POLICE BHAVAN KALABURAGI

POLICE BHAVAN KALABURAGI

07 June 2014

Gulbarga District Reported Crimes

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಪ್ರಕಾಶ ತಂದೆ ಶಿವರಾಯ ಗೊರನಳ್ಳಿಯವರು ಸಾ|| ಬಂಬೂ ಬಜಾರ ಗುಲಬರ್ಗಾ ಇವರು ದಿನಾಂಕ 06-06-2014 ರಂದು ಬೆಳಗ್ಗೆ 6:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ಹೊಟೇಲಕ್ಕೆ ಬಂದು ವ್ಯಾಪಾರ ಮಾಡಿಕೊಂಡು ಸಾಯಂಕಾಲ 6:30 ಗಂಟೆಗೆ ಹೊಟೇಲ ಬಂದ ಮಾಡಿಕೊಂಡು ಮಾರ್ಕೆಟಕ್ಕೆ ಹೋಗಿ ತರಕಾರಿ ಖರಿದಿ ಮಾಡಿ ಅಟೋ ಸ್ಟ್ಯಾಂಡ ಹತ್ತಿರ ಬಂದೇವು ಅಟೋ ಸ್ಟ್ಯಾಂಡ ಹತ್ತಿರ ನಾಗೇಶ ದಳವಿ ಇವನು ಸೋಡಾ ವ್ಯಾಪಾರ ಮಾಡುತ್ತಿದ್ದು ನನಗೆ ನೋಡಿ ಏ ಪಕ್ಯಾ ಪಕ್ಯಾ ಅಂತಾ ಚುಡಾಯಿಸುತ್ತಿದ್ದನು. ಆಗ ನಾನು ಅವನಿಗೆ ನನ್ನ ಜೋತೆ ನನ್ನ ಹೆಂಡತಿ ಇದ್ದಾಳೆ ಸರಿಯಾಗಿ ಮಾತಾಡು ಅಂದರೆ ನನಗೆ ಏ ಭೋಸಡಿ ಮಗನೆ ನಿನಗೆ ಹೋಡೆಯುತ್ತೇನೆ ಎಂದು ಸೋಡಾ ಬಾಟಲ ತಗೆದುಕೊಂಡು ತಲೆಯ ಮೇಲೆ ಹೋಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಾಳಗಿ ಠಾಣೆ : ಶ್ರೀ ಜಾನಿಮಿಯ್ಯ ತಂದೆ ಮಹೆಬೂಬ ಸಾಬ ಸೇರಕಾ ಸಾ:ಹುಳಗೇರಾ ಇವರು ದಿನಾಂಕ 19-05-2014 ರಂದು ಬೆಳ್ಳಿಗೆ  03-00 ಗಂಟೆಯ ಸುಮಾರಿಗೆ ಹುಳಗೇರಾ ಗ್ರಾಮದ ತನ್ನ ತೋಟದಲ್ಲಿ ಕಟ್ಟಿದ ಎರಡು ಎತ್ತುಗಳು ಅಂದಾಜು ಕಿಮ್ಮತ್ತು 1,00,000 ರೂಪಾಯಿ ನೇದ್ದವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇಲ್ಲಿಯ ವರೆಗೆ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.