POLICE BHAVAN KALABURAGI

POLICE BHAVAN KALABURAGI

26 September 2020

KALABURAGI DISTRICT CRIME REPORTED

 ಮಟಕಾ ಜೂಜಾಟ ಪ್ರಕರಣ

ಅಫಜಲಪೂರ ಪೊಲೀಸ ಠಾಣೆ 

   ದಿನಾಂಕ 25-09-2020 ರಂದು 7:40 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆ ಮಾಲು ಹಾಗೂ ವರದಿ ಹಾಜರು ಪಡಿಸಿದ್ದು ವರದಿ ಸಾರಾಂಶವೇನೆಂದರೆ ದಿನಾಂಕ: 25-09-2020 ರಂದು 5:00 ಪಿಎಮ್ ಕ್ಕೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೇನೆಂದರೆ, ಮಾಶಾಳ ಗ್ರಾಮದ ಬಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ ಹೋಗಿ ಬಸನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿಲಾಗಿ ಶ್ರೀಶೈಲ ತಂದೆ ಜೋತಿಬಾ ಕ್ಷತ್ರಿ ವಯ|| 35 ವರ್ಷ ಜಾ|| ಕಟಬರ್ ಉ|| ಕೂಲಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1050/-  ರೂಪಾಯಿ ನಗದು ಹಣ ಹಾಗೂ 2) ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3) ಒಂದು ಪೆನ್ನ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ವರದಿ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ ಪ್ರಕರಣ

ವಾಡಿ ಪೊಲೀಸ ಠಾಣೆ 

        ದಿನಾಂಕ:25/09/2020 ರಂದು 3.00 ಪಿ.ಎಮ್ ಕ್ಕೆ ಸರ್ಕಾರಿ ತರ್ಪೇಯಿಂದ ಶ್ರೀ ವಿಜಯಕುಮಾರ ಪಿ.ಎಸ.ಐ [ಕಾ.ಸು] ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೇಮಾಲು ಮತ್ತು ಜ್ಞಾಪನ ಪತ್ರ ಹಾಜರುಪಡಿಸಿದ ಸಾರಾಂಶವೆನೇಂದರೆ, ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ವಾಡಿಯ ಶ್ರೀನಿವಾಸ ಚೌಕನಲ್ಲಿರುವ ಪಾನಡಬ್ಬಿಯ ಮುಂದೆ ರೋಡಿಗೆ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅದೃಷ್ಠದ ಆಟ ಆಡಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಹಾಗು ಪಂಚರು ಜನರೊಂದಿಗೆ ಹೊರಟು ವಾಡಿಯ ಶ್ರೀನಿವಾಸ ಚೌಕ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಪಂಚರ ಸಮಕ್ಷಮ ದಾಳಿ ಮಾಡಿ ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನಹೆಸರು ರಾಜು ತಂದೆ ಚಂದ್ರಾಮ ಹಾಗರಗುಂಡಗಿ ವಃ25ವರ್ಷ ಉಃಕೂಲಿಕೆಲಸ ಜಾಃಹರಿಜನ ಸಾಃಸೋನಾಬಾಯಿ ಏರಿಯಾ ವಾಡಿ ಅಂತಾ ತಿಳಿಸಿದನು. ಆತನ ವಶದಿಂದ 650 /- ರೂ ನಗದು ಹಣ ಮತ್ತು 01 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಒಬ್ಬ ಆರೋಪಿ ಹಾಗೂ ಮುದ್ದೆಮಾಲು ಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕ್ರಮ ಕೈಕೊಳ್ಳಲು ಈ ಜ್ಞಾಪನ ಪತ್ರದ  ನೀಡಿದ ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಇಸ್ಪೇಟ ಜೂಜಾಟ ಪ್ರಕರಣ

ವಾಡಿ ಪೊಲೀಸ ಠಾಣೆ 

                ದಿನಾಂಕ:25/09/2020 ರಂದು 06-30 ಪಿ.ಎಮ್ ಕ್ಕೆ ಸರ್ಕಾರಿ ತರ್ಪೇಯಿಂದ ಶ್ರೀ ವಿಜಯಕುಮಾರ ಪಿ.ಎಸ.ಐ [ಕಾ.ಸು] ರವರು ಠಾಣೆಗೆ ಹಾಜರಾಗಿ 05 ಜನ ಆರೋಪಿ ಮತ್ತು ಮುದ್ದೇಮಾಲು, ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ:25/09/2020 ರಂದು 03-10 ಪಿಎಮ್ ಸುಮಾರಿಗೆ ವಾಡಿ ಪೊಲಿಸ ಠಾಣಾ ವ್ಯಾಪ್ತಿಯಲ್ಲಿ ಹಾಬಾನಾಯಕ ತಾಂಡಾ ಬೇಳಗೇರಾ ಗ್ರಾಮದ ನಾಮದೇವ ರಾಠೋಡ ಇತನ ಅಂಗಡಿಯ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ  ಕೆಲವು ಜನರು ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು ನಾನು ಠಾಣೆಯ ಸಿಬ್ಬಂದಿ ಜನರಾದ  1) ಶ್ರೀ ದೊಡ್ಡಪ್ಪ ಸಿಪಿಸಿ-836 ] ಬಸಲಿಂಗಪ್ಪ ಸಿಪಿಸಿ-1135 3] ಶ್ರೀ ಮಧುಕರ ಸಿಪಿಸಿ-631 4] ಶ್ರೀ ಚನ್ನಬಸವ ಸಿಪಿಸಿ-180 ಮತ್ತು ಪಂಚ ಜನರೊಂದಿಗೆ ಹೊರಟು ನಾಮಾದೇವ ರಾಠೋಡ ರವರ ಅಂಗಡಿ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಕೆಳಗಿಳಿದು ಮರೆಯಲ್ಲಿ ನಿಂತು ನೋಡಲಾಗಿ ನಾಮದೇವ ರಾಠೋಡ ರವರ ಅಂಗಡಿಯ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಇಸ್ಟೇಟ ಜೂಜಾಟ ಆಡುತ್ತಿದ್ದು 05 ಜನರನ್ನು ಹಿಡಿದುಕೊಂಡಿದ್ದು ಅವರ ಹೆಸರು ವಿಚಾರಣೆ ಮಾಡಲಾಗಿ 1]ಪೋಮು ತಂದೆ ಕಿಶನ ಪವಾರ ವಯ:50 ವರ್ಷ ಉ:ಒಕ್ಕಲುತನ ಸಾ:ಬೇಳಗೆರಾ  2] ನೇಹರು ತಂದೆ ನಾಮದೇವ ರಾಠೋಡ ವಯ:47 ವರ್ಷ ಉ:ಒಕ್ಕಲುತನ ಸಾ:ಹಾಬಾನಾಯಕ ತಾಂಡಾ ಬೇಳಗೆರಾ 3] ಶಂಕರ ತಂದೆ ಸುಭಾಷ ರಾಠೋಡ ವಯ:55 ವರ್ಷ ಉ:ಒಕ್ಕಲುತನ ಜಾ:ಲಂಬಾಣಿ ಸಾ:ಹಾಬಾನಾಯಕ ತಾಂಡಾ ಬೇಳಗೆರಾ 4] ಸಾಯಿಬಣ್ಣಾ ತಂದೆ ರಾಮನಿಂಗಪ್ಪ ಕೊಟ್ಟರಕಿ ವಯ:43 ವರ್ಷ ಉ:ಒಕ್ಕಲುತನ ಜಾ:ಕಬ್ಬಲಿಗ ಸಾ:ಯಾಗಾಫೂರ 5] ಬಸಲಿಂಗಪ್ಪ ತಂದೆ ಭೀಮರಾಯ ಡೊಂಕನೂರ ವಯ:30 ವರ್ಷ ಉ:ಕೂಲಿ ಜಾ:ಬೇಡರ ಸಾ:ಬಾಚವಾರ ಸದರಿಯವರ ಅಂಗಶೋಧನೆಯಿಂದ 2200-00 ರೂ ಹಾಗೂ ಪಣಕ್ಕೆ ಹಚ್ಚಿದ ನಗದು ಹಣ 500/-ರೂಪಾಯಿ ಹೀಗೆ ಒಟ್ಟು 2700/- ರೂಪಾಯಿ ನಗದು ಹಣ ಹಾಗೂ 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ನಂತರ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಮರಳಿ 06-30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ 05 ಜನ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಲು ನೀಡಿದ ಜ್ಞಾಪನ ಪತ್ರದ  ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ ಪ್ರಕರಣ

