಿ ಬರುವ ಶಾಲಾ ಕಾಲೇಜುಗಳಿಗೆ ಸಂಬಂಧಿಸಿದ ಠಾಣಾಧಿಕಾರಿಗಳು ಭೇಟಿ ನೀಡಿ, ಅಲ್ಲಿದ್ದ ಶಾಲಾ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಇಂತಹ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ವಹಿಸಲು ಸೂಚಿಸಿದೆ. ಅಲ್ಲದೇ ಶಾಲಾ ಶಿಕ್ಷಕರು ಹಾಗು ಮುಖ್ಯಸ್ಥರೊಂದಿಗೆ ಚರ್ಚಿಸಿ ತಮ್ಮ ತಮ್ಮ ಶಾಲಾ, ಕಾಲೇಜುಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವದಲ್ಲದೆ ಶಾಲೆಗಳಿಗೆ ಸೆಕ್ಯೂರಿಟಿ ಗಾರ್ಡಗಳನ್ನು ನೇಮಿಸಿಕೊಳ್ಳಲು ಸೂಚಿಸುವಂತೆ ತಿಳಿಸಿದೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರನ್ನು ಹಾಗು ಶಾಲೆಯ ಇತರೆ ಸಿಬ್ಬಂದಿಯನ್ನು ಶಾಲಾ ವಾಹನದ ಚಾಲಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ಮಾಹಿತಿ ಪಡೆದುಕೊಂಡು ನೇಮಿಸಿಕೊಳ್ಳುವಂತೆ ಸೂಚಿಸಿದೆ. ಅಲ್ಲದೇ ನಗರ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಲೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸದೇ ಇದ್ದಲ್ಲಿ ಅಂತಹ ಶಾಲೆಯ ಪರವಾನಿಗೆ ರದ್ದುಪಡಿಸುವ ಬಗ್ಗೆ ಸಂಬಂಧಪಟ್ಟ ಡಿಡಿಪಿಐ ರವರೊಂದಿಗೆ ಚರ್ಚಿಸಲು ಸೂಚಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ. ಆಯಾ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳಗಳಾದ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗು ಪ್ರಮುಖ ಮಾರುಕಟ್ಟೆಗಳಲ್ಲಿ ಮಫ್ತಿಯಲ್ಲಿ ಮಹಿಳಾ ಮತ್ತು ಪುರುಷ ಸಿಬ್ಬಂದಿಯನ್ನು ನೇಮಿಸುವಂತೆ ಸೂಚಿಸಲಾಗಿದೆ.. ಮತ್ತು ಅಧಿಕಾರಿಗಳು ಕೂಡಾ ಮೇಲಿಂದ ಮೇಲೆ ಗಸ್ತು, ಪೆಟ್ರೋಲಿಂಗ್ ಮಾಡಲು ಸೂಚಿಸಲಾಯಿತು.
