POLICE BHAVAN KALABURAGI

POLICE BHAVAN KALABURAGI

29 February 2012

Gulbarga Dist Reported Crimes

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಸೈಯದಾ ಪರದ ಗಂಡ ಅಬ್ದುಲ ಖದೀರ ಖದೀಫ ಉ: ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಸಾಮಜೀದ ಚೌಕ ಶಹಾಬಾದ ರವರು ನನ್ನ ಮಗನಾದ ಅಬ್ದುಲ ರಹಿಮಾನ ಇತನ ಮೊಬೈಲ (9686966304) ನೇದ್ದು ಕಳ್ಳತನವಾಗಿದ್ದು ಸದರಿ ಮೊಬೈಲ ಅಲ್ಲಾಭಕ್ಷನ ಮಗನಾದ ನವಾಜ ಇತನು ತೆಗೆದುಕೊಂಡಿರಬಹುದು ಅಂತಾ ತಿಳಿದು ನನ್ನ ಗಂಡನಾದ ಅಬ್ದುಲ ಖದೀರ ಇತನು ಮಜೀದ ಚೌಕ ಹತ್ತಿರ ಇರುವ ಜಾಮಿಯಾ ಮಜೀದ ಹತ್ತಿರ ಕೇಳಲು ಹೋದಾಗ ಅಲ್ಲಾಭಕ್ಷ ಇತನು ನನ್ನ ಮಗ ಮೊಬೈಲ ಕಳ್ಳತನ ಮಾಡಿರುವದಿಲ್ಲಾ ಆತನ ಮೇಲೆ ಸುಳ್ಳು ಆರೋಪ ಮಾಡುತ್ತಿಯಾ ಮಗನೆ ಅಂತಾ ಬೈದು ಕೈಮುಷ್ಟಿ ಮಾಡಿ ಜೊರಾಗಿ ಎಡ ಕಪಾಳ ಮೇಲೆ ಮೆಲಕಿಗೆ ಮತ್ತು ಎದೆಯ ಮೇಲೆ ಒದ್ದಿದ್ದು ಅಷ್ಟರಲ್ಲಿ ಅಲ್ಲಾಭಕ್ಷನ ಮಗನಾದ ನವಾಜ ಇತನು ನಾನು ಮೊಬೈಲ ತೆಗೆದುಕೊಂಡಿರುವದಿಲ್ಲಾ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿ ಮಗನೆ ಅಂಥಾ ಅವ್ಯಾಚ ಬೈದಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ: 323 324 504 506 307 ಸಂ; 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಧ್ಯದ ಭಾಟಲಿಗಳು ವಶಪಡಿಸಿಕೊಂಡ ಬಗ್ಗೆ:
ಆಳಂದ ಪೊಲೀಸ ಠಾಣೆ:
ಶ್ರೀ ವಿಜಯಕುಮಾರ ಪಿ.ಎಸ್.ಐ ಸಾಹೇಬರು ಆಳಂದ ಪೊಲೀಸ ಠಾಣೆಯ ರವರು ಖಜೂರಿ ಗ್ರಾಮದ ಹರಿಜನ್ ಓಣಿಯ ಹತ್ತಿರ ಪಾನ್ ಡಬ್ಬದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಸರಾಯಿ [ಮದ್ಯದ] ಬಾಟಲಗಳನಿಟ್ಟು ಅನಧೀಕೃತ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿವರಾದ ವಸಂತ ಹೆಚ್.ಟಿ ಪ್ರೋಬೊಸನರಿ ಪಿ.ಎಸ್.ಐ, ಸಿದ್ದರಾಮ, ರಾಜಶೇಖರ ಸಿಪಿಸಿ ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನಿಜವಿದ್ದಿದ್ದು, ಆತನ ಹೆಸರು ಮಲ್ಲಿನಾಥ ತಂದೆ ನಾಗಿಂದ್ರಪ್ಪ ಕುಂಬಾರ ಸಾಖಜೂರಿ ಆತನ ಪಾನ ಶಾಪದಲ್ಲಿ ಮಧ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು 2500 ರೂ ಕಿಮತ್ತಿನ ಸರಾಯಿ [ಮದ್ಯದ] ಬಾಟಲಿಗಳುನ್ನು ಜಪ್ತಿ ಪಡಿಸಿಕೊಂಡು ಆತನ ವಿರುದ್ದ ಠಾಣೆ ಗುನ್ನೆ ನಂ: 44/2012 ಕಲಂ 32.34 ಕೆ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಸರಗಳ್ಳರ ಬಂಧನ, ಸುಮಾರು 2.5 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು, ಎರಡು ಅಟೋ ರೀಕ್ಷಾಗಳು ವಶ :
ಖಚಿತ ಮಾಹಿತಿ ಆಧಾರ ಅನ್ವಯ ಇತ್ತಿಚಿಗೆ ಗುಲಬರ್ಗಾ ನಗರದ ಗುಬ್ಬಿ ಕಾಲೋನಿ ಹಾಗೂ ಶಹಾಬಾದ ರಿಂಗ್ ರೋಡ ಹತ್ತಿರದ ಓವರ ಬ್ರಿಡ್ಜ ಹತ್ತಿರ ಜರುಗಿದ ಸರಗಳ್ಳತನ ಪ್ರಕರಣಗಳ ಪತ್ತೆಗಾಗಿ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಸರಗಳ್ಳತನ ಮಾಡಿದ ೫ ಜನ ಸರಗಳ್ಳರನ್ನು ಬಂಧಿಸಿರುತ್ತಾರೆ. ಸದರಿಯವರಿಂದ ಬಂಗಾರದ ಆಭರಣಗಳು, ಸರಗಳ್ಳತನ ಮಾಡಲು ಬಳಸುತ್ತಿದ್ದ ಎರಡು ಅಟೋ ರೀಕ್ಷಾಗಳು, ಮೊಬಾಯಿಲ್ ಪೊನಗಳು, ಬಂಗಾರದ ಮಂಗಳ ಸೂತ್ರ, ನಗದು ಹಣ ವಗೈರೆ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಫರಾರಿ ಇರುವ ಇನ್ನೋಬ್ಬ ಆರೊಪಿ ಕಲೀಂ ಸಾ// ಸೊನಿಯಾ ಗಾಂಧಿ ಕಾಲೋನಿ ಗುಲಬರ್ಗಾ ಇತನ ಪತ್ತೆಗಾಗಿ ವ್ಯಾಪಕ ಬಲೆ ಬಿಸಿ ಇಂದು ಗುಲಬರ್ಗಾ ನಗರದ ಟಿಪ್ಪು ಸುಲ್ತಾನ ಚೌಕದಲ್ಲಿ ಬಂಧಿಸಿದ್ದು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ. ಗುಲಬರ್ಗಾ ನಗರದಲ್ಲಿ ಇತ್ತಿಚಿಗೆ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೊಪಿತ ಪತ್ತೆ ಕುರಿತು ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಶ್ರೀ ಹೆಚ್. ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ 1) ಶ್ರೀ ಪಂಡಿತ ಸಗರ ಪಿ.ಎಸ್.ಐ (ಕಾಸು) ವಿವಿ ಠಾಣೆ 2) ಸಂಜೀವಕುಮಾರ ಪಿ.ಎಸ್.ಐ (ಕಾಸು) ಎಮ್.ಬಿ ನಗರ, 3) ಶ್ರೀ ಪ್ರದೀಪ ಕೊಳ್ಳಾ ಪಿ.ಎಸ್.