1) ಶಹಾಬಾದ ನಗರ ಪೊಲೀಸ ಠಾಣೆ 

          ದಿನಾಂಕಃ 24/09/2020 ರಂದು 2-30 ಪಿ ಎಮ್.ಕ್ಕೆ ಪಿ.ಐ ಶಹಾಬಾದ ರವರು ಠಾಣೆಗೆ ಬಂದು ಒಬ್ಬ ಅರೋಪಿ, ಮುದ್ದೇಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಶಹಾಬಾದ ಪಟ್ಟಣದ ವಿ ಪಿ ಚೌಕ ಹತ್ತಿರ  ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚಜನರೊಂದಿಗೆ  ಶಹಾಬಾವಿ ಪಿ ಚೌಕ ಹತ್ತಿರ ಹೋಗಿ  ಮನೆಯ ಮರೆಯಾಗಿ ನಿಂತು ನೋಡಲಾಗಿ ವಿ ಪಿ ಚೌಕ ಹತ್ತಿರ ಕಟ್ಟೆಯ ಮೇಲೆ ಒಬ್ಬ  ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಜುಬೇರ ತಂದೆ ಚಾಂದಪಾಶಾ ಶೇಖ ವಯಾ: 21 ವರ್ಷ ಉ: ಕಾರಪೆಂಟರ ಕೆಲಸ ಸಾ: ವಿ ಪಿ ಚೌಕ ಅಂತಾ ತಿಳಿಸಿದನು ಅವನಿಗೆ ಮಟಕಾ ನಂಬರ ಬರೆದುಕೊಂಡು ಯಾರಿಗೆ ನೀಡುತ್ತಿ ಅಂತಾ ವಿಚಾರಿಸಲು ಖಲೀಲ ಅಹ್ಮೇದ ತಂದೆ ಹಾಜಿಸಾಬ ಸಾ: ಬಸ ನಿಲ್ದಾಣದ ರೋಡ ಶಹಾಬಾದ  ಇತನಿಗೆ ನೀಡುತ್ತೇನೆ ಅಂತಾ ತಿಳಿಸಿದನು ಹಿಡಿದವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ  480- 00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು ಕೈಗೊಂಡು ಆರೋಪಿತನ ವಿರುದ್ದ  ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಶಹಾಬಾದ ನಗರ ಪೊಲೀಸ ಠಾಣೆ 

           ದಿನಾಂಕಃ 24/09/2020  ರಂದು 6-15 ಪಿ ಎಮ್ ಕ್ಕೆ ಪಿ.ಐ ಶಹಾಬಾದ ರವರು ಠಾಣೆಗೆ ಬಂದು ಒಬ್ಬ ಅರೋಪಿ, ಮುದ್ದೇಮಾಲು ಮತ್ತು ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕಃ 24/09/2020 ರಂದು 3-30 ಪಿ ಎಮ್ ಕ್ಕೆ ಠಾಣೆಯಲ್ಲಿದ್ದಾಗ ದೇವನ ತೆಗನೂರ ಗ್ರಾಮದ ಬಸ ನಿಲ್ದಾಣದ ಹತ್ತಿರ ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚ ಜನರೊಂದಿಗೆ  ಠಾಣೆಯಿಂದ ಹೊರಟು ದೇವನ ತೆಗನೂರ ಗ್ರಾಮಕ್ಕೆ ಹೋಗಿ ಹೊಟೇಲ ಗೊಡೆಯ ಮರೆಯಾಗಿ ನಿಂತು ನೋಡಲಾಗಿ ಬಸ ನಿಲ್ದಾಣದ ಹತ್ತಿರ ಕಟ್ಟೆಯ ಮೇಲೆ ಒಬ್ಬ  ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಶಿವಪ್ಪ ಜಮದಾರ ವಯಾ: 65 ವರ್ಷ ಉ: ಕೂಲಿ ಕೆಲಸ ಜಾ: ಕಬ್ಬಲಿಗಾ ಸಾ: ದೇವನ ತೆಗನೂರ ಅಂತಾ ತಿಳಿಸಿದನು ಅವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ 650-00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಗೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಅಧಾರ ಮೇಲಿಂದ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

19 September 2020

KALABURAGI DISTRICT CRIME REPORTED

 ಮಟಕಾ ಜೂಜಾಟ ಪ್ರಕರಣ  

ಶಹಾಬಾದ ನಗರ ಪೊಲೀಸ ಠಾಣೆ 

           ದಿನಾಂಕಃ 18/09/2020  ರಂದು  6-30 ಪಿ ಎಮ್ ಕ್ಕೆ ಪಿ.ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಒಬ್ಬ ರೋಪಿ, ಮುದ್ದೇಮಾಲು ಮತ್ತು ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕಃ 18/09/2020 ರಂದು ಶಹಾಬಾದ ಪಟ್ಟಣದ ಬೆಂಡಿ ಬಜಾರ ತರಕಾರಿ ಮಾರ್ಕೆಟದ ಕೊಲಾರಕರ ಅಂಗಡಿಯ ಹತ್ತಿರ ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚ ಜನರನ್ನು ಠಾಣೆಗೆ ಬರಮಾಡಿಕೊಂಡು ಠಾಣೆಯಲ್ಲಿದ್ದ  ಸಿಬ್ಬಂದಿಯವರೊಂದಿಗೆ ಹೊರಟು ಶಹಾಬಾ ಪಟ್ಟಣದ ಬೆಂಡಿ ಬಜಾರ ತರಕಾರಿ ಮಾರ್ಕೆಟ ಕೊಲಾರಕರ ಅಂಗಡಿಯ ಹತ್ತಿರ ಹೋಗಿ ಅಂಗಡಿಯ ಮರೆಯಾಗಿ ನಿಂತು ನೋಡಲಾಗಿ ತರಕಾರಿ ಅಂಗಡಿಯ ಮುಂದೆ ಕಟ್ಟೆಯ ಮೇಲೆ ಒಬ್ಬ ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಮಹ್ಮದ ತೌಸೀಫ ತಂದೆ ಗುಲಾಮ ರಸೂಲ ಸಾಬ ವಯಾ: 32 ವರ್ಷ ಉ: ಹೊಟೇಲ ಕೆಲಸ ಸಾ: ಖುರ್ಷಿದ ಮೊಹಲ್ಲಾ ಶಹಾಬಾದ  ಅಂತಾ ತಿಳಿಸಿದನು  ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ  1080- 00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಅಪ್ರಾಪ್ತ ಹೆಣ್ಣು ಮಗಳ ಅಪಹರಣ

ರೇವೂರ ಪೊಲೀಸ ಠಾಣೆ 

          ದಿನಾಂಕ 18/09/2020 ರಂದು 5.00 ಪಿಎಮ್ ಕ್ಕೆ ಶ್ರೀ ಕಿಶನ ತಂದೆ ಹೋಬು ರಾಠೋಡ ಸಾ||ವಡ್ಡಳ್ಳಿ ತಾಂಡಾ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಂಶವೆನೆಂದರೆ, ದಿನಾಂಕ 17/09/2020 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ಹಾಗು ನನ್ನ ಹೆಂಡತಿಯಾದ ಅನಸುಬಾಯಿ ನಮ್ಮ ಮಗನಾದ ಸಾಗರ ಹಾಗು ನಮ್ಮ ತಾಂಡಾದ ರಮೇಶ ತಂದೆ ಶಂಕರ ಚವ್ಹಾಣ, ಸುಭಾಷ ತಂದೆ ರೂಪ್ಲೂ ಚವ್ಹಾಣ ಎಲ್ಲರು ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದಾಗ ನಮ್ಮ ಮಗಳಾದ ರೇಷ್ಮಾ ವ||16 ಈವಳು ಬಹಿರದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತಂಬಿಗೆ ತೆಗೆದುಕೊಂಡು ನಮ್ಮ ಮನೆಯ ಬಾಜು ಖಾಜಾಸಾಬ ಜಮಾದಾರ ರವರ ಹೊಲದ ಕಡೆ ಹೋಗಿರುತ್ತಾಳೆ  ಅಷ್ಟರಲ್ಲಿ ರೇಷ್ಮಾ ಜೋರಾಗಿ ಚಿರಾಡುವದನ್ನು ಕೇಳಿ ನಾವು ಓಡಿ ಹೋಗುವಷ್ಟರಲ್ಲಿ ನಮ್ಮ ತಾಂಡಾದ ನಾಗು ತಂದೆ ಲಾಲು ಚವ್ಹಾಣ ಈತನು ಒಂದು ಕಾರಿನಲ್ಲಿ ನಮ್ಮ ಮಗಳಿಗೆ ಒತ್ತಾಯದಿಂದ ಕಾರಿನಲ್ಲಿ ಹಾಕಿಕೊಂಡು ತನ್ನ ಕಾರು ತಗೆದುಕೊಂಡು ಅಲ್ಲಿಂದ ಹೋಗಿರುತ್ತಾನೆ.  ಕಾರಣ ನಾಗು ತಂದೆ ಲಾಲು ಚವ್ಹಾಣ ಈತನು ಲಾಲು ತಂದೆ ದೇಸು ಚವ್ಹಾಣ, ನಿಲಾಬಾಯಿ ಗಂಡ ಲಾಲು ಚವ್ಹಾಣ, ಸುನಿಲ ತಂದೆ ಲಾಲು ಚವ್ಹಾಣ ಇವರ ದುಷ್ಪ್ರೇರಣೆಯಿಂದ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ರೇಷ್ಮಾ ವ||16 ವರ್ಷ ಇವಳಿಗೆ ಮದುವೆಯಾಗುವ ಉದ್ದೇಶದಿಂದ ಅಥವಾ ಇನ್ನಾವುದೋ ಉದ್ದೇಶದಿಂದ ನಾಗು ಈತನು ಕಾರಿನಲ್ಲಿ ಅಫಹರಿಸಿಕೊಂಡು ಹೋಗಿದ್ದು ಸದರಿಯವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಸಾರಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

