ಪತ್ರಿಕಾ ಪ್ರಕಟಣೆ
ದಿನಾಂಕ 21-07-2014 ರಂದು
ಗುಲಬರ್ಗಾ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ
ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಂಬಂಧ ಸಭೆ ಕೈಕೊಂಡಿದ್ದು, ಈ ಸಭೆಗೆ ಜಿಲ್ಲೆಯ ಎಲ್ಲಾ ಡಿ.ಎಸ್.ಪಿ/ಸಿಪಿಐ
ಮತ್ತು ಪಿ.ಐ ರವರು ಹಾಜರಿದ್ದು, ಹಾಜರಿದ್ದ
ಎಲ್ಲಾ ಅಧಿಕಾರಿಗಳಿಗೆ ಗುಲಬರ್ಗಾ ಜಿಲ್ಲೆಯಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ
ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಂಬಂಧ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ
ಬಡಾವಣೆಗಳಲ್ಲಿ ಮೊಹಲ್ಲಾ ಮೀಟಿಂಗ್ ಸಭೆ ನಡೆಸುವದಲ್ಲದೆ, ಸ್ಥಾಯಿ ಆದೇಶ ಸಂಖ್ಯೆ 960 ರ
ಪ್ರಕಾರ ಜನ ಸಂಪರ್ಕ ಸಭೆ ಕೈಗೊಂಡು, ಸದರಿ
ಸಭೆಗೆ ಸಮಾಜದ ಪ್ರಮುಖ ಗಣ್ಯರನ್ನು ಹಾಗು ಸರಹದ್ದಿನಲ್ಲಿ ಬರುವಂತಹ ಶಾಲಾ ಕಾಲೇಜು
ಮುಖ್ಯಸ್ಥರನ್ನು ಮತ್ತು ಜನಪರ ಸಂಘ ಸಂಸ್ಥೆಗಳ ಪ್ರಮುಖರನ್ನು ಬರ ಮಾಡಿಕೊಂಡು, ಈ ಗಣ್ಯರೊಂದಿಗೆ ಹೆಣ್ಣುಮಕ್ಕಳ ಮೇಲೆ ನಡೆಯುವ
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಂಬಂಧ ಅವರಿಗೆ ಸಲಹೆ ಸೂಚನೆಗಳನ್ನು ನೀಡುವದಲ್ಲದೇ, ಇಂತಹ ಪ್ರಕರಣಗಳು ಜರುಗದಂತೆ ಮುಂಜಾಗೃತಾ ಕ್ರಮ
ವಹಿಸಲು ಎಲ್ಲಾ ಅಧಿಕಾರಿಗಳಿಗೆ ತಿಳಿಸಿದೆ. ಮತ್ತು ಮೊಹಲ್ಲಾ ಮೀಟಿಂಗ ಸಭೆಯಲ್ಲಿ ಈ ತರಹದ ಘಟನೆಗಳ
ಬಗ್ಗೆ ಸಾರ್ವಜನಿಕರಿಗೆ ಎನಾದರು ಪೂರ್ವ ಮಾಹಿತಿ ಇದ್ದಲ್ಲಿ ಸಹಾಯವಾಣಿ ನಂ 1098 ಅಥವಾ 9480803509 ನೇದ್ದಕ್ಕೆ ಹಾಗು ಸಂಬಂಧ ಪಟ್ಟ ಪೊಲೀಸ್ ಠಾಣಾಧಿಕಾರಿಗಳಿಗೆ
ಕರೆ ಮಾಡಲು ಸೂಚಿಸಲಾಗಿದೆ.
ಮಕ್ಕಳ ಮತ್ತು ಮಹಿಳೆಯರ ಮೇಲೆ
ಅತ್ಯಾಚಾರದಂತಹ ಘಟನೆಗಳನ್ನು ತಡೆಗಟ್ಟಲು ಠಾಣಾ ಸರಹದ್ದಿನಲ್ಲಿ ಬರುವ ಶಾಲಾ ಕಾಲೇಜುಗಳಿಗೆ
ಸಂಬಂಧಿಸಿದ ಠಾಣಾಧಿಕಾರಿಗಳು ಭೇಟಿ ನೀಡಿ, ಅಲ್ಲಿದ್ದ
ಶಾಲಾ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಇಂತಹ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ವಹಿಸಲು
ಸೂಚಿಸಿದೆ. ಅಲ್ಲದೇ ಶಾಲಾ ಶಿಕ್ಷಕರು ಹಾಗು ಮುಖ್ಯಸ್ಥರೊಂದಿಗೆ ಚರ್ಚಿಸಿ ತಮ್ಮ ತಮ್ಮ ಶಾಲಾ, ಕಾಲೇಜುಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವದಲ್ಲದೆ
ಶಾಲೆಗಳಿಗೆ ಸೆಕ್ಯೂರಿಟಿ ಗಾರ್ಡಗಳನ್ನು ನೇಮಿಸಿಕೊಳ್ಳಲು ಸೂಚಿಸುವಂತೆ ತಿಳಿಸಿದೆ. ಖಾಸಗಿ
ಶಾಲೆಗಳಲ್ಲಿ ಶಿಕ್ಷಕರನ್ನು ಹಾಗು ಶಾಲೆಯ ಇತರೆ ಸಿಬ್ಬಂದಿಯನ್ನು ಶಾಲಾ ವಾಹನದ ಚಾಲಕ
ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ಮಾಹಿತಿ ಪಡೆದುಕೊಂಡು ನೇಮಿಸಿಕೊಳ್ಳುವಂತೆ ಸೂಚಿಸಿದೆ.
ಅಲ್ಲದೇ ನಗರ ಮತ್ತು ತಾಲ್ಲೂಕು ಮಟ್ಟದಲ್ಲಿ ಶಾಲೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸದೇ
ಇದ್ದಲ್ಲಿ ಅಂತಹ ಶಾಲೆಯ ಪರವಾನಿಗೆ ರದ್ದುಪಡಿಸುವ ಬಗ್ಗೆ ಸಂಬಂಧಪಟ್ಟ ಡಿಡಿಪಿಐ ರವರೊಂದಿಗೆ ಚರ್ಚಿಸಲು
ಸೂಚಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ. ಆಯಾ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳಗಳಾದ
ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ
ಹಾಗು ಪ್ರಮುಖ ಮಾರುಕಟ್ಟೆಗಳಲ್ಲಿ ಮಫ್ತಿಯಲ್ಲಿ ಮಹಿಳಾ ಮತ್ತು ಪುರುಷ ಸಿಬ್ಬಂದಿಯನ್ನು
ನೇಮಿಸುವಂತೆ ಸೂಚಿಸಲಾಗಿದೆ.. ಮತ್ತು ಅಧಿಕಾರಿಗಳು ಕೂಡಾ ಮೇಲಿಂದ ಮೇಲೆ ಗಸ್ತು, ಪೆಟ್ರೋಲಿಂಗ್ ಮಾಡಲು ಸೂಚಿಸಲಾಯಿತು.
ಕೆ.ಎಸ್.ಆರ್.ಟಿ.ಸಿ ಮುಖ್ಯಸ್ಥರನ್ನು ಭೇಟಿಯಾಗಿ ಬಸ್ಸಗಳಲ್ಲಿ
ಮೊಬೈಲನಲ್ಲಿ ಅಶ್ಲೀಲ ಹಾಡುಗಳು ಹಚ್ಚುತ್ತಿರುವ ಬಗ್ಗೆ ಬಸ್ಸಚಾಲಕ ಹಾಗು ನಿರ್ವಾಹಕರಿಗೆ ಇದರ
ಬಗ್ಗೆ ಪರಿಶೀಲಿಸಿ, ಅಶ್ಲೀಲ
ಹಾಡುಗಳನ್ನು ಹಚ್ಚದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಬಸ್ಸಚಾಲಕ ಹಾಗು ನಿರ್ವಾಹಕರಿಗೆ ಸೂಚಿಸಲು ತಿಳಿಸಲಾಯಿತು. ಹೀಗೆ ಹೆಣ್ಣುಮಕ್ಕಳ ಮೇಲೆ
ಜರುಗುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲೆಯ ಎಲ್ಲಾ ಪೊಲೀಸ ಅಧಿಕಾರಿಗಳಿಗೆ ಹಾಗು
ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಈ ಮೇಲ್ಕಂಡ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ
ಶ್ರೀ ಅಮಿತ್ ಸಿಂಗ್ ಐ.ಪಿ.ಎಸ್. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಸೂಚಿಸಿದ್ದಾರೆ.
No comments:
Post a Comment