ಐ (ಅವಿ) ವಿವಿ ಠಾಣೆ ಮತ್ತು ಸಿಬ್ಬಂದಿಯವರಾದ ಗಂಗಾಧರ ಸ್ವಾಮಿ , ರಮೇಶ , ಹಣಮಂತ ಪ್ರಭಾಕರ , ಅಶೋಕ ಮಶಾಕ ಪಿಸಿ ಪಿಸಿಗಳು , ಮತ್ತು ಹೆಚಸಿಗಳಾದ ಸಿದ್ರಾಮ , ಶಿವಪುತ್ರ ಸ್ವಾಮಿ , , ಅರ್ಜುನ ಎಪಿಸಿ, ರವರು ಖಚಿತ ಭಾತ್ಮಿ ಮೇರೆಗೆ ಗುಲಬರ್ಗಾ ಕೇಂದ್ರ ಬಸ್ಸ ನಿಲ್ದಾಣ ಹತ್ತಿರ, ಹಾಗೂ ಸೊನಿಯಾ ಗಾಂಧಿ ಕಾಲೋನಿ ಮತ್ತು ಟಿಪ್ಪು ಸುಲ್ತಾನ ಚೌಕದಲ್ಲಿ ಮಿಂಚಿನ ದಾಳಿ ಮಾಡಿ ಸರಗಳ್ಳತನ ಮಾಡುವ ಸಯ್ಯದ ಫಾಜೀಲ ತಂದೆ ಸಯ್ಯದ ಸಿರಾಜ ಸಾ// ಉಮರ ಕಾಲೋನಿ, ಕಲೀಂ ತಂದೆ ಅಬ್ದುಲ ರಶೀಧ ಸಾ// ಸೊನಿಯಾ ಗಾಂಧಿ ಕಾಲೋನಿ,ಅರವಿಂದ ತಂದೆ ಶಾಹೀರ ಉಪಾಧ್ಯಯ ಸಾ// ಬಾಪು ನಗರ, ಚರಣ ತಂದೆ ಶ್ರವಣ ಉಪಾಧ್ಯಯ ಸಾ// ಬಾಪು ನಗರ, ಗುಂಗುರು ತಂದೆ ರವಿದಾಸ ಉಪಾಧ್ಯಯ ಸಾ// ಬಾಪು ನಗರ, ಮೇಲ್ಕಂಡ ಆರೊಪಿತರು ಇತ್ತಿಚಿಗೆ ಗುಲಬರ್ಗಾ ನಗರದ ಗುಬ್ಬಿ ಕಾಲೋನಿ ಹಾಗೂ ಶಹಾಬಾದ ರಿಂಗ ರೋಡಿನ ಓವರ ಬ್ರಿಡ್ಜ ಹತ್ತಿರ ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ತನಿಖೆ ಹಾಗೂ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿದ್ದರಿಂದ ಆರೊಪಿತರಿಂದ ಈ ಮೇಲ್ಕಂಡ ಎರಡು ಪ್ರಕರಣಗಳಲ್ಲಿ ಸುಮಾರು 2.5 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ಎರಡು ಅಟೋ ರಿಕ್ಷಾಗಳು ಮತ್ತು ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. ಈ ಎರಡು ಮಹತ್ವದ ಸರಗಳ್ಳತನ ಪ್ರಕರಣಗಳನ್ನು ಭೇಧಿಸಿದ ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಮಾನ್ಯ ಎಸ್.ಪಿ ಸಾಹೇಬರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಭಾಗ್ಯವಂತ ತಂದೆ ಶಿವಶರಣಪ್ಪ ಸಾ ಶಾಂತವೀರ ನಗರ ಬ್ರಹ್ಮಪೂರ ಗುಲಬರ್ಗಾರವರು ನಾನು ದಿ: 27.02.11 ರಂದು ರಾತ್ರಿ10-00 ಗಂಟೆಗೆ ಪಲ್ಲವಿ ಹೋಟೆಲ ಮುಂದೆ ನನ್ನ ಹಿರೊಹೊಂಡಾ ಸ್ಪೆಲೆಂಡರ್ + ನಂ ಕೆ 32 ವಿ 3061 ಅಕಿ 30000/- ನೇದ್ದು ನಿಲ್ಲಿಸಿದ್ದು ಕೆಲಸ ಮಗಿಸಿಕೊಂಡು ಮರಳಿ 10-30 ಗಂಟೆಗೆ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ತಮ್ಮ ವಾಹನ ಇರಲಿಲ್ಲಾ ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ರಾಚಣ್ಣಾ ತಂದೆ ಬಸಣ್ಣಾ ಸಮಗಾರ ಉದ್ಯೋಗ: ಸಮಾಜ ಸೇವಕ ಸಾ:ಹೊನ್ನಕಿರಣಗಿ ತಾ:ಜಿ: ಗುಲಬರ್ಗಾ ರವರು ನನ್ನ ಮೇಲೆ ಈಗ ಒಂದು ವರ್ಷದಿಂದ ನಮ್ಮೂರಿನ ಶಿವಪ್ಪಾ ಜುಲ್ಪಿ ಹಾಗೂ ಸಂಗಡಿಗರಿಗೆ ಹೋದ ಗ್ರಾಮ ಪಂಚಾಯತ ಚುನಾವಣೆ ಪ್ರಯುಕ್ತ ವಿನಾಃಕಾರಣ ಹಳೆಯ ದ್ವೇಷ ಇರುತ್ತದೆ. ಸದರಿಯವರು ಈ ಮುಂಚೆ ನನಗೆ ಎರಡು ಸಲಾ ತೊಂದರೆ ಕೊಟ್ಟಿದ್ದು ಆದರು ನಾನು ಸಹಿಸಿಕೊಂಡು ಬಂದಿರುತ್ತೆನೆ. ದಿನಾಂಕ 25/2/2012 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಕಾಬಾ ಕಾಂಪ್ಲೆಕ್ಸದಿಂದ ನಮ್ಮ ಮನೆಯ ಕಡೆಗೆ ರಸ್ತೆಯ ಮೇಲೆ ಹೋಗುತ್ತಿರುವಾಗ ನಮ್ಮೂರಿನವರಾದ ಶಿವಪ್ಪಾ ತಂದೆ ಶಿವಸರಣಪ್ಪಾ ಜುಲ್ಪಿ ಶಿವಕುಮಾರ ತಂದೆ ಹುಲಸಿದ್ದಪ್ಪಾ ಕೌಲಗಿ, ಮಲ್ಲಪ್ಪಾ ತಂದೆ ಫಕಿರಪ್ಪಾ ಅಲ್ಲೋಳಿ, ದೊಡಪ್ಪಾ ತಂದೆ ಭೀಮರಾಯ ಇಟಗಾ, ಭಗವಂತ ತಂದೆ ಶ್ರೀಮಂತ ಇರಬಾ, ಜಗಪ್ಪಾ ತಂದೆ ಶಿವಯೊಗಪ್ಪಾ ರಜಾಪೂರ, ಶಿವಲಿಂಗಪ್ಪಾ ತಂದೆ ಭೀಮರಾಯ ಇಟಗಾ ಇವರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು ಕೈಯಲ್ಲಿದ ಕಬ್ಬಿಣದ ರಾಡಿನಿಂದ ಬೆನ್ನಿಗೆ, ಎಡಗೈಗೆ,ಎಡಗಾಲಿನ ಮೊಳಕಾಲಿಗೆ ಹೋಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿದರು ಉಳಿದವರು ಎಲ್ಲರು ಸೇರಿಕೊಂಡು ನನಗೆ ಕೈಯಿಂದ ಮತ್ತು ಕಾಲಿನಿಂದ ನೇಲಕ್ಕೆ ಹಾಕಿ ಹೋಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ, 143, 147, 148, 341, 324, 504, 506, ಸಂಗಡ 149 ಐಪಿಸಿ ಮತ್ತು 3 (1) (10) ಎಸ.ಸಿ ಮತ್ತು ಎಸ.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
:ಶ್ರೀ ಯಲ್ಲಪ್ಪಾ ತಂದೆ ಯಲ್ಲಪ್ಪಾ ಅಲಕುಂಟಿ ಸಾ;ಚಕ್ಕಿವಡ್ಡರಗಲ್ಲಿ ಭಂಕಟಚಾಳ ಶಹಾಬಾದ ರವರು ನಾನು ದಿನಾಂಕ 10/02/2012 ರಂದು ಸಾಯಂಕಾಲ4-30 ಗಂಟೆ ಸುಮಾರಿಗೆ ನನ್ನ ಕೆಲಸ ನಿಮಿತ್ಯ ಬಸ್ಸ ನಿಲ್ದಾಣ ಎದುರಗಡೆ ರೋಡಿನ ಪಕ್ಕದಲ್ಲಿ ನನ್ನ ಹೀರೋಹೋಡಾ ಪ್ಲಸ ನಂ ಕೆಎ. 37 ಕ್ಯೂ 0621 ನೇದ್ದ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ಯಾರೋ ನನ್ನ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 21/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.