18 September 2020

KALABURAGI DISTRICT CRIME REPORTED

 ವಿದ್ಯುತ್ ಅಘಾತ ಪ್ರಕರಣ  

ಅಫಜಲಪೂರ ಪೊಲೀಸ ಠಾಣೆ 

            ದಿನಾಂಕ 17-09-2020 ರಂದು 4:45 ಪಿ.ಎಮ್ ಕ್ಕೆ ಚಂದ್ರಕಾಂತ ತಂದೆ ನಾರಾಯಣ ಗುತ್ತೇದಾರ ಸಾ: ಗೌರ (ಬಿ) ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೇನೆಂದರೆ. ಗೌರ (ಬಿ) ಸೀಮಾಂತರದಲ್ಲಿ ಸರ್ವೆ ನಂ 256 ರಲ್ಲಿ ನನ್ನದು ಹೊಲ ಇರುತ್ತದೆ. ಸದರಿ ನನ್ನ ಹೊಲದ ಸುತ್ತ ಮುತ್ತಲಿನ ಹೊಲದವರಾದ ಚಂದ್ರಕಾಂತ ಸೂರ್ಯವಂಶಿ, ಸಿದ್ದಪ್ಪ ಮಾಣಸುಣಗಿ, ಮಹಾಂತಗೌಡ ಪಾಟೀಲ, ಬಸವರಾಜ ದಿವಾಣಜಿ ಇವರು ನಮ್ಮ ಹೊಲದಲ್ಲಿ ಕಂಬಗಳನ್ನು ಹಾಕಿ ನಮ್ಮ ಹೊಲದ ಮೇಲಿಂದ ತಮ್ಮ ಹೊಲಗಳಲ್ಲಿದ್ದ ಟಿಸಿಗಳಿಗೆ (ವಿದ್ಯೂತ್ ಪರಿವರ್ತಕ) ವಾಯರಗಳನ್ನು ಹಾಕಿಕೊಂಡಿರುತ್ತಾರೆ. ಸದರಿ ನನ್ನ ಹೊಲದ ಮೇಲೆ ಹಾಯ್ದು ಹೋದ ಕರೆಂಟ್ ವಾಯರ್ ಸಡಿಲವಾಗಿ ಕೆಳಕ್ಕೆ ಇಳಿದಿರುತ್ತದೆ. ಈ ಬಗ್ಗೆ ನಾನು ನಮ್ಮೂರಿನ ಲೈನ್ ಮೇನ್ ಆದ ಷಣ್ಮುಕಪ್ಪಗೌಡ ತಂದೆ ಗುರಪ್ಪಗೌಡ ಪಾಟೀಲ ಇವರಿಗೆ ಮತ್ತು ಸದರಿ ಹೊಲದ ಮಾಲಿಕರಿಗೆ, ನಮ್ಮ ಹೊಲದಲ್ಲಿ ನೀವು ತಗೆದುಕೊಂಡು ಹೋಗಿದ್ದ ಕರೆಂಟ್ ವಾಯರ್ ಕೆಳಕ್ಕೆ ಇಳಿದಿದೆ, ಅದನ್ನು ಸರಿಪಡಿಸಿ, ಯಾರಿಗಾದರೂ ಕರೆಂಟ ಹತ್ತುವ ಸಂಭವ ಇದೆ ಎಂದು ಸಾಕಷ್ಟು ಬಾರಿ ಹೇಳಿರುತ್ತೇನೆ. ಹಾಗೂ ಲೈನ್ ಮೇನ್ ಆದ ಷಣ್ಮುಕಪ್ಪಗೌಡ ಇವನಿಗೆ ವಾಯರ ಸರಿ ಪಡಿಸೊ ವರೆಗೆ ಕರೆಂಟ ಹಾಕಬೇಡ ಎಂದು ಸಹ ಹೇಳಿರುತ್ತೇನೆ. ದಿನಾಂಕ 15-09-2020 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನನ್ನ ಮಗನಾದ ಸಂತೋಷ ವಯ|| 23 ವರ್ಷ ಇವನು ತನ್ನ ಗೆಳೆಯನಾದ ಅರ್ಜುನ ತಂದೆ ಶಿವಶರಣ ದುದ್ದುಣಗಿ ಈತನೊಂದಿಗೆ ನಮ್ಮ ಹೊಲಕ್ಕೆ ಹೋದಾಗ, ನನ್ನ ಹೊಲದಲ್ಲಿ ಜೋತು ಬಿದ್ದ ಕರೆಂಟ್ ವಾಯರ್ ಆಕಸ್ಮಿಕವಾಗಿ ನನ್ನ ಮಗನ ತಲೆಗೆ ತಾಗಿ, ನನ್ನ ಮಗನಿಗೆ ಕರೆಂಟ ಶಾಟ್ ಹೊಡೆದಿರುತ್ತದೆ.  ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಇಂದು ಅಫಜಲಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಮ್.ಎಲ್.ಸಿ ಮಾಡಿಸಿರುತ್ತೇನೆ. ಸದರಿ ಕರೆಂಟ್ ಶಾಟದಿಂದ ನನ್ನ ಮಗನು ಬಳಲಿ ಮೊದಲಿನ ಸ್ಥೀತಿಗೆ ಬರದೆ ಊನನಾಗಿರುತ್ತಾನೆ. ಕಾರಣ ಮೇಲೆ ತಿಳಿಸಿದ 1) ಷಣ್ಮುಕಪ್ಪಗೌಡ ತಂದೆ ಗುರಪ್ಪಗೌಡ ಪಾಟೀಲ ಲೈನ್ ಮೇನ್ ಸಾ|| ಗೌರ (ಬಿ) 2) ಚಂದ್ರಕಾಂತ ಸೂರ್ಯವಂಶಿ ಸಾ|| ಗೌರ (ಕೆ) 3) ಸಿದ್ದಪ್ಪ ಮಾನಸುಣಗಿ ಸಾ|| ಗೌರ (ಕೆ) 4) ಮಹಾಂತಗೌಡ ತಂದೆ ಸಂಗನಗೌಡ ಪಾಟೀಲ ಸಾ|| ಗೌರ (ಬಿ) 5) ಬಸವರಾಜ ತಂದೆ ಗಾಂದಿ ದಿವಾಣಜಿ ಸಾ|| ಗೌರ (ಬಿ) ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕಳ್ಳತನ ಪ್ರಕರಣ   

ಶಹಾಬಾದ ನಗರ ಪೊಲೀಸ ಠಾಣೆ 

ದಿನಾಂಕ: 17/09/2020 ರಂದು 1-30 ಪಿ ಎಮ್ ಕ್ಕೆ ರಾಜೇಂದ್ರ ತಂದೆ ಕಮಲಾಕರ ಪಾಟೀಲ ಸಾ: ಮಾಲಗತ್ತಿ ಇವರು ಠಾಣೆಗೆ ಬಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವನೆಂದರೆ, ದಿನಾಂಕ: 16/09/2020 ರಂದು ಮದ್ಯಾಹ್ನ 3-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮೂರಿನ ಜೈನ ಮಂದಿರದಲ್ಲಿದ್ದ ಭಗವಾನರ ಮತ್ತು ತೀರ್ಥಂಕರ ದೇವರ 12 ಕಂಚಿನ ಮೂರ್ತಿಗಳು ಅ.ಕಿ 19000-00 ರೂ ನೇದ್ದವುಗಳನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ ಕಾರಣ ಸೂಕ್ತ ಕ್ರಮ ಜರುಗಿಸಿ ಪತ್ತೆ ಮಾಡಬೇಕು ಅಂತಾ ಇದ್ದ ಅರ್ಜಿ ಸಾರಾಶದ ಮೇಲಿಂದ ಠಾಣಾ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