   ಕೆ.ಎಸ್.ಆರ್.ಟಿ.ಸಿ ಮುಖ್ಯಸ್ಥರನ್ನು ಭೇಟಿಯಾಗಿ ಬಸ್ಸಗಳಲ್ಲಿ ಮೊಬೈಲನಲ್ಲಿ ಅಶ್ಲೀಲ ಹಾಡುಗಳು ಹಚ್ಚುತ್ತಿರುವ ಬಗ್ಗೆ ಬಸ್ಸಚಾಲಕ ಹಾಗು ನಿರ್ವಾಹಕರಿಗೆ ಇದರ ಬಗ್ಗೆ ಪರಿಶೀಲಿಸಿ, ಅಶ್ಲೀಲ ಹಾಡುಗಳನ್ನು ಹಚ್ಚದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಬಸ್ಸಚಾಲಕ ಹಾಗು ನಿರ್ವಾಹಕರಿಗೆ  ಸೂಚಿಸಲು ತಿಳಿಸಲಾಯಿತು. ಹೀಗೆ ಹೆಣ್ಣುಮಕ್ಕಳ ಮೇಲೆ ಜರುಗುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲೆಯ ಎಲ್ಲಾ ಪೊಲೀಸ ಅಧಿಕಾರಿಗಳಿಗೆ ಹಾಗು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಈ ಮೇಲ್ಕಂಡ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶ್ರೀ ಅಮಿತ್ ಸಿಂಗ್ ಐ.ಪಿ.ಎಸ್. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಸೂಚಿಸಿದ್ದಾರೆ.  

Gulbarga District Reported Crimes

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ರೇವು ರಾಠೋಡ ಸಾ: ಇಟಗಾ(ಕೆ) ತಾಂಡಾ ಇವರ ಮಗನಾದ ರಾಜು ಇವನ ಹೆಂಡತಿ ಕವಿತಾಳು ತನ್ನ ಮೈಯಲ್ಲಿ ಎಲ್ಲಮ್ಮಾ ದೇವಿ ಬರುತ್ತಿದ್ದಾಳೆ ಅಂತಾ ಹೇಳಿ ತನ್ನ ಗಂಡನಿಗೆ ಸುನಿತಾ ಎಂಬುವವಳೊಂದಿಗೆ ಇನ್ನೊಂದು ಮದುವೆ ಮಾಡಿರುತ್ತಾಳೆ. ಈಗ ಕೇಲವು ದಿವಸಗಳಿಂದ ಸುನಿತಾಳಿಗೆ ನಿನು ಮನೆಯಲ್ಲಿ ಇರಬೇಡ ಅಂತಾ ಜಗಳ ಮಾಡುತ್ತಾ ಬಂದಿರುತ್ತಾಳೆ. ಅಲ್ಲದೆ ತನ್ನ ಗಂಡನಿಗೆ ಸುನಿತಾಳಿಗೆ ಮನೆಯಿಂದ ಹೋರಗೆ ಹಾಕದಿದ್ದರೆ ನಾನು ನನ್ನ ಮಕ್ಕಳೊಂದಿಗೆ ಮನೆ ಬಿಟ್ಟು ಹೊಗುತ್ತೆನೆ ಹಾಗೂ ಮಕ್ಕಳಿಗೆ ಜೀವಂತ ಇಡುವದಿಲ್ಲ ಅವರಿಗೆ ಸಾಯಿಸಿ ನಾನು ಸಾಯುತ್ತೆನೆ ಅಂತಾ ಹೆಳುತ್ತಿದ್ದಳು. ದಿನಾಂಕ: 22/07/2014 ರಂದು 10:30 ಗಂಟೆಯ ಸುಮಾರಿಗೆ ನನ್ನ ಸೊಸೆಯಾದ ಕವಿತಾ ಇವಳು ನನ್ನ ಮೊಮ್ಮಕ್ಕಳಾದ ಪರಶುರಾಮ ಹಾಗೂ ಪ್ರೀತೆಶ ಇವರನ್ನು ಸಂಗಡ ಕರೆದುಕೊಂಡು ತಾಂಡಾದ ಹೋರಗೆ ಇರುವ ಅಪ್ಪಾರಾವ ಅಡಕೆ ಇವರ ಹೋಲದ ಕಡೆ ಹೋರಟಳು ಅವಳ ಹಿಂದೆ ನಾನು ಕೂಡಾ ಕಟ್ಟಿಗೆ ತರಲೆಂದು ಹೋರಟೇನು ಅಪ್ಪಾರಾವ ಅಡಕೆ ಇವರ ಹೋಲದ ಬಂದಾರಿಯ ಮೇಲೆ ಕಟ್ಟೆಗೆ ಆಯಿದುಕೊಂಡು ಮರಳಿ ಮನೆಗೆ ಹೋಗುವಾಗ ಸೊಸೆ ಕವಿತಾ ಇವಳು ತನ್ನ ಮಕ್ಕಳಾದ ಪರಶುರಾಮ ವ: 6 ವರ್ಷ , ಪ್ರೀತೆಶ ವ: 3 ವರ್ಷ ಇವರೊಂದಿಗೆ ಅಪ್ಪಾರಾವ ಅಡಕೆ ಇವರ ಹೊಲದಲ್ಲಿದ ಬಾವಿಯ ಪಕ್ಕದಲ್ಲಿದ ಬದನೆಯ ತೋಟದಲ್ಲಿ ಬದನಿಕಾಯಿ ಕಡಿಯುತ್ತಿದ್ದಳು ಆಗ ಅವಳಿಗೆ ನಾನು ಮನೆಗೆ ನಿನ್ನ ಮಕ್ಕಳೊಂದಿಗೆ ನಿನು ನಡಿ ಅಂತಾ ಅಂದಾಗ ಅವಳು ನಾನು ಬರುತ್ತೆನೆ ನಿನು ಮುಂದೆ ನಡಿ ಅಂತಾ ನನಗೆ ಅಂದಳು ಆಗ ನಾನು ಕಟ್ಟಿಗೆ ತಗೆದುಕೊಂಡು ಮನೆಗೆ ಹೋಗಿ ಇಟ್ಟ ನಂತರ ಯಾಕೊ ಅವಳು ನನ್ನ ಜೋತೆಗೆ ಮನೆಗೆ ಬರದೆ ಇದ್ದಾಗ ನನಗೆ ಸಂಶಯ ಬಂದು ನಾನು ತಿರುಗಿ ಬಂದು ಅಪ್ಪಾರಾವ ಅಡಕೆ ಇವರ ತೊಟದಲ್ಲಿದ ಬದನೆಯ ಫಡದಲ್ಲಿ ಅವಳು ಕಾಣಲಿಲ್ಲಾ ಆಗ ನಾನು ಪಕ್ಕಕ್ಕೆ ಇದ್ದ ಬಾವಿಯ ದಂಡೆಯ ಮೇಲೆ ಬಂದು ಇಣುಕಿ ನೋಡಲಾಗಿ ಸೋಸೆ ಕವಿತಾ ಇವಳು ಬಾವಿಯ ನೀರಿನಲ್ಲಿ ಮುಳುಗಿ ಎಳುತ್ತಿದ್ದಳು ಆಗ ನಾನು ಗಾಬರಿಗೊಂಡು ಚೀರಾಡುತ್ತಿದ್ದಾಗ ಅಕ್ಕ ಪಕ್ಕದಲ್ಲಿ ಕೆಲಸ ಮಾಡುವವರು ಬಂದು ಮೇಲೆ ಎತ್ತಿ ನೋಡಲಾಗಿ ಕವಿತಾ ಇವಳು ನೇರು ಕುಡಿದು ಬೇಹೋಸ ಆಗಿದ್ದು ನನ್ನ ಎರಡು ಮೊಮ್ಮಕ್ಕಳು ಮೃತಪಟ್ಟಿರುತ್ತರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀಮತಿ ಎಂ,ಎಸಕೆ ಮಿಲ ಗುಲಬರ್ಗಾ ರವರನ್ನು ಆಳಂದ ಪಟ್ಟಣದ ಇದ್ರೀಸ್ ತಂದೆ ಶರೀಪ್ ಅನ್ಸಾರಿ ಎಂಬುವನು  ದಿನಾಂಕ 8-3-2014 ರಂದು ಗುಲಬರ್ಗಾ ನಗರದ ನನ್ನ ಅಣ್ಣ .