17 September 2020

KALABURAGI DISTRICT CRIME REPORTED

 ಅಕ್ರಮ ಗಾಂಜಾ ಜಪ್ತಿ:-

ಆಳಂದ ಪೊಲೀಸ ಠಾಣೆ

 ದಿನಾಂಕ: 16/09/2020 ರಂದು 11.00 ಎ ಎಮ್ ಕ್ಕೆ ಮಾನ್ಯ ಮಲ್ಲಿಕಾರ್ಜುನ ಸಾಲಿ ಡಿ.ವೈ.ಎಸ್.ಪಿ ಆಳಂದ ಉಪ ವಿಭಾಗ ರವರು ಖಾದ್ದಾಗಿ ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರದೊಂದಿಗೆ ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಒಬ್ಬ ಅಪಾಧಿತನನ್ನು ತಂದು ಹಾಜ ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ಬಸಣ್ಣಾ ತಂದೆ ನಿಂಗಪ್ಪಾ ಖೇಡ್ಲೆ ಇತನು ತನ್ನ ಬಾಲಖೇಡ ಸೀಮಾಂತರದ ಸರ್ವೇ ನಂ 44 ನೆದ್ದರಲ್ಲಿ ಗಾಂಜಾ ಬೆಳೆದು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮಾರಾಟ ಮಾಡುವ ಸಲುವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾನೆ ಮತ್ತು ಸದ್ಯ ಆತನು ತನ್ನ ಹೊಲದಲ್ಲಿದ್ದಾನೆ ಎಂದು ಮಾಹಿತಿ ಮೇರೆಗೆ ನಾನು ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ   ಮಾಹಾಂತೇಶ ಜಿ. ಪಾಟೀಲ್ ಪಿ.ಎಸ್.ಐ ಆಳಂದ ಪೊಲೀಸ ಠಾಣೆ ಹಾಗೂ ಆಳಂದ ಪೊಲೀಸ್ ಠಾಣೆ ಸಿಬ್ಬಂದಿಯರಾದ ಸಿದ್ದರಾಮ ಎಚ್ ಸಿ 149, ಮಹಿಬೂಬ್ ಶೇಖ್ ಸಿಪಿಸಿ 681, ರತನ್ ಸಿಪಿಸಿ 521 ಹಾಗೂ ನಮ್ಮ ಜೀಪ್ ಚಾಲಕ ಬೀರಣ್ಣಾ ಎ.ಹೆಚ್.ಸಿ 106 ರವರನ್ನು ಹಾಗೂ ಪತ್ರಾಂಕಿತ ಅಧೀಕಾರಿಗಳಾದ ಶ್ರೀ ದಯಾನಂದ ಪಾಟೀಲ್ ತಹಸೀಲ್ದಾರರು ಹಾಗೂ ತಾಲೂಕಾ ದಂಡಾಧೀಕಾರಿಗಳು ಆಳಂದ ರವರಿಗೆ ವಿಷಯ ತಿಳಿಸಿ ಬರಮಾಡಿಕೊಂಡು ಸದರಿ ಗಾಂಜಾ ಬೆಳೆದ ಸ್ಥಳದಲ್ಲಿ ದಾಳಿ ಕಾಲಕ್ಕೆ ಹಾಜರಿರಲು ಕೋರಿಕೊಂಡು ಮತ್ತು ಉಳಿದ ಸಿಬ್ಬಂದಿ ಜನರಿಗೆ ದಾಳಿ ಮಾಡಲು ನಡೆಯಿರಿ ಅಂತಾ ತಿಳಿಸಿ ಅವರೆಲ್ಲರನ್ನು ಕರೆದುಕೊಂಡು ಬಾಲಖೇಡ ಗ್ರಾಮಕ್ಕೆ ತಲುಪಿ ಇಬ್ಬರು ಪಂಚ ಜನರನ್ಮ್ನ ಕರೆದು ವಿಷಯ ತಿಳಿಸಿ ಎಲ್ಲರು ಕೂಡಿ ದಾಳಿ ಕುರಿತು ಭಾತ್ಮಿ ಇದ್ದ ಬಾಲಖೇಢ ಸೀಮಾಂತರದ ಸವರ್ೇ ನಂ 44  ಹೊಲಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಹೊಲದಲ್ಲಿದ್ದು, ನಮ್ಮನ್ನು ನೋಡಿ ಆತನು ಓಡಿ ಹೋಗುತ್ತಿರುವಾಗ ಆತನಿಗೆ ಸಿಬ್ಬಂದಿ ಮತ್ತು ನಾನು ಕೂಡಿ ಬೆನ್ನು ಹತ್ತಿರ ಹಿಡಿದು ವಿಚಾರಿಸಲಾಗಿ ಆತ ತನ್ನ ಹೆಸರು ಬಸಣ್ಣಾ ತಂದೆ ನಿಂಗಪ್ಪಾ ಖೇಡ್ಲೆ ವಯ- 65 ವರ್ಷ ಜಾತಿ- ಬೇಡರ್ ಉ- ಒಕ್ಕಲುತನ ಸಾ|| ನಸಿರವಾಡಿ ಅಂತಾ ತಿಳಿಸಿದ್ದು ಆತನಿಗೆ ಗಾಂಜಾ ಬೆಳೆದ ಬಗ್ಗೆ ವಿಚಾರಿಸಲಾಗಿ ಆತನು ಸಮಂಜಸವಾದ ಉತ್ತರ ನೀಡದೆ ಇದ್ದ ಕಾರಣ ಆತನಿಗೆ ಪುನಃ ಪುನಃ ಹೆಚ್ಚಿನ ವಿಚಾರಣೆ ಮಾಡಲಾಗಿ ಆತ ತಿಳಿಸಿದ್ದೆನೆಂದರೆ ತೋಗರಿಯ ಸಾಲುಗಳ ಮದ್ಯದಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ವಿಚಾರಿಸಲು ಸದರಿ ಗಾಂಜಾ ಗಿಡಗಳನ್ನು ಒಂದು ತಿಂಗಳ ಹಿಂದೆ ಬೀಜ ಹಾಕಿದ್ದು, ಇನ್ನು 4 ತಿಂಗಳು ಬಿಟ್ಟರೆ ಪ್ರತಿ ಗಿಡದಿಂದ ಒಂದು ಕಿಲೋ ಗಾಂಜಾ ಸಿಗುತ್ತದೆ ಎಂದು ಮತ್ತು ಗಾಂಜಾ ಗಿಡಗಳು ಹೂವು & ಬೀಜಗಳಾದ ಮೇಲೆ ಗಾಂಜಾವನ್ನು ನನ್ನ ಸ್ವಂತ ಲಾಭಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ತೋಗರಿ ಹೊಲದಲ್ಲಿ ಬೆಳೆದ ಸದರಿ ಗಾಂಜಾ ಗಿಡಗಳನ್ನು ನಾನು ಮತ್ತು ಸಂಗಡ ಇದ್ದ ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 54 ದೊಡ್ಡ ಗಾಂಜಾ ಗಿಡಗಳಿದ್ದು, ಅವುಗಳನ್ಮ್ನ ಆಳಂದ ಪಟ್ಟಣದ ಕಿರಾಣಿ ವ್ಯಾಪಾರಿ ರಾಜೇಂದ್ರ ಜಮಾದಾರ ಈತನ ಎಲೆಕ್ಟ್ರಿಕಲ್ ತೂಕದ ಮಶೀನ್ ಮೇಲೆ ಇಟ್ಟು ಒಂದೊಂದು ಕಟ್ಟನ್ನು ತೂಕ ಮಾಡಿದ್ದು ಒಟ್ಟು 19.28 ಕೆ.ಜಿ. ಅಂದಾಜು 1,30,000/- ರೂ ಕಿಮ್ಮತ್ತಿನವು ಇರಬಹುದು. ನಂತರ ಆಪಾದಿತ ಬಸಣ್ಣಾ ತಂದೆ ನಿಂಗಪ್ಪಾ ಖೇಡ್ಲೆ ಇತನಿಗೆ ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ, ಆರೋಪಿ, ಮುದ್ದೆಮಾಲಿನೊಂದಿಗೆ ಹಾಜರು ಪಡಿಸಿ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಬೇಕು ಅಂತಾ ಕೊಟ್ಟ ಜ್ಞಾಪನ ಪತ್ರದ  ನೀಡಿದ ಸಾರಾಂಶದ ಮೇಲಿಂದ ಆಳಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 ಅಕ್ರಮ ಗಾಂಜಾ ಜಪ್ತಿ:-

ನರೋಣಾ ಪೊಲೀಸ ಠಾಣೆ 

ದಿನಾಂಕ:16/09/2020 ರಂದು ಶ್ರೀ.ಮಲ್ಲಿಕಾರ್ಜುನ ಡಿಎಸ್.ಪಿ ಸಾಹೇಬರು ಆಳಂದ ರವರು ಠಾಣೆಗೆ ಹಾಜರಾಗಿ ಒಬ್ಬ ಆಪಾದಿತ, ಜಪ್ತಿ ಪಂಚನಾಮೆ ಹಾಗೂ ಜಪ್ತಾದ ಮುದ್ದೆಮಾಲು ಹಾಜರಪಡಿಸಿ ಸೂಕ್ತ ಕಾನೂನ ಕ್ರಮ ಜರುಗಿಸಲು ಕೊಟ್ಟ ವರದಿ ಸಾರಾಂಶವೇನಂದರೆ, ದಿನಾಂಕ:16/09/2020 ರಂದು ಮಧ್ಯಾಹ್ನ ಶ್ರೀ.ಉದಂಡಪ್ಪಾ ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ ರವರು ಫೋನಮಾಡಿ ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಸಂಗೋಳಗಿ ಗ್ರಾಮದಲ್ಲಿ ಈಶ್ವರ ತಂದೆ ರಾಮಣ್ಣಾ ಮೇಲಿನಕೇರಿ ಈತನು ತನ್ನ ಮನೆಯ ಖುಲ್ಲಾ ಜಾಗದಲ್ಲಿ ಗಾಂಜಾ ಗಿಡ ಬೆಳೆಸಿದ ಬಗ್ಗೆ ಬಾತ್ಮೀ ಇರುತ್ತದೆ ಅಂತಾ ತಿಳಿಸಿದಾಗ ನಾನು ನರೋಣಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಾಜರಿದ್ದ ಶ್ರೀ.ಉದಂಡಪ್ಪ ಪಿ.ಎಸ್.ಐ, ನರೋಣಾ ಪೊಲೀಸ್ ಠಾಣೆ ರವರಿಗೆ ಇಬ್ಬರು ಪಂಚರನ್ನು ಕರೆಯಿಸಲು ತಿಳಿಸಿದ ಮೇರೆಗೆ ಇಬ್ಬರು ಪಂಚ ಜನರನ್ಮ್ನ ಠಾಣೆಗೆ ಕರೆಸಿ ಸಿಬ್ಬಂದಿಯವರಾದ ಶ್ರೀ. ಉದಂಡಪ್ಪ ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ, ಶ್ರೀ.ಚಂದ್ರಕಾಂತ ಸಿಪಿಸಿ-904, ಶ್ರೀ.ಸತೀಶ ಕಾಸರ್ ಸಿಪಿಸಿ-851, ಶ್ರೀ.ಬಸವರಾಜ ಸಿಪಿಸಿ-1206. ಶ್ರೀ.ಈರಣ್ಣಾ ಸಿ.ಹೆಚ್.ಸಿ-561, ಶ್ರೀ.ಪ್ರದೀಪ ಸಿಪಿಸಿ-115 ವಿಷಯನ್ನು ರವರಿಗೆ ತಿಳಿಸಿ. ಅದೇ ರೀತಿ ಸದರಿ ಮಾಹಿತಿಯನ್ನು ಮಾನ್ಯ ತಹಸೀಲ್ದಾರು ಮತ್ತು ತಾಲ್ಲೂಕು ದಂಡಾಧಿಕಾರಿ ರವರು ಆಳಂದ ರವರಿಗೆ ಮಾಹಿತಿ ನೀಡಿ ಠಾಣೆಯಿಂದ ನಾನು, ಸಿಬ್ಬಂದಿ, ಪಂಚರೆಲ್ಲರೂ ಸೇರಿ ಸಕರ್ಾರಿ ಜೀಪಗಳಲ್ಲಿ ಬಸವನಸಂಗೋಳಗಿ ಗ್ರಾಮಕ್ಕೆ ಹೋಗಿ, ಗ್ರಾಮದ ಜೈಭೀಮ ನಗರದಲ್ಲಿರುವ ಈಶ್ವರ ತಂದೆ ರಾಮಣ್ಣಾ ಮೇಲಿನಕೇರಿ ಈತನ ಮನೆಯ ಹತ್ತಿರ ಹೋಗುತ್ತಿದ್ದಾಗ 2 ಜನ ವ್ಯಕ್ತಿಗಳು ನಿಂತಿದ್ದು ನಮ್ಮ ವಾಹನಗಳನ್ನು ನೋಡಿ ಓಡಲು ಪ್ರಾರಂಭಿಸಿದರು ನಾವೆಲ್ಲರೂ ನಮ್ಮ ವಾಹನಗಳನ್ನು ನಿಲ್ಲಿಸಿ ಓಡಿ ಹೋಗುತ್ತಿರುವ ವ್ಯಕ್ತಿಗಳಿಗೆ ಹಿಡಿಯಲಾಗಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಇನ್ನೊಬ್ಬ ವ್ಯಕ್ತಿ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ ವಶಕ್ಕೆ ಸಿಕ್ಕ ವ್ಯಕ್ತಿಯನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಲಕ್ಷ್ಮಣ ತಂದೆ ರಾಮಣ್ಣಾ ಮೇಲಿನಕೇರಿ, ವಯಾ:40 ವರ್ಷ, ಜಾತಿ:ಪ-ಜಾತಿ, ಉ:ಕೂಲಿಕೆಲಸ, ಸಾ:ಬಸವನಸಂಗೋಳಗಿ ಗ್ರಾಮ ಅಂತಾ ತಿಳಿಸಿದ್ದು ಓಡಿ ಹೋದವನ ಹೆಸರು ವಿಚಾರಿಸಲಾಗಿ ಆತನು ತನ್ನ ಅಣ್ಣನಾದ ಈಶ್ವರ ತಂದೆ ರಾಮಣ್ಣಾ ಮೇಲಿನಕೇರಿ ವಯಾ:42 ವರ್ಷ, ಜಾತಿ:ಪ-ಜಾತಿ, ಉ:ಕೂಲಿಕೆಲಸ, ಸಾ:ಬಸವನಸಂಗೋಳಗಿ ಗ್ರಾಮ ಅಂತಾ ತಿಳಿಸಿದನು. ಓಡಿ ಹೋಗುತ್ತಿರುವ ಬಗ್ಗೆ ಕಾರಣ ಕೇಳಿದಾಗ ತಾನು ಹಾಗೂ ತನ್ನ ಅಣ್ಣ ಈಶ್ವರ ಇಬ್ಬರು ಸೇರಿ ಕೆಲವು ತಿಂಗಳ ಹಿಂದೆ ಮಾಹಾರಾಷ್ಟ್ರ ರಾಜ್ಯದ ಉಮಗರ್ಾ ದಿಂದ ಗಾಂಜಾ ಬೀಜ ತಂದು ನಾವಿಬ್ಬರು ಸೇರಿ ನಮ್ಮ ಅಣ್ಣನಿಗೆ ಸಕರ್ಾರದಿಂದ ಆಶ್ರಯ ಯೋಜನೆ ಅಡಿಯಲ್ಲಿ ನೀಡಿದಂತಹ ನಿವೇಶನ ಸಂ:97 ರಲ್ಲಿ ಖುಲ್ಲಾ ಜಾಗೆಯಲ್ಲಿ ಗಾಂಜಾ ಗಿಡ ಬೆಳಸಿದ್ದು. ಸದರಿ ಗಾಂಜಾ ನಮ್ಮೂರಿನಲ್ಲಿ ಹಣಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಬೆಳೆಸಿರುತ್ತೇವೆ. ಅಂತಾ ತಿಳಿಸಿದಾಗ ಮಾನ್ಯ ತಹಶೀಲ್ದಾರು ಆಳಂದ ರವರ ಸಮ್ಮುಖದಲ್ಲಿ ಹಾಗೂ ಈ ಮೇಲೆ ನಮೂದಿಸಿದ ಪಂಚರ ಸಮಕ್ಷಮದಲ್ಲಿ ಸೆರೆಸಿಕ್ಕ ಲಕ್ಷ್ಮಣ ತಂದೆ ರಾಮಣ್ಣಾ ಮೇಲಿನಕೇರಿ ಈತನು ತೋರಿಸಿದ ಗಾಂಜಾ ಗಿಡ ಬೆಳೆಸಿದ ಸ್ಥಳವನ್ನು ಪರಿಶೀಲಿಸಲಾಗಿ ಮನೆಯ ಖುಲ್ಲಾ ಜಾಗದಲ್ಲಿ ತೊಗರಿ ಕಟ್ಟಿಗೆಯ ಸಹಾಯದಿಂದ ನಿಮರ್ಿಸಿದ ಕೇರಿನ ಪಕ್ಕ ಒಂದು ಗಾಂಜಾ ಗಿಡ ಅಂದಾಜು 09 ಫೀಟ್ ಎತ್ತರವಿರುತ್ತದೆ. ಹಸಿ ಗಾಂಜಾ ಗಿಡದ ಒಟ್ಟು ತೂಕ 20 ಕೆ.ಜಿ 300 ಗ್ರಾಂ ಇದ್ದು, ಒಟ್ಟು 80000/- ರೂ ಮೌಲ್ಯವಿರುತ್ತದೆ ಸದರಿ ಜಪ್ತಿ ಪಡಿಸಿಕೊಂಡ ಮುದ್ದೆಮಾಲು, ಆರೋಪಿ ಲಕ್ಷ್ಮಣ ತಂದೆ ರಾಮಣ್ಣಾ ಮೇಲಿನಕೇರಿ, ಸಾ:ಬಸವನ ಸಂಗೋಳಗಿ ಗ್ರಾಮ ಈತನನ್ನು ವಶಕ್ಕೆ ಪಡೆದುಕೊಂಡು ನರೋಣಾ ಪೊಲೀಸ್ ಠಾಣೆಗೆ ಹಾಜರಾಗಿ ಆರೋಪಿತ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ನರೋಣಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 ಅಕ್ರಮ ಗಾಂಜಾ ಜಪ್ತಿ:-

ರೇವೂರ ಪೊಲೀಸ ಠಾಣೆ

 ದಿನಾಂಕ 16-09-2020 ರಂದು ಮಾನ್ಯ ಪಿಎಸ್ಐ ಸಾಹೇಬರು ಜಪ್ತಿ ಪಡಿಸಿಕೊಂಡ ಗಾಂಜಾ ಮುದ್ದೆ ಮಾಲನ್ನು ತಂದು ಮುಂದಿನ ಕ್ರಮಕ್ಕಾಗಿ ವರದಿ ಹಾಜರ ಪಡಿಸಿದ ವರದಿ ಸಾರಂಶವೆನೆಂದರೆ, ದಿನಾಂಕ 16-09-2020 ರಂದು ಬೆಳಿಗ್ಗೆ ಅತನೂರ ಗ್ರಾಮದ ವಿಜಯಕುಮಾರ ತಂದೆ ಶಂಕರ ಕ್ಷತ್ರಿ ರವರ ಮನೆಯ ಹಿತ್ತಲಿನಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ನಂತರ ಪತ್ರಾಂಕಿತ ಅಧಿಕಾರಿಯವರಾದ ಕು.ದಿವ್ಯಾ ಕರಜಗಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಅತನೂರ ಮತ್ತು ಇಬ್ಬರು ಸರಕಾರಿ ಪಂಚ ಜನರು ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ದಯಾನಂದ ಸಿಹೆಚ್ ಸಿ-344, ಸಿದ್ದರಾಮ ಸಿಹೆಚ್ ಸಿ-537, ವಿಶ್ವನಾಥ ಸಿಪಿಸಿ-1115 ಶಿವಾನಂದ ಸಿಪಿಸಿ-934 ವಿವೇಕಾನಂದ ಸಿಪಿಸಿ-429 ಕೂಡಿಕೊಂಡು  ಅತನೂರ ಗ್ರಾಮದ ಹತ್ತಿರ  ಹೋಗಿ ಗ್ರಾಮದ ಬಾತ್ಮಿದಾರರಿಗೆ ಸದರಿ ವಿಜಯಕುಮಾರ ಕ್ಷತ್ರಿ ಈತನ ಮತ್ತು ಮನೆಯ ಬಗ್ಗೆ ವಿಚಾರಿಸಿದಾಗ ಬಾತ್ಮಿದಾರನು ನಮ್ಮ ಜೊತೆಗೆ ಬಂದು ದೂರದಿಂದ ವಿಜಯಕುಮಾರ ಕ್ಷತ್ರಿ ಈತನ ಹೆಸರಿನಲ್ಲಿರುವ ಮನೆ ತೊರಿಸಿದ ಮೇರೆಗೆ, ನಾವು ವಿಜಯಕುಮಾರ ಕ್ಷತ್ರಿ ಈತನ ಮನೆಯ ಹಿತ್ತಲಿನಲ್ಲಿ ಹೋಗಿ ತಲಾಸ ಮಾಡಲಾಗಿ ಮನೆಯ ಹಿತ್ತಲಿನ ಔಡಲ ಗಿಡಗಳ ಮದ್ಯದಲ್ಲಿ ಗಾಂಜಾ ಗಿಡಗಳು ದೋರೆತಿದ್ದು. ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 07 ಗಾಂಜಾ ಗಿಡಗಳಿದ್ದು ಅವುಗಳನ್ನು ತೂಕ ಒಟ್ಟು 7 ಕೆ.ಜಿ ತೂಕವಿದ್ದು  ಅಂದಾಜು 7,000/- ರೂ ಕಿಮ್ಮತ್ತಿನವು ಇರಬಹುದು. ಇವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಆರೋಪಿತನಾದ ವಿಜಯಕುಮಾರ ಕ್ಷತ್ರಿ ಈತನ ಮೇಲೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ರೇವೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.              