ಅಬ್ದುಲಮನ್ನಾನ್  ಮನೆಯಲ್ಲಿ ಇಲ್ಲದ ಸಮಯದಲ್ಲಿ 11-12 ಗಂಟೆಯ ಸುಮಾರಿಗೆ 4-5 ಜನ ಗೂಂಡಾಗಳೊಂದಿಗೆ ಬಂದು ಬಲವಂತವಾಗಿ ನನ್ನನ್ನು ಅಪಹರಿಸಿಕೊಂಡು ಹೋಗಿ ಯಾರೂ ಒಬ್ಬ ಖಾಜಿಯನ್ನು ಕರೆಯಿಸಿ ಜಬರದಸ್ತಯಿಂದ  ಮದುವೆ ಮಾಡಿಕೊಡು  ನನ್ನನ್ನ ಆಳಂದಕ್ಕೆ ತೆಗೆದುಕೊಂಡು  ಹೋಗಿ ಅಲ್ಲಿ ಭಾರ್ ಪೇಟ  ಎಂಬಲ್ಲಿ ಇಟ್ಟು ನಿರಂತರ ಲೈಂಗಿಕ ದೌರ್ಜನ್ಯ ಮಾಡಿದ್ದರಿಂದ ಈಗ ನಾನು 1 ತಿಂಗಳ 15 ದಿನ ಗರ್ಭೀಣಿಯಾ ಗಿದ್ದೇನೆ.  ಇದ್ರಿಸ್ ಅನ್ಸಾರಿ  ನಮಾಜ್ ಓದಿಸುವ ಕೆಲಸ ಮಾಡುತ್ತಿದ್ದು, ಮದುವೆಯಾಗಿ 4 ಮಕ್ಕಳ ತಂದೆಯಾಗಿ ದ್ದಾನೆ  ಮೊದಲ ಹೆಂಡತಿ ಇದ್ದರು ನನಗೆ ಅನ್ಯಾಯ ಮಾಡಿದ್ದೇಕೆ  ಎಂದು ಕೇಳಿದ್ದಕ್ಕೆ  ಕೋಪಗೊಂಡ ಅವನು ನನಗೆ ಮನೆಯಿಂದ ಹೊರಬರದಂತೆ ಕೂಡಿ ಹಾಕಿ  ಹೊಡೆಬಡೆ ಮಾಡಿ ನನ್ನ ಅಣ್ಣ  ತಂದೆಯವರಿಗೆ ಹೇಳಿದ್ದಾಗ ಅವರಿಗೂ ಜೀವ ಭಯ ಹಾಕಿದ್ದಾನೆ.  ನಾನು ಗರ್ಭೀಣಿ  ಎಂದು ಗೊತ್ತಾದ ತಕ್ಷಣ ಮತ್ತೇ ನನ್ನನು ದೈಹಿಕ ಹಲ್ಲೆ ಮಾಡಿದ ಇದ್ರೀಸ್ ಅವನ ತಾಯಿ ಶಹನಾಜ್ ಬೇಗಂ ನೀನು ವಾಪಸ ಬರಬೇಡ  ಬಂದರೆ ಜೀವ ಸಹಿತ ಬಿಡುವುದಿಲ್ಲಾ  ನಿನ್ನ ಅಣ್ಣ ಹತ್ತಿರ ಸಾಕಷ್ಟು ಹಣವಿದೆ  ದಹೇಜ ರೂಪದಲ್ಲಿ 3 ಲಕ್ಷ ರೂಪಾಯಿ  ಬಂಗಾರ ತೆಗೆದುಕೊಂಡು ಬಾ ಎಂದು ಬೈದು ಬೆದರಿಕೆ ಹಾಕಿ ನನ್ನ ಅಣ್ಣ ಅಬ್ದುಲ ಮನ್ನಾನ್ ಮನೆ ಎದುರು  ತಂದು ಬಿಟ್ಟು ಓಡಿ ಹೋಗಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಶಮೀನಾ ಬೇಗಂ ಗಂಡ ಖಾಜಾ ಮೈನೋದ್ದಿನ ಸಾ:ಕುಮಸಿ ಇವರು ದಿನಾಂಕ:- 30-30-05-2011 ರಂದು ಸೇಡಂ ತಾಲ್ಲೂಕಿನ ಬೆಳಕಿನಳ್ಳಿ ಗ್ರಾಮದಲ್ಲಿ ಲಗ್ನವು ಖಾಜಾ ಮೈನೋದ್ದಿನ ಎಂಬುವನೊಂದಿಗೆ ಆಗಿದ್ದು ಗಲ್ನದ ಸಮಯದಲ್ಲಿ 21 ಸಾವಿರ ವರದಕ್ಷಿಣೆ 2 ತೋಲಿ ಬಂಗಾರ ಬೆಳ್ಳಿ ಮತ್ತು ಗೈಹ ಬಳಕೆಯ ಸಾಮಾನುಗಳನ್ನು ನೀಡಿದ್ದು ಲಗ್ನವಾದ ನಂತರ ಸುಮಾರು 6 ತಿಂಗಳವರೆಗೆ ಗಂಡ ಮತ್ತು ಅವರ ಮನೆಯವರು ಚೆನ್ನಾಗಿ ನೋಡಿಕೊಂಡು ನಂತರ ಸಣ್ಣ ಸಣ್ಣ ಕಾರಣಕ್ಕಾಗಿ ಬೈಯ್ಯವುದು ನಿನಗೆ ಮನೆಕೆಲಸ ಬರುವುದಿಲ್ಲಾ ಅಡಿಗೆ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ಗಂಡ ಮತ್ತು ಮಾವ ಬಾಲೇಶಹಾ ಮುಶರಥ, ಮತ್ತು ಅತ್ತೆ ರೋಶನಬೀ ಇವರು ಹೇಳುತ್ತಾ ಬಂದಿದ್ದು  ಮೌಲಾಅಲಿ ಹಾಗು ಖಾಸಿಂ ಅಲಿ ಇವರು ಸಹಾ ಅವರೊಂದಿಗೆ ಸೇರಿಕೊಂಡು ಕಿರಿಕುಳ ಕೊಡುತ್ತಾ ಬಂದಿದ್ದು ಇರುತ್ತದೆ ನನಗೆ 2 ಮಕ್ಕಳಾಗಿದ್ದು ನೀನು ಇನ್ನು ಮುಂದೆ ಮಕ್ಕಳ ನೀಡುವ ಸಾಮರ್ಥ್ಯಾ ಇರುವುದಿಲ್ಲಾ ಅಂತಾ 2013 ನೇ ಸಾಲಿನ ಅಗಷ್ಟ ತಿಂಗಳಿನಿಂದ ಕಿರುಕುಳಾ ನೀಡಿತ್ತಾ ಬಂದು ದಿನಾಂಕ:- 23-06-2014  ರಂದು ಎಲ್ಲರು ಕೂಡಿಕೊಂಡು ಫಿರ್ಯಾದಿಯ ತವರು ಮನೆ ಕುಮಸಿ ಗ್ರಾಮಕ್ಕೆ ಬಂದು ಅವಾಶ್ಚವಾಗಿ ಬೈಯ್ದು ನಮಗೇ ಇನ್ನು ಹಣ ಕೊಡಬೇಕು ಇಲ್ಲವಾದರೇ ವಿವಾಹ ವಿಚೇದನಾ ನಿಡುವುದಾಗಿ ಹೇಳುತ್ತಾ ಬಂದು ರಂಡಿ ಎಲ್ಲಿಯವರಗೆ ನೀನ್ನ ತವರು ಮನೆಯಲ್ಲಿ ಇರುತ್ತಿ ಇರು ನನಗೆ ಡೈವರ್ಸ ಕೊಡು ಇಲ್ಲಾ 1 ಲಕ್ಷ ರೂ ಕೊಡು ಅಂದರೆ ನಿನಗೆ ಕರೆದುಕೊಂಡು ಹೋಗ್ತಿನಿ ನನ್ನ ಮದುವೆದಾಗನು ಹುಂಡಾ ಬಹಳ ಕೊಟ್ಟಿಲ್ಲಾ ನಿಮ್ಮ ಅಪ್ಪ ಭೋಸಡಿ ಅಂತಾ ವರದಕ್ಷಿಣೆ ಕಿರುಕುಳ ನೀಡಿ ಕೈಗಳಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ. ರವಿಕುಮಾರ ತಂದೆ ಮಾರುತಿರಾವ ನತ್ತವಾಲೆ ಸಾ: ಜೊಳದಪಾಕಾ ತಾ: ಭಾಲ್ಕಿ ಜಿ: ಬೀದರ ಹಾ: ವ: ಪ್ಲಾಟ ನಂ 62 ಕರುಣೇಶ್ವರನಗರ ವಿನಾಯಕ ಕಾಲೋನಿ ಗುಲಬರ್ಗಾ ರವರು ಸುಮಾರು ಹದಿನೈದು ದಿನಗಳಿಂದ ಗುಲಬರ್ಗಾದ ಜೇವರ್ಗಿ ರಸ್ತೆಯಲ್ಲಿರುವ ಶ್ರೀಸಾಯಿ ಜೆಸಿಬಿ ಕಂಪನಿಯಲ್ಲಿ ಪಾರ್ಟ್ಸ ಇನ್ಚಾರ್ಜ ಆಗಿ ಕೆಲಸ ನಿರ್ವಹಿಸುತಿದ್ದು ಇದಕ್ಕು ಮುಂಚೆ ಮೇ|| ಏಶಿಯನ್ ಅರ್ಥ ಮೂವರ್ಸ ಕಂಪನಿಯಲ್ಲಿ ಕೆಲಸಮಾಡುತಿದ್ದು ಆಗ ಕಂಪನಿಯ ಹೆಸರಿನಲ್ಲಿರುವ ಬಜಾಜ ಪ್ಲಾಟಿನಾ ನಂ: ಕೆಎ- 34 ಎಸ್. 8851 ಇದನ್ನು ನ್ನನ ದಿನನಿತ್ಯದ ಕೆಲಸಕ್ಕಾಗಿ ಉಪಯೋಗಿಸಲು ನೀಡಿದ್ದು  ದಿನಾಂಕ: 12-07-2014 ರಂದು ಎಂದಿನಂತೆ ಶ್ರಿಸಾಯಿ ಜಿಸಿಬಿ ಕಂಪನಿಯಿಂದ 7:30 ಪಿಎಮ್ ಕ್ಕೆ ಕೆಸ ಮುಗಿಸಿಕೊಂಡು ಕರುಣೇಶ್ವರ ನಗರದ್ಲಲಿರುವ ಪ್ಲಾಟ ನಂ; 62 ಚಂದ್ರಲಾಂಬಾ ನಿವಾಸದ ಎದುರುಗಡೆ ನಿಲ್ಲಿಸಿ ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು ಮುಂಜಾನೆ ದಿನಾಂಕ: 13-07-2014 ರಂದು ಬೆಳಿಗ್ಗೆ 6:00 ಎಎಮ್ ಕ್ಕೆ ನೋಡಲಾಗಿ ನನ್ನ ಕಂಪನಿ ಮೋಟರ ಸೈಕಲ್ ನಂ; ಕೆಎ- 34 ಎಸ್- 8851 ಇಂಜಿನ ನಂ: DUMBRA36564 ಚೆಸ್ಸಿ ನಂ; MD2DDDZZZ RWA53278  ಅ.ಕಿ. 20000/- ರೂ. ಮೊಟರ ಸೈಕಲ್  ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀಮಂತ ತಂದೆ ಬಸಣ್ಣ ತಳವಾರ ಸಾ: ಮನೆ ನಂ. 11-1041/17 ಎಂ.ಎಸ್.ಕೆ ಮಿಲ್ ಜಿ.ಡಿ.ಎ ಲೇಔಟ ಗುಲಬರ್ಗಾ ರವರು  ದಿನಾಂಕ. 14-07-2014 ರಂದು ಮದ್ಯಾಹ್ನ 2 ಗಂಟೆ ಸಮಯಕ್ಕೆ ಮಿನಿವಿದಾನ ಸೌದದ ಹಿಂಬದಿಯ ಗೇಟ ಹತ್ತಿರ ನನ್ನ ಟಿವಿಎಸ್‌ ಎಕ್ಸಲ್ ಸುಪರ್ ಹೆವಿ ಡ್ಯೂಟಿ ನಂ. ಕೆಎ-32-ಆರ್‌-7785 ಚಾ.ನಂ.MD621BD1162H491524,  ಇ.ನಂ. OD1H61779804 ಅ.