 ಇಸ್ಪೇಟ ಜೂಜಾಟ

ಅಫಜಲಪೂರ ಪೊಲೀಸ ಠಾಣೆ 

ದಿನಾಂಕ 16-09-2020 ರಂದು 7:30 ಪಿ.ಎಮ್ ಕ್ಕೆ ಮಾನ್ಯ ಅಶೋಕ ಪಿ.ಎಸ್.ಐ (ಕ್ರೈಂ) ಸಾಹೇಬರು ಠಾಣೆಗೆ ಹಾಜರಾಗಿ 03 ಜನ ಆರೋಪಿ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿ ಸ:ತ: ಫೀರ್ಯಾದಿ ಸಲ್ಲಿಸಿದ ಸಾರಾಂಶವೇನೆಂದರೆ, ದಿನಾಂಕ:16/09/2020 ರಂದು 5-00 ಪಿಎಮ್ ಕ್ಕೆ ಠಾಣೆಯಲಿದ್ದಾಗ ಬಳೂರ್ಗಿ ಗ್ರಾಮದ ಸೇವಾಲಾಲ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು, ಪಂಚರು ಹಾಗೂ ಠಾಣೆ ಸಿಬ್ಬಂದಿ ಜನರಾದ 1)ಸುರೇಶ ಸಿಹೆಚ್ ಸಿ-394 2)ರಾವುತಪ್ಪ ಸಿಪಿಸಿ-142, 3)ಆದಿಗೊಂಡ ಪಿಸಿ-1247 ರವರೊಂದಿಗೆ ಠಾಣೆಯಿಂದ ಹೊರಟು, ಬಳೂರ್ಗಿ ತಾಂಡಾದ ಸೇವಾಲಾಲ ಗುಡಿಯ ಹತ್ತೀರ ಹೋಗಿ ಸ್ವಲ್ಪ ದೂರ ನಮ್ಮ ವಾಹನ ನಿಲ್ಲಿಸಿ ಗುಡಿಯ ಮರೆಯಾಗಿ ನಿಂತು ನೊಡಲು ಸೇವಾಲಾಲ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 03 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ನಮ್ಮ ಸಿಬ್ಬಂದಿಯವರೊಂದಿಗೆ ಸದರಿಯವರ ಮೇಲೆ ದಾಳಿ ಮಾಡಿ ಎಲ್ಲಾ 03 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಕಬೀರ ತಂದೆ ನರ್ಸಿಂಗ ರಾಠೋಡ ವ||45 ಜಾ||ಲಂಬಾಣಿ ಉ||ಕೂಲಿ ಸಾ||ಬಳೂರ್ಗಿ ತಾಂಡಾ 2) ರಾಜೇಂದ್ರ ತಂದೆ ಗೋಪು ರಾಠೋಡ ವ||24 ಜಾ||ಲಂಬಾಣಿ ಉ||ಕೂಲಿ ಸಾ||ಬಳೂರ್ಗಿ 3) ಸಂತೋಷ ತಂದೆ ಪುಲು ರಾಠೋಡ ವ||32 ಜಾ||ಲಂಬಾಣಿ ಉ||ಕೂಲಿ ಸಾ||ಬಳೂರ್ಗಿ ತಾಂಡಾ ತಿಳಿಸದ್ದರಿಂದ ಇಸ್ಪೇಟ ಜೂಜಾಟಕ್ಕೆ ಸಂಬಂದಪಟ್ಟ ಒಟ್ಟು 2750/- ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮುದ್ದೆಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಕೊಟ್ಟ ಫೀರ್ಯಾದಿ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ  

ಮುಧೋಳ ಪೊಲೀಸ ಠಾಣೆ 

           ದಿನಾಂಕ-16/09/2020 ರಂದು ಸರಕಾರಿ ತರ್ಫೇಯಿಂದ  ಶ್ರೀ ಆನಂದರಾವ ಎಸ.ಎನ್. ಪಿ.ಐ ಮುಧೋಳ ಪೊಲೀಸ ಠಾಣೆ ರವರು ನೀಡಿದ ಜ್ಞಾಪನಾ ಪತ್ರದ ಸಾರಾಂಶವೆನೇಂದರೆ, ದಿನಾಂಕ: 16/09/2020 ರಂದು ಮಲ್ಕಾಪಲ್ಲಿ ಗ್ರಾಮದಲ್ಲಿ ವ್ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತ ಪಂಚರು ಹಾಗು ಸಿಬ್ಬಂದಿಜನರನ್ನು ಕರೆದುಕೊಂಡುಮಲ್ಕಾಪಲ್ಲಿಗ್ರಾಮದ ವೆಂಕಟರೆಡ್ಡಿ ಇವರ ಕಿರಾಣಿ ಅಂಗಡಿ ಮುಂದೆಒಬ್ಬ ವ್ಯಕ್ತಿ ವ್ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹತ್ತೀರ ಇದ್ದ ಎರಡು ಅಂಕೆ ಸಂಖ್ಯ ಬರೆದ ಮಟಕಾ ಚೀಟಿ, ಒಂದು ಬಾಲ ಪೆನ ಮತ್ತ 2400/- ರೂ ನಗದು ಹಣಜಪ್ತು ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ತಂದು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹಲ್ಲೆ ಪ್ರಕರಣ  

ಮುಧೋಳ ಪೊಲೀಸ ಠಾಣೆ 

          ದಿನಾಂಕ: 16/09/2020 ರಂದು ಫಿರ್ಯಾದಿ ಶ್ರೀಮತಿ ಜಗದೇವಿ ಗಂಡ ದಾಮೋದರ್ ವಯ-26 ವರ್ಷ, ಸಾ- ಮದನಾ ಗ್ರಾಮ ತಾ-ಸೇಡಂ ಇವರು ದೂರು ನೀಡಿದ ಸಾರಾಂಶವೆನೇಂದರೆ, ದಿನಾಂಕ: 09/09/2020 ರಂದು ಸಾಯಂಕಾಲ ಮದನಾ ಗ್ರಾಮದ ಸೀಮಾಂತರದ ಬಲರಾಮ ತಾಂಡಾದ ರಸ್ತೆಯ ಮೇಲೆ ಆರೋಪಿತರಾದ 1)ದಾಮೋದರ್ ತಂದೆ ಅನಂತಯ್ಯ ಕಲಾಲ 2) ಅಂಜಲಯ್ಯ ತಂದೆ ಅನಂತಯ್ಯ ಕಲಾಲ್ಸಾ- ಮದನಾಗ್ರಾಮತಾ-ಸೇಡಂ ಇವರು ಪಿರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 

16 September 2020

KALABURAGI DISTRICT PRESS NOTE FOR POLICE CONSTABLE WRITTEN EXAM

 ಸಂ: ಸಿಬ್ಬಂದಿ-1/ನೇಮಕಾತಿ/02/2020.                                         ಪೊಲೀಸ್ ಅಧೀಕ್ಷಕರವರ ಕಛೇರಿ,                                                                                                                      ಕಲಬುರಗಿ ಜಿಲ್ಲೆ, ದಿನಾಂಕ: 16-09-2020.
                                                            ಪತ್ರಿಕಾ ಪ್ರಕಟಣೆ


                      ವಿಷಯ: 2020 ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) ಮತ್ತು ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ)  
                                 (ಕಲ್ಯಾಣ ಕರ್ನಾಟಕ ) ಹುದ್ದೆಗಳ ಲಿಖಿತ  ಪರೀಕ್ಷೆಯನ್ನು ದಿ: 20-09-2020 ರಂದು ನಡೆಸುವ ಬಗ್ಗೆ.
                                                         *****

            ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಸಂ:13/ ನೇಮಕಾತಿ-4/2019-20, ದಿನಾಂಕ; 23-04-2020 (558) & ಸಂ: 02/ನೇಮಕಾತಿ-4/2020-21, ದಿನಾಂಕ: 07-05-2020 (2007) ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳ ಲಾಗಿರುತ್ತದೆ. ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ದಿನಾಂಕ; 20-09-2020 ರಂದು (ಭಾನುವಾರ) ರಂದು ಕಲಬುರಗಿ ನಗರದ 06 ಶಾಲಾ/ಕಾಲೇಜುಗಳಲ್ಲಿ ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ  12-30 ಗಂಟೆವರೆಗೆ ನಡೆಸಲು ತೀರ್ಮಾನಿಸಲಾಗಿರುತ್ತದೆ.

            ಪ್ರಯುಕ್ತ ಸದರಿ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಪುಸ್ತಕಗಳನ್ನಾಗಲೀ, ಕೈಬರಹ ಚೀಟಿಗಳನ್ನಾಗಲೀ, ಪೇಜರ್ಗಳನ್ನಾಗಲೀ, ಕ್ಯಾಲ್ಯುಕೇಟರ್ಗಳನ್ನಾಗಲೀ, ಇಯರ್ ಪೋನ್ಗಳನ್ನಾಗಲೀ, ಮೊಬೈಲ್ ಫೋನ್ಗಳನ್ನಾಗಲೀ, ಪರೀಕ್ಷೆಗೆ ತರಲು ನಿಷೇಧಿಸಲಾಗಿರತ್ತದೆ. ಅಭ್ಯರ್ಥಿಗಳು ಬೆಲೆಬಾಳುವ ವಸ್ತು/ಸಾಮಗ್ರಿಗಳನ್ನು ತರದಂತೆ ತಿಳಿಸಲಾಗಿದೆ. ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ. ಸದರಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ತಮ್ಮ ಕರೆ ಪತ್ರದಲ್ಲಿ ನಮೂದಾಗಿರುವ ಕಾಲೇಜಿನಲ್ಲಿ ಹಾಜರಿರಲು ಹಾಗೂ ಕರೆ ಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಮತ್ತು ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿರುತ್ತದೆ.

                                                                                             ಪೊಲೀಸ್ ಅಧೀಕ್ಷಕರು,
                                                                                               ಕಲಬುರಗಿ ಜಿಲ್ಲೆ.

KALABURAGI DISTRICT CRIME REPORTED

 ಅಕ್ರಮ ಗಾಂಜಾ ಮಾರಾಟ ಮತ್ತು ಆಕ್ರಮ ನಾಡ ಪಿಸ್ತೂಲ ಜಪ್ತಿ:-

ಅಫಜಲಪೂರ ಪೊಲೀಸ ಠಾಣೆ 

   ದಿನಾಂಕ 15-09-2020 ರಂದು 5:15 ಪಿ.ಎಮ್ ಕ್ಕೆ ನಾನು ಸಂತೋಷ ಎಲ್ ತಟ್ಟೆಪಳ್ಳಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ಸರ್ಕರಿ ತರ್ಫೇಯಿಂದ ದೂರು ಸಲ್ಲಿಸುವುದೆನೆಂದರೆ,   ದಿನಾಂಕ 15-09-2020 ರಂದು ಮದ್ಯಾಹ್ನ 12:15 ಗಂಟೆಗೆ ನಾನು ಠಾಣೆಯಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಬಡದಾಳ ಸೀಮಾಂತರದಲ್ಲಿ ಜಯಾನಂದ ತಂದೆ ಶಿವನಿಂಗಪ್ಪ ನೀಲಂಗೆ ಸಾ|| ಬಡದಾಳ ಈತನು ತನ್ನ ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿ ಪತ್ರಾಂಕಿತ (ಗೆಜಟೇಡ್) ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ಹಾಗೂ ತಾಲುಕಾ ದಂಡಾಧಿಕಾರಿಗಳು ಅಫಜಲಪೂರ ರವರು ತಮ್ಮ ಕಾರ್ಯಾಲಯದ ಸರಕಾರಿ ಪಂಚ ಜನರಿಗೆ ಮತ್ತು ಮಾನ್ಯ ತಹಸಿಲ್ದಾರ ಸಾಹೇಬರಿಗೆ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಸಂತೋಷ ಹೆಚ್.ಸಿ-439, ಚಿದಾನಂದ ಹೆಚ್.ಸಿ-306, ಯಲಗೊಂಡ ಪಿಸಿ-743, ಭಾಗಣ್ಣ ಪಿಸಿ-167 ಎಲ್ಲರೂ ಕೂಡಿ ನಮ್ಮ ಇಲಾಖಾ ಜೀಪ ನಂ ಕೆಎ-03 ಜಿ-1110 ನೇದ್ದರಲ್ಲಿ ಮತ್ತು. ಮಾನ್ಯ ತಹಸಿಲ್ದಾರರು ಮತ್ತು ಸರಕಾರಿ ಪಂಚರು ಕೂಡಿ ಮಾನ್ಯ ತಹಸಿಲ್ದಾರ ಸಾಹೇಬರ ಇಲಾಖಾ ಜೀಪಿನಲ್ಲಿ ಹೊರಟು ಬಡದಾಳ ದಿಂದ ಅರ್ಜುಣಗಿ ಗ್ರಾಮಕ್ಕೆ ಹೋಗುವ ರಸ್ತೆಗೆ ಸುಮಾರು 2 ಕಿ.ಮಿ ದೂರ ಸಾಗಿ ವಾಹನಗಳನ್ನು ನಿಲ್ಲಿಸಿ, ರೋಡಿನ ಬದಿಯಲ್ಲಿ ನಿಂತಿದ್ದ ಪೊಲೀಸ್ ಬಾತ್ಮಿದಾರನು ಅಲ್ಲಿಂದ ಹೊಲದಲ್ಲಿ ನಡೆಸಿಕೊಂಡು ಕರೆದುಕೊಂಡು ಹೋಗಿ ಸುಮಾರು ದೂರು ಹೋದ ನಂತರ ಬಾತ್ಮಿದಾರನು ಮುಂದೆ ದೂರದಲ್ಲಿ ಕಾಣುತ್ತಿರುವ ಒಂದು ತೋಗರಿ ಹೊಲವನ್ನು ಮತ್ತು ಅದರಾಚೆ ಇರುವ ಕಬ್ಬಿನ ಹೊಲವನ್ನು ತೊರಿಸಿದ ಸದರಿ ಹೊಲದಲ್ಲಿ ಹೊಗುತ್ತಿದ್ದಾಗ, ಆ ಹೊಲದಿಂದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಓಡತೊಡಗಿದನು. ಆಗ ನಾವು ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಜಯಾನಂದ ತಂದೆ ಶಿವನಿಂಗಪ್ಪ ನೀಲಂಗೆ ವಯ|| 35 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಬಡದಾಳ ತಾ|| ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ಪುನ ಪುನ ವಿಚಾರಿಸಲು ಸದರಿಯವನು ತೋಗರಿ ಬೆಳೆಯಲ್ಲಿ ಕರೆದುಕೊಂಡು ಹೋಗಿ, ತೋಗರಿಯ ಸಾಲುಗಳ ಮದ್ಯದಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ವಿಚಾರಿಸಲು ಸದರಿ ಗಾಂಜಾ ಗಿಡಗಳನ್ನು ಒಂದು ತಿಂಗಳ ಹಿಂದೆ ಬೀಜ ಹಾಕಿದ್ದು, ಇನ್ನು 4 ತಿಂಗಳು ಬಿಟ್ಟರೆ ಪ್ರತಿ ಗಿಡದಿಂದ ಒಂದು ಕಿಲೋ ಗಾಂಜಾ ಸಿಗುತ್ತದೆ ಮತ್ತು ಸದರಿ ಹೊಲ ನನ್ನ ಹೆಸರಿನಲ್ಲಿದ್ದು ಇದರ ಸರ್ವೇ ನಂಬರ 87/3 ಇರುತ್ತದೆ ಎಂದು ತಿಳಿಸಿದನು. ನಂತರ ಸದರಿಯವನಿಗೆ ಇನ್ನು ಎಲ್ಲಿ ಎಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ ಬಗ್ಗೆ ವಿಚಾರಿಸಲು, ಸದರಿಯವರು ಅಲ್ಲಿ ಪಕ್ಕದಲ್ಲಿರುವ ಕಬ್ಬಿನ ಹೊಲವನ್ನು ತೋರಿಸಿ, ಸದರಿ ಹೋಲ ನಮ್ಮ ಚಿಕ್ಕಪ್ಪನಾದ ಅಮೃತ ತಂದೆ ಶಿವಪ್ಪ ನೀಲಂಗೆ ಇವರ ಹೆಸರಿನಲ್ಲಿದ್ದು, ಸದರಿ ಹೊಲವನ್ನು ನನ್ನ ಚಿಕ್ಕಪ್ಪನಿಗೆ ವರ್ಷಕ್ಕೆ 50,000/- ರೂ ಹಣ ಕೊಟ್ಟು ನಾನೆ ಬೆಳೆಯನ್ನು ತಗೆದುಕೊಳ್ಳುತ್ತಿರುತ್ತೇನೆ. ಸದರಿ ಹೊಲದಲ್ಲಿ ಈಗ ಕಬ್ಬು ಇದ್ದು, ಸದರಿ ಕಬ್ಬಿನ ಹೊಲದಲ್ಲಿಯೂ ಸಹ ಗಾಂಜಾ ಗಿಡಗಳನ್ನು ಬೆಳೆಸಿದ್ದೇನೆ. ಸದರಿ ಗಾಂಜಾ ಗಿಡಗಳು ಹೂವು & ಬೀಜಗಳಾದ ಮೇಲೆ ಗಾಂಜಾವನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ಆತನನ್ನು ವಶಕ್ಕೆ ಪಡೆದುಕೊಂಡು, ತೋಗರಿ ಹೊಲದಲ್ಲಿ ಬೆಳೆದ ಸದರಿ ಗಾಂಜಾ ಗಿಡಗಳನ್ನು ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 41 ಗಾಂಜಾ ಗಿಡಗಳಿದ್ದು ನಂತರ ಆರೋಪಿತನು ತನ್ನ ಚಿಕ್ಕಪ್ಪನ ಹೆಸರಿನಲ್ಲಿರುವ ತಾನು ಉಳುಮೆ ಮಾಡುವ ಕಬ್ಬಿನ ಹೊಲಕ್ಕೆ ಕರೆದುಕೊಂಡು, ಹೋಗಿ ಕಬ್ಬಿನ ಹೊಲದಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಕಾಣದಂತೆ ಇರುವ ಗಾಂಜಾ ಗಿಡಗಳನ್ನು ತೋರಿಸಿದ್ದು, ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಫಿತನಿಂದ ಗಾಂಜಾ ಗಿಡಗಳನ್ನು ಕಿತ್ತಿಸಲು ಒಟ್ಟು 22 ಗಾಂಜಾ ಗಿಡಗಳು ಇರುತ್ತವೆ. ಎರಡೆರಡು ಗಾಂಜಾ ಗಿಡಗಳ ಒಂದು ಕಟ್ಟನ್ನು ಮಾಡಿ, ಒಟ್ಟು 11 ಕಟ್ಟುಗಳಾಗಿದ್ದು, ಹೀಗೆ ಒಟ್ಟು 63 ಗಾಂಜಾ ಗಿಡಗಳು ಇದ್ದು, ಸದರಿ ಗಾಂಜಾ ಗಿಡಗಳ ಒಟ್ಟು ತೂಕ 14.572 ಕೆಜಿ ತೂಕ ಇರುತ್ತವೆ. ಸದರಿಯವನ ಹೊಲದಲ್ಲಿನ ಮೇಟಗಿಯನ್ನು ಮಾನ್ಯ ತಹಸಿಲ್ದಾರರ ಸಮ್ಮುಖದಲ್ಲಿ, ಸದರಿ ಪಂಚರ ಸಮಕ್ಷಮ ಚೆಕ್ ಮಾಡಲಾಗಿ, ಸದರಿ ಮೆಟಗಿಯ ಮಾಡಿನಲ್ಲಿ ಒಂದು ನಾಡ ಪಿಸ್ತೂಲು ಮತ್ತು ಎರಡು ಜಿವಂತ ಗುಂಡುಗಳು ಸಿಕ್ಕವು, ಸದರಿ ಜಯನಾಂದನಿಗೆ ಸದರಿ ನಾಡ ಪಿಸ್ತೂಲು ಮತ್ತು ಗುಂಡುಗಳ ಬಗ್ಗೆ ನಾನು ಮತ್ತು ತಹಸಿಲ್ದಾರರು ವಿಚಾರಿಸಲು, ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಸದರಿ ನಾಡ ಪಿಸ್ತೂಲಿಗೆ ಮತ್ತು ಗುಂಡುಗಳಿಗೆ ಯಾವುದೆ ಪರವಾನಿಗೆ ಇರುವುದಿಲ್ಲ, ಸದರಿ ನಾಡ ಪಿಸ್ತೂಲನ್ನು ಮತ್ತು ಗುಂಡಗಳನ್ನು ಸುಮಾರು 6-7 ವರ್ಷಗಳ ಹಿಂದೆ ನಮ್ಮ ಸಂಭಂದಿಕನಾದ ರಾಜು ಆನೂರ ಈತನಿಂದ ಖರಿದಿ ಮಾಡಿರುತ್ತೇನೆ. ನಾನು ಹೊಲದಲ್ಲಿ ಒಬ್ಬನೆ ಇರುತ್ತಿದ್ದರಿಂದ ನನ್ನ ಆತ್ಮ ರಕ್ಷಣೆಗಾಗಿ ಈ ನಾಡ ಪಿಸ್ತೂಲನ್ನು 30,000/- ರೂ ಹಾಗೂ ಗುಂಡುಗಳಿಗೆ 1000/- ರೂ ಹಣ ಕೊಟ್ಟು ಖರಿದಿ ಮಾಡಿರುತ್ತೇನೆ. ನನಗೆ ಮಾರಾಟ ಮಾಡಿದ ರಾಜು ಆನೂರ ಈತನು ಈಗಾಗಲೆ ಮೃತ ಪಟ್ಟಿರುತ್ತಾನೆ ಎಂದು ತಿಳಿಸಿದನು. ನಂತರ ನಾಡ ಪಿಸ್ತೂಲನ್ನು ಮತ್ತು ಎರಡು ಜಿವಂತ ಗುಂಡುಗಳ್ನು ತಹಸಿಲ್ದಾರರು ಸಮ್ಮುಖದಲ್ಲಿ, ಸದರಿ ಸರ್ಕಾರಿ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮುದ್ದೆ ಮಾಲು ಮತ್ತು ಆರೋಪಿತನನ್ನು ಹಾಜರು ಪಡಿಸಿ ಸದರಿ ವ್ಯೆಕ್ತಿಯ ಮೇಲೆ ಕಾನೂನು ಕ್ರಮ ಜರೂಗಿಸಲು ಸರಕಾರಿ ತರ್ಪೇಯಾಗಿ ದೂರು ಸಲ್ಲಿಸಿದ್ದು ಸಾರಾಂಶದ ಮೇಲಿಂದ ಅಫಜಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಕುರಿ (ಆಡು) ಗಳು ಕಳ್ಳತನ :-