ಕಿ|| 10,000/- ರೂ ನೆದ್ದು ನಿಲುಗಡೆ ಮಾಡಿ ನನ್ನ ಕೆಲಸದ ನಿಮಿತ್ಯ ವಿದಾನಸೌದದಲ್ಲಿ ಹೋಗಿ ನಂತರ 2-45 ಪಿ.ಎಂ ಕ್ಕೆ ಮರಳಿ ಬಂದು ನೋಡಲಾಗಿ ಸದರಿ ನನ್ನ ದ್ವಿಚಕ್ರ ವಾಹನ ಇರಲಿಲ್ಲ. ಇಲ್ಲಿಯವರೆಗೆ ಹುಡುಕಾಡಿದರು ಸಹ ನನ್ನ ದ್ವಿ ಚಕ್ರವಾಹನ ಸಿಕ್ಕಿರುವುದಿಲ್ಲ. ಕಾರಣ ಯಾರೋ ಕಳ್ಳರು ನನ್ನ ದ್ವಿ ಚಕ್ರವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ನಸೀಮಾ ಬಾನು ಗಂಡ ನಜೀರ ಅಹ್ಮದ ಇವರು ದಿನಾಂಕಃ 21/07/2014 ರಂದು ಸಂಜೆ 05:00 ಪಿ.ಎಂ. ಕ್ಕೆ ನಾನು ನನ್ನ ಮಗನಾದ ಮುಜ್ಜಂಮಿಲ್ ಇತನಿಗೆ ಪರ್ವೀನ ಬೇಗಂ ಇವಳು ಯಾವಾಗಲೂ ನನ್ನ ಮಗನಿಗೆ ಕಳ್ಳತನ ಮಾಡುತ್ತಾನೆ ಅಂತಾ ಓಣಿಯ ಎಲ್ಲ ಜನರ ಮುಂದೆ ಯಾಕೆ ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದೀರಿ ಅಂತಾ ಮನೆಗೆ ಹೋಗಿ ವಿಚಾರಿಸಿದಾಗ ಸದರಿ ಪರ್ವೀನ ಬೇಗಂ ಇವಳು ಒಮ್ಮೇಲೆ ತಮ್ಮ ಮನೆಯಿಂದ ಹೊರಗಡೆ ಬಂದು ನನಗೆ ಏ ಛಿನಾಲಿ ರಾಂಡ ಭೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮನೆಯ ಮುಂದೆ ಬಿದ್ದಿರುವ ಶಾಬಾದಿ ಫರ್ಶಿ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಜೋರಾಗಿ ಹೊಡೆದಿದ್ದರಿಂದ ನನಗೆ ಭಾರಿ ರಕ್ತಗಾಯವಾಗಿರುತ್ತದೆ. ಅಲ್ಲೇಯೆ ಇದ್ದ ಪರ್ವೀನ ಬೇಗಂ ಇವಳ ಅಣ್ಣನಾದ ಮನ್ಸೂರ ತಂದೆ ಬಾಬಾ ಮಿಯಾ ಈತನು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಹಾಗು ಪರ್ವೀನ ಬೇಗಂ ಇವಳ ತಾಯಿಯು ಕೂಡ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನಮ್ಮ ಮನೆಯ ಮುಂದಿಂದ ಹೋದರು ಕೂಡ ನಿನಗೆ ಬಿಡುವುದಿಲ್ಲಾ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.