ಮಾಡಬೂಳ ಪೊಲೀಸ ಠಾಣೆ 

       ದಿನಾಂಕ 15/09/2020 ರಂದು 12.30 ಪಿ.ಎಮಕ್ಕೆ ಫಿರ್ಯಾದಿ ಶ್ರೀ. ಶಮಶೊದ್ದಿನ ತಂದೆ ಅಬ್ದುಲಸಾಬ ಮುಲ್ಲಾಗೋಳ ಸಾಃ ಗುಂಡಗರ್ತಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ 14/09/2020 ರಂದು ಮುಂಜಾನೆ ಎಂದಿನಂತೆ ನಾನು ಆಡುಗಳನ್ನು ಮೇಯಿಸಿಕೊಂಡು ಮನೆಗೆ ಸಾಯಂಕಾಲ ಮನೆಗೆ ಬಂದು, ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಗೆ ಹೊಂದಿಕೊಂಡಿರುವ ಕೊಣೆಯಲ್ಲಿ ಆಡುಗಳನ್ನು ಬಿಟ್ಟು, ಕೊಣೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು, ಬೆಳಗಿನ ಜಾವ 3.00 ಗಂಟೆಯ ಸುಮಾರಿಗೆ ನನ್ನ ಹಿರಿಯ ಮಗನಾದ ಮಹಿಬೂಬ ಈತನು ಮೂತ್ರ ವಿಸರ್ಜನೆಗೆಂದು ಎದ್ದಾಗ, ಯಾರೋ ಆತನು ಮಲಗಿದ ಮನೆಯ ಬಾಗಿಲ ಕೊಂಡಿ ಹೊರಗಡೆಯಿಂದ ಹಾಕಿದ್ದರಿಂದ ಇನ್ನೊಂದು ಕೊಣೆಯಲ್ಲಿ ಮಲಗಿದ ನನ್ನ ಕಿರಿಯ ಮಗನಾದ ಖಾಸಿಮ್ ಈತನಿಗೆ ಪೋನ ಮಾಡಿ ಹೊರಗಡೆಯ ಬಾಗಿಲಕೊಂಡಿ ತೆಗೆಯಲು ಹೇಳಿದ್ದರಿಂದ ಆತನು ಬಾಗಿಲು ಕೊಂಡಿ ತೆಗೆದು ನನಗೆ ಎಬ್ಬಿಸಿದ್ದು, ನಂತರ ಸಂಶಯ ಬಂದು ನಾವು ಆಡುಗಳ ಕೊಣೆಯ ಕಡೆಗೆ ಹೊಗಿ ನೋಡಲಾಗಿ ಬಾಗಿಲಿಗೆ ಹಾಕಿದ ಬೀಗ ಇರಲಿಲ್ಲ. ನಂತರ ಒಳಗಡೆ ಹೊಗಿ ನೋಡಲಾಗಿ 20 ಆಡುಗಳು ಇರಲಿಲ್ಲ. ಕೇವಲ ಆಡುಗಳ ಮರಿಗಳು ಇದಿದ್ದವು. ದಿನಾಂಕ 14/09/2020 ರಂದು 8.00 ಪಿ.ಎಮ ದಿಂದ ದಿನಾಂಕ 15/09/2020 ರಂದು 3.00 ಎ.ಎಮದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಆಡುಗಳು ಇದ್ದ ಕೊಣೆಯ ಬಾಗಿಲಕೊಂಡಿ ಮುರಿದು, ಸಣ್ಣ ಮತ್ತು ದೊಡ್ಡ ಆಡುಗಳು ಸೇರಿ ಒಟ್ಟು 20 ಆಡುಗಳು ಅ.ಕಿಃ 1,00,000/-ರೂಪಾಯಿ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಮಾನ್ಯರವರು ಕಳ್ಳತನವಾದ ನನ್ನ ಆಡುಗಳನ್ನು ಪತ್ತೆ ಮಾಡಿ, ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೆಕೆಂದು ವಗೈರೆಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ಮಾಡಬೂಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.